ಆಟೋ ಓಡಿಸಿ ಬದುಕು ಸಾಗಿಸುವ ಬೆಂಗಳೂರಿನ ಮಹಿಳೆ: ಚಾಲಕಿಯ ಧೈರ್ಯಕ್ಕೆ ಸಲಾಂ
Viral News: ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ತಮಗೆ ಸಾಧ್ಯವಾದ ಕೆಲಸ ಮಾಡಿ ಜೀವನ ನಿಭಾಯಿಸುವ ಅನೇಕ ಮಹಿಳೆಯರಿದ್ದಾರೆ. ಅದರಂತೆ ಬೆಂಗಳೂರಿನ ಮಹಿಳೆಯೊಬ್ಬರು ಆಟೋ ಚಲಾಯಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಆಟೋ ಚಾಲಕಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳಾ ಆಟೋ ಚಾಲಕಿಯ ಕಥೆಯನ್ನು ಅಮೆಜಾನ್ ಉದ್ಯೋಗಿಯೊಬ್ಬರು ಶೇರ್ ಮಾಡಿದ್ದಾರೆ.
ಆಟೋ ಪ್ರಯಾಣ ಮೂಲಕ ಬದುಕು ಸಾಗಿಸುವ ಬೆಂಗಳೂರಿನ ಮಹಿಳೆ -
ಬೆಂಗಳೂರು, ಮೇ 26: ಇಂದು ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ತಮಗೆ ಸಾಧ್ಯವಾದ ಕೆಲಸ ಮಾಡಿ ಜೀವನ ನಿಭಾಯಿಸುವ ಅನೇಕರು ನಮ್ಮ ಸುತ್ತಮುತ್ತ ಇದ್ದಾರೆ. ಅಂತಹದ್ದೇ ಮಹಿಳೆಯೊಬ್ಬರ ಸಾಹಸಗಾಥೆ ಇದೀಗ ಗಮನ ಸೆಳೆದಿದೆ. ಬೆಂಗಳೂರಿನ ಮಹಿಳೆಯೊಬ್ಬರು ಆಟೋ ಓಡಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿರುವ ಆಟೋ ಚಾಲಕಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳಾ ಆಟೋ ಚಾಲಕಿಯ ಕಥೆಯನ್ನು ಅಮೆಜಾನ್ ಉದ್ಯೋಗಿಯೊಬ್ಬರು ಶೇರ್ (Viral News) ಮಾಡಿದ್ದು ನೆಟ್ಟಿಗರ ಹೃದಯ ಗೆದ್ದಿದೆ.
ಬೆಂಗಳೂರಿನ ಅಮೆಜಾನ್ ಉದ್ಯೋಗಿಯೊಬ್ಬರು ಇತ್ತೀಚೆಗೆ ಮಹಿಳಾ ಆಟೋ ಚಾಲಕಿಯನ್ನು ಭೇಟಿಯಾಗಿದ್ದಾರೆ. ಜೀವನೋಪಾಯಕ್ಕಾಗಿ ಸ್ವಾವಲಂಬನೆಯ ದಾರಿ ಆರಿಸಿಕೊಂಡ ಮಹಿಳೆಯ ನಿರ್ಧಾರಕ್ಕೆ ಅಮೆಜಾನ್ ಉದ್ಯೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ಹಿಂದಿನ ಕಾಲದಿಂದಲೂ ಮಹಿಳೆ ಅಡುಗೆ ಮನೆ, ಮನೆ ಕೆಲಸಕ್ಕೆ ಸೀಮಿತವಾಗಿದ್ದಳು. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ಮಹಿಳೆಯೂ ದುಡಿಯಲು ಬಯಸುತ್ತಾರೆ. ಇದೀಗ ಬೆಂಗಳೂರು ರಿಕ್ಷಾ ಚಾಲಕಿಯೂ ಸಮಾಜದ ಚೌಕಟ್ಟನ್ನು ಮೀರಿ ಧೈರ್ಯದಿಂದ ಜೀವನ ನಡೆಸುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.
2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದ ರೈಲು ಪ್ರಯಾಣ: ವಿಶ್ವ ದಾಖಲೆ ನಿರ್ಮಿಸಿದ ಚೀನಾ!
ಕೇವಲ ಪಾತ್ರೆ ತೊಳೆಯುವ ಅಥವಾ ಮನೆ ಕೆಲಸಕ್ಕೆ ತನ್ನನ್ನು ಸೀಮಿತಗೊಳಿಸಿಕೊಳ್ಳಲು ನಿರಾಕರಿಸಿದ ಈ ಮಹಿಳೆ, ಆಟೋ ಚಾಲನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ʼʼಒಬ್ಬ ಮಹಿಳೆ ಪಾತ್ರೆಗಳನ್ನು ತೊಳೆಯುವ ಕಲ್ಪನೆಯನ್ನು ತಿರಸ್ಕರಿಸಿ ತನ್ನ ಪ್ರಯಾಣದ ಜವಾಬ್ದಾರಿಯನ್ನು ನೋಡಿಕೊಳ್ಳುವುದು ಬಹಳಷ್ಟು ಸ್ಪೂರ್ತಿದಾಯಕʼʼ ಎಂದು ಅಮೆಜಾನ್ ಉದ್ಯೋಗಿ ಶ್ಲಾಘಿಸಿದ್ದಾರೆ. ಅಕೆಗೆ ಆಟೋ ಕೇವಲ ವಾಹನಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯದ ಪ್ರತೀಕ ಎಂದು ಬಣ್ಣಿಸಿದ್ದಾರೆ.
ಈಗ ಬೆಂಗಳೂರಿನ ಬಿಡುವಿಲ್ಲದ ರಸ್ತೆಗಳಲ್ಲಿ ಅವರು ಆತ್ಮವಿಶ್ವಾಸದಿಂದ ಆಟೋ ಚಾಲನೆ ಮಾಡುತ್ತಿದ್ದಾರೆ. ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಬದುಕನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಒಬ್ಬರು, ʼʼಮಹಿಳಾ ಸಬಲೀಕರಣ ಎಂದರೆ ಕೇವಲ ದೊಡ್ಡ ಕಾರ್ಪೊರೇಟ್ ಹುದ್ದೆಗಳು ಮಾತ್ರ ಅಲ್ಲ. ತಮಗೆ ಇಷ್ಟಬಂದ ಹಾದಿಯಲ್ಲಿ ಸ್ವಂತ ಗುರುತನ್ನು ಕಂಡುಕೊಳ್ಳುವುದು ಕೂಡ ಹೌದುʼʼ ಎಂದರು. ಮತ್ತೊಬ್ಬರು, ʼʼಇದು ನಾನು ಇಂಟರ್‌ನೆಟ್‌ನಲ್ಲಿ ನೋಡಿದ ಅತ್ಯಂತ ಉತ್ತಮ ವಿಷಯಗಳಲ್ಲಿ ಒಂದುʼʼ ಎಂದು ಬರೆದುಕೊಂಡಿದ್ದಾರೆ.