Viral Video: ಬಾಲ್ಯದಲ್ಲಿ ಆಡಿ ಬೆಳೆದ ಮನೆಯನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ವಿದೇಶಿಗ! ಭಾವನಾತ್ಮಕ ವಿಡಿಯೊ ಇಲ್ಲಿದೆ
ಯುನೈಟೆಡ್ ಕಿಂಗ್‍ಡಮ್‍ನ ರಾಲ್ಫ್ ಲೆಂಗ್ ಎಂಬ ವ್ಯಕ್ತಿ 15 ವರ್ಷಗಳ ಹಿಂದೆ ವಾಸಿಸುತ್ತಿದ್ದ ನವದೆಹಲಿಯ ಮನೆಯೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾನೆ. ತನ್ನ ಬಾಲ್ಯದ ಸವಿನೆನಪಿಗೆ ಸಾಕ್ಷಿಯಾದ ಆ ಮನೆಯನ್ನು ನೋಡಿ ಆತ ಸಿಕ್ಕಾಪಟ್ಟೆ ಖುಷಿಯಾಗಿದ್ದಾನಂತೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ನವದೆಹಲಿ: ಬಾಲ್ಯದ ನೆನೆಪುಗಳು ಯಾವಾಗಲೂ ಸುಂದರವಾಗಿರುತ್ತದೆ. ಅವುಗಳನ್ನು ಮರೆಯಲು ಸಾಧ್ಯವಿಲ್ಲ.ಇನ್ನು ಬಾಲ್ಯದಲ್ಲಿ ನಾವು ಹುಟ್ಟಿ, ಬೆಳೆದ ಮನೆಯನ್ನು ಬಿಟ್ಟು ದೂರ ಹೋಗಿ ನೆಲೆ ನಿಂತ ಮೇಲೆ ಮತ್ತದೇ ಹುಟ್ಟೂರಿಗೆ ಬಂದಾಗ ಆಗುವ ಖುಷಿಯನ್ನು ಬಣ್ಣಿಸಲು ಪದಗಳೇ ಸಾಕಾಗಲ್ಲ! ಇದೀಗ ಅಂತಹದೊಂದು ಅನುಭವ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬನಿಗೆ ಆಗಿದೆಯಂತೆ. 15 ವರ್ಷಗಳ ಹಿಂದೆ ವಾಸಿಸುತ್ತಿದ್ದ ನವದೆಹಲಿಯ ಮನೆಯೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ ಆದ ಸಂತೋಷವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ.
ರಾಲ್ಫ್ ಲೆಂಗ್ ಎಂಬ ವ್ಯಕ್ತಿ ಇತ್ತೀಚೆಗೆ ತನ್ನ ಬಾಲ್ಯದ ಮಧುರ ಕ್ಷಣಗಳನ್ನು ಕಳೆದ ಮನೆಗೆ ಭೇಟಿ ನೀಡುವ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೊ 200,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 2 ಮಿಲಿಯನ್ ವ್ಯೂವ್ಸ್ ಗಳಿಸಿದೆ. ರಾಲ್ಫ್ ಲೆಂಗ್ 2009ರಲ್ಲಿ ಭಾರತವನ್ನು ತೊರೆದಿದ್ದಾನಂತೆ. ವೈರಲ್ ಆದ ವಿಡಿಯೊದಲ್ಲಿ ಆತ ತನ್ನ ಬಾಲ್ಯದ ಮನೆಯ ಗೇಟ್ ತೆರೆದು ಒಳಗೆ ಬಂದವನೇ ಮನೆಯನ್ನು ಕಂಡು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ್ದಾನೆ. ಇಲ್ಲಿ ಆತ ತನ್ನ ಬಾಲ್ಯದ ಅತ್ಯುತ್ತಮ ಸಮಯವನ್ನು ಕಳೆದಿರುವುದಾಗಿ ಹೇಳಿದ್ದಾನೆ. ಮತ್ತು ಅವನಿಗೆ ಇಲ್ಲಿಂದ ಹೋಗಲು ಇಷ್ಟವಿರಲಿಲ್ಲವಂತೆ. ದೇಶವನ್ನು ಬಿಟ್ಟು ಹೋಗುವಾಗ ಸ್ನೇಹಿತರು, ನೆನಪುಗಳು, ಆ ಸ್ಥಳವನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ತಿಳಿಸಿ ದುಃಖಿಸಿದ್ದಾನೆ.
ಮನೆ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಿದೇಶಿಗನ ವಿಡಿಯೊ ಇಲ್ಲಿದೆ ನೋಡಿ...
ವಿಡಿಯೊದಲ್ಲಿ, ಅವನು ಭಾರತವನ್ನು ಏಕೆ ತೊರೆದನು ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಮನೆಯೊಳಗೆ ಬಂದ ನಂತರ ಅವನು ಅಲ್ಲೇ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಅವನ ದುಃಖ ನೆಟ್ಟಿಗರನ್ನು ಭಾವುಕರನ್ನಾಗಿಸಿದೆಯಂತೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, "ಅವನು ತುಂಬಾ ಮುದ್ದಾಗಿದ್ದಾನೆ. ಅವನು ಅಳುವುದನ್ನು ನೋಡಿ ನಾನು ಭಾವುಕನಾದೆ." ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಆಂಟಿಲಿಯಾ ಮುಂದೆ ಆಟೋ ಡ್ರೈವರ್‌ನಂತೆ ನಿಂತ ಮುಖೇಶ್ ಅಂಬಾನಿ; ಏನಿದು ವೈರಲ್ ವಿಡಿಯೊ
ಈ ಹಿಂದೆ ಮಹಿಳೆಯೊಬ್ಬಳು ತಾನು ಬಾಲ್ಯದಲ್ಲಿ ಮಲಗಿದ್ದ ಕೋಣೆಯನ್ನು ಮರುಪರಿಶೀಲಿಸುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದು ವೈರಲ್ ಆಗಿತ್ತು. ವಿಸ್ಕಾನ್ಸಿನ್‍ನ ಓಕ್ ಕ್ರೀಕ್‍ನ 29 ವರ್ಷದ ಕಾನರ್ ರೋಜರ್ಸ್ ಈ ವಿಡಿಯೊವನ್ನು ಅಕ್ಟೋಬರ್ 19, 2024 ರಂದು ಹಂಚಿಕೊಂಡಿದ್ದು, ಅದು 6.2 ಮಿಲಿಯನ್ ವ್ಯೂವ್ಸ್ ಗಳಿಸಿತ್ತು. ವಿಡಿಯೊದಲ್ಲಿ ಆಕೆ ತಾನು ಮಗುವಾಗಿದ್ದಾಗ ಈ ಕೋಣೆಯಲ್ಲಿ ಮಲಗಿದ್ದೆ. ಈಗ ತಾನು 10 ವರ್ಷಗಳ ನಂತರ ಮೊದಲ ಬಾರಿಗೆ ಮತ್ತೆ ತನ್ನ ಬಾಲ್ಯದ ಕೋಣೆಯಲ್ಲಿ ಮಲಗಿರುವುದಾಗಿ ಹೇಳಿದ್ದಾಳೆ.