Tough Law: ಜಾತಿ ಸಂಕೋಲೆಗೆ ಬ್ರೇಕ್, ಮರ್ಯಾದೆಗೇಡು ಹತ್ಯೆಗೆ ಕಠಿಣ ಕಾನೂನು
ಪ್ರಸ್ತಾವಿತ ವಿಧೇಯಕದಲ್ಲಿ ಯಾವುದೇ ಇಬ್ಬರು ವಯಸ್ಕರು ತಮ್ಮ ಆಯ್ಕೆಯ ಸಂಗಾತಿ ಯನ್ನು ಮದುವೆಯಾಗಲು ಪೋಷಕರು, ಕುಟುಂಬ, ಜಾತಿಯ ಒಪ್ಪಿಗೆ ಕಡ್ಡಾಯವಲ್ಲ. ಜತೆಗೆ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆಗೆ ಸೇಫ್ ಹೌಸ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿ ಕೊಳ್ಳಲಾಗಿದೆ.
-
5 ವರ್ಷದಿಂದ ಜೀವಾವಧಿ ತನಕ ಶಿಕ್ಷೆ ಅವಕಾಶ
ಮರ್ಯಾದೆಗೇಡು ಹತ್ಯೆ ತಡೆಗಟ್ಟಲು ಕಠಿಣ ಕಾನೂನು ತರುವುದಾಗಿ ಘೋಷಿಸಿದ್ದ ರಾಜ್ಯ ಸರಕಾರ, ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿ ಕೊಂಡಿದ್ದು, ಪ್ರಕರಣಕ್ಕೆ ಭಾಗಿಯಾದವರಿಗೆ, ಕುಮ್ಮಕ್ಕು ನೀಡಿದವರಿಗೆ ಐದು ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸುವ ಅವಕಾಶವನ್ನು ನೀಡಲಾಗಿದೆ.
ರಾಜ್ಯ ಸರಕಾರ ಹೊರಟಿರುವ ಈ ವಿಧೇಯಕಕ್ಕೆ ‘ಮದುವೆಯಲ್ಲಿ ಮುಕ್ತ ಆಯ್ಕೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳ ತಡೆ ಹಾಗೂ ನಿಷೇಧ ಕಾಯಿದೆ- 2026’ ಎಂದು ಹೆಸರಿಡುವ ಮೂಲಕ ಬಸವಣ್ಣನವರ ’ಇವ ನಮ್ಮವ’ ಎನ್ನುವ ಸಮಾನತೆ ಯ ತತ್ವ, ಅಂಬೇಡ್ಕರ್ ಸಾಮಾಜಿಕ ನ್ಯಾಯದ ಆಶಯದಂತೆ ಈ ಕಾನೂನನ್ನು ರೂಪಿಸ ಲಾಗಿದೆ.
ಪ್ರಸ್ತಾವಿತ ವಿಧೇಯಕದಲ್ಲಿ ಯಾವುದೇ ಇಬ್ಬರು ವಯಸ್ಕರು ತಮ್ಮ ಆಯ್ಕೆಯ ಸಂಗಾತಿ ಯನ್ನು ಮದುವೆಯಾಗಲು ಪೋಷಕರು, ಕುಟುಂಬ, ಜಾತಿಯ ಒಪ್ಪಿಗೆ ಕಡ್ಡಾಯವಲ್ಲ. ಜತೆಗೆ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆಗೆ ಸೇಫ್ ಹೌಸ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಳ್ಳಲಾಗಿದೆ.
ಕೇವಲ ಕೊಲೆ ಅಥವಾ ದೈಹಿಕ ಹಲ್ಲೆ ಮಾತ್ರವಲ್ಲದೆ, ದಂಪತಿಗಳ ವಿರುದ್ಧ ಸಾಂಕೇತಿಕ ವಾಗಿ ತಿಥಿ ವಿಧಿವಿಧಾನ ಮಾಡುವುದು ಮತ್ತು ಮಾನಸಿಕ ಕಿರುಕುಳ ನೀಡುವುದು, ದಂಪತಿ ಗಳಿಗೆ ಅಥವಾ ಅವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದು, ಆಸ್ತಿಯಿಂದ ವಂಚಿಸು ವುದು, ಕೆಲಸದಿಂದ ತೆಗೆದುಹಾಕುವುದನ್ನೂ ಸಹ ಅಪರಾಧವೆಂದು ಪರಿಗಣಿಸ ಲಾಗಿದೆ.
ಸಂಪ್ರದಾಯದ ಹೆಸರಿನಲ್ಲಿ ದಂಪತಿಗಳ ಹತ್ಯೆ ಅಥವಾ ಹಲ್ಲೆ ನಡೆಸಿದರೆ ಕನಿಷ್ಠ 5 ವರ್ಷ ದಿಂದ ಜೀವಾವಧಿ ಶಿಕ್ಷೆಯವರೆಗೆ ದಂಡನೆಯನ್ನು ವಿಧಿಸಲು ಅವಕಾಶವಿದೆ.
ಇದನ್ನೂ ಓದಿ: Bengaluru Crime News: ಹಿಂದೂ ಯುವತಿಗೆ ಮಗು ಕೊಟ್ಟು ಪರಾರಿಯಾದ ಮುಸ್ಲಿಂ ಯುವಕ
ಕೌನ್ಸೆಲಿಂಗ್‌ಗೆ ಅವಕಾಶ: ಅಂತರ್ಜಾತಿ ವಿವಾಹಗಳನ್ನು ವಿಧ್ಯುಕ್ತವಾಗಿ ನೆರವೇರಿಸಲು ಮತ್ತು ದಂಪತಿಗಳಿಗೆ ಕೌನ್ಸೆಲಿಂಗ್ ನೀಡಲು ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿ ಗಳನ್ನೊಳಗೊಂಡ ‘ಇವ ನಮ್ಮವ ವೇದಿಕೆ’ ರಚಿಸಲು ಮತ್ತು ಇಂತಹ ಪ್ರಕರಣಗಳ ವಿಚಾ ರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲು ವಿಧೇಯಕದಲ್ಲಿ ಪ್ರಸ್ತಾಪಿಸ ಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆಯಾದ 2 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ಕ್ರಮವಹಿಸಬೇಕು. ಪ್ರತಿ ಜಿಯಲ್ಲಿಯೂ ಡಿಸಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯಿರ ಲಿದ್ದು, 24 ಗಂಟೆಗಳ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.
ಮದುವೆ ವಿರೋಧಿಸಿ ತಿಥಿ ಮಾಡಿದ್ರೂ ಜೈಲು: ರಾಜ್ಯ ಸರಕಾರದ ಪ್ರಸ್ತಾವಿತ ವಿಧೇಯಕ ದಲ್ಲಿ ಹಲ್ಲೆ, ಬಹಿಷ್ಕಾರವಷ್ಟೇ ಅಲ್ಲದೇ, ಅಂತರ್ಜಾತಿ ವಿವಾಹವಾದರೂ ಎನ್ನುವ ಕಾರಣಕ್ಕೆ ಸಾಂಕೇತಿಕ ಶವಸಂಸ್ಕಾರ, ತಿಥಿ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಅನೇಕ ಸಂದರ್ಭದಲ್ಲಿ ಪೋಷಕರು, ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಮಕ್ಕಳ ತಿಥಿ ಮಾಡಿ, ತಮಗೂ, ಮಕ್ಕಳಿಗೂ ಸಂಬಂಧ ಕಳೆದುಕೊಳ್ಳುವ ಘಟನೆಗಳು ನಡೆಯುತ್ತದೆ. ಆದ್ದರಿಂದ ಇನ್ನು ಮುಂದೆ ಇಂತಹ ಪ್ರತಿರೋಧ ಮಾಡಿದರೂ, ಅದರ ವಿರುದ್ಧ ದೂರು ದಾಖಲಿಸಿ 2 ರಿಂದ 5 ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸ ಲಾಗಿದೆ.
ಕೇವಲ ಕೊಲೆ ಅಥವಾ ದೈಹಿಕ ಹಲ್ಲೆ ಮಾತ್ರವಲ್ಲದೆ, ದಂಪತಿಗಳ ವಿರುದ್ಧ ಸಾಂಕೇತಿಕ ವಾಗಿ ತಿಥಿ ವಿಧಿವಿಧಾನ ಮಾಡುವುದು ಮತ್ತು ಮಾನಸಿಕ ಕಿರುಕುಳ ನೀಡುವುದು, ದಂಪತಿ ಗಳಿಗೆ ಅಥವಾ ಅವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದು, ಆಸ್ತಿಯಿಂದ ವಂಚಿಸುವುದು, ಕೆಲಸದಿಂದ ತೆಗೆದು ಹಾಕುವುದನ್ನೂ ಸಹ ಅಪರಾಧವೆಂದು ಪರಿಗಣಿಸ ಲಾಗಿದೆ.
ಸಂಪ್ರದಾಯದ ಹೆಸರಿನಲ್ಲಿ ದಂಪತಿಗಳ ಹತ್ಯೆ ಅಥವಾ ಹಲ್ಲೆ ನಡೆಸಿದರೆ ಕನಿಷ್ಠ 5 ವರ್ಷ ದಿಂದ ಜೀವಾವಧಿ ಶಿಕ್ಷೆಯವರೆಗೆ ದಂಡನೆಯನ್ನು ವಿಽಸಲು ಅವಕಾಶವಿದೆ.
ಕೌನ್ಸೆಲಿಂಗ್‌ಗೆ ಅವಕಾಶ: ಅಂತರ್ಜಾತಿ ವಿವಾಹಗಳನ್ನು ವಿಧ್ಯುಕ್ತವಾಗಿ ನೆರವೇರಿಸಲು ಮತ್ತು ದಂಪತಿಗಳಿಗೆ ಕೌನ್ಸೆಲಿಂಗ್ ನೀಡಲು ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿ ಗಳನ್ನೊಳಗೊಂಡ ‘ಇವ ನಮ್ಮವ ವೇದಿಕೆ’ ರಚಿಸಲು ಮತ್ತು ಇಂತಹ ಪ್ರಕರಣಗಳ ವಿಚಾ ರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲು ವಿಧೇಯಕದಲ್ಲಿ ಪ್ರಸ್ತಾಪಿಸ ಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆಯಾದ 2 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ಕ್ರಮ ವಹಿಸ ಬೇಕು. ಪ್ರತಿ ಜಿಲ್ಲೆಯಲ್ಲಿಯೂ ಡಿಸಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯಿರ ಲಿದ್ದು, 24 ಗಂಟೆಗಳ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.
ಮದುವೆ ವಿರೋಧಿಸಿ ತಿಥಿ ಮಾಡಿದ್ರೂ ಜೈಲು: ರಾಜ್ಯ ಸರಕಾರದ ಪ್ರಸ್ತಾವಿತ ವಿಧೇಯಕ ದಲ್ಲಿ ಹಲ್ಲೆ, ಬಹಿಷ್ಕಾರವಷ್ಟೇ ಅಲ್ಲದೇ, ಅಂತರ್ಜಾತಿ ವಿವಾಹವಾದರೂ ಎನ್ನುವ ಕಾರಣ ಕ್ಕೆ ಸಾಂಕೇತಿಕ ಶವಸಂಸ್ಕಾರ, ತಿಥಿ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಅನೇಕ ಸಂದರ್ಭದಲ್ಲಿ ಪೋಷಕರು, ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆ ಯಾಗುವ ಮಕ್ಕಳ ತಿಥಿ ಮಾಡಿ, ತಮಗೂ, ಮಕ್ಕಳಿಗೂ ಸಂಬಂಧ ಕಳೆದುಕೊಳ್ಳುವ ಘಟನೆಗಳು ನಡೆಯುತ್ತದೆ. ಆದ್ದರಿಂದ ಇನ್ನು ಮುಂದೆ ಇಂತಹ ಪ್ರತಿರೋಧ ಮಾಡಿದರೂ, ಅದರ ವಿರುದ್ಧ ದೂರು ದಾಖಲಿಸಿ 2 ರಿಂದ 5 ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸ ಲಾಗಿದೆ.
ವಿವಾಹಿತರಿಗೆ ಸೇಫ್ ಹೌಸ್!
ಕುಟುಂಬಸ್ಥರು ಮತ್ತು ಸಂಬಂಧಿಕರಿಂದಲೇ ಬೆದರಿಕೆ ಎದುರಿಸುವ ವಿವಾಹಿತರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲು ಈ ವಿಧೇಯಕದಲ್ಲಿ ಜಿಲ್ಲೆಗೊಂದು ‘ಸೇಫ್ ಹೌಸ್’ ನಿರ್ಮಿ ಸಲು ಅವಕಾಶ ನೀಡಲಾಗಿದೆ. ಇಂತಹ ಸೇಫ್ ಹೌಸ್‌ನಲ್ಲಿ ಪೊಲೀಸರ ರಕ್ಷಣೆ ಯೊಂದಿಗೆ ಆರಂಭದಲ್ಲಿ ಒಂದು ತಿಂಗಳ ಕಾಲ ವಾಸಿಸಬಹುದು. ಪರಿಸ್ಥಿತಿಯನ್ನು ಅವಲೋಕಿಸಿ ಗರಿಷ್ಠ ಒಂದು ವರ್ಷದವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ.
*
ಮರ್ಯಾದೆ ಹತ್ಯೆಗೆ ಕನಿಷ್ಠ ಐದು ವರ್ಷ ಜೈಲು ಶಿಕ್ಷೆ
ವಿವಾಹಿತರಿಗೆ ಗಂಭೀರ ಗಾಯಗಳಾದರೆ ಕನಿಷ್ಠ ಮೂರು ವರ್ಷ ಜೈಲು
ವಧು-ವರರ ಗೌರವಕ್ಕೆ ಧಕ್ಕೆ ತರುವ ಯಾವುದೇ ಅಪರಾಧಗಳಿಗೆ 2 ರಿಂದ ಐದು ವರ್ಷ ಜೈಲು
ಎಲ್ಲಾ ಅಪರಾಧಗಳು ಜಾಮೀನು ರಹಿತ ವಿಧೇಯಕದ ಪ್ರಮುಖಾಂಶ
ಅಂತರ್ಜಾತಿ ವಿವಾಹವಾದ ದಂಪತಿ ಬಗ್ಗೆ ಕೆಟ್ಟದಾಗಿ ಬಿಂಬಿಸುವುದು, ಸುಳ್ಳು ಮಾಹಿತಿ ಹರಡುವುದು ಶಿಕ್ಷಾರ್ಹ ಅಪರಾಧ
ದಂಪತಿಗಳಿಂದ ಫೋನ್, ಲ್ಯಾಪ್‌ಟಾಪ್ ಕಸಿದುಕೊಳ್ಳುವುದು, ಬ್ಯಾಂಕ್ ಖಾತೆ ಸ್ಥಗಿತ ಗೊಳಿಸುವುದನ್ನೂ ಸಹ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ.
ಬಲವಂತದ ಗರ್ಭಪಾತ ಮಾಡಿಸುವುದು ಗಂಭೀರ ಅಪರಾಧ