ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮಾಲ್‌ನ ಟಾಯ್ಲೆಟ್‌ನಲ್ಲಿ ಸಿಕ್ಕಿಬಿದ್ದ ಜೋಡಿ.. ಮುಂದೇನಾಯ್ತು ಗೊತ್ತೇ?

ಮಲೇಷ್ಯಾದ ಶಾಪಿಂಗ್ ಕೇಂದ್ರದ ಸಾರ್ವಜನಿಕ ಶೌಚಾಲಯದ ಕ್ಯೂಬಿಕಲ್‌ನೊಳಗೆ ವಿದ್ಯಾರ್ಥಿ ಜೋಡಿಯೊಂದು ಸುಮಾರು 40 ನಿಮಿಷಗಳ ಕಾಲ ಕಳೆದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.

ಮಾಲ್‌ನ ಟಾಯ್ಲೆಟ್‌ನಲ್ಲಿ ಸಿಕ್ಕಿಬಿದ್ದ ಜೋಡಿ... ಮುಂದೆ ಆಗಿದ್ದೇ ಬೇರೆ!

-

ಮಲೇಷ್ಯಾ: ವಿದ್ಯಾರ್ಥಿ ಜೋಡಿಯೊಂದು (Student couple) ಶಾಪಿಂಗ್ ಮಾಲ್(shopping centre) ನ ಸ್ನಾನಗೃಹದೊಳಗೆ ಸುಮಾರು 40 ನಿಮಿಷಗಳ ತಮ್ಮನ್ನು ತಾವು ಲಾಕ್ ಮಾಡಿಕೊಂಡ ಘಟನೆ ಮಲೇಷ್ಯಾದಲ್ಲಿ (Malaysia) ನಡೆದಿದೆ. ಅನುಮಾನಗೊಂಡ ವ್ಯಕ್ತಿಯೊಬ್ಬರು ಈ ಕುರಿತು ಭದ್ರತಾ ಸಿಬ್ಬಂದಿಗೆ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುತ್ತಿದ್ದ ಯುವ ಜೋಡಿ ಮಾಲ್‌ನ ಸ್ನಾನಗೃಹಕ್ಕೆ ಹೋಗಿದ್ದು, 40 ನಿಮಿಷಗಳಾದರೂ ಹೊರಗೆ ಬರಲಿಲ್ಲ. ಬಳಿಕ ಇದು ಎಲ್ಲರನ್ನೂ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಈ ಘಟನೆ ಮಲೇಷ್ಯಾದ ಶಾಪಿಂಗ್ ಕೇಂದ್ರದಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.

ಮಲೇಷ್ಯಾದ ಶಾಪಿಂಗ್ ಕೇಂದ್ರದಲ್ಲಿ ಯುವ ಜೋಡಿಯೊಂದು ಸಾರ್ವಜನಿಕ ಶೌಚಾಲಯದ ಕ್ಯೂಬಿಕಲ್‌ನೊಳಗೆ 40 ನಿಮಿಷಗಳ ಕಾಲ ಕಳೆದಿದ್ದು, ಇದು ವಿವಾದದ ಕೇಂದ್ರಬಿಂದುವಾಗಿದೆ. ಪ್ರಸಿದ್ಧ ಮಾಲ್‌ನ ಕೆಫೆ ವಿಭಾಗದಲ್ಲಿ ನಡೆದ ಈ ಘಟನೆಯು ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿದ್ಯಾರ್ಥಿ ಯುವ ಜೋಡಿ ವಿಹಾರಕ್ಕಾಗಿ ಮಾಲ್‌ಗೆ ಬಂದಿದ್ದು, ಬಳಿಕ ಹೊರಬಂದು ನೇರವಾಗಿ ಸಾರ್ವಜನಿಕ ಶೌಚಾಲಯಕ್ಕೆ ಹೋದರು. ಅಲ್ಲಿ ತಮ್ಮನ್ನು ತಾವು ಸ್ನಾನಗೃಹದೊಳಗೆ ಲಾಕ್ ಮಾಡಿಕೊಂಡರು. ಸಮಯ ಕಳೆದಂತೆ ಇದನ್ನು ಬಳಸಲು ಕಾಯುತ್ತಿದ್ದ ಇತರ ಸಂದರ್ಶಕರು ಶಂಕೆ ವ್ಯಕ್ತವಾಗತೊಡಗಿತು. 40 ನಿಮಿಷಗಳಾದರೂ ಯಾರೂ ಹೊರಗೆ ಬಾರದೇ ಇದ್ದುದರಿಂದ ಒಬ್ಬ ಸಂದರ್ಶಕ ಬಾಗಿಲಿನ ಕೆಳಗೆ ಇಣುಕಿದಾಗ ನಾಲ್ಕು ಕಾಲುಗಳನ್ನು ಗಮನಿಸಿದನು. ಕೂಡಲೇ ಆತಂಕಗೊಂಡ ಪ್ರೇಕ್ಷಕರು ಈ ಬಗ್ಗೆ ಮಾಲ್ ನ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂಡ ಭದ್ರತಾ ಅಧಿಕಾರಿಗಳು ಬಾಗಿಲು ತಟ್ಟಿದರೂ ಜೋಡಿ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಬಲವಂತವಾಗಿ ಬಾಗಿಲು ತೆರೆಯಲಾಯಿತು.

ಎಲ್ಲರೂ ಅವರನ್ನು ಬೈದರು, ಭದ್ರತಾ ಸಿಬ್ಬಂದಿ ಲಘುವಾಗಿ ಹೊಡೆದರು. ಇದರಿಂದ ಮುಜುಗರಕ್ಕೊಳಗಾದ ಜೋಡಿ ಅಲ್ಲಿಂದ ಪರಾರಿಯಾದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಟೀಕಿಸಿದ್ದಾರೆ. ಅನೇಕರು ಈ ರೀತಿ ಮಾಡಬೇಡಿ ಎಂದು ಹೇಳಿದ್ದು, ಇದು ಅನುಚಿತ ಮತ್ತು ಅಪ್ರಬುದ್ಧ ನಡೆ ಎಂದು ಹೇಳಿದ್ದಾರೆ. ಒಬ್ಬರು ಪ್ರತಿಕ್ರಿಯೆ ನೀಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಎಲ್ಲಾ ಸಭ್ಯತೆಯ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದು, ಇನ್ನೊಬ್ಬರು ಮುಂದಿನ ಬಾರಿ ಕೆಳ ಮಹಡಿಯ ಸ್ನಾನಗೃಹವನ್ನು ಬಳಸಿ. ಅದು ಹೆಚ್ಚು ಖಾಸಗಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Suryakumar Yadav: ಏಷ್ಯಾ ಕಪ್‌ ಪಂದ್ಯದ ವೇತನವನ್ನು ಪಹಲ್ಗಾಮ್‌ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯ

ಈ ಘಟನೆಯು ಮಲೇಷ್ಯಾದಲ್ಲಿ ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳು (PDA) ಮತ್ತು ಯುವಕರಲ್ಲಿ ಲೈಂಗಿಕ ಶಿಕ್ಷಣದ ಕೊರತೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಮಲೇಷಿಯನ್ ಫ್ಯಾಮಿಲಿ ಕೌನ್ಸಿಲ್ 2025 ರ ವೇಳೆಗೆ ಹದಿಹರೆಯದ ಗರ್ಭಧಾರಣೆಯ ಪ್ರಮಾಣ ಶೇ. 15ರಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ಹೇಳಿದ್ದು, ಈ ನಡುವೆಯೇ ಇಂತಹ ಘಟನೆ ಜಾಗೃತಿ ಮೂಡುವಂತೆ ಮಾಡಿದೆ. ಈ ರೀತಿಯ ಘಟನೆ ಮತ್ತೆ ನಡೆಯದಂತೆ ಭದ್ರತಾ ಕ್ರಮಗಳನ್ನು ಹೆಚ್ಚಿಸುವುದಾಗಿ ಮಾಲ್ ಅಧಿಕಾರಿಗಳು ತಿಳಿಸಿದ್ದಾರೆ.