ಪರ ಪುರುಷನೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸಿದ ಪತ್ನಿ: ಸಾರ್ವಜನಿಕವಾಗಿಯೇ ಗೂಸಾ ನೀಡಿದ ಗಂಡ!
Viral Video: ಅನೈತಿಕ ಸಂಬಂಧದ ವಿಚಾರಗಳು ಇತ್ತೀಚೆಗೆ ಹಾಟ್ ಟಾಪಿಕ್ ನಲ್ಲಿದೆ. ಇದಕ್ಕೆ ಸಂಬಂಧ ಪಟ್ಟಂತೆ ಅನೇಕ ವಿಡಿಯೊಗಳು ದಿನ ನಿತ್ಯ ವೈರಲ್ ಆಗುತ್ತಿದೆ. ಇದೀಗ ಇಂದೋರ್ ನಲ್ಲಿ ಮತ್ತೊಬ್ಬ ಪುರುಷನ ಜೊತೆ ಪತ್ನಿ ಹೋಗುತ್ತಿರುವುದನ್ನು ಗಮನಿಸಿದ ಪತಿಯೊಬ್ಬ ರಸ್ತೆಯಲ್ಲೇ ಆಕೆಯನ್ನು ತಡೆದು ಬೆಲ್ಟ್ ನಿಂದ ಹೊಡೆದಿದ್ದಾನೆ. ಸಾರ್ವಜನಿಕವಾಗಿ ಪತ್ನಿಯ ಮೇಲೆ ಬೆಲ್ಟ್‌ನಿಂದ ಹಲ್ಲೆ ಮಾಡಿದ ವಿಡಿಯೊ ಭಾರೀ ವೈರಲ್ ಆಗುತ್ತಿದೆ.
ಸಾರ್ವಜನಿಕವಾಗಿ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಪತಿ -
ಇಂದೋರ್,ಜು.31: ಇತ್ತೀಚೆಗೆ ದಾಂಪತ್ಯ ಜೀವನದ ಸಣ್ಣ- ಪುಟ್ಟ ವಿಚಾರಗಳು ಬೀದಿಗೆ ಬರುವಂತಹ ಅನೇಕ ಘಟನೆಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಅನೈತಿಕ ಸಂಬಂಧದ ವಿಚಾರಗಳು ಇತ್ತೀಚೆಗೆ ಹಾಟ್ ಟಾಪಿಕ್ ನಲ್ಲಿದೆ. ಇದಕ್ಕೆ ಸಂಬಂಧ ಪಟ್ಟಂತೆ ಅನೇಕ ವಿಡಿಯೊಗಳು ದಿನ ನಿತ್ಯ ವೈರಲ್ ಆಗುತ್ತಿದೆ. ಇದೀಗ ಇಂದೋರ್ ನಲ್ಲಿ ಮತ್ತೊಬ್ಬ ಪುರುಷನ ಜೊತೆ ಪತ್ನಿ ಹೋಗುತ್ತಿರುವುದನ್ನು ಗಮನಿಸಿದ ಪತಿಯೊಬ್ಬ ರಸ್ತೆಯಲ್ಲೇ ಆಕೆಯನ್ನು ತಡೆದು ಬೆಲ್ಟ್ ನಿಂದ ಹೊಡೆದಿದ್ದಾನೆ. ಸಾರ್ವಜನಿಕವಾಗಿ ಪತ್ನಿಯ ಮೇಲೆ ಬೆಲ್ಟ್‌ನಿಂದ ಹಲ್ಲೆ ಮಾಡಿದ ವಿಡಿಯೊ ಭಾರಿ ವೈರಲ್ (Viral News) ಆಗುತ್ತಿದೆ.
ಇಂದೋರ್‌ನ ವಿಜಯ್ ನಗರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಎದುರಿಸುತ್ತಿರುವುದನ್ನು ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಕೆಯ ಮೇಲೆ ಬೆಲ್ಟ್‌ನಿಂದ ಹೊಡೆ ಯುತ್ತಿರುವುದು ಕಂಡು ಬಂದಿದೆ. ಪತಿಯೂ ತನ್ನ ಪತ್ನಿ ಆಕ್ಟಿವಾ ಸ್ಕೂಟರ್‌ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರಯಾಣಿ ಸುತ್ತಿರುವುದನ್ನು ಕಂಡು ಕೋಪಗೊಂಡಿದ್ದಾನೆ.
ವಿಡಿಯೋ ನೋಡಿ:
ಸಾರ್ವಜನಿಕರ ಮಾಹಿತಿ ಪ್ರಕಾರ ಮಹಿಳೆಯೊಬ್ಬಳು ಇನ್ನೊಬ್ನ ವ್ಯಕ್ತಿಯ ಜೊತೆ ಸ್ಕೂಟರ್‌ನಲ್ಲಿ ತೆರಳುತ್ತಿರುವುದನ್ನು ಪತಿ ಗಮನಿಸಿದ್ದಾನೆ. ಕೂಡಲೇ ರಸ್ತೆ ಮಧ್ಯದಲ್ಲಿ ಅವರನ್ನು ಅಡ್ಡಗಟ್ಟಿದ್ದು ಇಬ್ಬರ ನಡುವೆ ಸಾರ್ವಜನಿಕರ ಮಧ್ಯೆಯೇ ಜಗಳವಾಗಿದೆ. ಈ ಸಂದರ್ಭದಲ್ಲಿ ಕೋಪಗೊಂಡ ಪತಿ ತನ್ನ ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಸರಿಯಾಗಿ ಬಾರಿಸಿದ್ದಾನೆ.
ಸಾರ್ವಜನಿಕರು ಈ ದೃಶ್ಯವನ್ನು ನೋಡುತ್ತಲೇ ವಿಡಿಯೊ ಮಾಡುತ್ತಾ ನಿಂತಿದ್ದು ಸಹಾಯಕ್ಕೆ ಯಾರು ಧಾವಿಸಿರಲಿಲ್ಲ. ಬಳಿಕ ವ್ಯಕ್ತಿಯೊಬ್ಬ ಕೊನೆಯ ಹಂತದಲ್ಲಿ ಬಂದು ಮಹಿಳೆಯನ್ನು ಹೊಡೆಯದಂತೆ ತಡೆಯಲು ಯತ್ನಿಸಿದ್ದಾನೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವೀಡಿಯೊದ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಘೋಷಿಸಲಾಗಿಲ್ಲ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಾರ್ವಜನಿಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಬಳಕೆದಾರ ರೊಬ್ಬರು ಜನ ತಡೆಯುವುದು ಬಿಟ್ಟು ವಿಡಿಯೊ ಮಾಡುತ್ತಾ ನಿಂತಿರುವುದು ಬೇಸರದ ಸಂಗತಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಏನೇ ಆಗಿದ್ದರೂ ಈ ರೀತಿ ಹಲ್ಲೆ ನಡೆಸಿದ್ದು ತಪ್ಪು ಎಂದು ಪ್ರತಿಕ್ರಿಯೆ ನೀಡಿದ್ದಾರೆ.