ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಕಾರ್ ಇಲ್ಲ, ಫ್ಲಾಟ್ ಇಲ್ಲ, 25,000 ಸಂಬಳ": ವಧುವನ್ನು ಹುಡುಕಲು ವಿಶಿಷ್ಟ ಬ್ಯಾನರ್ ಹಾಕಿದ ಯುವಕ!

Viral Video: ಇಂದು ವಧು-ವರರ ಹುಡುಕಾಟ ದೊಡ್ಡ ಸವಾಲಾಗಿದ್ದು ತಮಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ. ಆದರೆ ಇಲ್ಲೊಬ್ಬ ಯುವಕ ತನಗೆ ಬೇಕಾದ ಸೂಕ್ತ ಹುಡುಗಿಯನ್ನು ಹುಡುಕಲು ರಸ್ತೆ ಮಧ್ಯೆ ದೊಡ್ಡದಾದ ಬ್ಯಾನರ್ ವೊಂದನ್ನು ಹಾಕಿದ್ದಾನೆ. ಪುಣೆಯ 30 ವರ್ಷದ ಯುವಕ ಪಿಂಪಲ್ ಸೌದಾಗರ್‌ನ ಜನನಿಬಿಡ ಜಂಕ್ಷನ್‌ನಲ್ಲಿ ದೊಡ್ಡ ಬ್ಯಾನರ್ ಅನ್ನು ಅಳವಡಿಸಿದ್ದು ಇದರಲ್ಲಿ ತನ್ನ ವಿವರಗಳನ್ನು ಅತ್ಯಂತ ಪ್ರಾಮಾಣಿಕವಾಗಿ ತಿಳಿಸಿದ್ದಾನೆ. ಸದ್ಯ ಈ ಬೃಹತ್ ಬಿಲ್‌ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ..

ವಧುವಿನ ಹುಡುಕಾಟಕ್ಕಾಗಿ ರಸ್ತೆ ಮಧ್ಯೆಯೇ ಬ್ಯಾನರ್ ಅಳವಡಿಸಿದ ಯುವಕ

ವಧುವಿನ ಹುಡುಕಾಟಕ್ಕಾಗಿ ರಸ್ತೆ ಮಧ್ಯೆಯೇ ಬ್ಯಾನರ್ ಅಳವಡಿಸಿದ ಯುವಕ -

Profile
Pushpa Kumari Jul 14, 2026 3:00 PM

ಪುಣೆ,ಜು.14: ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಅದರಲ್ಲೂ ಇಂದು ವಧು-ವರರ ಹುಡುಕಾಟ ದೊಡ್ಡ ಸವಾಲಾಗಿದ್ದು ತಮಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ.. ಆದರೆ ಇಲ್ಲೊಬ್ಬ ಯುವಕ ತನಗೆ ಬೇಕಾದ ಸೂಕ್ತ ಹುಡುಗಿಯನ್ನು ಹುಡುಕಲು ರಸ್ತೆ ಮಧ್ಯೆ ದೊಡ್ಡದಾದ ಬ್ಯಾನರ್ವೊಂದನ್ನು ಹಾಕಿದ್ದಾನೆ. ಪುಣೆಯ 30 ವರ್ಷದ ಯುವಕ ಪಿಂಪಲ್ ಸೌದಾಗರ್‌ನ ಜನನಿಬಿಡ ಜಂಕ್ಷನ್‌ನಲ್ಲಿ ದೊಡ್ಡ ಬ್ಯಾನರ್ ಅನ್ನು ಅಳವಡಿಸಿದ್ದು ಇದರಲ್ಲಿ ತನ್ನ ವಿವರಗಳನ್ನು ಅತ್ಯಂತ ಪ್ರಾಮಾಣಿಕವಾಗಿ ತಿಳಿಸಿದ್ದಾನೆ. ಸದ್ಯ ಈ ಬೃಹತ್ ಬಿಲ್‌ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಮ್ಮ ಜೀವನ ಸಂಗಾತಿಯನ್ನು ಹುಡುಕುವ ನಿಟ್ಟಿನಲ್ಲಿ ಪುಣೆಯ 30 ವರ್ಷದ ಯುವಕ ಈ ಪ್ಲಾನ್ ಮಾಡಿದ್ದಾನೆ‌. ಇದು ಯಾವುದೇ ಮ್ಯಾಟ್ರಿಮೋನಿಯಲ್, ಸಂಸ್ಥೆಯ ಜಾಹೀರಾತು ಅಲ್ಲ, ಬದಲಾಗಿ ರಾಘವ್ ವಿಶ್ವಾಸರಾವ್ ಶಿಂದೆ ಎಂಬ ಯುವಕನೇ ಈ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್‌ನಲ್ಲಿ ಪ್ರದರ್ಶಿಸಲಾದ ಮಾಹಿತಿಯ ಪ್ರಕಾರ, ಶಿಂಧೆ ಅವರಿಗೆ 30 ವರ್ಷ ವಯಸ್ಸಾಗಿದ್ದು, ಮಾಸಿಕ 25,000 ರೂ. ಸಂಬಳ ಪಡೆಯುತ್ತಿದ್ದಾರೆ. ಕಾರು, ಫ್ಲಾಟ್ ಅಥವಾ ಕೃಷಿ ಭೂಮಿ ಯಾವುದು ಹೊಂದಿಲ್ಲ ಎಂದು ಬರೆದಿದ್ದಾರೆ. ''ನಿಮಗೆ ಯಾರಾದರೂ ಇಂತಹ ಸೂಕ್ತ ವಧು ತಿಳಿದಿದ್ದರೆ ದಯವಿಟ್ಟು ತಿಳಿಸಿ" ಎಂದು ಬರೆಯಲಾಗಿದೆ.

ವಿಡಿಯೋ ನೋಡಿ:

ಸಾಮಾನ್ಯವಾಗಿ ಇಂದು ಹೆಣ್ಣು ಮಕ್ಕಳು ಶ್ರೀಮಂತ ಯುವಕರನ್ನೇ ಮದುವೆ ಮಾಡಿಕೊಳ್ಳಲು ಇಚ್ಚಿಸುತ್ತಾರೆ.‌ಆದರೆ ಇಲ್ಲಿ ಯುವಕ ಪ್ರಮಾಣಿಕವಾಗಿ ತನ್ನ ಮಾಹಿತಿ ಹಂಚಿಕೊಂಡದ್ದಕ್ಕಾಗಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅನೇಕ ಬಳಕೆದಾರರು ತಮ್ಮ ಅವಿವಾಹಿತ ಸ್ನೇಹಿತರನ್ನು ಟ್ಯಾಗ್ ಮಾಡಿ ಮದುವೆ ಪ್ರಸ್ತಾಪದ ಬಗ್ಗೆ ತಮಾಷೆ ಮಾಡುತ್ತಿದ್ದಾರೆ

Viral Video: ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ

ಈ ವೈರಲ್ ಕ್ಲಿಪ್ ಗೆ ಹಾಸ್ಯಮಯ ಕಾಮೆಂಟ್‌ಗಳು ಬಂದಿವೆ. ಆದರೆ ಈ ಯುವಕ ತನ್ನ ಮೊಬೈಲ್ ಸಂಖ್ಯೆಯನ್ನು ಸೇರಿಸಲು ಮರೆತಿದ್ದಾನೆ ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು "ಸ್ವಂತ ಕಾರು, ಫ್ಲಾಟ್ ಇಲ್ಲ ನಿಜ,ಆದರೆ ಇಷ್ಟು ದೊಡ್ಡ ಬ್ಯಾನರ್ ಹಾಕಲು ತನ್ನ ಒಂದು ತಿಂಗಳ ಸಂಬಳವನ್ನೇ ಖರ್ಚು ಮಾಡಿರಬೇಕು,ಸೂಕ್ತ ವಧು ಸಿಗಲಿ'' ಎಂದು ಕಾಲೆಳೆದಿದ್ದಾರೆ. ಆದರೆ ಇದು ನಿಜವಾದ ಮದುವೆ ಪ್ರಸ್ತಾಪವೋ ಅಥವಾ ಪ್ರಚಾರದ ಗಿಮಿಕ್ ಎಂಬ ಸಂಶಯವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.