ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪಾರ್ಕ್‌ನಲ್ಲಿ ಜಾಗಿಂಗ್‌ ಮಾಡ್ತಿದ್ದ ವ್ಯಕ್ತಿಯ ಮೇಲೆ ರಾಬರ್ಸ್‌ ಡೆಡ್ಲಿ ಅಟ್ಯಾಕ್‌!

ಲಂಡನ್‌ನ ಟವರ್ ಹ್ಯಾಮ್ಲೆಟ್ಸನ್‌ ಪೆನ್ನಿಫೀಲ್ಡ್ಸ್ ಪಾರ್ಕ್‌ನಲ್ಲಿ ಹಾಡುಹಗಲೇ ವ್ಯಕ್ತಿಯೊಬ್ಬನ ಮೇಲೆ ದರೋಡೆಕೋರರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ. ಕ್ಯಾಮೆರಾದಲ್ಲಿ ಇಡೀ ಘಟನೆಯನ್ನು ಸೆರೆಹಿಡಿಯಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಪಾರ್ಕ್‌ನಲ್ಲಿದ್ದ ವ್ಯಕ್ತಿಯ ಮೇಲೆ ರಾಬರ್ಸ್‌ ಡೆಡ್ಲಿ ಅಟ್ಯಾಕ್‌?

Profile pavithra Mar 28, 2025 1:17 PM

ಲಂಡನ್: ಲಂಡನ್‍ನ ಟವರ್ ಹ್ಯಾಮ್ಲೆಟ್ಸನ್‌ ಪೆನ್ನಿಫೀಲ್ಡ್ಸ್ ಪಾರ್ಕ್‍ನಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ದರೋಡೆಕೋರರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ. ಕ್ಯಾಮೆರಾದಲ್ಲಿ ಇಡೀ ಘಟನೆಯನ್ನು ಸೆರೆಹಿಡಿಯಲಾಗಿದ್ದು, ಮೂವರು ಮುಸುಕುಧಾರಿ ದಾಳಿಕೋರರು ವ್ಯಕ್ತಿಯೊರ್ವನನ್ನು ಸುತ್ತುವರಿದು ಬಲವಂತವಾಗಿ ನೆಲಕ್ಕೆ ತಳ್ಳಿ ಕೊಡಲಿ, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಾಗ ಇರಿತಕ್ಕೊಳಗಾದ ವ್ಯಕ್ತಿಯ ಗಾಯಗಳಿಗೆ ಅಲ್ಲಿಗೇ ಈಗಾಗಲೇ ಆಗಮಿಸಿದ ಆ್ಯಂಬುಲೆನ್ಸ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವನಿಗೆ ಸಣ್ಣಪುಟ್ಟ ಗಾಯಗಳಾಗಿವೆಯಂತೆ.

ಪ್ರಸ್ತುತ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಮಾಹಿತಿ ಪ್ರಕಾರ, ಕಳೆದ ವರ್ಷ ಲಂಡನ್‍ನಲ್ಲಿ 16 ಹದಿಹರೆಯದವರು ಸೇರಿದಂತೆ ಒಟ್ಟು 80 ನರಹತ್ಯೆ ನಡೆದಿದ್ದು ಬಲಿಪಶುಗಳು ಸಾವನ್ನಪ್ಪಿದ್ದಾರೆ. ಆ ಹದಿಹರೆಯದವರಲ್ಲಿ, 14 ಜನರನ್ನು ಇರಿದು ಕೊಲ್ಲಲಾಯಿತು ಮತ್ತು ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತಂತೆ.

ಈ ಹಿಂದೆ ಉತ್ತರ ಲಂಡನ್‍ನಲ್ಲಿ 16 ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. ದಕ್ಷಿಣ ಲಂಡನ್‍ನ ಕ್ರಾಯ್ಡನ್‍ನಲ್ಲಿ ಶಾಲೆಗೆ ಹೋಗುತ್ತಿದ್ದ 15 ವರ್ಷದ ಎಲಿಯೆನ್ ಆಂಡಮ್ ಎಂಬ ಬಾಲಕಿಯನ್ನು ಬೆಳಿಗ್ಗೆ ಚಾಕುವಿನಿಂದ ಇರಿದು ಕೊಲ್ಲಲಾಯಿತು. 17 ವರ್ಷದ ಬಾಲಕನ ಬಳಿ ಅಡುಗೆ ಚಾಕು ಇದ್ದ ಕಾರಣ ಆತನ ಮೇಲೆ ಈ ಕೊಲೆ ಆರೋಪ ಹೊರಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಏರ್‌ಪೋರ್ಟ್‌ನಲ್ಲಿ ಬೆತ್ತಲೆಯಾಗಿ ಓಡಾಡಿದ ಈ ಮಹಿಳೆ- ವಿಡಿಯೊ ಫುಲ್‌ ವೈರಲ್

ಹಾಗೇ ಏಪ್ರಿಲ್ 10 ರಂದು ಪೂರ್ವ ಲಂಡನ್‍ನ ಚಿಂಗ್ಫೋರ್ಡ್‍ನಲ್ಲಿ 17 ವರ್ಷದ ಚಿಮಾ ಒಸುಜಿ ಎಂಬಾತನನ್ನು ಮಾರಣಾಂತಿಕವಾಗಿ ಇರಿದು ಕೊಲ್ಲಲಾಯಿತು. 16 ವರ್ಷದ ಇಬ್ಬರು ಬಾಲಕರ ವಿರುದ್ಧ ಈ ಕೊಲೆ ಆರೋಪ ಹೊರಿಸಲಾಗಿದೆ.ಏಪ್ರಿಲ್ 13 ರಂದು ಉತ್ತರ ಲಂಡನ್‍ನ ಟೊಟೆನ್ಹ್ಯಾಮ್‍ನ ನಾರ್ಮನ್ ರಸ್ತೆಯಲ್ಲಿ 17 ವರ್ಷದ ಟೈಲರ್ ಮೆಕ್ಡರ್ಮಾಟ್ ಗುಂಡೇಟಿನಿಂದ ಸಾವನ್ನಪ್ಪಿದ್ದನು.ಆತನ ಕೊಲೆಯ ಆರೋಪದಲ್ಲಿ ಎಂಟು ಜನರ ಮೇಲೆ ಆರೋಪ ಹೊರಿಸಲಾಗಿದೆ.