ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೆದರ್‌ಲ್ಯಾಂಡ್‌ ಖರೀದಿಸಿದ ಟಾಪ್‌ಗೆ.. ಇಡೀ ಪ್ರಪಂಚ ಹುಡುಕಿದ್ರೂ ಸಿಗದ ಮ್ಯಾಚಿಂಗ್‌ ಸ್ಕರ್ಟ್‌ ಸಿಕ್ಕಿದ್ದೆಲ್ಲಿ ಗೊತ್ತಾ? ಈ ವೈರಲ್‌ ವಿಡಿಯೊ ನೋಡಿ

ಸಾಮಾನ್ಯವಾಗಿ ಯಾವುದಾದರೂ ಒಂದು ಡ್ರೆಸ್‌ ತೆಗೆದುಕೊಂಡರೆ, ಅದಕ್ಕೆ ಸರಿಯಾಗಿ ಮ್ಯಾಚ್‌ ಆಗುವಂತಹ ಟಾಪ್‌, ಸ್ಕರ್ಟ್‌,ದುಪ್ಪಟ್ಟಾವನ್ನು ಹುಡುಕುತ್ತೇವೆ.ಎಷ್ಟೋ ವೇಳೆ ಪರ್ಫೆಕ್ಟ್‌ ಆಗಿ ಮ್ಯಾಚ್‌ ಆಗುವ ಬಟ್ಟೆಯೇ ಸಿಗುವುದಿಲ್ಲವಂತೆ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಬಲು ಅಪರೂಪವಾದ ಸುದ್ದಿಯೊಂದು ವೈರಲ್‌(Viral Video) ಆಗಿದೆ. ನೆದರ್‌ಲ್ಯಾಂಡ್‌ನಲ್ಲಿ ಟಾಪ್‌ ತೆಗೆದುಕೊಂಡ ವಿದೇಶಿ ಮಹಿಳೆಗೆ ಅದಕ್ಕೆ ತಕ್ಕದಾದ ಸ್ಕರ್ಟ್‌ ಸಿಕ್ಕಿದ ಸುದ್ದಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಮ್ಯಾಚಿಂಗ್‌ ಸ್ಕರ್ಟ್‌ಗಾಗಿ ಇಡೀ ಪ್ರಪಂಚ ಹುಡುಕಿದ ಮಹಿಳೆ!

Profile pavithra May 14, 2025 4:10 PM

ಹೆಣ್ಣು ಮಕ್ಕಳಿಗೆ ಶಾಪಿಂಗ್‌ ಅಂದ್ರೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ವಿದೇಶಿ ಮಹಿಳೆಯ ವಿಚಾರದಲ್ಲಿ ನಡೆದ ಘಟನೆ. ಹೌದು ಎಲಿಜಾ ಎಂಬ ವಿದೇಶಿ ಮಹಿಳೆ ನೆದರ್‌ಲ್ಯಾಂಡ್ಸ್‌ನ ರೋಟರ್‌ಡ್ಯಾಮ್‌ನಲ್ಲಿ ಸುಂದರವಾದ ಕ್ರೋಶ ಶೈಲಿಯ ಟಾಪ್ ಅನ್ನು ಖರೀದಿಸಿದ್ದಳು.ಇದರಲ್ಲಿ ವಿಶೇಷವೆನೆಂದರೆ, ಆಕೆಗೆ ಈ ಟಾಪ್‌ಗೆ ಸರಿಯಾಗಿ ಮ್ಯಾಚ್‌ ಆಗುವಂತಹ ಸ್ಕರ್ಟ್‌ವೊಂದು ಸುಮಾರು 3,000 ಕಿ.ಮೀ ದೂರದಲ್ಲಿ ಸಿಕ್ಕಿದೆಯಂತೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ ಆಗಿದೆ. ಆಕೆಯ ಖುಷಿ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ವೈರಲ್ ಆದ ಪೋಸ್ಟ್‌ನಲ್ಲಿ ಎರಡು ತಿಂಗಳ ಹಿಂದೆ ನೆದರ್‌ಲ್ಯಾಂಡ್ಸ್‌ನ ರೋಟರ್‌ಡ್ಯಾಮ್‌ನಲ್ಲಿ ಎಲಿಜಾ ಟಾಪ್ ಅನ್ನು ಖರೀದಿಸಿದ್ದಾಳಂತೆ. ಆದರೆ ಗ್ರೀಸ್‌ನ ಅಥೆನ್ಸ್‌ನಲ್ಲಿ ಅದಕ್ಕೆ ಸರಿಯಾಗಿ ಹೊಂದಿಕೆಯಾಗುವಂತಹ ಸ್ಕರ್ಟ್‌ ಅನ್ನು ಖರೀದಿಸಿದ್ದಾಳಂತೆ. ಎರಡೂ ಸ್ಥಳಗಳ ನಡುವಿನ ದೂರ (ರಸ್ತೆಯ ಮೂಲಕ) ಕನಿಷ್ಠ 2,775 ಕಿ.ಮೀ. ಎಂದು ವರದಿಯಾಗಿದೆ

ವಿಡಿಯೊ ಇಲ್ಲಿದೆ ನೋಡಿ

ಈ ವಿಡಿಯೊ ಈಗಾಗಲೇ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಈ ಅಪರೂಪದ ಕ್ಷಣಕ್ಕೆ ನೆಟ್ಟಿಗರು ಆಶ್ಚರ್ಯದಿಂದ ಪ್ರತಿಕ್ರಿಯಿಸಿದ್ದಾರೆ. ಅನೇಕರು ಇದನ್ನು ಅದೃಷ್ಟ ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕಪ್‌ಕೇಕ್ ಹೀಗೂ ಮಾಡಬಹುದಾ? ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಮತ್ತೊಂದು ಘಟನೆಯಲ್ಲಿ ಬ್ರೆಜಿಲಿಯನ್‍ ಮಹಿಳೆಯೊಬ್ಬಳು ಊಟಕ್ಕೆ ಬಳಸುವಂತಹ ಎಲೆಯನ್ನು ತನ್ನ ದೇಹವನ್ನು ಮುಚ್ಚುವ ಡ್ರೆಸ್ ಆಗಿ ಬಳಸಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾಧಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ.ವೈರಲ್ ಆಗಿರುವ ವಿಡಿಯೊದಲ್ಲಿ, ಬ್ರೆಜಿಲಿಯನ್ ಮಹಿಳೆಯೊಬ್ಬಳು ತಲೆಯಿಂದ ಪಾದದವರೆಗೆ ದೊಡ್ಡ ಬಾಳೆ ಎಲೆಯನ್ನು ಉಡುಪಾಗಿ ಧರಿಸಿರುವುದು ಸೆರೆಯಾಗಿದೆ. ಅವಳು ಅದನ್ನು ತನ್ನ ದೇಹದ ಮೇಲೆ ಬಿಗಿಯಾಗಿ ಹಿಡಿದಿಡಲು ಬೆಲ್ಟ್‌ನಿಂದ ಕಟ್ಟಿದ್ದಾಳೆ. ಮತ್ತು ಅವಳು ತನ್ನ ಲುಕ್‌ ಅನ್ನು ಹೆಚ್ಚು ಆಕರ್ಷಕವಾಗಿ ಕಾಣಲು ಹೈ ಹೀಲ್ಸ್‌ ಅನ್ನು ಹಾಕಿಕೊಂಡಿದ್ದಾಳೆ. ಅಡುಗೆ ಮಾಡುವಾಗ ಬಿಸಿಯಾದ ಎಣ್ಣೆ ಮೈ ಮೇಲೆ ಹಾರದಂತೆ ತಡೆಯಲು ಈ ಎಲೆಯ ಉಡುಪನ್ನು ಆಕೆ ಧರಿಸಿದ್ದಳು ಎನ್ನಲಾಗಿದೆ.