Viral News: ಮೊದಲ ರಾತ್ರಿ ತಲೆಸುತ್ತಿ ಬಿದ್ದ ಪತ್ನಿ... ಪ್ರಗ್ನೆನ್ಸಿ ಟೆಸ್ಟ್‌ಗೆ ಪಟ್ಟು ಹಿಡಿದ ಭೂಪ! ಏನಿದು ಘಟನೆ?
ರಾಂಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ, ಮದುವೆ ಆಚರಣೆಗಳಿಂದ ಸುಸ್ತಾಗಿ ಮನೆಗೆ ಬಂದ ವಧು ತಲೆಸುತ್ತು ಬಂದಿದ್ದಕ್ಕೆ ಅನುಮಾನಗೊಂಡ ವರ ಮೆಡಿಕಲ್‍ನಿಂದ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಅನ್ನು ತಂದು ಆಕೆಗೆ ಕೊಟ್ಟು ಟೆಸ್ಟ್ ಮಾಡುವಂತೆ ಹೇಳಿದ್ದಾನೆ. ಇದರಿಂದ ವಧು ಕೋಪಗೊಂಡು ತನ್ನ ಮನೆಯವರಿಗೆ ದೂರು ನೀಡಿದ್ದರಿಂದ ಆ ರಾತ್ರಿ ಎರಡು ಕುಟುಂಬಗಳ ನಡುವೆ ದೊಡ್ಡ ಜಗಳ ನಡೆದಿದೆ. ಕೊನೆಗೆ ಗ್ರಾಮಸ್ಥರು ಸೇರಿ ಪಂಚಾಯಿತಿ ನಡೆಸಿ ಅವರನ್ನು ರಾಜಿ ಮಾಡಿಸಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಭೋಪಾಲ್: ಮದುವೆಯ ಎಂದರೆ ಬಹಳ ಸಂಭ್ರಮದ ಒಂದು ಆಚರಣೆ. ಇದು ಹೊಸ ಸಂಬಂಧಗಳನ್ನು ಬೆಸೆಯುವುದರ ಜೊತೆಗೆ ಈ ದಿನ ಕುಟುಂಬದ ಸದಸ್ಯರಲ್ಲಿ ಸಂತಸ, ಸಂಭ್ರಮ ಮನೆಮಾಡಿರುತ್ತದೆ. ಆದರೆ ರಾಂಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ, ಈ ಸಂಭ್ರಮದ ದಿನ ವಿವಾದವಾಗಿ ಮಾರ್ಪಟ್ಟಿದೆ. ಮದುವೆ ಮುಗಿಸಿ ಸುಸ್ತಾಗಿ ತನ್ನ ಪತಿಯ ಮನೆಗೆ ಬಂದ ವಧುವಿನ ಬಳಿ ಅನುಮಾನಗೊಂಡ ವರ ಪ್ರೆಗ್ನೆನ್ಸಿ ಕಿಟ್ ಬಳಸಿ ಗರ್ಭಧಾರಣೆ ಟೆಸ್ಟ್ ಮಾಡಲು ಹೇಳಿದ್ದಾನೆ. ಇದರಿಂದ ವಧು ವರನ ಕುಟುಂಬದವರ ನಡುವೆ ಜಗಳ ನಡೆದಿದೆ. ಆ ದಿನ ರಾತ್ರಿ ನಡೆದ ಈ ಘಟನೆ ಇಡೀ ಸಂತೋಷದ ವಾತಾವರಣವನ್ನು ಹಾಳುಮಾಡಿದೆ.
ನಡೆದಿದ್ದೇನು?
ಮಾಹಿತಿ ಪ್ರಕಾರ, ಶನಿವಾರ(ಜುಲೈ 12) ನವಜೋಡಿಯೊಂದು ಮದುವೆ ಮುಗಿಸಿ ವಧು ಮೊದಲ ಬಾರಿಗೆ ತನ್ನ ಅತ್ತೆಯ ಮನೆಗೆ ತಲುಪಿದಾಗ, ಸುಸ್ತು ಆಯಾಸದಿಂದಾಗಿ ಅವಳಿಗೆ ತಲೆಸುತ್ತು ಬಂದಿತ್ತು. ಇದನ್ನು ನೋಡಿದ ವರನು ಅನುಮಾನಗೊಂಡು ತನ್ನ ಸ್ನೇಹಿತರ ಬಳಿ ಹೇಳಿದ್ದಾನೆ. ಸ್ನೇಹಿತರು ಇದು ಗರ್ಭಧಾರಣೆಯ ಲಕ್ಷಣವಾಗಿರಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ. ವರನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅದೇ ಕೂಡಲೇ ಮೆಡಿಕಲ್‍ನಿಂದ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಅನ್ನು ತಂದು ತನ್ನ ಹೆಂಡತಿಗೆ ಕೊಟ್ಟು ಟೆಸ್ಟ್ ಮಾಡುವಂತೆ ಹೇಳಿದ್ದಾನೆ. ಕಿಟ್ ನೋಡಿದ ತಕ್ಷಣ ವಧು ಕೋಪಗೊಂಡು ಕೂಡಲೇ ತನ್ನ ಹೆತ್ತವರ ಮನೆಗೆ ಕರೆ ಮಾಡಿ ತನ್ನ ಅತ್ತಿಗೆಗೆ ಇಡೀ ವಿಷಯವನ್ನು ಹೇಳಿದ್ದಾಳೆ. ಸ್ವಲ್ಪ ಸಮಯದೊಳಗೆ, ವಧುವಿನ ಕುಟುಂಬವು ಅವಳ ಅತ್ತೆಯ ಮನೆಗೆ ಬಂದಿದೆ. ಈ ಬಗ್ಗೆ ಎರಡು ಕುಟುಂಬಗಳ ನಡುವೆ ದೊಡ್ಡ ಗಲಾಟೆ ನಡೆಯಿತು. ಜಗಳ ವಿಕೋಪಕ್ಕೆ ಹೋದಾಗ ಗ್ರಾಮದ ಕೆಲವರು ಮಧ್ಯಪ್ರವೇಶಿಸಿ ಪಂಚಾಯತಿ ಕರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಳಿಯನಿಗೆ ಅತ್ತೆ-ಮಾವನಿಂದಲೇ ತಾಲಿಬಾನ್ ಶೈಲಿಯಲ್ಲಿ ಶಿಕ್ಷೆ- ವಿಡಿಯೊ ಇದೆ
ಪಂಚಾಯಿತ್‍ನಲ್ಲಿ ನಡೆದಿದ್ದೇನು?
ಸುಮಾರು ಎರಡು ಗಂಟೆಗಳ ಕಾಲ ಪಂಚಾಯತ್ ಸಭೆ ನಡೆಸಿದರು. ಪಂಚಾಯತ್‌ನಲ್ಲಿ, ವರನಿಗೆ ತನ್ನ ಮೇಲೆ ಅನುಮಾನವಿದೆ, ಆದ್ದರಿಂದ ತಾನು ಅವನೊಂದಿಗೆ ಸಂಸಾರ ನಡೆಸುವುದಿಲ್ಲ ಎಂದು ವಧು ಆರೋಪಿಸಿದ್ದಾಳೆ. ಅದೇ ಸಮಯದಲ್ಲಿ, ವರನು ಯಾವುದೇ ಕೆಟ್ಟ ಉದ್ದೇಶದಿಂದ ಇದನ್ನು ಮಾಡಿಲ್ಲ, ಆದರೆ ತನ್ನ ಸ್ನೇಹಿತರ ಹೇಳಿದ್ದಕ್ಕೆ ಅಜ್ಞಾನದಿಂದ ಅಂತಹ ನಿರ್ಧಾರ ತೆಗೆದುಕೊಂಡೆ ಎಂದು ಸ್ಪಷ್ಟಪಡಿಸಿದನು. ಅಂತಿಮವಾಗಿ, ವರನು ಸಾರ್ವಜನಿಕವಾಗಿ ಕ್ಷಮೆಯಾಚಿಸಿದನು ಮತ್ತು ಭವಿಷ್ಯದಲ್ಲಿ ಅಂತಹ ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆ. ಇದರ ನಂತರ, ವಿಷಯ ಶಾಂತವಾಯಿತು ಮತ್ತು ಎರಡೂ ಕುಟುಂಬಗಳು ರಾಜಿ ಮಾಡಿಕೊಂಡವು.