ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೆಲಿವರಿ ಸಿಬ್ಬಂದಿ ಕಷ್ಟ ನೋಡಲಾಗದೆ ತನಗಾಗಿ ತಂದ ಹೊಸ ಅಡಿಡಾಸ್ ಶೂ ನೀಡಿದ ಯುವಕ

Viral News: ಕೆಲವೊಮ್ಮೆ ನಾವು ತೋರಿಸುವ ಸರಳ ದಯೆ ಯಾರನ್ನಾದರೂ ಸಂತೋಷಪಡಿಸಲು ಸಾಕಾಗುತ್ತದೆ. ಇದಕ್ಕೆ ಉತ್ತರಾಖಂಡದ ಈ ಘಟನೆಯೇ ಸಾಕ್ಷಿ. ಅಮನ್ ಶರ್ಮಾ ಎಂಬ ಯುವಕ ತಮ್ಮ ಹೊಸ ಶೂಗಳನ್ನು ಡೆಲಿವರಿ ಪಾರ್ಟ್‌ನರ್‌ಗೆ ನೀಡುತ್ತಿರುವ ಕ್ಷಣ ಎಲ್ಲರ ಹೃದಯ ಗೆದ್ದಿದೆ. ಮಳೆಯಲ್ಲಿ ಯಾವುದೇ ರಕ್ಷಣೆ ಹಾಗೂ ಶೂ ಇಲ್ಲದೆ ಆಹಾರ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ತಮ್ಮ ಹೊಸ ಅಡಿಡಾಸ್ ಶೂ ಉಡುಗೊರೆಯಾಗಿ ನೀಡಿದ್ದಾರೆ.

ಡೆಲಿವರಿ ಬಾಯ್‌ ಕಷ್ಟ ಅರಿತು ಹೊಸ ಅಡಿಡಾಸ್ ಶೂ ನೀಡಿದ ಯುವಕ

ಡೆಲಿವರಿ ಸಿಬ್ಬಂದಿಗೆ ಹೊಸ ಅಡಿಡಾಸ್ ಶೂ ನೀಡಿದ ಯುವಕ -

Profile
Pushpa Kumari Sep 16, 2026 4:58 PM

ಡೆಹ್ರಾಡೂನ್‌, ಸೆ‌‌. 16: ತಾವು ಆರ್ಡರ್ ಮಾಡಿದ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಡೆಲಿವರಿ ಸಿಬ್ಬಂದಿ ಹಲವು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ‌. ಶ್ರಮಕ್ಕೆ ಸರಿಯಾದ ವೇತನ ಸಿಗದೆ, ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ವಿಮೆಯಂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಈ ನಡುವೆ ಆರ್ಡರ್‌ಗಳನ್ನು ತಲುಪಿಸಲು ಹೋದ ಸಿಬ್ಬಂದಿಯ ಕಷ್ಟ ಅರಿತು ಯುವಕನೊಬ್ಬ ತಮ್ಮ ಹೊಸ ಶೂಗಳನ್ನು ನೀಡುತ್ತಿರುವ ಹೃದಯಸ್ಪರ್ಶಿ ದೃಶ್ಯವೊಂದು (Viral News) ವೈರಲ್‌ ಆಗಿದೆ.

ಕೆಲವೊಮ್ಮೆ ನಾವು ತೋರಿಸುವ ಸರಳ ದಯೆ ಯಾರನ್ನಾದರೂ ಸಂತೋಷಪಡಿಸಲು ಸಾಕಾಗುತ್ತದೆ. ಇದಕ್ಕೆ ಉತ್ತರಾಖಂಡದ ಈ ಘಟನೆ ಸಾಕ್ಷಿಯಾಗಿದೆ. ಅಮನ್ ಶರ್ಮಾ ಎಂಬ ಯುವಕ ತಮ್ಮ ಹೊಸ ಶೂಗಳನ್ನು ಡೆಲಿವರಿ ಪಾರ್ಟ್‌ನರ್‌ಗೆ ನೀಡುತ್ತಿರುವ ಕ್ಷಣ ಎಲ್ಲರ ಹೃದಯ ತಣಿಸಿದೆ. ಮಳೆಯಲ್ಲಿ ಯಾವುದೇ ರಕ್ಷಣೆ ಹಾಗೂ ಶೂ ಇಲ್ಲದೆ ಆಹಾರ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ತಮ್ಮ ಹೊಸ ಬ್ರ್ಯಾಂಡೆಡ್‌ ಅಡಿಡಾಸ್ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಡಿಯೋ ನೋಡಿ:

ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಅಮನ್ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿ ಕೊಂಡಿದ್ದಾರೆ. "ನನಗಿಂತ ಆತನಿಗೆ ಈ ಶೂಗಳ ಅಗತ್ಯ ಹೆಚ್ಚಿತ್ತುʼʼ ಎಂದಿದ್ದಾರೆ. ಮಳೆಯಲ್ಲೂ ಯಾವುದೇ ಕಷ್ಟ ತೋರ್ಪಡಿಸದೇ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ಪರಿಸ್ಥಿತಿ ಕಂಡು ಸ್ಪಂದಿಸಿದ ಅಮನ್, ಸ್ವಿಗ್ಗಿ ಸಂಸ್ಥೆಗೆ ಟ್ಯಾಗ್ ಮಾಡಿ ಆತನಿಗೆ ರೇನ್ ಕೋಟ್ ಒದಗಿಸುವಂತೆ ವಿನಂತಿ ಮಾಡಿದ್ದಾರೆ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ

ಆತ ತನ್ನ ಟೆರೇಸ್‌ನಿಂದ ಡೆಲಿವರಿ ಪಾರ್ಟ್‌ನರ್‌ಗೆ ಕರೆ ಮಾಡಿ ಅವನಿಗೆ ಒಂದು ಜೋಡಿ ಶೂಗಳನ್ನು ನೀಡುತ್ತಿರುವುದನ್ನು ವಿಡಿಯೊದಲ್ಲಿ ಸೆರೆಯಾಗಿದೆ. ಯುವಕನು ಶೂಗಳನ್ನು ಮೇಲಿಂದ ಎಸೆಯದೇ ಖುದ್ದಾಗಿ ಕೆಳಗಿಳಿದು ಗೌರವದಿಂದ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಹಲವು ಬಳಕೆದಾರರು ಶರ್ಮಾ ವಿತರಣಾ ವ್ಯಕ್ತಿಗೆ ಸಹಾಯ ಮಾಡಿದ್ದಕ್ಕಾಗಿ ದಯೆಯೇ ಶ್ರೇಷ್ಠ ಉಡುಗೊರೆ ಎಂದು ಕಾಮೆಂಟ್ ಮಾಡಿದರೆ. ಇನ್ನು ಕೆಲವರು ಇಂತಹ ಹೃದಯ ವಂತರು ಸಿಗುವುದು ಅಪರೂಪ ಎಂದು ಬರೆದಿದ್ದಾರೆ‌.