ಟೆಹರಾನ್ ರನ್ನಿಂಗ್ ಸ್ಪರ್ಧೆಯಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ ಇರಾನ್ ಮಹಿಳೆಯರು: ವಿಡಿಯೊ ವೈರಲ್
Viral News: ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ನಿಯಮಗಳು ಜಾರಿಯಲ್ಲಿದ್ದರೂ ಇದನ್ನು ಕ್ಯಾರೇ ಎನ್ನದೇ ಹಲವು ಓಟಗಾರ್ತಿಯರು ಹಿಜಾಬ್ ಧರಿಸದೇ ಪಾಲ್ಗೊಂಡಿರುವ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ಇರಾನ್ ರಾಜಧಾನಿ ಟೆಹರಾನ್‌ನ ವೆಲಾಯತ್ ಪಾರ್ಕ್‌ನಲ್ಲಿ ನಡೆದ ' ಟೆಹರಾನ್ 10K' ರೇಸ್‌ನಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಇರಾನ್‌ನಲ್ಲಿ ಹಿಜಾಬ್ ಧರಿಸದೆ ಓಟದಲ್ಲಿ ಪಾಲ್ಗೊಂಡ ಮಹಿಳೆಯರು -
ಟೆಹರಾನ್, ಸೆ. 20: ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ನಿಯಮಗಳು ಜಾರಿಯಲ್ಲಿದ್ದರೂ ಇದನ್ನು ಕ್ಯಾರೇ ಎನ್ನದೇ ಹಲವು ಓಟಗಾರ್ತಿಯರು ಬಿಂದಾಸ್ ಆಗಿ ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ವಿಡಿಯೊ ಭಾರಿ ವೈರಲ್ (Viral News) ಆಗಿದೆ. ಇರಾನ್ ರಾಜಧಾನಿ ಟೆಹರಾನ್‌ನ ವೆಲಾಯತ್ ಪಾರ್ಕ್‌ನಲ್ಲಿ ನಡೆದ 'ಟೆಹರಾನ್ 10K' ಈ ಬೆಳವಣಿಗೆ ಸಂಭವಿಸಿದೆ. ಇದು ಇರಾನ್‌ನ ಕಡ್ಡಾಯ ಹಿಜಾಬ್ ನಿಯಮಗಳ ಬಗ್ಗೆ ಬದಲಾಗುತ್ತಿರುವ ಸಾರ್ವಜನಿಕ ಮನೋಭಾವವನ್ನು ಎತ್ತಿ ತೋರಿಸಿದೆ.
ವೆಲಾಯತ್ ಪಾರ್ಕ್‌ನಲ್ಲಿ ನಡೆದ ʼಟೆಹರಾನ್ 10Kʼ ಓಟದ ಮಹಿಳಾ ವಿಭಾಗದಲ್ಲಿ ಹಲವು ಓಟಗಾರ್ತಿಯರು ಪಾಲ್ಗೊಂಡಿದ್ದರು. ಈ ಕ್ರೀಡಾಕೂಟವನ್ನು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಮಹಿಳಾ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನಿಗದಿತ ಮಾರ್ಗದಲ್ಲಿ ಎರಡು ಸುತ್ತುಗಳನ್ನು ಪೂರ್ಣಗೊಳಿಸಲು ಅವಕಾಶ ಇತ್ತು.
ವಿಡಿಯೊ ನೋಡಿ:
Video shows women taking part in a 10km run in Tehran, Iran today with some not wearing the mandatory hijab.
— Ghoncheh Habibiazad | غنچه (@GhonchehAzad) September 18, 2026
Running events across the country have previously been cancelled or faced backlash amid authorities’ enforcement of the country’s mandatory hijab law. https://t.co/rx2GnPuPk9 pic.twitter.com/DKB32lSS9P
ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಕಾನೂನುಬದ್ಧವಾಗಿ ಕಡ್ಡಾಯ. ಆದರೆ ಅದನ್ನು ಲೆಕ್ಕಿಸದೆ ಹಲವು ಓಟಗಾರ್ತಿಯರು ಹಿಜಾಬ್ ಧರಿಸದೇ 10 ಕಿಲೋ ಮೀಟರ್ ರಸ್ತೆ ಓಟದಲ್ಲಿ ಭಾಗವಹಿಸಿದ್ದಾರೆ.
ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್ ಕೂಡ ಮಾಡಬಹುದು
ಮಹ್ಸಾ ಜಿನಾ ಅಮಿನಿ ಅವರ ಮರಣದ ನಂತರ 2022ರಲ್ಲಿ ನಡೆದ ಪ್ರತಿಭಟನೆಗಳ ಬಳಿಕ, ಹೆಚ್ಚಿನ ಸಂಖ್ಯೆಯ ಇರಾನಿನ ಮಹಿಳೆಯರು ತಲೆವಸ್ತ್ರವಿಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಪ್ರಮುಖ ನಗರಗಳ ಬೀದಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದ ಮಹಿಳೆಯರು ಹೆಚ್ಚಾಗಿ ಕಂಡುಬರುತ್ತಿದ್ದಾರೆ.
ಈ ಹಿಂದೆ ಕಿಶ್ ದ್ವೀಪದಲ್ಲಿ ನಡೆದ ಓಟದ ಸ್ಪರ್ಧೆಯಲ್ಲೂ ಮಹಿಳೆಯರು ಹಿಜಾಬ್ ಇಲ್ಲದೆ ಭಾಗವಹಿಸಿದ್ದು ಆಯೋಜಕರ ವಿರುದ್ಧ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದರು. ಪ್ರಸ್ತುತ ಟೆಹರಾನ್ ಘಟನೆಗೆ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ನ್ಯಾಯಾಂಗ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ. ಈ ಓಟದ ಸ್ಪರ್ಧೆಯಲ್ಲಿ ಇರಾನ್‌ನ ದೂರದ ಓಟಗಾರ್ತಿ ಮತ್ತು ರಾಷ್ಟ್ರೀಯ ದಾಖಲೆ ಹೊಂದಿರುವ ಪರಿಸಾ ಅರಬ್ ಪ್ರಥಮ ಸ್ಥಾನ ಗಳಿಸಿದ್ದಾರೆ.