ರೀಲ್ಸ್‌ನಲ್ಲಿ ಒಡವೆ ತೋರಿಸಿದ ಬೆನ್ನಲ್ಲೇ ಯುಟ್ಯೂಬರ್ ದಂಪತಿ ಮನೆಗೆ ಕನ್ನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳವು
Viral News: ಹೆಚ್ಚಿನ ಲೈಕ್ಸ್, ವೀವ್ಸ್ ಗಳಿಸಬೇಕೆಂದು ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ತಲುಪಿ ಬಿಟ್ಟಿದೆ. ಇದೀಗ ತಮಿಳುನಾಡಿನ ನಾಗರ್‌ಕೋವಿಲ್‌ನ ಯುಟ್ಯೂಬರ್ ದಂಪತಿ ತಮ್ಮ ಮನೆಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ಹಣವನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದ ನಂತರ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಆಭರಣ ಕಳವಾಗಿರುವ ಆಘಾತಕಾರಿ ಘಟನೆ ನಡೆದಿದೆ.
ರೀಲ್ಸ್ ನಲ್ಲಿ ಸಂಪತ್ತು ತೋರಿಸಿ 1 ಕೋಟಿ ಮೌಲ್ಯ ಚಿನ್ನ ಕಳೆದುಕೊಂಡ ಯುಟ್ಯೂಬರ್ -
ಚೆನ್ನೈ, ಸೆ. 26: ಇತ್ತೀಚೆಗೆ ದಿನನಿತ್ಯದ ಸಾಮಾನ್ಯ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ಹೆಚ್ಚಿನ ಲೈಕ್ಸ್, ವೀವ್ಸ್ ಗಳಿಸಬೇಕೆಂದು ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಸಾಕಷ್ಟು ಯುಟ್ಯೂಬರ್ಸ್ ಇದ್ದಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಸಮಸ್ಯೆಗೂ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನ ನಾಗರ್‌ಕೋವಿಲ್‌ನ ಯುಟ್ಯೂಬರ್ ದಂಪತಿ ತಮ್ಮ ಮನೆಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ಹಣವನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದ ನಂತರ ಸುಮಾರು ಒಂದು ಕೋಟಿ ಮೌಲ್ಯದ ಚಿನ್ನದ ಆಭರಣ ಕಳೆದುಕೊಂಡು ತಲೆಗೆ ಕೈ ಹೊತ್ತು ಕೂತಿದ್ದಾರೆ.
ತಮಿಳುನಾಡಿನ ನಾಗರ್‌ಕೋವಿಲ್‌ನಲ್ಲಿ ಈ ಘಟನೆ ನಡೆದಿದೆ. ಯುಟ್ಯೂಬರ್ ಮಧುಮಿತಾ ಚಿನ್ನ ಕಳವು ಆಗುವ ಮೊದಲು ತಮ್ಮ ಪೂಜಾ ಕೊಠಡಿಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ಹಣವನ್ನು ತೋರಿಸುವ ವಿಡಿಯೊ ಶೇರ್ ಮಾಡಿದ್ದರು. ವಿಡಿಯೊ ವೈರಲ್ ಆದ ಬೆನ್ನಲ್ಲೇ ಅವರ ಮನೆಯಲ್ಲಿ 118 ಸವರನ್ ಚಿನ್ನ ಹಾಗೂ ನಗದು ಕಳುವಾಗಿದೆ.
ವಿಡಿಯೊ ನೋಡಿ:
மாச மாசம் நகைய வாங்குவேன்.. வீட்ல எவ்ளோ பணம் இருக்கு தெரியுமா? கழுத்து நிறைய நகைகள் அணிந்து, கட்டுக்கட்டாக பணத்தை அள்ளிப் போட்டு தொழிலதிபர் மனைவி லைவ் அப்டேட் கொடுத்தபடி வெளியிட்ட ரீல்ஸ் வீடியோவால், வீட்டின் பூட்டை உடைத்து ரூ.1 கோடி மதிப்பிலான நகைகள் கொள்ளையடித்து சென்ற… pic.twitter.com/TwTjE4YaDG
— Polimer News (@polimernews) September 25, 2026
ದುಬಾರಿ ವಸ್ತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರದರ್ಶಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಈ ಘಟನೆ ಈಗ ಚರ್ಚೆಯನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ, ಕಳ್ಳರು ಹಿಂಭಾಗದ ಬಾಗಿಲನ್ನು ಮುರಿದು ಮನೆಗೆ ನುಗ್ಗಿದ್ದಾರೆ. ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದ್ದರೂ ಬೆಲೆಬಾಳುವ ವಸ್ತುಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಕಳುವಾದ ಚಿನ್ನದ ಮೌಲ್ಯ ಸುಮಾರು 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ
ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಕಾಪಾಡಿದ ಅರಣ್ಯಾಧಿಕಾರಿಗಳು
ಭದ್ರತೆ ಇದ್ದರೂ, ಕಳ್ಳರು ಹಿಂಬಾಗಿಲನ್ನು ಮುರಿದು ಒಳನುಗ್ಗಿ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ರಾಜಕಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು, ಸ್ವಲ್ಪ ಹಣ ಕೈಗೆ ಬಂದಾಗ ತೋರುವ ದುರಾಸೆ ಮತ್ತು ಪ್ರದರ್ಶನ ಮನೋಭಾವಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.
ಈ ಘಟನೆಯ ನಂತರ, ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ವಿಷಯ ಪ್ರದರ್ಶಿಸುವ ಮೊದಲು ನೂರು ಬಾರಿ ಯೋಚಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ. ಕೇವಲ ಲೈಕ್ಸ್ ಮತ್ತು ವ್ಯೂಸ್‌ಗಾಗಿ ತಮ್ಮ ಮನೆಯ ಭದ್ರತೆಯನ್ನು ಹಲವರು ಮರೆಯುತ್ತಿದ್ದಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.