ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರಿಬ್ಬರ ಮಾರಾಮಾರಿ: ವಿಡಿಯೊ ವೈರಲ್

Viral Video: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್‌ನಲ್ಲಿಯೇ ಪ್ರಯಾಣಿಕರಿಬ್ಬರು ಜಗಳವಾಡಿದ್ದು ದೈಹಿಕ ಘರ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲೂ ಪ್ರಯಾಣಿಕರು ಇದ್ದರೂ ಕ್ಯಾರೇ ಎನ್ನದೇ ಮಾತಿಗೆ ಮಾತು ಬೆಳೆಸಿದ್ದಾರೆ. ಈ ಘಟನೆಯೂ ಪುಣೆಯ ಭೋಸರಿಯಲ್ಲಿ ನಡೆದಿದ್ದು ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಈ ಗಲಾಟೆಯ ವಿಡಿಯೋವನ್ನು ಮತ್ತೊಬ್ಬ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಸರಕಾರಿ ಬಸ್ ನಲ್ಲಿ ಪ್ರಯಾಣಿಕರಿಬ್ಬರ ದೈಹಿಕ ಘರ್ಷಣೆ: ವಿಡಿಯೊ ವೈರಲ್

ಸರ್ಕಾರಿ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರಿಬ್ಬರ ಮಾರಾಮಾರಿ -

Profile
Pushpa Kumari Sep 10, 2026 8:35 PM

ಮಹಾರಾಷ್ಟ್ರ ,ಸೆ.10: ಇತ್ತೀಚೆಗೆ ನಾಗರಿಕ ಪ್ರಜ್ಞೆ ಅನ್ನೋದು ಮರೆಯಾಗಿ ಬಿಟ್ಟಿದೆ. ಸಾರ್ವಜನಿಕ ಸ್ಥಳದಲ್ಲೂ ಕೆಲವರು ಬೇಕಾಬಿಟ್ಟಿಯಾಗಿ ವರ್ತನೆ ತೋರುತ್ತಿದ್ದಾರೆ. ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್‌ನಲ್ಲಿಯೇ ಪ್ರಯಾಣಿಕರಿಬ್ಬರು ಜಗಳವಾಡಿದ್ದು ದೈಹಿಕ ಘರ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲೂ ಪ್ರಯಾಣಿಕರು ಇದ್ದರೂ ಕ್ಯಾರೇ ಎನ್ನದೇ ಮಾತಿಗೆ ಮಾತು ಬೆಳೆಸಿದ್ದಾರೆ. ಈ ಘಟನೆಯೂ ಪುಣೆಯ ಭೋಸರಿಯಲ್ಲಿ ನಡೆದಿದ್ದು ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಈ ಗಲಾಟೆಯ ವಿಡಿಯೋವನ್ನು (Viral News) ಮತ್ತೊಬ್ಬ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಬಸ್ ನ ನೆಲದ ಮೇಲೆ ಮಲಗಿರುವ ಪ್ರಯಾಣಿಕನ ಮೇಲೆ ಪುರುಷನೊಬ್ಬ ದಾಳಿ ಮಾಡುತ್ತಿದ್ದು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ದಾಳಿ ಮಾಡುತ್ತಿದ್ದ ವ್ಯಕ್ತಿಯ ಜೊತೆಯಲ್ಲಿದ್ದ ಮಹಿಳೆಯೂ ಜಗಳಕ್ಕೆ ಎಂಟ್ರಿಯಾಗಿ ವ್ಯಕ್ತಿಯ ಕುತ್ತಿಗೆಯನ್ನು ಹಿಸುಕಲು ಯತ್ನಿಸಿದ್ದಾಳೆ.

ವಿಡಿಯೋ ನೋಡಿ:



ಕೂಡಲೇ ಬಸ್ ಕಂಡಕ್ಟರ್ ಮಧ್ಯಪ್ರವೇಶಿಸಿದ್ದು ಜಗಳವಾಡುತ್ತಿದ್ದವರನ್ನು ಬಿಡಿಸಿ, ಮೂವರನ್ನೂ ಬಸ್‌ನಿಂದ ಕೆಳಗಿಳಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ​ಕೆಲವು ಪ್ರಯಾಣಿಕರು ಘಟನೆಯನ್ನು ವೀಕ್ಷಿಸುತ್ತಿದ್ದರೆ ಇನ್ನು ಕೆಲವರು ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

Viral Video: 8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ

ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಬಸ್ಸಿನ ನೆಲಕ್ಕೆ ಬಿದ್ದಿದ್ದ ಮತ್ತೊಬ್ಬ ವ್ಯಕ್ತಿಗೆ ಹೊಡೆಯುತ್ತಿರುವುದು ಕಂಡುಬರುತ್ತದೆ. ನಂತರ ಅವನ ಜೊತೆಗಿದ್ದ ಮಹಿಳೆ ಮಧ್ಯಪ್ರವೇಶಿಸಿ ಪ್ರಯಾಣಿಕನ ಕತ್ತು ಹಿಸುಕಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ​ಜಗಳಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ದಾಳಿ ನಡೆಸಿದ ವ್ಯಕ್ತಿ ಮದ್ಯಸೇವಿಸಿದ್ದನೆಂದು ಹೇಳಲಾಗುತ್ತಿದ್ದರೂ, ಇನ್ನೂ ದೃಢಪಟ್ಟಿಲ್ಲ.

ಈ ಘಟನೆ ಕುರಿತು ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಭೋಸರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧಾಕರ್ ಯಾದವ್ ತಿಳಿಸಿದ್ದಾರೆ.. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಸಾರ್ವಜನಿಕ ಸಾರಿಗೆಯಲ್ಲಿ ಈ ರೀತಿಯ ವರ್ತನೆ ತೋರುವುದು ತಪ್ಪು ಎಂದು ಕಾಮೆಂಟ್ ಮಾಡಿದ್ದಾರೆ.