ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಮನೆ ಖರೀದಿಸುತ್ತೀರಾ ? ಕೇಂದ್ರವೇ ಕೊಡುತ್ತೆ 1.80 ಲಕ್ಷ ರೂಪಾಯಿ !

ಕೇಂದ್ರ ಸರಕಾರ ಪ್ರಾಯೋಜಿತವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ-(ನಗರ) ( PMAY) ೨.೦ ಅಡಿಯಲ್ಲಿ ೧ ಲಕ್ಷದ ೮೦ ಸಾವಿರ ರುಪಾಯಿ ತನಕ ಬಡ್ಡಿ ಸಬ್ಸಿಡಿ ಪಡೆದು ಹಣವನ್ನು ಉಳಿಸಬಹುದು. ಈ ಕುರಿತ ವಿವರಗಳನ್ನು ನೋಡೋಣ. ಮೊದಲನೆಯದಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ೨.೦ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ

ಮನೆ ಖರೀದಿಸುತ್ತೀರಾ ? ಕೇಂದ್ರವೇ ಕೊಡುತ್ತೆ 1.80 ಲಕ್ಷ ರೂಪಾಯಿ !

-

ಮನಿ ಮೈಂಡೆಡ್

ಸ್ವಂತ ಮನೆಯನ್ನು ಖರೀದಿಸುವುದು ಅಂದ್ರೆ ಅನೇಕ ಮಂದಿಗೆ ಜೀವಮಾನದ ಬಹುದೊಡ್ಡ ಕನಸು. ಏಕೆಂದರೆ ಇದು ದುಬಾರಿ. ವರ್ಷಗಟ್ಟಲೆ ಸಾಲದ ಇಎಂಐ ಇರುತ್ತದೆ. ಹೀಗಾಗಿ ಇದರಲ್ಲಿ ಉಳಿತಾಯ ಮಾಡಲು ಸಾಧ್ಯವೇ ಎಂಬುದನ್ನು ನೀವು ಯೋಚಿಸುತ್ತಿದ್ದರೆ, ಇಂದು ಮಾರ್ಗೋ ಪಾಯವಿದೆ.

ಅದೇನೆಂದರೆ, ಕೇಂದ್ರ ಸರಕಾರ ಪ್ರಾಯೋಜಿತವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ-(ನಗರ) ( PMAY) ೨.೦ ಅಡಿಯಲ್ಲಿ ೧ ಲಕ್ಷದ ೮೦ ಸಾವಿರ ರುಪಾಯಿ ತನಕ ಬಡ್ಡಿ ಸಬ್ಸಿಡಿ ಪಡೆದು ಹಣವನ್ನು ಉಳಿಸಬಹುದು. ಈ ಕುರಿತ ವಿವರಗಳನ್ನು ನೋಡೋಣ. ಮೊದಲನೆಯದಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ೨.೦ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಕೇಂದ್ರ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ. 2015ರಿಂದ ‘ಎಲ್ಲರಿಗೂ ಸೂರು ಮಿಷನ್’ ಅನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಇದರ ಭಾಗವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-೨.೦ ಜಾರಿಯಾಗಿದೆ. ಸಂಕ್ಷಿಪ್ತವಾಗಿ ಇದನ್ನು PMAY-U 2.0 ಎನ್ನುತ್ತಾರೆ.

ಇದನ್ನೂ ಓದಿ: ‌Keshava Prasad B Column: ಗೂಗಲ್‌ ಮ್ಯಾಪ್‌ʼಗೆ ಪರ್ಯಾಯ ಕಟ್ಟಿದ ರಾಕೇಶ್‌ ವರ್ಮಾ !

2024ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು PMAY-U 2.0 ಯೋಜನೆಯನ್ನು ೫ ವರ್ಷಗಳಿಗೆ ವಿಸ್ತರಿಸಿದರು. 2024ರ ಸೆಪ್ಟೆಂಬರ್ ೧ರಿಂದ ಇದು ವಿಸ್ತರಣೆ ಯಾಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಮನೆಗಳನ್ನು ಹೊಂದುವವರಿಗೆ ಇದು ಸಹಕಾರಿಯಾಗಿದೆ. ಈ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣ, ಪಾಲುದಾರಿಕೆಯಲ್ಲಿ ಅಫೋರ್ಡಬಲ್ ಹೌಸಿಂಗ್ ಯೋಜನೆ, ಅಫೋರ್ಡಬಲ್ ರೆಂಟಲ್ ಹೌಸಿಂಗ್ ಮತ್ತು ಬಡ್ಡಿ ಸಬ್ಸಿಡಿ ಸ್ಕೀಮ್ ಇದೆ. ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯಬಹುದು.

ಏನಿದು ಬಡ್ಡಿ ಸಬ್ಸಿಡಿ ಸ್ಕೀಮ್?: ಆರ್ಥಿಕವಾಗಿ ಹಿಂದುಳಿದವರಿಗೆ ಗೃಹ ಸಾಲದಲ್ಲಿ ಬಡ್ಡಿ ಸಬ್ಸಿಡಿ‌ ಯನ್ನು ಈ ಇಂಟರೆ ಸಬ್ಸಿಡಿ ಸ್ಕೀಮ್ ಒದಗಿಸುತ್ತದೆ. EWS, LIG ಮತ್ತು MIG ಕೆಟಗರಿಯ ಅರ್ಹ ಫಲಾನುಭವಿಗಳು ಗೃಹ ಸಾಲ ಪಡೆಯುವಾಗ, ಈ ಯೋಜನೆಯ ಅಡಿಯಲ್ಲಿ ಅಸಲು ಮೊತ್ತಕ್ಕೆ ೧ ಲಕ್ಷದ 80 ಸಾವಿರ ರುಪಾಯಿ ತನಕ ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು.

K P 24

ಆಗ ಅಸಲು ಮೊತ್ತವು ಕಡಿಮೆಯಾಗುವುದರಿಂದ ಗೃಹ ಸಾಲದ ಇಎಂಐ ಕೂಡ ಕಡಿಮೆ ಯಾಗುತ್ತದೆ. ವಾರ್ಷಿಕ ೩ ಲಕ್ಷ ರುಪಾಯಿ, ೬ ಲಕ್ಷ ರುಪಾಯಿ ಮತ್ತು ೯ ಲಕ್ಷ ರುಪಾಯಿ ಆದಾಯ ಇರುವವರು ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಬಡ್ಡಿ ಸಬ್ಸಿಡಿ ಸ್ಕೀಮ್‌ನ ಮುಖ್ಯಾಂಶಗಳು: ಈ ಯೋಜನೆಯಡಿಯಲ್ಲಿ ಶೇ.೪ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಒಟ್ಟು ಸಬ್ಸಿಡಿ ಮೊತ್ತವು ೧ ಲಕ್ಷದ ೮೦ ಸಾವಿರ ರುಪಾಯಿ ತನಕ ಇರುತ್ತದೆ. ಸಬ್ಸಿಡಿ ಯನ್ನು ೫ ವರ್ಷಗಳ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಫಲಾನುಭವಿಯ ಸಾಲದ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆಯಾಗುತ್ತದೆ. ಸಾಲದ ಅಸಲು ಮೊತ್ತದಿಂದ ಬಡ್ಡಿ ಸಬ್ಸಿಡಿ ಮೊತ್ತ ವನ್ನು ಕಡಿತಗೊಳಿಸಲಾಗುತ್ತದೆ. ಸಾಲದ ಮರುಪಾವತಿಯ ಅವಧಿ ೫ ವರ್ಷಕ್ಕಿಂತ ಹೆಚ್ಚು ಇದ್ದರೆ ಈ ಬಡ್ಡಿ ಸಬ್ಸಿಡಿ ಸಿಗುತ್ತದೆ. ಸಾಲದ ಮೊದಲ ೮ ಲಕ್ಷ ರುಪಾಯಿಗೆ ಶೇ.೪ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ.

ಬಡ್ಡಿ ಸಬ್ಸಿಡಿಗೆ ಗರಿಷ್ಠ ಗೃಹಸಾಲ ಅರ್ಹತೆ: ೨೫ ಲಕ್ಷ ರುಪಾಯಿ. ಮನೆಯ ಗರಿಷ್ಠ ಮೌಲ್ಯ: ೩೫ ಲಕ್ಷ ರುಪಾಯಿ. ಗರಿಷ್ಠ ಕಾರ್ಪೆಟ್ ಏರಿಯಾ: ೧೨೦ ಚದರ ಮೀಟರ್. ನಿಮ್ಮ ಗೃಹ ಸಾಲದಲ್ಲಿ ೨೫ ಲಕ್ಷ ರುಪಾಯಿ ತನಕದ ಮೊತ್ತಕ್ಕೆ ಮಾತ್ರ ಬಡ್ಡಿ ಸಬ್ಸಿಡಿ ಸಿಗುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸಿಗುವುದಿಲ್ಲ. ಅದೇ ರೀತಿ ಆಸ್ತಿಯ ಮೌಲ್ಯದಲ್ಲಿ ೩೫ ಲಕ್ಷ ರುಪಾಯಿ ತನಕದ ಮೌಲ್ಯ ಮಾತ್ರ ಸಬ್ಸಿಡಿ ಪಡೆಯಲು ಅರ್ಹವಾಗುತ್ತದೆ.

2024 ಸೆಪ್ಟೆಂಬರ್ ೧ರಿಂದ ಮಂಜೂರಾಗಿರುವ ಗೃಹ ಸಾಲಕ್ಕೆ ಲಭ್ಯ. 2029 ತನಕ ಇದಕ್ಕೆ ಅವಧಿ ಇದೆ. ಮನೆಯ ಖರೀದಿ, ಮರು-ಖರೀದಿ, ನಿರ್ಮಾಣಕ್ಕೆ ಲಭ್ಯ. ಫಲಾನುಭವಿಗೆ ಈಗಾಗಲೇ ಸ್ವಂತ ಪಕ್ಕಾ ಮನೆ ಇರಬಾರದು.

ವಾರ್ಷಿಕ ಆದಾಯ ಎಷ್ಟಿರಬೇಕು?: ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ (Economically weaker sections- EWS) ವಾರ್ಷಿಕ ೩ ಲಕ್ಷ ರುಪಾಯಿ ಒಳಗೆ ಆದಾಯ ಇದ್ದರೆ ಬಡ್ಡಿ ಸಬ್ಸಿಡಿ ಸಿಗುತ್ತದೆ. ಆದ್ದರಿಂದ ವರ್ಷಕ್ಕೆ ೩ ಲಕ್ಷ ರುಪಾಯಿ ತನಕ ಆದಾಯ ಇರುವವರು EWS ಕೆಟಗರಿಗೆ ಬರುತ್ತಾರೆ. ಕಡಿಮೆ ಆದಾಯ ಗ್ರೂಪ್‌ನಲ್ಲಿ (Low Income Group) ವಾರ್ಷಿಕ ೩ -೬ ಲಕ್ಷ ರು. ಆದಾಯ ಇರುವವರಿಗೆ ಬಡ್ಡಿ ಸಬ್ಸಿಡಿ ದೊರೆಯುತ್ತದೆ. ಮೂರನೆಯದಾಗಿ, ಮಧ್ಯಮ ಆದಾಯ ಗ್ರೂಪ್‌ನಲ್ಲಿ (Middle Income Group- MIG) ವಾರ್ಷಿಕ ೬-೯ ಲಕ್ಷ ರುಪಾಯಿ ಆದಾಯದ ಒಳಗಿರುವವರಿಗೆ ಬಡ್ಡಿ ಸಬ್ಸಿಡಿ ಸಿಗುತ್ತದೆ.

ಸಬ್ಸಿಡಿಗೆ ಅರ್ಜಿ ಸಲ್ಲಿಸುವುದು ಹೇಗೆ?: ಪ್ರಧಾನ ಮಂತ್ರಿ ಆವಾಸ್ ಯೋಜನಾ-ಅರ್ಬನ್ ೨.೦ ಸ್ಕೀಮ್ ಅಡಿಯಲ್ಲಿ ಅರ್ಜಿ ಸಲ್ಲಿಸಲು https://pmaymis.gov.in ವೆಬ್ ಪೋರ್ಟಲ್ ಅನ್ನು ಬಳಸಬೇಕು. ಈ ವೆಬ್‌ಸೈಟ್‌ನಲ್ಲಿ ಬಡ್ಡಿ ಸಬ್ಸಿಡಿಯ ಲೆಕ್ಕಾಚಾರ ತಿಳಿದುಕೊಳ್ಳಲು ಕ್ಯಾಲ್ಕ್ಯುಲೇಟರ್ ಕೂಡ ಇದೆ. ಅದರ ಮೂಲಕ ನಿಮಗೆ ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳ ಬಹುದು. ಹಾಗಾದರೆ ೧ ಲಕ್ಷದ 80 ಸಾವಿರ ರುಪಾಯಿ ಸಬ್ಸಿಡಿ ಹೇಗೆ ಸಿಗುತ್ತದೆ ಎಂಬ ಲೆಕ್ಕಾಚಾರ ನೋಡೋಣ. ನಿಮ್ಮ ವಾರ್ಷಿಕ ಆದಾಯ ೯ ಲಕ್ಷ ರುಪಾಯಿ ಇದೆ ಎಂದು ಇಟ್ಟುಕೊಳ್ಳಿ. 25 ಲಕ್ಷ ರುಪಾಯಿ ತನಕ ಸಾಲದ ಮೊತ್ತಕ್ಕೆ ಸಬ್ಸಿಡಿ ಸಿಗುತ್ತದೆ. ಸಾಲದ ಅವಧಿ 144 ತಿಂಗಳು ಅಥವಾ ೧೨ ವರ್ಷ ಹಾಗೂ ಕಾರ್ಪೆಟ್ ಏರಿಯಾ 50 ಸ್ಕ್ವೇರ್ ಮೀಟರ್ ಎಂದು ಇಟ್ಟುಕೊಳ್ಳಿ. ಆಗ ನಿಮ್ಮ ಆದಾಯ ಗ್ರೂಪ್ ಎಂಐಜಿಗೆ ಬರುತ್ತದೆ. ಒಟ್ಟು 180000 ರುಪಾಯಿ ಸಬ್ಸಿಡಿ ಪಡೆಯುತ್ತೀರಿ. ಪ್ರತಿ ವರ್ಷ 36000 ರುಪಾಯಿಗಳಂತೆ ಕಂತಿನಲ್ಲಿ ಸಬ್ಸಿಡಿ ಪಡೆಯುತ್ತೀರಿ.

ಸಣ್ಣ ಉಳಿತಾಯಕ್ಕೆ ಸಿಗುತ್ತೆ ೭೦ ಲಕ್ಷ: ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಯೋಜ ನೆಗಳ ಬಗ್ಗೆ ಜನಜಾಗೃತಿ ಅವಶ್ಯಕ. ಇಂಥ ಮತ್ತೊಂದು ಉದಾಹರಣೆ ಸುಕನ್ಯಾ ಸಮೃದ್ಧಿ ಯೋಜನೆ. ಪ್ರತಿ ವರ್ಷ ಸಣ್ಣ ಮೊತ್ತವೊಂದನ್ನು ನಿಮ್ಮ ಮಗಳ ಹೆಸರಿನಲ್ಲಿ ಠೇವಣಿ ಇಟ್ಟರೆ ಪುತ್ರಿಯ ಭವಿಷ್ಯಕ್ಕೆ ಗಣನೀಯ ನೆರವಾಗುತ್ತದೆ. ಅಂದಾಜು ೭೦ ಲಕ್ಷ ರುಪಾಯಿ ತನಕ ನಿಧಿ ಸಿಗುತ್ತದೆ.

ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಭವಿಷ್ಯದ ಆರ್ಥಿಕ ಭದ್ರತೆ ಒದಗಿಸಲು ಸುಕನ್ಯಾ ಸಮೃದ್ಧಿ ಸಹಕರಿಸುತ್ತದೆ. 2015ರಲ್ಲಿ ‘ಬೇಟಿ ಬಚಾವೊ-ಬೇಟಿ ಪಢಾವೊ’ ಅಭಿಯಾನದ ಅಡಿಯಲ್ಲಿ ಜಾರಿಗೆ ಬಂದಿರುವ ಯೋಜನೆ ಇದಾಗಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಇದಕ್ಕೆ ಟ್ಯಾಕ್ಸ್ ಬೆನಿಫಿಟ್ ಕೂಡ ದೊರೆಯುತ್ತದೆ. ಸದ್ಯಕ್ಕೆ ಶೇ.೮.೨ರಷ್ಟು ಬಡ್ಡಿ ಸಿಗುತ್ತದೆ. ಇದು ಸಣ್ಣ ಉಳಿತಾಯ ಯೋಜನೆ‌ ಗಳಲ್ಲಿಯೇ ಗರಿಷ್ಠ ಎನ್ನುವುದನ್ನು ಗಮನಿಸಬಹುದು.

ಹಾಗಾದರೆ ಸುಕನ್ಯಾ ಸಮೃದ್ಧಿ ಯೋಜನೆಯ ಮುಖ್ಯಾಂಶಗಳನ್ನು ನೋಡೋಣ. ಹೆಣ್ಣು ಮಗುವಿನ ವಯಸ್ಸು ೧೦ ವರ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ವಾರ್ಷಿಕ ಕನಿಷ್ಠ ಹೂಡಿಕೆ 250 ರುಪಾಯಿಗಳು. ವರ್ಷಕ್ಕೆ ಗರಿಷ್ಠ ೧.೫ ಲಕ್ಷ ರುಪಾಯಿ ಹೂಡಿಕೆ ಮಾಡಬಹುದು. ಖಾತೆ ತೆರೆದ ಬಳಿಕ ೧೫ ವರ್ಷ ತನಕ ಇನ್ವೆ ಮಾಡಬಹುದು. ಮಗಳಿಗೆ ೨೧ ವರ್ಷ ಭರ್ತಿಯಾದಾಗ ಖಾತೆ ಮೆಚ್ಯೂರ್ ಆಗುತ್ತದೆ. ೨೧ ವರ್ಷಕ್ಕೆ ಮೊದಲೇ ಮದುವೆಯಾದರೆ ಅಕೌಂಟ್ ಆಗ ಕ್ಲೋಸ್ ಆಗುತ್ತದೆ. ಪುತ್ರಿಗೆ ೨೧ ವರ್ಷ ಆದಾಗ ಎಷ್ಟು ಹಣವನ್ನು ನಿರೀಕ್ಷಿಸಬಹುದು ಎಂದರೆ ನಿಮಗೆ ಅಚ್ಚರಿಯಾಗ ಬಹುದು.

ಪೋಷಕರು ತಮ್ಮ ೫ ವರ್ಷ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಅಡಿಯಲ್ಲಿ ಪ್ರತಿ ವರ್ಷ ೧.೫ ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿದರೆ, ೧೫ ವರ್ಷ ಆದಾಗ 22.5 ಲಕ್ಷ ರುಪಾಯಿ ಒಟ್ಟು ಕಟ್ಟಿದಂತಾಗುತ್ತದೆ. ವಾರ್ಷಿಕ ಸರಾಸರಿ ಶೇ. ೮.೨ರ ಬಡ್ಡಿ ದರದ ಅಧಾರದಲ್ಲಿ ನಿಮ್ಮ ಹೂಡಿಕೆ ೨೧ ವರ್ಷದಲ್ಲಿ ೭೦ ಲಕ್ಷ ರುಪಾಯಿಗೆ ಬೆಳೆದಿರುತ್ತದೆ. ಹಾಗಾದರೆ ವರ್ಷಕ್ಕೆ ೬ ಪರ್ಸೆಂಟ್ ಹಣದುಬ್ಬರದ ಲೆಕ್ಕಾಚಾರದಲ್ಲಿ ೨೧ ವರ್ಷದ ಬಳಿಕ ೭೦ ಲಕ್ಷದ ಖರೀದಿ ಸಾಮರ್ಥ್ಯವು ಇವತ್ತಿನ ೨೦-೨೨ ಲಕ್ಷಕ್ಕೆ ಸಮಾನವಲ್ಲವೇ ಎಂದು ನೀವು ಕೇಳಬಹುದು.

ಆದರೂ ಇದು ಜಾಣ್ಮೆಯ ನಿರ್ಧಾರ ಎನ್ನಬಹುದು. ಏಕೆಂದರೆ ಸುಕನ್ಯಾ ಸಮೃದ್ಧಿಗೆ ಕೇಂದ್ರ ಸರಕಾರದ ಬೆಂಬಲ ವಿದ್ದು ಅತ್ಯಂತ ಸುರಕ್ಷಿತವಾಗಿದೆ. ಆದ್ದರಿಂದ ಮಗಳ ಭವಿಷ್ಯಕ್ಕೆ ಸುಭದ್ರ ಬುನಾದಿ ಹಾಕಲು ಇದು ಸೂಕ್ತ ಆಯ್ಕೆ ಎನ್ನಬಹುದು.

ಕುಟುಂಬವೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯ ಬಹುದು. ಅವಳಿ ಅಥವಾ ತ್ರಿವಳಿ ಮಕ್ಕಳಿದ್ದರೆ ವಿಶೇಷ ಕಂಡೀಶನ್ ಅಡಿಯಲ್ಲಿ ಎರಡಕ್ಕಿಂತ ಹೆಚ್ಚು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಅಂಚೆ ಕಚೇರಿಗಳಲ್ಲಿ, ಪ್ರಮುಖ ಬ್ಯಾಂಕುಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಸೌಲಭ್ಯವಿದೆ. ಅದನ್ನು ಪಡೆದುಕೊಳ್ಳಬಹುದು.

ಚಿನ್ನ-ಬೆಳ್ಳಿಯಲ್ಲಿ ಹೂಡಿಕೆ: ಕಳೆದ ಒಂದು ವರ್ಷದಲ್ಲಿ ಚಿನ್ನ 68 ಪರ್ಸೆಂಟ್ ಹಾಗೂ ಬೆಳ್ಳಿ 82 ಪರ್ಸೆಂಟ್ ರಿಟರ್ನ್ ಕೊಟ್ಟಿರುವುದರಿಂದ ನಿಮಗೆ ಈ ಎರಡು ಅಮೂಲ್ಯ ಲೋಹ ಗಳಲ್ಲಿ ಇನ್ವೆ ಮಾಡಬೇಕು ಎಂಬ ಉದ್ದೇಶ ಇರಬಹುದು. ಆದರೆ ಇವೆರಡೂ ದುಬಾರಿಯಲ್ಲವೇ ಎನ್ನಿಸಬಹುದು.

ಆದರೆ ಮ್ಯೂಚುವಲ್ ಫಂಡ್‌ಗಳ ಮೂಲಕ ಸಣ್ಣ ಮೊತ್ತ ದಿಂದ ಚಿನ್ನ-ಬೆಳ್ಳಿಗಳಲ್ಲಿ ಹೂಡಿಕೆ ಮಾಡಬಹುದು. ಪ್ರತಿ ತಿಂಗಳೂ ಕೇವಲ ೧೦೦ ರುಪಾಯಿಗಳ ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಹೂಡಿಕೆ ಆರಂಭಿಸಬಹುದು. ಗೋಲ್ಡ್ ಮತ್ತು ಸಿಲ್ವರ್ ಮ್ಯೂಚುವಲ್ ಫಂಡ್‌ಗಳಿಗೆ ಉದಾ ಹರಣೆಗಳು ಇಲ್ಲಿವೆ- ಮೋತಿಲಾಲ್ ಓಸ್ವಾಲ್ ಗೋಲ್ಡ್ ಆಂಡ್ ಸಿಲ್ವರ್ ಇಟಿಎಫ್ ಎಫ್ ಆಂಡ್ ಎಫ್ ಫಂಡ್‌, ಎಡಿಲ್ವೈಸ್ ಗೋಲ್ಡ್ ಆಂಡ್ ಸಿಲ್ವರ್ ಇಟಿಎಫ್‌ ಎಫ್ ಒಎಫ್ ಫಂಡ್‌, ಮಿರಾಯ್ ಅಸೆಟ್ ಗೋಲ್ಡ್ ಸಿಲ್ವರ್ ಪ್ಯಾಸಿವ್ ಎಫ್‌ ಒಎಫ್, ಕೋಟಕ್ ಗೋಲ್ಡ್ ಅಂಡ್ ಸಿಲ್ವರ್ ಫಂಡ್‌.