ಅಪಾಯ ಎಂದು ಗೊತ್ತಿದ್ದೂ ಪ್ರವಾಸಿಗರ ಹುಚ್ಚಾಟ: ವಿಡಿಯೊ ವೈರಲ್
Viral Video: ಹಿಮಾಚಲ ಪ್ರದೇಶದ ಪಾಗಲ್ ನಾಲಾ ನದಿ ತೀರದಲ್ಲಿ ಪ್ರವಾಸಿಗರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಲ್ಲಿ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹರಿಯುವ ನೀರಿನ ಬಳಿ ಮರಳು ಮತ್ತು ಕೆಸರಿನಿಂದ ಕೂಡಿದ ಪ್ರದೇಶಗಳಲ್ಲಿ ಎಸ್‌ಯುವಿ ಕಾರ್, ಬೈಕ್ ಚಲಾಯಿಸುತ್ತಿರುವ ದೃಶ್ಯ ವೈರಲ್ ಆಗಿದೆ.
ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ -
ನವದೆಹಲಿ, ಮೇ 26: ನಾಗರಿಕ ಪ್ರಜ್ಞೆ ಮರೆಯುತ್ತಿರುವ ಅನೇಕ ಘಟನೆಗಳು ಇತ್ತೀಚೆಗೆ ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಮೆರೆಯದೇ ಇರುವುದು, ಬೇಜವ್ದಾರಿಯಿಂದ ವರ್ತಿಸುವುದು ಹೀಗೆ. ಇದೀಗ ಪ್ರವಾಸಿ ಸ್ಥಳದಲ್ಲಿ ಪ್ರಯಾಣಿಕರ ಗುಂಪೊಂದು ಹುಚ್ಚಾಟ ಮೆರೆದಿರುವ (Viral News) ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಪಾಗಲ್ ನಾಲಾ ನದಿ ತೀರದಲ್ಲಿ ಪ್ರವಾಸಿಗರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಲ್ಲಿ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶದ ಪಾಗಲ್ ನಾಲಾಕ್ಕೆ ಭೇಟಿ ನೀಡಿದ ಪ್ರವಾಸಿಗರು ರಮಣೀಯ ಸ್ಥಳದ ನದಿ ದಂಡೆಯ ಬಳಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾರೆ. ಹರಿಯುವ ನದಿಯ ತೀರಾ ಹತ್ತಿರದಲ್ಲೇ ಎಸ್‌ಯುವಿ ಕಾರ್, ಬೈಕ್ ಮತ್ತು ಇತರ ವಾಹನಗಳನ್ನು ಅಪಾಯಕಾರಿಯಾಗಿ ಡ್ರೈವ್ ಮಾಡಿದ್ದಾರೆ. ಕೆಸರು ಹಾಗೂ ಮರಳಿನಿಂದ ಕೂಡಿದ ಜಾಗದಲ್ಲಿ ವಾಹನ ಚಲಾಯಿಸಿ ಹುಚ್ಚಾಟ ಮೆರೆದಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ವಿಡಿಯೊ ನೋಡಿ:
पागल नाले के पास नदी किनारे पर्यटकों का हुड़दंग,यह कैसा शौक है ? कोई दुर्घटना हो जाए तो फिर प्रशासन दोषी।#HimachalPradesh pic.twitter.com/WVEv2nT2vV
— Gems of Himachal (@GemsHimachal) May 25, 2026
ಹರಿಯುವ ನೀರಿನ ಬಳಿ ಮರಳು ಮತ್ತು ಕೆಸರಿನಿಂದ ಕೂಡಿದ ಪ್ರದೇಶದಲ್ಲಿ ಎಸ್‌ಯುವಿ ಕಾರ್, ಬೈಕ್‌ಗಳನ್ನು ಡ್ರೈವ್ ಮಾಡುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಕೆಲವು ವಾಹನಗಳು ಮರಳಿನಲ್ಲಿ ಹೂತುಹೋಗುತ್ತಿದ್ದರೂ ವಿಡಿಯೊಗಳನ್ನು ರೆಕಾರ್ಡ್ ಮಾಡಿ ಉದ್ಧಟತನ ಮೆರೆದಿದ್ದಾರೆ.
ಕೃಣಾಲ್ ಪಾಂಡ್ಯ ಬೌನ್ಸರ್ ಕಂಡು ರೊಚ್ಚಿಗೆದ್ದ ಸನ್‌ರೈಸರ್ಸ್ ಮಾಲಕಿ ಕಾವ್ಯ ಮಾರನ್
ಈ ಘಟನೆಯು ಆನ್‌ಲೈನ್‌ನಲ್ಲಿ ಕಳವಳವನ್ನು ಹುಟ್ಟುಹಾಕಿದ್ದು ಅನೇಕರು, ಪ್ರವಾಸಿಗರದ್ದು ಅಸಡ್ಡೆಯ ಮತ್ತು ಅಸುರಕ್ಷಿತ ವರ್ತನೆ ಎಂದು ಕಿಡಿಕಾರಿದ್ದಾರೆ. ಪ್ರವಾಸಿಗರ ನಡವಳಿಕೆಯನ್ನು ಹಲವರು ಟೀಕಿಸಿದ್ದು ಜನಪ್ರಿಯ ನಾಗರಿಕ ಪ್ರಜ್ಞೆಯ ಕೊರತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಇದು ಯಾವ ರೀತಿಯ ಹವ್ಯಾಸ? ಅಪಘಾತ ಸಂಭವಿಸಿದಲ್ಲಿ, ಆಡಳಿತವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ʼʼಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ.