Viral Video: ಕಪ್ಕೇಕ್ ಹೀಗೂ ಮಾಡಬಹುದಾ? ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಖ್ಯಾತ ಇನ್‌ಸ್ಟಾಗ್ರಾಮರ್ ಜೂಲಿಯೆಟ್ ಕಪ್‌ಕೇಕ್ ಟ್ರೇಗಳಿಲ್ಲದೆ ಕ್ಯಾಪ್ಸಿಕಂ (ಬೆಲ್ ಪೆಪರ್) ಅನ್ನು ಬೇಸ್ ಆಗಿ ಬಳಸಿ ಚಾಕೊಲೇಟ್ ಕಪ್‌ಕೇಕ್ ಅನ್ನು ತಯಾರಿಸುವ ಹ್ಯಾಕ್ ಅನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಇದು ಸುಮಾರು ಐದು ಮಿಲಿಯನ್ ವ್ಯೂವ್ಸ್ ಗಳಿಸಿದೆ.


ನವದೆಹಲಿ: ಕಪ್‍ಕೇಕ್ ಎಂದರೆ ಚಿಕ್ಕಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಬಾಯಲ್ಲಿ ನೀರು ಬರುತ್ತದೆ! ಮಾರುಕಟ್ಟೆಯಲ್ಲಿ ಇಂದು ನಾನಾ ತರಹದ ಕಪ್‌ಕೇಕ್‌ಗಳು ಸಿಗುತ್ತವೆ.ಸಾಮಾನ್ಯವಾಗಿ ಪ್ಲಾಸ್ಟಿಕ್, ಪೇಪರ್ ಕಪ್ ಕೇಕ್ ಮೌಲ್ಡ್‌ಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಆದರೆ ಖ್ಯಾತ ಇನ್‍ಸ್ಟಾಗ್ರಾಮರ್ ಒಬ್ಬಳು ವಿಭಿನ್ನವಾಗಿ ಕಪ್‌ಕೇಕ್‌ಗಳನ್ನು ತಯಾರಿಸುವ ಹ್ಯಾಕ್ ಅನ್ನು ಹಂಚಿಕೊಂಡಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಖ್ಯಾತ ಇನ್‌ಸ್ಟಾಗ್ರಾಮರ್ ಜೂಲಿಯೆಟ್ ಕ್ಯಾಪ್ಸಿಕಂ (ಬೆಲ್ ಪೆಪರ್) ಬಳಸಿ ರುಚಿಕರವಾದ ಚಾಕೊಲೇಟ್ ಕಪ್‌ಕೇಕ್ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಇಲ್ಲಿ ಆಕೆ ಕಪ್‌ಕೇಕ್ ಲೈನರ್‌ಗಳ ಬದಲಿಗೆ ಕ್ಯಾಪ್ಸಿಕಂ ಅನ್ನು ಬಳಸಿದ್ದಾಳೆ. ಇದು ಆರೋಗ್ಯಕರ ಆಯ್ಕೆಯಷ್ಟೇ ಅಲ್ಲ, ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾಳೆ. ಮೊದಲಿಗೆ ಅವಳು ಕ್ಯಾಪ್ಸಿಕಂ ಮೇಲಿನ ಭಾಗವನ್ನು ಕತ್ತರಿಸಿ ಅದರ ಬೀಜಗಳನ್ನು ತೆಗೆದುಹಾಕಿ, ನಂತರ ಅವುಗಳನ್ನು ಒಂದು ಟ್ರೇನಲ್ಲಿ ಇಟ್ಟು ಅವುಗಳ ಒಳಗೆ ಚಾಕೊಲೇಟ್ ಕಪ್‌ಕೇಕ್ ಬ್ಯಾಟರ್ ಅನ್ನು ತುಂಬಿಸಿದ್ದಾಳೆ. ನಂತರ ಅವುಗಳನ್ನು ಓವನ್‍ನಲ್ಲಿಟ್ಟು ಬೇಯಿಸಿದ್ದಾಳೆ. ರುಚಿಕರವಾದ ಚಾಕೋಲೇಟ್ ಕೇಕ್ ಕಪ್ ಕೇಕ್‌ಗಳ ಮೌಲ್ಡ್ ಇಲ್ಲದೇ ತಯಾರಿಸಿದ್ದಾಳೆ.
ಕೇಕ್‌ನ ವಿಡಿಯೊ ಇಲ್ಲಿದೆ ನೋಡಿ...
ಖ್ಯಾತ ಇನ್‌ಸ್ಟಾಗ್ರಾಮರ್ ಜೂಲಿಯೆಟ್ ಈ ವಿಡಿಯೊವನ್ನು @itsmejuliette ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊನ್ನು ಹಂಚಿಕೊಂಡಿದ್ದು, ಈ ಸಿಹಿ ಪಾಕವಿಧಾನದಲ್ಲಿ ಆಕೆ ಕ್ಯಾಪ್ಸಿಕಂ ಬಳಸಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗಾಗಿ ಇದು ಸುಮಾರು ಐದು ಮಿಲಿಯನ್ ವ್ಯೂವ್ಸ್ ಗಳಿಸಿದೆ. ಇದಕ್ಕೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
ಕೆಲವು ಇದನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ತಮಾಷೆ ಮಾಡಿದ್ದಾರೆ. "ನೀವು ನೇರವಾಗಿ ಜೈಲಿಗೆ ಹೋಗಿ" ಎಂದು ಒಬ್ಬರು ಬರೆದಿದ್ದಾರೆ. " ಅವಳು ಅಲ್ಲಿಯೇ ಇದ್ದಾಳೆ" ಎಂದು ಮತ್ತೊಬ್ಬರು ಹೇಳಿದ್ದಾರೆ.ಆದರೂ, ಕೆಲವರು ಅವಳ ಪರವಾಗಿ ನಿಂತು, ಈ ಹ್ಯಾಕ್ "ಕಪ್‌ಕೇಕ್ ಟ್ರೇಗಳಿಲ್ಲದ ಜನರಿಗೆ ತುಂಬಾ ಉಪಯುಕ್ತವಾಗಿದೆ" ಎಂದು ಹೇಳಿದ್ದಾರೆ.
ಇಷ್ಟಪಟ್ಟರೂ ಅಥವಾ ಅಸಹ್ಯಪಟ್ಟರೂ, ಸೋಶಿಯಲ್ ಮೀಡಿಯಾದಲ್ಲಿ ಈ ಕ್ಯಾಪ್ಸಿಕಂ ಕಪ್‌ಕೇಕ್‌ಗಳು ವೈರಲ್ ಆಗಿವೆ. ಈ ಪಾಕವಿಧಾನದ ವಿಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸುವುದರ ಜೊತೆಗೆ 28,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ..ಇದೆಂಥಾ ದುಸ್ಸಾಹಸ!? ಚಲಿಸೋ ರೈಲಿನಲ್ಲಿ ಈ ಯುವತಿಯರು ಮಾಡಿದ್ದೇನು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಈ ರೀತಿಯ ವಿಚಿತ್ರವಾದ ಆಹಾರ ತಯಾರಿಸುವ ವಿಡಿಯೊ ವೈರಲ್ ಆಗುತ್ತಿರುತ್ತದೆ. ಇತ್ತೀಚೆಗಷ್ಟೇ ಸಿಂಗಾಪುರದ ಇನ್‌ಸ್ಟಾಗ್ರಾಮರ್ ಕ್ಯಾಲ್ವಿನ್ ಲೀ ವೇಫರ್ ಅನ್ನು ಚಾಕೋಲೇಟ್ ಮತ್ತು ಹಾಲಿನಲ್ಲಿ ಬೇಯಿಸಿ ತಿಂದಿದ್ದನು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊ 29,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿತ್ತು. ಈ ರೀತಿಯ ವಿಚಿತ್ರವಾದ ರೀತಿಯಲ್ಲಿ ಅಡುಗೆಗಳನ್ನು ತಯಾರಿಸುವುದರಲ್ಲಿ ಕ್ಯಾಲ್ವಿನ್ ಲೀ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್! ಈ ಹಿಂದೆ ಆತ ಕಾಫಿಗೆ ಕಾರ್ನ್, ಚೀಸ್ ಮಿಕ್ಸ್ ಮಾಡಿದಂತಹ ರೀಲ್ಸ್ ವೈರಲ್ ಆಗಿ ನೆಟ್ಟಿಗರ ಗಮನಸೆಳೆದಿತ್ತು.