ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂರ್ಯನ ಕಿರಣಗಳ ಪ್ರತಿಫಲನ, ವಿದ್ಯುಚ್ಛಕ್ತಿಯ ಉತ್ಪಾದನೆಗೆ ಉತ್ತೇಜನ

‘ಸೂರ್ಯನ ಬೆಳಕನ್ನು ಬಾಹ್ಯಾಕಾಶದಿಂದ ಪ್ರತಿಫಲಿಸಿ ಭೂಮಿಗೆ ತರುವುದು ಇದರ ಉದ್ದೇಶ. ಆಗ ರಾತ್ರಿಯ ವೇಳೆಯಲ್ಲೂ ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಕೃತಕ ಉಪಗ್ರಹಗಳ ಮೇಲೆ ಅಳವಡಿಸಲಾದ ದೊಡ್ಡ ಕನ್ನಡಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸಿ, ಭೂಮಿಯ ನಿರ್ದಿಷ್ಟ ಪ್ರದೇಶಗಳಿಗೆ, ವಿಶೇಷವಾಗಿ ಸೌರತೋಟಗಳಿಗೆ ಬೆಳಕು ಬೀರುತ್ತವೆ.

ಸೂರ್ಯನ ಕಿರಣಗಳ ಪ್ರತಿಫಲನ, ವಿದ್ಯುಚ್ಛಕ್ತಿಯ ಉತ್ಪಾದನೆಗೆ ಉತ್ತೇಜನ

-

Ashok Nayak
Ashok Nayak Dec 13, 2025 1:23 PM

ಪ್ರಕಾಶ ಹೆಗಡೆ, ಬೆಂಗಳೂರು

ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಈ ಬಾರಿಯ ನೊಬೆಲ್ ಪುರಸ್ಕಾರವು ‘ಮೆಟಲ್ ಆರ್ಗ್ಯಾನಿಕ್ ಫ್ರೇಮ್‌ವರ್ಕ್ಸ್’ (ಎಂಒಎಫ್) ಎಂಬ ಹೊಸ ಕ್ರಾಂತಿಕಾರಿ ವಾಸ್ತುಶಿಲ್ಪದ ಆವಿಷ್ಕಾರಕ್ಕೆ ಲಭಿಸಿದೆ. ಈ ‘ಎಂಒಎಫ್’ಗಳು ಅನಿಲ, ನೀರು, ಶಕ್ತಿ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಮರ್ಥ್ಯವನ್ನು ಹೊಂದಿವೆ. ‌

ಇಂಥ ಮಾನವನಿರ್ಮಿತ ಗ್ಯಾಜೆಟ್‌ಗಳನ್ನು ಬಳಸಿ, ನೈಸರ್ಗಿಕ ಸಂಪನ್ಮೂಲಗಳನ್ನು ಬದುಕಿನ ಬೇಕು ಗಳ ನೆರವೇರಿಕೆಗೆ ಬಳಸಿಕೊಳ್ಳಲು ನಿರಂತರ ಯತ್ನಗಳಾಗುತ್ತಿವೆ. ಇದೇ ದಿಕ್ಕಿನಲ್ಲಿ ಇನ್ನೊಂದು ಮುಖ್ಯ ಪ್ರಯೋಗ ನಡೆಯುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ, ನವೀಕರಿಸಬಹುದಾದ ಇಂಧನ ವನ್ನು ‘ಸೋಲಾರ್ ಫ್ರೇರ್ಮ್’ಗಳ (ಸೌರತೋಟಗಳ) ಮೂಲಕ ಒದಗಿಸುವ ಬೃಹತ್ ಚಟುವಟಿಕೆ ಗಳು ಜಗತ್ತಿನೆಲ್ಲೆಡೆ ಭರ ದಿಂದ ಸಾಗುತ್ತಿವೆ.

ಆದರೆ ಇಂಥ ಕೇಂದ್ರಗಳ ದೊಡ್ಡ ಅನನುಕೂಲವೆಂದರೆ, ಸೂರ್ಯನ ಬೆಳಕು ಇಲ್ಲದಿದ್ದಾಗ ವಿದ್ಯು ಚ್ಛಕ್ತಿಯನ್ನು ಉತ್ಪಾದಿಸಲು ಇವು ಅಸಮರ್ಥವಾಗಿರುತ್ತವೆ. ಭೂಮಿಯ ಬಹುತೇಕ ಭಾಗಗಳಲ್ಲಿ ದಿನದ ಬೆಳಕು ೧೨ ಗಂಟೆಗಳಷ್ಟೇ ದೊರೆಯುವುದ ರಿಂದ, ಸೌರ ಫ್ರೇರ್ಮ್‌ಗಳ ಉತ್ಪಾದಕತೆ ಕೇವಲ ಶೇ.೫೦ರ ಪ್ರಮಾಣಕ್ಕೆ ಸೀಮಿತವಾಗು ತ್ತದೆ. ಈ ಸವಾಲಿಗೆ ಪರಿಹಾರ ಕಂಡುಕೊಳ್ಳಲು ಅಮೆರಿಕದ ಒಂದು ಸ್ಟಾರ್ಟಪ್ ಕಂಪನಿ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದೆ.

ಇದನ್ನೂ ಓದಿ: Mohan Vishwa Column: ಮೊಹಮ್ಮದ್‌ ಅಲಿ ಜಿನ್ನಾರ ಮುನ್ನಾ

‘ಸೂರ್ಯನ ಬೆಳಕನ್ನು ಬಾಹ್ಯಾಕಾಶದಿಂದ ಪ್ರತಿಫಲಿಸಿ ಭೂಮಿಗೆ ತರುವುದು ಇದರ ಉದ್ದೇಶ. ಆಗ ರಾತ್ರಿಯ ವೇಳೆಯಲ್ಲೂ ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಕೃತಕ ಉಪಗ್ರಹಗಳ ಮೇಲೆ ಅಳವಡಿಸಲಾದ ದೊಡ್ಡ ಕನ್ನಡಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸಿ, ಭೂಮಿಯ ನಿರ್ದಿಷ್ಟ ಪ್ರದೇಶಗಳಿಗೆ, ವಿಶೇಷವಾಗಿ ಸೌರತೋಟಗಳಿಗೆ ಬೆಳಕು ಬೀರುತ್ತವೆ.

ಈ ಯೋಜನೆಯ ಅನುಷ್ಠಾನದ ವೈಖರಿಯೇ ರೋಮಾಂಚಕಾರಿಯಾಗಿದೆ. ಪ್ರತಿ ಉಪಗ್ರಹವು ೬೨೫ ಕಿ.ಮೀ. ಎತ್ತರದಲ್ಲಿ ಪರಿಕ್ರಮಣ ಮಾಡುತ್ತದೆ. ಇದರಲ್ಲಿ ಅಳವಡಿಸಲಾದ ೫೪ ಮೀಟರ್ ಅಗಲದ ಕನ್ನಡಿಗಳು ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತವೆ. ಈ ಬೆಳಕು ಮಧ್ಯಾಹ್ನದ ಸೂರ್ಯನಿಗಿಂತ 15000 ಪಟ್ಟು ಕ್ಷೀಣವಾದರೂ, ಪೂರ್ಣ ಚಂದ್ರನಿಗಿಂತ ಪ್ರಕಾಶಮಾನವಾಗಿರುತ್ತದೆ.

ಹೀಗೆ, ಭೂಮಿಯ ಸುಮಾರು ೭ ಕಿ.ಮೀ. ವ್ಯಾಪ್ತಿಯ ಪ್ರದೇಶವು ಬೆಳಗುತ್ತದೆ. ಈ ಬೆಳಕಿನ ದಿಕ್ಕು ಮತ್ತು ತೀವ್ರತೆಯನ್ನು ಭೂನಿಯಂತ್ರಣ ಕೇಂದ್ರಗಳಿಂದ ನಿಯಂತ್ರಿಸಲಾಗುತ್ತದೆ.

ಮೊದಲಿಗೆ ಈ ಕಂಪನಿಯು ೧೮ ಮೀ. ಉದ್ದದ ಪರೀಕ್ಷಾ ಉಪಗ್ರಹವನ್ನು 2026ರಲ್ಲಿ ಉಡಾಯಿ ಸಲು ಆಯೋಜಿಸಿದೆ. ನಂತರದಲ್ಲಿ, 2030ರೊಳಗೆ 4000 ಉಪಗ್ರಹಗಳ ಸಮೂಹವನ್ನು ಬಾಹ್ಯಾ ಕಾಶದಲ್ಲಿ ನಿಯೋಜಿಸಿ Sunlight on Demand ಎಂಬ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಆರಂಭಿಸುವ ಉದ್ದೇಶ ಕಂಪನಿಗಿದೆ.

ಮಧ್ಯಾಹ್ನದ ಸೂರ್ಯನ ಬೆಳಕು ಪ್ರತಿ ಚದರ ಮೀಟರ್‌ಗೆ ಸುಮಾರು 1000 ವಾಟ್‌ನಷ್ಟು ಶಕ್ತಿಯನ್ನು ನೀಡುತ್ತದೆ. ಈ ಯೋಜನೆಯ ಭಾಗವಾಗಿ ಯಥೋಚಿತ ಸ್ಥಳಗಳಲ್ಲಿ ಉಪಗ್ರಹಗಳ ಸಮೂಹವನ್ನು ಸಜ್ಜುಗೊಳಿಸಿ, ಪ್ರತಿ ಚದರ ಮೀಟರ್‌ಗೆ ೨೦೦ ವಾಟ್‌ನಷ್ಟು ಶಕ್ತಿಯನ್ನು ನೀಡುವಷ್ಟು ಬೆಳಕನ್ನು ಸೌರತೋಟಗಳ ಮೇಲೆ ಬೀರಲಾಗುತ್ತದೆ. ಈ ಬೆಳಕಿನ ಕಿರಣಗಳು ಕ್ಷಣಿಕ, ನಿರ್ದಿಷ್ಟ ಹಾಗೂ ನಿಯಂತ್ರಿತ ಆಗಿದ್ದರೂ, ಈ ಹಿಂದೆ ತಿಳಿಸಿದಂತೆ ಅದು ತುಂಬಾ ಕ್ಷೀಣ ವಾಗಿರುತ್ತದೆ.

ಸೂರ್ಯನ ಬೆಳಕಿನ ಸುಮಾರು ಶೇ.೨೦ರಷ್ಟು ತೀವ್ರತೆಯನ್ನು ಪ್ರತಿಫಲಿಸಲು ಸಾವಿರಾರು ಉಪಗ್ರಹ ಗಳ ಅಗತ್ಯ ವಿರುತ್ತದೆ. ಪ್ರತಿ ಉಪಗ್ರಹವು ಪ್ರತಿಫಲಿಸುವ ಬೆಳಕು, ಭೂಮಿಯ ನಿರ್ದಿಷ್ಟ ಸ್ಥಳದ ಮೇಲೆ ಕೆಲವೇ ನಿಮಿಷಗಳವರೆಗೆ ಉಳಿಯುತ್ತದೆ. ನಿರಂತರ ಬೆಳಕು ನೀಡಲು ಇನ್ನೂ ಸಾವಿರಾರು ಉಪಗ್ರಹಗಳು ಅಗತ್ಯವಾಗುತ್ತವೆ.

ಅನೇಕ ಪ್ರಯೋಜನಗಳಿವೆ: ಈ ತಂತ್ರಜ್ಞಾನ ದಿಂದಾಗಿ ೨೪ ಗಂಟೆಗಳ ಸೌರವಿದ್ಯುತ್ ಉತ್ಪಾದನೆ, ವಿದ್ಯುತ್ ಇಲ್ಲದ ದೂರದ ಪ್ರದೇಶಗಳಲ್ಲಿ ಬೆಳಕಿನ ಲಭ್ಯತೆ, ಇಂಧನ ಮತ್ತು ಕಾರ್ಬನ್ ಅವಲಂಬನೆಯಲ್ಲಿ ಕಡಿತ, ಸೌರಶಕ್ತಿಯ ನಿರಂತರ ಪೂರೈಕೆಯಿಂದಾಗಿ ವಿದ್ಯುತ್ ಜಾಲದ ಸ್ಥಿರತೆ ಇವೆಲ್ಲವೂ ಸಾಕಾರಗೊಳ್ಳುತ್ತವೆ.

ಈ ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಸವಾಲುಗಳು ಮತ್ತು ಸಮಸ್ಯೆಗಳೂ ಇವೆ. ಪ್ರತಿಫಲಿತ ಬೆಳಕು ಕ್ಷೀಣವಾಗಿದ್ದರೂ, ಬಾಹ್ಯಾಕಾಶದಲ್ಲಿ ಉಂಟಾಗುವ ಬೆಳಕಿನ ಮಾಲಿನ್ಯವನ್ನು ನಿವಾರಿಸುವ ವಿಧಾನಗಳನ್ನು ಪರಿಚಯಿಸಬೇಕಾಗುತ್ತದೆ. ಅಂದರೆ, ಉಪಗ್ರಹಗಳಿಂದ ಮತ್ತು ಬಾಹ್ಯಾಕಾಶದ ಅವಶೇಷಗಳಿಂದ ಉಂಟಾಗುವ ಅಪಾಯಗಳನ್ನು ಎದುರಿಸುವ ಬಗೆಯನ್ನು ದಾಖಲಿಸುವುದು, ಪ್ರತಿಫಲಿತ ಬೆಳಕಿನ ತೀವ್ರತೆಯ ನಿಯಂತ್ರಣದ ಕಷ್ಟಗಳನ್ನು ನಿವಾರಿಸುವ ತಂತ್ರಜ್ಞಾನವನ್ನು ಕಾರ್ಯ ರೂಪಕ್ಕೆ ತರುವುದು, ಆರ್ಥಿಕ ವೆಚ್ಚ ಮತ್ತು ತಂತ್ರಜ್ಞಾನದ ನಿರ್ವಹಣೆ ಇವೆಲ್ಲವೂ ಅಂಥ ಸವಾಲುಗಳಲ್ಲಿ ಸೇರಿವೆ.

ಖಗೋಳಶಾಸ್ತ್ರಜ್ಞರೂ ಕೆಂಪುಬಾವುಟ ತೋರಿಸುತ್ತಿದ್ದಾರೆ. ಜತೆಗೆ, ಇಂಥ ಉಪಗ್ರಹಗಳು ಚಂದ್ರನಿ ಗಿಂತಲೂ ಪ್ರಕಾಶಮಾನವಾಗಿ ಕಾಣಬಹುದು, ದೂರದರ್ಶಕಗಳ ಕಾರ್ಯವನ್ನು ಅಸ್ತವ್ಯಸ್ತಗೊಳಿಸ ಬಹುದು ಮತ್ತು ರಾತ್ರಿ ಸಂಚರಿಸುವ ಜೀವಿಗಳ ಜೀವನಚಕ್ರದ ಮೇಲೆ ಪರಿಣಾಮ ಬೀರಬಹುದು. ನಿಸರ್ಗ ಮತ್ತು ತಂತ್ರಜ್ಞಾನವನ್ನು ಸಮತೋಲನಗೊಳಿಸಿ ಜಗಕ್ಕೆ ಪರಿಚಯಿಸುವುದೇ ಒಂದು ಸವಾಲು.

ಅಂಥ ಪ್ರಯತ್ನಕ್ಕೆ ಕೈಹಾಕಿರುವ ಈ ಯೋಜನೆಯು ಮಾನವ ತಂತ್ರಜ್ಞಾನವು ಹೊಸ ಎತ್ತರಕ್ಕೆ ತಲುಪುವುದಕ್ಕಿರುವ ಒಂದು ಸಾಧ್ಯತೆಯಾಗಿದೆ. ಈ ಯೋಜನೆ ಯಶಸ್ವಿಯಾದರೆ, ಬಾಹ್ಯಾಕಾಶ ದಿಂದ ಸೂರ್ಯನ ಬೆಳಕನ್ನು ಭೂಮಿಗೆ ತಂದು, ‘ಅಸ್ತಮಿಸದ ಸೂರ್ಯನ ಶಕ್ತಿ’ ಎಂಬ ಕನಸನ್ನು ಸಾಕಾರಗೊಳಿಸುವ ದಿನಗಳು ದೂರವಿಲ್ಲ...