ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು

ಏನಾದರೂ ಮಾಡು ಮೊದಲು ಮಾನವನಾಗು: ಏನಾದರೂ ಆಗುವ ಮುನ್ನ ಏನಾದರೂ ಮಾಡಬೇಕಲ್ಲವೇ? ಇಂದಿನ ಆಧುನಿಕ ಯುಗದಲ್ಲಿ ದಿನಗಳೆದಂತೆ ಸ್ವಾರ್ಥ ತಾಂಡವವಾಡುತ್ತಿದೆ. ಮಾನವ ದಾನವ ನಂತೆ ವರ್ತಿಸುವ ಮಟ್ಟಕ್ಕೆ ಇಳಿದಿದ್ದಾನೆ. ಬದುಕು ಎಂಬುದು ನಮಗೆಲ್ಲರಿಗೂ ದೊರೆತ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಕಾಣಿಕೆ.

ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು

-

Ashok Nayak
Ashok Nayak Jan 1, 2026 8:50 AM

ಸುರೇಂದ್ರ ಪೈ, ಭಟ್ಕಳ

ಹೊಸ ವರ್ಷ ಎಂಬುದು ಹೊಸ ಆಶೆಗಳ, ಹೊಸ ಕನಸುಗಳ ಮತ್ತು ಹೊಸ ಪ್ರಯತ್ನಗಳ ಆರಂಭ ವಾಗುತ್ತದೆ. ಇದು ಪ್ರತೀ ವ್ಯಕ್ತಿಯ ಜೀವನದಲ್ಲಿ ಒಂದು ಹೊಸ ಪುಟವನ್ನು ತೆರೆದು ಹೊಸ ಉತ್ಸಾಹ ಮತ್ತು ಹೊಸ ದಿಕ್ಕನ್ನು ನೀಡುತ್ತದೆ. ಇದೇ ಕಾರಣದಿಂದ ಹೊಸ ವರ್ಷ ಎಂದರೆ ಬರೀ ಕ್ಯಾಲೆಂಡರ್ ತಿರುವಿ ಹಾಕುವ ದಿನವಲ್ಲ, ಇಲ್ಲಿಂದ ನಮ್ಮ ಬದುಕನ್ನೂ ಉತ್ತಮವಾದ ದಿಕ್ಕಿನತ್ತ ಕೊಂಡೊಯ್ಯುವ ಅವಕಾಶ ನಮ್ಮ ಕೈಯಲ್ಲೇ ಇದೆ. ಅದರ ಸದುಪಯೋಗ ಬಲು ಮುಖ್ಯ.

ಈ ಹೊಸ ವರ್ಷದ ಸಂಪನ್ನತೆಗಾಗಿ ಒಂದಿಷ್ಟು ಸರಳ ಸೂತ್ರಗಳು ಇಲ್ಲಿವೆ: ಏನಾದರೂ ಮಾಡು ಮೊದಲು ಮಾನವನಾಗು: ಏನಾದರೂ ಆಗುವ ಮುನ್ನ ಏನಾದರೂ ಮಾಡಬೇಕಲ್ಲವೇ? ಇಂದಿನ ಆಧುನಿಕ ಯುಗದಲ್ಲಿ ದಿನಗಳೆದಂತೆ ಸ್ವಾರ್ಥ ತಾಂಡವವಾಡುತ್ತಿದೆ. ಮಾನವ ದಾನವ ನಂತೆ ವರ್ತಿಸುವ ಮಟ್ಟಕ್ಕೆ ಇಳಿದಿದ್ದಾನೆ. ಬದುಕು ಎಂಬುದು ನಮಗೆಲ್ಲರಿಗೂ ದೊರೆತ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಕಾಣಿಕೆ. ತಾಳ್ಮೆ, ಪರೋಪಕಾರ, ಸಹಬಾಳ್ವೆ, ದಯೆ, ಕರುಣೆ, ಹೀಗೆ ಮುಂತಾದ ಮೌಲ್ಯಗಳನ್ನು ಈ ಬದುಕಿ ನಲ್ಲಿ ರೂಢಿಸಿಕೊಳ್ಳುವುದರ ಮೂಲಕ ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು.

ಇದನ್ನೂ ಓದಿ: Surendra Pai Column: ಇಪ್ಪತ್ತು ರೂಪಾಯಿ ಡಾಕ್ಟರ್‌ !

ಪರಿಸರ ಉಳಿಸುವ ಶಪಥ: ಪ್ರಕೃತಿ ನಮ್ಮ ತಾಯಿ. ಇಂದು ಮಾನವನ ನಿರಂತರ ಹಸ್ತಕ್ಷೇಪ ದಿಂದಾಗಿ ಎಲ್ಲಾ ರೀತಿಯ ಮಾಲಿನ್ಯಗಳು ಹೆಚ್ಚಾಗಿ ಪ್ರಕೃತಿ ವಿನಾಶದ ಅಂಚಿನಲ್ಲಿದೆ. ಇನ್ನಾದರೂ ಪರಿಸರ ಕಾಳಜಿಯನ್ನು ಹೊಂದೋಣ. ಮರಗಳನ್ನು ನೆಡುವುದು, ತ್ಯಾಜ್ಯ ವಿಂಗಡಣೆ, ಪ್ಲಾಸ್ಟಿಕ್ ಕಡಿಮೆ ಬಳಕೆ, ನೀರು ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಮೂಲಕ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಉಳಿಸುವ ಜವಾಬ್ದಾರಿಯ ಸಂಕಲ್ಪ ಮಾಡೋಣ.

ಸಾಂವಿಧಾನಿಕ ಕರ್ತವ್ಯಗಳ ಪಾಲನೆ: ಸದಾ ನಮ್ಮ ನಮ್ಮ ಹಕ್ಕಿಗಾಗಿ ಹೋರಾಡುತ್ತ ನಮ್ಮ ಭವ್ಯ ಭಾರತದ ಅಭಿವೃದ್ಧಿಗಾಗಿ, ಶಾಂತಿ ನೆಮ್ಮದಿಗಾಗಿ ಸೌಹಾರ್ದತೆಗಾಗಿ ಸಾಂವಿಧಾನಿಕವಾಗಿ ನೀಡಲ್ಪಟ್ಟ ಕರ್ತವ್ಯಗಳನ್ನು, ಮೌಲ್ಯಗಳನ್ನು ಪಾಲಿಸಬೇಕಿದೆ.

ಸಕಾರಾತ್ಮಕ ಚಿಂತನೆಗೂ ದಾರಿ: ನಾವು ಸಕಾರಾತ್ಮಕವಾಗಿ ಮುನ್ನಡೆದಷ್ಟು ನಮ್ಮ ಜೀವನ ಚೆನ್ನಾಗಿರುತ್ತದೆ. ನಮ್ಮ ಆಲೋಚನೆಗಳು ವಿಶೇಷತೆಯಿಂದ ಕೂಡಿರಬೇಕು. ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಂತೆ ಇರಬೇಕು. ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದ್ದರೆ ನಮ್ಮ ಇಡೀ ಕುಟುಂಬ ಚೆನ್ನಾಗಿರುತ್ತದೆ. ಹಾಗಾಗಿ ಹೊಸ ವರ್ಷಕ್ಕೆ ಒಳ್ಳೆಯ ಭಾವನೆಗಳನ್ನು ಈಗಿನಿಂದಲೇ ಅಭ್ಯಾಸ ಮಾಡಿಕೊಳ್ಳಿ.

ಕುಟುಂಬದ ಜೊತೆಗಿನ ಸಮಯ: ಅವಿಭಕ್ತ ಕುಟುಂಬಗಳು ಮಾಯವಾಗಿರುವ ಈ ಕಾಲ ಘಟ್ಟ ದಲ್ಲಿ ನಮ್ಮ ಕುಟುಂಬದ ಸದಸ್ಯರಿಗಾಗಿ ನಿತ್ಯವೂ ಒಂದಿಷ್ಟು ಸಮಯ ಮೀಸಲಿಡೋಣ. ಒಟ್ಟಿಗೆ ಕುಳಿತು ಊಟ ಮಾಡೋಣ, ಸ್ನೇಹ ಸಂಬಂಧದ ಆತ್ಮೀಯ ಕ್ಷಣಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳೋಣ. ದಿನಾಲೂ ಪ್ರೀತಿಯನ್ನು ಹಂಚಿ, ಪ್ರೀತಿಯನ್ನು ಪಡೆದು ಸಾಗೋಣ.

11 ಮಾನಸಿಕ ಆರೋಗ್ಯದ ಆದ್ಯತೆ: ಮಾನಸಿಕ ಆರೋಗ್ಯವನ್ನು ಯಾರು ಉತ್ತಮವಾಗಿ ಕಾಪಾಡಿ ಕೊಳ್ಳುತ್ತಾರೆ, ಅವರು ಜೀವನದಲ್ಲಿ ಬಹಳಷ್ಟು ನೆಮ್ಮದಿ ಹಾಗೂ ಸಂತೋಷದಿಂದ ಜೀವನ ಮಾಡುತ್ತಾರೆ. ಯಾವುದೇ ನಕಾರಾತ್ಮಕ ವ್ಯಕ್ತಿ ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡು ತ್ತಿದ್ದಾರೆ ಎಂದರೆ ಅಂತಹವರಿಂದ ಸಾಧ್ಯವಾದಷ್ಟು ದೂರವಿರಿ. ಕೆಲವೊಂದು ಅಭ್ಯಾಸ ಗಳಿಂದ ಕೂಡ ನಿಮ್ಮ ಮಾನಸಿಕ ಆರೋಗ್ಯಕ್ಕೆ ತೊಂದರೆ ಬರಬಹುದು. ಹೊಸ ವರ್ಷದಿಂದ ಇಂತಹ ಅಭ್ಯಾಸಗಳಿಂದ ದೂರವೇ ಉಳಿಯುವ ಹಾಗೆ ಮನಸ್ಸು ಮುಖ್ಯ.

ಆರೋಗ್ಯದತ್ತ ಇರಲಿ ಚಿತ್ತ: ಪ್ರತಿದಿನ ವ್ಯಾಯಾಮ ಮಾಡುವುದು, ಯೋಗ, ಆರೋಗ್ಯಕರ ಆಹಾರ ಸೇವಿಸುವುದು ಮತ್ತು ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವ ಪ್ರತಿಜ್ಞೆಯೂ ಮುಖ್ಯ.

ಆರ್ಥಿಕ ಸುಧಾರಣೆಗೂ ಇರಲಿ ಆದ್ಯತೆ: ಪ್ರತೀ ತಿಂಗಳು ಸಂಬಳದಲ್ಲಿ ಒಂದು ಭಾಗವನ್ನು ಉಳಿಸುವುದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಮತ್ತು ಹೂಡಿಕೆ ಮಾಡಲು ಪ್ರಾರಂಭಿಸೋಣ.