ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಲಿಸುವ ಮೆಟ್ರೋವನ್ನೇ ಡ್ಯಾನ್ಸ್ ಫ್ಲೋರ್ ಮಾಡಿದ ಯುವಕರು; ಮಿತಿ ಮೀರಿದ ವರ್ತನೆಗೆ ಸಾರ್ವಜನಿಕರ ಆಕ್ರೋಶ

Viral News: ವಿದ್ಯಾವಂತ ಜನರ ನಡವಳಿಕೆಗಳೇ ದಿನದಿಂದ ದಿನಕ್ಕೆ ಮೀತಿಮೀರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿಕೊಂಡು ಯುವಕರ ಗುಂಪೊಂದು ಡ್ಯಾನ್ಸ್ ಮಾಡುತ್ತಾ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಈ ವೀಡಿಯೊ ನೋಡಿದ ಅನೇಕರು ಆಕ್ರೋಶವನ್ನು ಹೊರ ಹಾಕಿದ್ದು ಸಾರ್ವಜನಿಕ ಶಿಷ್ಟಾಚಾರ ಮತ್ತು ಪ್ರಯಾಣಿಕರ ಶಿಸ್ತಿನ ನಡವಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿದ ಯುವಕರು: ನೆಟ್ಟಿಗರು ಕಿಡಿ

ಮೆಟ್ರೋ ಕೋಚ್ ನಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿದ ಯುವಕರು -

Profile
Pushpa Kumari Jun 11, 2026 4:50 PM

ನವದೆಹಲಿ,ಜೂ.11: ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಶಿಸ್ತಿನಿಂದ ವರ್ತಿಸುತ್ತಿರುವ ಅನೇಕ ದೃಶ್ಯಗಳು ಇತ್ತೀಚೆಗೆ ವೈರಲ್ (Viral News) ಆಗಿವೆ‌. ಅದರಲ್ಲೂ ವಿದ್ಯಾವಂತ ಜನರ ನಡವಳಿಕೆಗಳೇ ದಿನದಿಂದ ದಿನಕ್ಕೆ ಮೀತಿಮೀರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟ್ರೋದಲ್ಲಿ ಮ್ಯೂಸಿಕ್ ಹಾಕಿಕೊಂಡು ಯುವಕರ ಗುಂಪೊಂದು ಡ್ಯಾನ್ಸ್ ಮಾಡುತ್ತಾ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಈ ವೀಡಿಯೊ ನೋಡಿದ ಅನೇಕರು ಆಕ್ರೋಶವನ್ನು ಹೊರಹಾಕಿದ್ದು ಸಾರ್ವಜನಿಕ ಶಿಷ್ಟಾಚಾರ ಮತ್ತು ಪ್ರಯಾಣಿಕರ ಶಿಸ್ತಿನ ನಡವಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ವಿದೇಶದಲ್ಲಿ ಭಾರತೀಯರ ನಡವಳಿಕೆ ಬಗ್ಗೆ ಅನೇಕ ರೀತಿಯ ಟೀಕೆಗಳು ಕೇಳಿ ಬಂದಿತ್ತು. ಐತಿಹಾಸಿಕ ಸ್ಥಳದಲ್ಲಿ ರೀಲ್ಸ್ ಮಾಡಿರುವುದು, ಪ್ರವಾಸಿ ಸ್ಥಳದಲ್ಲಿ ಜಗಳ ಮಾಡಿರುವುದು ಹೀಗೆ ಅನೇಕ ದೃಶ್ಯ ವೈರಲ್ ಆಗಿತ್ತು‌. ಇದೀಗ ಸಾರ್ವಜನಿಕ ಸಾರಿಗೆ ಯಾದ ಮೆಟ್ರೋದಲ್ಲಿ ಯುವಕರ ಗುಂಪೊಂದು ಮ್ಯುಸಿಕ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದೆ.

ವಿಡಿಯೋ ನೋಡಿ:



ವೈರಲ್ ಆಗಿರುವ ವೀಡಿಯೊದಲ್ಲಿ ಯುವಕರ ಗುಂಪು ಪೋರ್ಟಬಲ್ ಸ್ಪೀಕರ್‌ಗಳಲ್ಲಿ ಮ್ಯೂಸಿಕ್ ಮೊಳಗಿಸುತ್ತಾ ಚಲಿಸುತ್ತಿರುವ ರೈಲಿನ ಒಳಗೆಯೇ ಭರ್ಜರಿ ಡ್ಯಾನ್ಸ್ ಮಾಡಿದೆ. ಇಡೀ ಕೋಚ್ ಅನ್ನೇ ತಮ್ಮ ಸ್ವಂತ ಸ್ಟೇಜ್ ನಂತೆ ಬಳಸಿಕೊಂಡಿದೆ.

Viral Video: ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಶಿಕ್ಷಕ: ವಿಡಿಯೋ ನೋಡಿದ್ರೆ ಸಿಟ್ಟು ಬರುತ್ತೆ

​ಅದೇ ಕೋಚ್‌ನಲ್ಲಿ ಇದ್ದ ಪ್ರಯಾಣಿಕರು ನಿಂತು ಕೊಳ್ಳಲು ಕೂಡ ಜಾಗ ಇಲ್ಲದೆ ಮೂಲೆಯಲ್ಲಿ ಸಂಕೋಚದಿಂದ ಕುಳಿತುಕೊಂಡಿದ್ದರು. ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮದೇ ದೇಶದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಯದ ಜನರನ್ನು ವಿದೇಶದಲ್ಲಿ ಟೀಕೆ ಮಾಡುವುದು ತಪ್ಪಲ್ಲ ಎಂದು ಅನೇಕರು ವ್ಯಂಗ್ಯ ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬುದ್ದಿಯೂ ಇವರಿಗಿಲ್ಲ. ಎಂದು ಬಳಕೆದಾರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಬ್ಬರು ಪ್ರಚಾರಕ್ಕಾಗಿ ಇಂತಹ ವರ್ತನೆ ತೋರುವುದು ತಪ್ಪು. ಕಷ್ಟಪಟ್ಟು ದುಡಿಯುವ ಜನಸಾಮಾನ್ಯರ ನೆಮ್ಮದಿ ಕೆಡಿಸಿದ್ದಾರೆ‌. ರೈಲ್ವೆ ಸಚಿವಾಲಯವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.