Lokayukta : ದಾಳಿಗೆ ಮಾತ್ರ ಲೋಕಾ ಸೀಮಿತ, ಯಾರೊಬ್ಬರಿಗೂ ಶಿಕ್ಷೆ ವಿಧಿಸಿಲ್ಲ
ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಲೋಕಾಯುಕ್ತ ಸಂಸ್ಥೆಯು ಕಳೆದ ಐದು ವರ್ಷದಲ್ಲಿ ಐಎಎಸ್, ಐಪಿಎಸ್ ಸೇರಿದಂತೆ 195 ಹಿರಿಯ ಅಧಿಕಾರಿಗಳ ದಾಳಿ ಮಾಡಿ ಪ್ರಕರಣ ದಾಖಲಿಸಿ ಕೊಂಡಿದೆ. ಆದರೆ ಈವರೆಗಿನ ತನಿಖೆಯಲ್ಲಿ ಒಬ್ಬ ಅಧಿಕಾರಿಯೂ ತಪ್ಪಿತಸ್ಥ ಎಂದು ಸಾಬೀತಾಗ ದಿರುವುದು ವಿಪರ್ಯಾಸ.
-
ಐಎಎಸ್, ಐಪಿಎಸ್, ಕೆಎಎಸ್ ಸೇರಿ 195 ಹಿರಿಯ ಶ್ರೇಣಿಯ ಅಧಿಕಾರಿಗಳ ಮೇಲೆ ದಾಳಿ
ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಲೋಕಾಯುಕ್ತ ಸಂಸ್ಥೆಯು ಕಳೆದ ಐದು ವರ್ಷದಲ್ಲಿ ಐಎಎಸ್, ಐಪಿಎಸ್ ಸೇರಿದಂತೆ 195 ಹಿರಿಯ ಅಧಿಕಾರಿಗಳ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದೆ. ಆದರೆ ಈವರೆಗಿನ ತನಿಖೆಯಲ್ಲಿ ಒಬ್ಬ ಅಧಿಕಾರಿಯೂ ತಪ್ಪಿತಸ್ಥ ಎಂದು ಸಾಬೀತಾಗದಿರುವುದು ವಿಪರ್ಯಾಸ.
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಲವು ಭ್ರಷ್ಟ ಸರಕಾರಿ ನೌಕರರು, ಅಧಿಕಾರಿಗಳ ವಿರುದ್ಧ ದಾಳಿ ನಡೆಸಿzರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಗಳಲ್ಲಿ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ ಭ್ರಷ್ಟರ ಬಣ್ಣ ಬಯಲುಗೊಳಿಸಿದ್ದಾರೆ.
ಸೆಪ್ಟೆಂಬರ್ 2022 ಮತ್ತು ಫೆಬ್ರವರಿ 2026ರ ನಡುವೆ, ಲೋಕಾಯುಕ್ತ ಅಧಿಕಾರಿಗಳು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳ ವಿರುದ್ಧ ದಾಳಿಗಳನ್ನು ಒಳಗೊಂಡ 104 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇನ್ನೂ 91 ಪ್ರಕರಣಗಳನ್ನು ಟ್ರ್ಯಾಪ್ ಪ್ರಕರಣಗಳಾಗಿ ದಾಖಲಿಸಲಾಗಿದೆ. ಒಟ್ಟು 195 ಪ್ರಕರಣಗಳಲ್ಲಿ, 89 ಅಂದರೆ ಸುಮಾರು ಶೇ.45 ರಷ್ಟು ಪ್ರಕರಣಗಳ ತನಿಖೆ ಪ್ರಗತಿಯಲ್ಲಿವೆ. 62 ಪ್ರಕರಣಗಳು, ಅಂದರೆ ಸುಮಾರು ಶೇ.31 ರಷ್ಟು ಪ್ರಕರಣಗಳು ಹೈಕೋರ್ಟ್‌ನಿಂದ ತಡೆಹಿಡಿಯಲ್ಪಟ್ಟಿದೆ.
ಇದನ್ನೂ ಓದಿ: Lokayukta Raid: ಉಡುಪಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ: 6 ಮನೆ, 11 ನಿವೇಶನ, ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ!
ಈ ಅವಧಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಕೇವಲ ಒಂದು ಪ್ರಕರಣ ದಾಖಲಾಗಿತ್ತು. ವಸಂತಿ ಅಮರ್ ಅವರು 2025ರಲ್ಲಿ ರೈಲ್ ಇನ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್‌ನಲ್ಲಿ ವಿಶೇಷ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಅದೇ ರೀತಿ, ಲೋಕಾಯುಕ್ತದ ಮಾಜಿ ಎಸ್‌ಪಿ ಶ್ರೀನಾಥ್ ಮಹಾದೇವ್ ಜೋಶಿ, ಲೋಕಾಯುಕ್ತರಿಂದ ಸುಲಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಏಕೈಕ ಐಪಿಎಸ್ ಅಽಕಾರಿ. 2025ರಲ್ಲಿ ದಾಖಲಾಗಿರುವ ಈ ಪ್ರಕರಣವು ಪ್ರಸ್ತುತ ತನಿಖೆಯಲ್ಲಿದೆ.
ಕೆಎಎಸ್ ಅಧಿಕಾರಿಗಳ ವಿರುದ್ಧ ಹನ್ನೆರಡು ಪ್ರಕರಣಗಳು ದಾಖಲಾಗಿದ್ದು, ಉಳಿದ ಪ್ರಕರಣಗಳು ವಿವಿಧ ಸರಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳ ಮೇಲೆ ನಡೆದಿವೆ.
ಯಾವ ಅಧಿಕಾರಿಗಳ ಮೇಲೆ ದಾಳಿ
ಒಬ್ಬರು ಐಎಎಸ್ ಅಧಿಕಾರಿ (ಅಕ್ರಮ ಆಸ್ತಿ ಗಳಿಕೆ)
ಒಬ್ಬರು ಐಪಿಎಸ್ ಅಧಿಕಾರಿ (ಲಂಚ ಪ್ರಕರಣ) ಕೆಎಎಸ್ ಅಧಿಕಾರಿಗಳ ಮೇಲಿನ ಪ್ರಕರಣ 12 ಹಿರಿಯ ಶ್ರೇಣಿಯ ಅಧಿಕಾರಿಗಳ ಮೇಲೆ 181 ಪ್ರಕರಣ.
ದಾಳಿಗೊಳಗಾದವರ ವಿರುದ್ದ ಏನು ಕ್ರಮ?
ಭ್ರಷ್ಟಾಚಾರ ತಡೆ ಅಧಿನಿಯಮ 1988ರಡಿ ಲೋಕಾಯುಕ್ತದ ಪೊಲೀಸ್ ವಿಭಾಗದಿಂದ ಟ್ರ್ಯಾಪ್ ಅಥವಾ ದಾಳಿಗೊಳಗಾಗಿ ಪ್ರಾಥಮಿಕ ತನಿಖೆಯ ನಂತರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಂತಹ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಅಮಾನತ್ತಿ ನಲ್ಲಿಡಲಾಗುತ್ತದೆ. ಈ ಅಧಿಕಾರಿ ಅಥವಾ ನೌಕರರನ್ನು ನಿಯಮಗಳಂತೆ ಮಾನತುಗೊಂಡ ಆರು ತಿಂಗಳ ಅವಧಿಯೊಳಗೆ ಅಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿ ಸದಿದ್ದಲ್ಲಿ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತನ್ನು ರದ್ದುಗೊಳಿಸುವ ಅಥವಾ ಮುಂದುವರಿಸುವ ಬಗ್ಗೆ ಸಕ್ಷಮ ಪ್ರಾಧಿಕಾರವು ತೀರ್ಮಾನಿಸಬೇಕಾಗಿದೆ.
ನಿಗದಿತ ಅವಧಿಯ ನಂತರ ಅವರನ್ನು ಪುನಃ ಸೇವೆಗೆ ಸ್ಥಾಪಿಸುವ ಮುನ್ನ ಲೋಕಾಯುಕ್ತ ಸಂಸ್ಥೆಯೊಂದಿಗೆ ಸಮಾಲೋಚಿಸಲಾಗುತ್ತದೆ. ಲೋಕಾಯುಕ್ತ ಸಂಸ್ಥೆಯು ಅಮಾನತಿ ನಲ್ಲಿಡಲಾದ ಆರೋಪಿತ ಸರಕಾರಿ ಅಽಕಾರಿ/ನೌಕರರನ್ನು ಸೇವೆಯಲ್ಲಿ ಪುನರ್ ಸ್ಥಾಪಿಸಲು ಸಹಮತಿಯನ್ನು ನೀಡಿದಲ್ಲಿ ಅವರು ಈ ಹಿಂದೆ ಸೇವೆ ಸಲ್ಲಿಸಿದ ಹುದ್ದೆಯನ್ನು ಹೊರತು ಪಡಿಸಿ ಬೇರೆ ಯಾವುದಾದರೂ ನಾನ್ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಪುನಃ ಸ್ಥಾಪಿಸಲು ಕ್ರಮ ಕೈಗೊಳ್ಳಲು ಅವಕಾಶ ಇದೆ. ದಾಳಿ ಪ್ರಕರಣಗಳಲ್ಲಿ ಆರೋಪಿತ ನೌಕರರ ವಿರುದ್ಧ ಬಲ್ಲ ಆದಾಯಗಳ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿರುತ್ತಾರೆಂದು ಸಾಬೀತಾದಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲು ಅವಕಾಶ ಇದೆ.