Viral Video: ನಡು ರಸ್ತೆಯಲ್ಲಿ ಲ್ಯಾಂಬೋರ್ಘಿನಿ ಕಾರನ್ನೇ ತಡೆದು ನಿಲ್ಲಿಸಿದ ಬೀದಿ ನಾಯಿ; ವಿಡಿಯೊ ಇಲ್ಲಿದೆ ನೋಡಿ!
Viral Video: ಮುಂಬೈನಲ್ಲಿ ಬೀದಿ ನಾಯಿಯೊಂದು ಹೈವೇಯಲ್ಲಿ ಚಲಿಸುತ್ತಿದ್ದ ಲ್ಯಾಂಬೋರ್ಘಿನಿ ಕಾರನ್ನೇ ತಡೆದು ನಿಲ್ಲಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ರಂಜಿಸಿದೆ. ಈ ವಿಡಿಯೊ ಈಗಾಗಲೇ 1.2 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.


ಮುಂಬೈ: ಬೀದಿನಾಯಿಗಳು ರಸ್ತೆಯಲ್ಲಿ ಓಡಾಡುವಂತಹ ವಾಹನಗಳ ಹಿಂದೆ ಬೊಗಳುತ್ತಾ ಓಡಿಬರುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಈ ಬೀದಿ ನಾಯಿಗಳ ಈ ಕೃತ್ಯದಿಂದ ಅನೇಕರಿಗೆ ಸಮಸ್ಯೆಯಾಗಿದೆ. ಇದೀಗ ಮುಂಬೈನ ಬೀದಿಯಲ್ಲಿ ಬೀದಿ ನಾಯಿಯೊಂದು ಲ್ಯಾಂಬೋರ್ಘಿನಿ ಕಾರನ್ನೇ ತಡೆದು ನಿಲ್ಲಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರನ್ನು ರಂಜಿಸಿದಲ್ಲದೇ ಅವರ ಕುತೂಹಲವನ್ನು ಕೆರಳಿಸಿದೆ.
ವೈರಲ್ ಆದ ವಿಡಿಯೊದಲ್ಲಿ ಕಿತ್ತಳೆ ಬಣ್ಣದ ಲ್ಯಾಂಬೋರ್ಘಿನಿ ಕಾರು ಬರುವಾಗ ಬೀದಿ ನಾಯಿಯೊಂದು ಅದಕ್ಕೆ ಅಡ್ಡಬಂದು ತಡೆದು ನಿಲ್ಲಿಸುವುದು ಸೆರೆಯಾಗಿದೆ. ಚಾಲಕನು ಇನ್ನೊಂದು ಕಡೆಯಿಂದ ಚಲಿಸಲು ಪ್ರಯತ್ನಿಸುತ್ತಿದ್ದಂತೆ, ನಾಯಿ ಹಿಂಬಾಲಿಸುತ್ತಾ ಮತ್ತೆ ಅಡ್ಡಬಂದು ನಿಂತಿದೆ. ಹಾಗೇ ಅದು ಆ ಕಾರನ್ನು ಕಂಡು ಜೋರಾಗಿ ಬೊಗಳಿದೆ. ಸ್ವಲ್ಪ ಸಮಯದ ನಂತರ, ಲ್ಯಾಂಬೋರ್ಘಿನಿ ವೇಗವನ್ನು ಹೆಚ್ಚಿಸಿ ಹೇಗೋ ನಾಯಿಯಿಂದ ತಪ್ಪಿಸಿಕೊಂಡು ಮುಂದೆ ಸಾಗುತ್ತದೆ. ಆದರೆ ನಾಯಿ ಅದನ್ನು ಬೆನ್ನಟ್ಟಿಕೊಂಡು ಹೋಗಿದೆ. ನಂತರ ಕಾರು ಅದರ ದೃಷ್ಟಿಯಿಂದ ಕಣ್ಮರೆಯಾದಾಗ ಅದು ಸುಮ್ಮನಾಗಿದೆ.
Kalesh b/w Sir Dogesh and Lamborghini
— Ghar Ke Kalesh (@gharkekalesh) July 15, 2025
pic.twitter.com/EbgnzoErvI
ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಈಗಾಗಲೇ 1.2 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ನೆಟ್ಟಿಗರೊಬ್ಬರು, "ನಾಯಿಗೆ ಹೆದರಿ ಲ್ಯಾಂಬೋರ್ಘಿನಿ ಓಡಿಹೋಯಿತು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಬಹುಶಃ ಅದರ ಹಿಂದಿನ ಜನ್ಮದಲ್ಲಿ, ಅದು ಅದೇ ಬಣ್ಣದ ಲ್ಯಾಂಬೋರ್ಘಿನಿ ಯನ್ನು ಹೊಂದಿರಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ನಾಯಿಯ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡರು ಮತ್ತು ಅದನ್ನು "ರಸ್ತೆಯ ನಿಜವಾದ ಬಾಸ್" ಎಂದು ಕರೆದಿದ್ದಾರೆ. ಐಷಾರಾಮಿ ಕಾರುಗಳು ಹೆದ್ದಾರಿಗಳನ್ನು ಆಳಬಹುದು, ಆದರೆ ಬೀದಿ ನಾಯಿಗಳು ಅವುಗಳಿಗೆ ಚಾರ್ಚ್ ಮಾಡುತ್ತವೆ ಎಂದು ಹಲವರು ತಮಾಷೆ ಮಾಡಿದರು.
ಈ ಸುದ್ದಿಯನ್ನೂ ಓದಿ:Viral Video: ಕನ್ನ ಹಾಕಲು ಹೋಗಿ ಭರ್ಜರಿ ಗೊರಕೆ ಹೊಡೆದು ನಿದ್ದೆ! ಖದೀಮನ ವಿಡಿಯೊ ನೋಡಿ
ಕಳೆದ ವರ್ಷ, ರೋಬೋಟಿಕ್ ನಾಯಿಗೆ ಬೀದಿ ನಾಯಿಯೊಂದು ಪ್ರತಿಕ್ರಿಯಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕ್ಷಣವನ್ನು ಕಾನ್ಪುರದ ಐಐಟಿಯಲ್ಲಿ ನಡೆದ ನಾಲ್ಕು ದಿನಗಳ ತಂತ್ರಜ್ಞಾನ ಉತ್ಸವದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೊದಲ್ಲಿ ಮೊದಲು ನಾಯಿಯು ರೋಬೋಟ್‌ನ ಸುತ್ತಲೂ ಓಡುತ್ತದೆ ಮತ್ತು ಅದರ ವಿನ್ಯಾಸವನ್ನು ಕುತೂಹಲದಿಂದ ಕಾಣುತ್ತದೆ. ನಂತರ ಅದು ರೋಬೋಟ್‌ನೊಂದಿಗೆ ಆಟವಾಡಲು ಪ್ರಯತ್ನಿಸುತ್ತದೆ. ಅದು ಅದರ ಕ್ರಿಯೆಗಳಿಗೆ ಪ್ರತಿಯಾಗಿ ಪ್ರತಿಕ್ರಿಯಿಸುತ್ತದೆ.