ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs RR: ರಾಜಸ್ಥಾನ್‌ ರಾಯಲ್ಸ್‌ ಎದುರು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಆಫ್ಸ್‌ ಆಸೆ ಜೀವಂತ!

DC vs RR Match Highlights: ಮಿಚೆಲ್‌ ಸ್ಟಾರ್ಕ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ 12 ಅಂಕಗಳಿಂದ ಟೂರ್ನಿಯ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಸೋಲು ಅನುಭವಿಸಿದ ರಾಜಸ್ಥಾನ ತಂಡಕ್ಕೆ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಅಗತ್ಯವಾಗಿದೆ.

ರಾಜಸ್ಥಾನ್‌ ಎದುರು ಗೆದ್ದ ಡೆಲ್ಲಿ ಪ್ಲೇಆಫ್ಸ್‌ ಆಸೆ ಜೀವಂತ!

ರಾಜಸ್ಥಾನ್‌ ಎದುರು ಡೆಲ್ಲಿಗೆ 5 ವಿಕೆಟ್‌ ಜಯ. -

Profile
Ramesh Kote May 17, 2026 11:55 PM

ನವದೆಹಲಿ: ಮಿಚೆಲ್‌ ಸ್ಟಾರ್ಕ್‌(Mitchell Starc) ಮಾರಕ ಬೌಲಿಂಗ್‌ ಹಾಗೂ ಅಭಿಷೇಕ್‌ ಪೊರೆಲ್‌ ಅವರ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡ, ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ (RR) ಎದುರು 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನುಳಿದ ಒಂದು ಪಂದ್ಯವನ್ನು ಡೆಲ್ಲಿ ಗೆದ್ದರೂ ಈ ತಂಡದ ಪ್ಲೇಆಫ್ಸ್‌ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಇನ್ನು ಸೋಲು ಅನುಭವಿಸಿದ ರಾಜಸ್ಥಾನ್‌ ತಂಡ, ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿದ್ದ 194 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಅಭಿಷೇಕ್‌ ಪೊರೆಲ್‌, ಕೆಎಲ್ ರಾಹುಲ್‌, ಅಕ್ಷರ್‌ ಪಟೇಲ್‌ ಅವರ ಬ್ಯಾಟಿಂಗ್‌ ಬಲದಿಂದ 19.2 ಓವರ್‌ಗಳಿಗೆ 197 ರನ್‌ಗಳನ್ನು ಕಲೆ ಹಾಕಿ ಗೆದ್ದು ಬೀಗಿತು. ರಾಜಸ್ಥಾನ್‌ ರಾಯಲ್ಸ್‌ ಪರ ಜೋಫ್ರಾ ಆರ್ಚರ್‌ ಹಾಗೂ ಬ್ರಿಜೇಶ್‌ ಶರ್ಮಾ ತಲಾ ಎರಡು ವಿಕೆಟ್‌ ಪಡೆದರು.

DC vs RR: 43ನೇ ಸಿಕ್ಸರ್‌ ಬಾರಿಸಿ ಅಭಿಷೇಕ್‌ ಶರ್ಮಾ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಹಾಗೂ ಕೆಎಲ್‌ ರಾಹುಲ್‌ ಮೊದಲನೇ ವಿಕೆಟ್‌ಗೆ 105 ರನ್‌ ಕಲೆ ಹಾಕುವ ಮೂಲಕ ಡೆಲ್ಲಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಸ್ಪೋಟಕ ಬ್ಯಾಟ್‌ ಮಾಡಿದ ಪೊರೆಲ್‌, ಕೇವಲ 31 ಎಸೆತಗಳಲ್ಲಿ 51 ರನ್‌ ಸಿಡಿಸಿ ಬ್ರಿಜೇಶ್‌ ಶರ್ಮಾಗೆ ವಿಕೆಟ್‌ ಒಪ್ಪಿಸಿದರು.ಬಳಿಕ ಕ್ರೀಸ್‌ಗೆ ಬಂದ ಸಹಿಲ್‌ ಪ್ರಕಾಶ್‌ ಬೇಗ ಔಟ್‌ ಆದರು. ಒಂದು ತುದಿಯಲ್ಲಿ ಬ್ಯಾಟ್‌ ಮಾಡುತ್ತಿದ್ದ ಕೆಎಲ್‌ ರಾಹುಲ್‌, 42 ಎಸೆತಗಳಲ್ಲಿ 56 ರನ್‌ ಗಳಿಸಿ ಔಟ್‌ ಆದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಅಕ್ಷರ್‌ ಪಟೇಲ್‌, ಕೇವಲ 18 ಎಸೆತಗಳಲ್ಲಿ ಅಜೇಯ 34 ರನ್‌ ಗಳಿಸಿ ಡೆಲ್ಲಿಯನ್ನು ಗೆಲ್ಲಿಸಿದರು. ಕೊನೆಯಲ್ಲಿ ಆಶುತೋಷ್‌ ಶರ್ಮಾ ಕೇವಲ 5 ಎಸೆತಗಳಲ್ಲಿ ಅಜೇಯ 18 ರನ್‌ ಗಳಿಸಿ ಡೆಲ್ಲಿಯನ್ನು ಗೆಲುವಿನ ಗೆರೆ ದಾಟಿಸಿದರು.



192 ರನ್‌ ಕಲೆ ಹಾಕಿದ ರಾಜಸ್ಥಾನ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ರಾಜಸ್ಥಾನ್‌ ರಾಯಲ್ಸ್‌ ತಂಡ, ಧ್ರುವ್‌ ಜುರೆಲ್‌ ಹಾಗೂ ರಿಯಾನ್‌ ಪರಾಗ್‌ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 193 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 194 ರನ್‌ಗಳ ಗುರಿಯನ್ನು ನೀಡಿತು.



ಜುರೆಲ್‌-ವೈಭವ್‌ ಜುಗಲ್‌ಬಂದಿ

ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಜೋಡಿಯಿಂದ ಮೊದಲನೇ ವಿಕೆಟ್‌ಗೆ ದೊಡ್ಡ ಜೊತೆಯಾಟ ಮೂಡಿಬರಲಿಲ್ಲ. 12 ರನ್‌ ಗಳಿಸಿದ ಬಳಿಕ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದರು. ಆದರೆ, ಪವರ್‌ಪ್ಲೇನಲ್ಲಿ ಅಬ್ಬರಿಸಿದ ವೈಭವ್‌ ಕೇವಲ 21 ಎಸೆತಗಳಲ್ಲಿ 46 ರನ್‌ ಗಳಿಸಿ ತಂಡದ ಮೊತ್ತವನ್ನು 90ರ ಸನಿಹ ತಂದು ಔಟ್‌ ಆದರು. ಧ್ರುವ್‌ ಜುರೆಲ್‌ ಹಾಗೂ ವೈಭವ್‌ ಅವರ ನಡುವೆ 70 ರನ್‌ಗಳ ಜೊತೆಯಾಟ ಮೂಡಿಬಂದಿತ್ತು.

IPL 2026: ಆರ್‌ಸಿಬಿ ಎದುರು ಸೋತ ಪಂಜಾಬ್‌ ಕಿಂಗ್ಸ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

15ನೇ ಓವರ್‌ನಲ್ಲಿ ಸ್ಟಾರ್ಕ್‌ಗೆ 3 ವಿಕೆಟ್‌

ಅದ್ಭುತವಾಗಿ ಬೈಆಟ್‌ ಮಾಡಿದ ಧ್ರುವ್‌ ಜುರೆಲ್‌ 40 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಐದು ಬೌಂಡರಿಗಳೊಂದಿಗೆ 53 ರಬ್‌ ಸಿಡಿಸಿದರು ಹಾಗೂ ನಾಯಕ ರಿಯಾನ್‌ ಪರಾಗ್‌ ಜೊತೆಗೆ 72(41) ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಪೋಟಕ ಬ್ಯಾಟ್‌ ಮಾಡಿದ ಪರಾಗ್‌, 26 ಎಸೆತಗಳಲ್ಲಿ 51 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. 15ನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌, ಪರಾಗ್‌, ಡೊನೊವಾನ್‌ ಫೆರೆರಾ ಹಾಗೂ ರವಿ ಸಿಂಗ್‌ ಅವರನ್ನು ಔಟ್‌ ಮಾಡಿ ಆರ್‌ಆರ್‌ ರನ್‌ ಓಟಕ್ಕೆ ಕಡಿವಾಣ ಹಾಕಿದರು.



ಧ್ರುವ್‌ ಜುರೆಲ್‌ ಅರ್ಧಶತಕ

ಇದಾದ ಬಳಿಕ ಕೊನೆಯವರೆಗೂ ಬ್ಯಾಟ್‌ ಮಾಡಿದ ಧ್ರುವ್‌ ಜುರೆಲ್‌ 40 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 53 ರನ್‌ ಗಳಿಸಿದರು. 15ನೇ ಓವರ್‌ವರೆಗೂ ರಾಜಸ್ಥಾನ್‌ ಉತ್ತಮ ರನ್‌ರೇಟ್‌ ಹೊಂದಿತ್ತು. ಆದರೆ, ನಂತರ ಡೆತ್‌ ಓವರ್‌ಗಳಲ್ಲಿ ಡೆಲ್ಲಿ ಬೌಲರ್‌ಗಳು ಕಮ್‌ಬ್ಯಾಕ್‌ ಮಾಡಿದರು. ಅಂತಿಮವಾಗಿ ಆರ್‌ಸಿಬಿ 200ರ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ. ಡಿಸಿ ಪರ ಮಿಚೆಲ್‌ ಸ್ಟಾರ್ಕ್‌ 4 ವಿಕೆಟ್‌ ಕಿತ್ತರೆ, ಲುಂಗಿ ಎನ್ಗಿಡಿ ಹಾಗೂ ಮಾದವ್‌ ತಿವಾರಿ ತಲಾ ಎರಡೆರಡು ವಿಕೆಟ್‌ ಪಡೆದರು.