ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

65ರ ವಯಸ್ಸಿನಲ್ಲೂ ಸ್ವಾಭಿಮಾನದ ಜೀವನ: ಆಟೋ ಓಡಿಸಿ ಬದುಕು ಸಾಗಿಸುವ ಮಹಿಳೆ

Viral Video: ಮಂಗಳಾ‌‌ ಎನ್ನುವ 65 ವರ್ಷದ ಮಹಿಳೆ ಆಟೋರಿಕ್ಷಾ ಓಡಿಸುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾದ್ ಮತ್ತು ಉಂಡೇಲ್ ರಸ್ತೆಗಳಲ್ಲಿ ಅವರು ಓಡಾಟ ನಡೆಸುತ್ತಾರೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

65ರ ವಯಸ್ಸಿನಲ್ಲೂ ಆಟೋ ಓಡಿಸಿ ಬದುಕು ಸಾಗಿಸುವ ಮಂಗಳಾ ಅಜ್ಜಿ

ಆಟೋ ಓಡಿಸಿ ಬದುಕು ಸಾಗಿಸುವ ಮಹಿಳೆ ಮಂಗಳಾ -

Profile
Pushpa Kumari Feb 17, 2026 8:49 PM

ಮುಂಬೈ, ಫೆ. 17: ವಯಸ್ಸು ಅನ್ನೋದು ಕೇವಲ ಸಂಖ್ಯೆಯಷ್ಟೇ. ಸಾಧಿಸುವ ಛಲವೊಂದಿದ್ದರೆ ಯಾವುದೇ ಕೆಲಸದಲ್ಲಿ ಜಯ ಕಾಣಬಹುದು. ಇದಕ್ಕೆ ಸಾಕ್ಷಿ 65 ವರ್ಷದ ಈ ಮಹಿಳೆ. ಮಂಗಳಾ‌‌ ಎನ್ನುವ ಈ ಮಹಿಳೆ ಆಟೋರಿಕ್ಷಾ ಓಡಿಸುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾದ್ ಮತ್ತು ಉಂಡೇಲ್ ರಸ್ತೆಗಳಲ್ಲಿ ಅವರು ಓಡಾಟ ನಡೆಸುತ್ತಾರೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

65ನೇ ವಯಸ್ಸಿನಲ್ಲಿಯೂ ಅವರು ಸ್ವಾಭಿಮಾನದ ಜೀವನವನ್ನು ಆರಿಸಿಕೊಂಡಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಅವರು ಆಟೋದಲ್ಲಿ ಸೇವೆ ನೀಡುತ್ತಿದ್ದು ಪ್ರಯಾಣಿಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಹಣಕ್ಕಾಗಿ ತನ್ನ ಮಕ್ಕಳನ್ನು ಅವಲಂಬಿಸುವುದನ್ನು ತಪ್ಪಿಸಲು ಮತ್ತು ತನ್ನ ಆರೋಗ್ಯ ವೆಚ್ಚವನ್ನು ತಾನೇ ಭರಿಸಿಕೊಳ್ಳಲು ಆಟೋರಿಕ್ಷಾ ಓಡಿಸುತ್ತಿದ್ದಾರೆ.

ವಿಡಿಯೊ ನೋಡಿ:

ಸಮಾಜದಲ್ಲಿ 60 ದಾಟಿದ ಮೇಲೆ ಹೆಚ್ಚಿನ ಪೋಷಕರು ಕೆಲಸ ಬಿಟ್ಟು ಮನೆಯಲ್ಲಿ ಸಮಯ ಕಳೆಯುತ್ತಾರೆ. ಆದರೆ ಮಂಗಳಾ ಅಜ್ಜಿ ತಮ್ಮ ಮಕ್ಕಳಿಗೆ ಹೊರೆಯಾಗಬಾರದು ಎಂಬ ನಿಟ್ಟಿನಲ್ಲಿ‌ ಆಟೋ ಸ್ಟೀರಿಂಗ್ ಹಿಡಿದಿದ್ದಾರೆ. ಸದ್ಯ ಇವರು ಕರಾದ್ ಮತ್ತು ಉಂಡಾಲೆ ರಸ್ತೆಯಲ್ಲಿ ಆಟೋ ಚಲಾಯಿಸುತ್ತಿದ್ದು ಅಲ್ಲಿನ ಪ್ರೀತಿಯ ಅಜ್ಜಿಯಾಗಿದ್ದಾರೆ.

ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್

ʼʼಕನಸುಗಳು ನಿವೃತ್ತರಾಗುವುದಿಲ್ಲ. ಜನರು ನಿವೃತ್ತರಾಗುತ್ತಾರೆ. 65ನೇ ವಯಸ್ಸಿನಲ್ಲಿ, ಮಂಗಳಾ ಅಜ್ಜಿ ಆರಾಮಕ್ಕಿಂತ ಧೈರ್ಯವನ್ನು ಆರಿಸಿಕೊಂಡರುʼʼ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದ್ದು ಮಂಗಳಾ ಅಜ್ಜಿ ಆಟೋ ಚಲಾಯಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮಂಗಳಾ ಅಜ್ಜಿಯ ಪತಿಯ ಮರಣದ ನಂತರ, ಅವರು ನಾಲ್ಕು ಮಕ್ಕಳನ್ನು ಒಂಟಿಯಾಗಿ ಬೆಳೆಸಿದರು. ಅವರಿಗೆ ಶಿಕ್ಷಣ ಮತ್ತು ಸ್ಥಿರತೆ ಸಿಗುವಂತೆ ನೋಡಿಕೊಳ್ಳಲು ಕೂಲಿ ಕೆಲಸ ಮಾಡಿದ್ದಾರೆ. ಅವರ ಮಗ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿದ್ದಾರೆ. ʼʼನಾನು ಮನೆಯಲ್ಲಿಯೇ ಇರುತ್ತಿದ್ದೆ. ಆದರೆ ಸುಮ್ಮನೆ ಕುಳಿತುಕೊಳ್ಳುವುದರಿಂದ ಯಾರಿಗೂ ಪ್ರಯೋಜನ ವಿಲ್ಲ ಎಂದು ನಾನು ಅರಿತುಕೊಂಡೆ. ಹಾಗಾಗಿ, ನನ್ನ ಮಗನ ಮಾರ್ಗದರ್ಶನದಿಂದ ನಾನು ರಿಕ್ಷಾ ಓಡಿಸಲು ಕಲಿತೆʼʼ ಎಂದು ಹೇಳಿಕೊಂಡಿದ್ದಾರೆ.