ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವನೆ ಮಾಡಿದ ಯುವತಿ!

Viral Video: ಛತ್ತರಪುರ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯ ಒಳಗೆಯೇ ವಿಷ ಸೇವಿಸಲು ಯತ್ನಿಸಿರುವ ಘಟನೆಯೊಂದು ನಡೆದಿದೆ. ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ ಎಂದು ಬೇಸೆತ್ತು ಪೊಲೀಸ್ ಸ್ಟೇಷನ್‌ ನಲ್ಲಿಯೇ ಇದ್ದಕ್ಕಿದ್ದಂತೆ ವಿಷ ಸೇವನೆ ಮಾಡಿದ್ದಾಳೆ..

ನ್ಯಾಯ ವಿಳಂಬಕ್ಕೆ ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ

ನ್ಯಾಯ ವಿಳಂಬಕ್ಕೆ ಬೇಸೆತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ -

Profile
Pushpa Kumari Aug 3, 2026 1:57 PM

ಛತ್ತರಪುರ,ಆ. 3: ಮಧ್ಯ ಪ್ರದೇಶದ ಛತ್ತರಪುರ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯ ಒಳಗೆಯೇ ವಿಷ ಸೇವಿಸಲು ಯತ್ನಿಸಿರುವ ಘಟನೆಯೊಂದು (Viral News) ನಡೆದಿದೆ. ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ ಎಂದು ಬೇಸೆತ್ತು ಪೊಲೀಸ್ ಸ್ಟೇಷನ್‌ ನಲ್ಲಿಯೇ ಇದ್ದಕ್ಕಿದ್ದಂತೆ ವಿಷ ಸೇವನೆ ಮಾಡಿದ್ದಾಳೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಛತ್ತರ್‌ಪುರ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಯುವತಿ ವಿಷ ಸೇವನೆ ಮಾಡಿದ್ದಾಳೆ. ಅವರ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪ ಮಾಡಿದ್ದಾರೆ. ವಿಷ ಸೇವನೆ ಮಾಡುವ ಮುನ್ನ ವಿಡಿಯೊ ಕೂಡ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ. ತನ ಕುಟುಂಬಕ್ಕೆ ಸಮಸ್ಯೆ ಯಾಗಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.

ವಿಡಿಯೋ ನೋಡಿ:



ಪಿಂಕಿ ನಾಯಕ್ ಎಂದು ಗುರುತಿಸಲಾದ ಮಹಿಳೆ ದೂರು ದಾಖಲಿಸಲು ತನ್ನ ತಾಯಿ ಮತ್ತು ಸಹೋದರನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಪೊಲೀಸರು ದೂರು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಂತೆ ಯುವತಿ ಇದ್ದಕ್ಕಿದ್ದಂತೆ ವಿಷ ಸೇವನೆ ಮಾಡಿದ್ದಾಳೆ .ಪಿಂಕಿ ಕುಟುಂಬವು ಸುಮಾರು ಒಂದು ತಿಂಗಳಿನಿಂದ ಹಲ್ಲೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಠಾಣೆಗೆ ಪದೇ ಪದೇ ಭೇಟಿ ನೀಡುತ್ತಿದ್ದೇವೆ ಎಂದು ಆರೋಪಿಸಿದೆ.

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಪಿಂಕಿ ಸಹೋದರ ಪ್ರಶಾಂತ್ ನಾಯಕ್ ಜುಲೈ 6 ರಂದು ಕೆಲವು ಗ್ರಾಮಸ್ಥರಿಂದ ಹಲ್ಲೆಗೊಳಗಾದ ನಂತರ ಗಂಭೀರವಾಗಿ ಗಾಯ ಗೊಂಡಿದ್ದರು. ಈ ಬಗ್ಗೆ ಎಫ್‌ಐಆರ ದಾಖಲಾಗಿದ್ದರೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಠಾಣಾಧಿಕಾರಿ ಶಂಕಿತರಿಂದ ಹಣವನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ, ಇದರಿಂದಾಗಿ ಅವರು ಕುಟುಂಬಕ್ಕೆ ಬೆದರಿಕೆ ಹಾಕುತ್ತಲೇ ಇದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಕಳೆದ ಒಂದು ತಿಂಗಳಿನಿಂದ ಠಾಣೆಗೆ ಅಲೆದಾಡಿದರೂ ನ್ಯಾಯ ಸಿಗದ ಕಾರಣ ಮನನೊಂದು ಪಿಂಕಿ ಈ ನಿರ್ಧಾರ ಕೈಗೊಂಡಿದ್ದಾಳೆ. ಮಹಿಳೆ ದಾಖಲಿಸಿದ ವೀಡಿಯೊ ಮತ್ತು ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸ ಲಾಗುತ್ತಿದ್ದು ಯಾರೇ ಆಗಲಿ ಹೊಣೆಗಾರರೆಂದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಲ್ಲಿನ ಮುಖ್ಯ ಪೊಲೀಸ್ ವರಿಷ್ಠಧಿಕಾರಿ ಸ್ಪಷ್ಟನೆ ನೀಡಿದ್ದಾರೆ.