Viral Video: ಅಬ್ಬಾ..ಇದೆಂಥಾ ದುಸ್ಸಾಹಸ!? ಚಲಿಸೋ ರೈಲಿನಲ್ಲಿ ಈ ಯುವತಿಯರು ಮಾಡಿದ್ದೇನು ಗೊತ್ತಾ?
ರೈಲಿನ ಫುಟ್‌ಬೋರ್ಡ್‌ನಲ್ಲಿ ಯುವತಿಯರು ಅಪಾಯಕರವಾಗಿ ನೇತಾಡುತ್ತಾ ಪ್ರಯಾಣಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿಗಳು, ಇದರ ಕುರಿತು ತುರ್ತು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದಾರೆ.


ಮುಂಬೈ: ಕಾರಿನಲ್ಲಿ ಕುಳಿತುಕೊಂಡು ಸ್ಟಂಟ್ ಮಾಡುವುದು, ಬೈಕ್‌ನಲ್ಲಿ ಕುಳಿತು ರೀಲ್ಸ್‌ಗಾಗಿ ಸರ್ಕಸ್ ಮಾಡುವುದು ಇಂತಹ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಇದೀಗ ರೈಲಿನ ಫುಟ್‌ಬೋರ್ಡ್‌ನಲ್ಲಿ ಯುವತಿಯರು ಅಪಾಯಕಾರಿಯಾಗಿ ನೇತಾಡುತ್ತಾ ಪ್ರಯಾಣಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಜನದಟ್ಟಣೆ ಹೆಚ್ಚಾಗಿರುವ ಕಾರಣ ಕಲ್ಯಾಣ್‌ನಿಂದ ಬರುವ ಲೇಡೀಸ್ ಸ್ಪೆಷಲ್ ಲೋಕಲ್ ರೈಲು 40 ನಿಮಿಷಗಳಷ್ಟು ತಡವಾಗಿ ಬಂದಿತು. ಇದರಿಂದ ಜನಸಂದಣಿ ಹೆಚ್ಚಾಗಿಯೇ ಇತ್ತು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೊಲ್ಲಿ , ಹಲವಾರು ಮಹಿಳೆಯರು ರೈಲು ಹತ್ತಲು ಕಷ್ಟಪಡುತ್ತಿರುವುದು ಸೆರೆಯಾಗಿದೆ. ಒಬ್ಬ ಮಹಿಳೆ ಫುಟ್‌ಬೋರ್ಡ್‍ನ ಅಂಚಿನಲ್ಲಿ ನೇತಾಡಿದ್ದಾಳೆ. ಈ ಅಪಾಯಕಾರಿ ಪರಿಸ್ಥಿತಿಯು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
ವಿಡಿಯೊ ನೋಡಿ...
#ViralVideo #CRFixLocalTrainDelays Today’s Ladies Special from Kalyan was delayed by 40 mins, forcing women to hang on the footboard—an unsafe and risky commute. Railways term this dangerous, yet delays continue. @AshwiniVaishnaw pls review delay data. @MumRail @rajtoday pic.twitter.com/vnhxTIyFD6
— Mumbai Railway Users (@mumbairailusers) May 9, 2025
ಮೇ 12ರಂದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವುದು ಅಸುರಕ್ಷಿತ ಎಂದು ರೈಲ್ವೆ ಅಧಿಕಾರಿಗಳು ಆಗಾಗ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ರೈಲುಗಳು ಬರುವುದು ತಡವಾದಾಗ ಹೀಗೆ ನೇತಾಡಿಕೊಂಡು ಹೋಗದೆ ಬೇರೆ ಮಾರ್ಗವಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿಗಳು, ಈ ಸಮಸ್ಯೆಯ ತುರ್ತು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ.
ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರು ಈ ರೀತಿ ಅಪಾಯಕಾರಿಯಾಗಿ ಪ್ರಯಾಣಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕಾಸ್ಗಂಜ್‍ನಿಂದ ಕಾನ್ಪುರಕ್ಕೆ ವೇಗವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿಯ ಹೊರಭಾಗದಲ್ಲಿ ಯುವಕನೊಬ್ಬ ನೇತಾಡುತ್ತಾ ಹೋಗಿ ನಂತರ ಕೆಳಗೆ ಬಿದ್ದಿದ್ದನು. ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅದೃಷ್ಟವಶಾತ್, ರೈಲು ಅಷ್ಟರಲ್ಲೇ ನಿಂತಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ ಮತ್ತು ವ್ಯಕ್ತಿಗೆ ಯಾವುದೇ ರೀತಿಯ ತೀವ್ರವಾದ ಗಾಯಗಳಾಗಲಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ಇನ್ಮುಂದೆ ಹೈ ಹೀಲ್ಸ್ ಧರಿಸಲು ನಿಮಗೆ ಲೈಸೆನ್ಸ್ ಬೇಕಂತೆ! ಏನಿದು ವೈರಲ್ ನ್ಯೂಸ್?
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಸಹ ಪ್ರಯಾಣಿಕನ ಕೈ ಹಿಡಿದು ಚಲಿಸುತ್ತಿದ್ದ ರೈಲಿನ ಕಿಟಿಕಿಯ ಬಳಿ ನೇತಾಡಿದ್ದಾನೆ. ಸ್ವಲ್ಪ ಸಮಯದವರೆಗೆ ನೇತಾಡಿದ ನಂತರ ಆತ ರೈಲಿನಿಂದ ಜಿಗಿದು ಕೆಳಗೆ ಬಿದ್ದಿದ್ದಾನೆ. ಈ ವಿಡಿಯೊವನ್ನು ಜಿಆರ್‌ಪಿಗೆ ಟ್ಯಾಗ್ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.