ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾ ಕಂಡಂತೆ ಯಡಿಯೂರಪ್ಪನವರು

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿ ಯಲ್ಲಿ ಅತ್ಯಂತ ಸಂಭ್ರಮದಿಂದ ಮೂರು ದಿನಗಳ ಕಾಲ ಫೆಬ್ರವರಿ 2011ರಲ್ಲಿ ಆಚರಿಸ ಲಾಯಿತು. (ಮೂರು ದಿನ ಸೇರಿ) ಅಂದಾಜು ಹದಿನೈದು ಲಕ್ಷ ಜನರು ಇದರಲ್ಲಿ ಭಾಗಿಯಾಗಿ ಸಂಭ್ರಮಿ ಸಿದ್ದೂ ರಾಜ್ಯದ ಇತಿಹಾಸದಲ್ಲಿಯೇ ಪ್ರಪ್ರಥಮ ವೆಂದೆನಿಸಿತು. ಇದು ಯಡಿಯೂರಪ್ಪನವರ ಅಪಾರ ಕನ್ನಡ ಪ್ರೀತಿಯ ಮತ್ತೊಂದು ಝಲಕ್.

ನಾ ಕಂಡಂತೆ ಯಡಿಯೂರಪ್ಪನವರು

-

Profile
Ashok Nayak May 9, 2026 3:21 PM

ಮನು ಬಳಿಗಾರ್‌, ನಿಕಟಪೂರ್ವ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್

ಸುಮಾರು 34 ವರ್ಷದ ಹಿಂದಿನ ಮಾತು. ನಾನಾಗ ಗ್ರಾಮೀಣಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದ ನನ್ನ ಕೊಠಡಿಗೆ, ಶಾಸಕರಾಗಿದ್ದ ಯಡಿಯೂರಪ್ಪನವರು ನೇರವಾಗಿ ಬಂದವರೇ ಧನ್ಯವಾದಗಳು ಎಂದು ಹೇಳುತ್ತ ತಮ್ಮ ಬಲಗೈ ಮುಂದೆ ಮಾಡಿದ್ದರು.

ಅದಾಗಲೇ ಆನೇಕ ಹೋರಾಟಗಳಲ್ಲಿ ನಾಯಕತ್ವ ವಹಿಸಿ, ಶಾಸನಸಭೆಯಲ್ಲಿ ರೈತರ, ಬಡವರ ಪರವಾಗಿ ಗಟ್ಟಿ ಧ್ವನಿ ಎತ್ತಿ ಹೆಸರು ಮಾಡಿದ್ದ ಅವರನ್ನು ಕಂಡ ನಾನು ಎದ್ದು ನಿಂತು ಅವರ ಕೈ ಕುಲುಕಿದೆ. ಇದೆಲ್ಲದಕ್ಕೂ ಕಾರಣವಿತ್ತು.

ಶಿಕಾರಿಪುರ ತಾಲೂಕಿನ ಕುಡಿಯುವ ನೀರು ಸರಬರಾಜು ಯೋಜನೆಗೆ ಮಂತ್ರಿ ಎಂ.ವೈ. ಘೋರ್ಪಡೆಯವರು ಮಂಜೂರಾತಿ ನೀಡಿದ್ದರು. ಕಡತ ಬಂದ ಎರಡೇ ದಿನಗಳಲ್ಲಿ ನಾನು ಅದನ್ನು ಸಚಿವರಿಗೆ ಸಲ್ಲಿಸಿ ಅನುಮೋದನೆ ಪಡೆಯುವಲ್ಲಿ ಸಫಲನಾಗಿದ್ದೆ. ಅವರ ಆಪ್ತ ಸಹಾಯಕನ ಮೂಲಕ ಇದನ್ನು ತಿಳಿದುಕೊಂಡಿದ್ದರೇನೋ ಯಡಿಯೂರಪ್ಪನವರು ಮುಂದುವರೆದು, ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ. ಆಗ ನಿಮ್ಮಂತಹವರಿಗಾಗಿ ಹುಡುಕಾಡುತ್ತಿರುತ್ತೇವೆ ಧನ್ಯವಾದ ಎಂದು ಹೇಳಿ ಮರಳಿ ಹೋಗಿದ್ದರು. ಅವರು ಬಂದಾಗ ಮಂತ್ರಿಗಳ ಇಡೀ ಕಚೇರಿಯಲ್ಲಿ ಉಂಟಾದ ಸಂಚಲನ ಇನ್ನೂ ನನ್ನ ಕಣ್ಣೆದುರು ಹಾಗೆಯೇ ಇವೆ.

ಇದನ್ನೂ ಓದಿ: Celebration of Yediyurappa: ಪಕ್ಷ ಕಟ್ಟಿದ ಧೀಮಂತ ನಾಯಕ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಸಾವಿರ ಮಂದಿ : ಸಿ.ಮುನಿರಾಜು

ತಮ್ಮ ಜನರ ಬಗ್ಗೆ ಅವರಿಗಿರುವ ಕಾಳಜಿ, ಕಳಕಳಿ, ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿ ಬಗೆಗಿನ ಅವರ ಪ್ರೀತ್ಯಾದಾರ ಬೇರೆಯವರಿಗೂ ಮಾದರಿಯಾಗುವಂತಹವು ಎಂದೇ ನನ್ನ ಅನಿಸಿಕೆ. ಯಡಿಯೂರಪ್ಪನವರು ಮುಂಗೋಪಿ, ಸಿಡುಕು ಸ್ವಭಾವದವರು ಎನ್ನುವವರಿಗೆ ನಾನು ಹೇಳುವದಿಷ್ಟೆ ಬೇಗ ಬೇಗ ಕೆಲಸ ಮಾಡಬೇಕು, ವೃಥಾ ಕಡತ ಇಟ್ಟುಕೊಳ್ಳಬಾರದು, ಕಾನೂನಿನಡಿಯಲ್ಲಿ ಸಕಾರಾತ್ಮಕ ಚಿಂತನೆ ಮಾಡಿ ರಾಜ್ಯದ ಜನರ ಕೆಲಸ ಪೂರೈಸಿ‌ ಕೊಡಬೇಕು.

ಮುಂದೆ ಹಲವಾರು ವರ್ಷಗಳ ನಂತರ ನಾನು ರಾಷ್ಟ್ರಪತಿ ಆಡಳಿತ (2007)ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮತ್ತು ನಿರ್ದೇಶಕ ಎಂದು ಕೆಲಸ ಮಾಡುವ ಅವಕಾಶ ಒದಗಿ ಬಂತು. ಆ ನಂತರ 4-5 ತಿಂಗಳಲ್ಲಿ ಚುನಾವಣೆ ನಡೆದು ಯಡಿಯೂರಪ್ಪ ನವರು (2008) ಮುಖ್ಯಮಂತ್ರಿಗಳಾದರು.

ಯೋಗಾ ಯೋಗ ವೆಂಬಂತೆ ಕನ್ನಡ ಸಂಸ್ಕೃತಿ ಇಲಾಖೆಯೂ ಮುಖ್ಯಮಂತ್ರಿಗಳ ಕಡೆಯೇ ಇದ್ದು ಬಿಟ್ಟಿತು. ನೇರವಾಗಿ ಅವರ ಅಧೀನದಲ್ಲಿಯೇ ಕೆಲಸ ಮಾಡುವ ಸಂದರ್ಭವದು. ನನಗಂತೂ ಸಂತೋಷವೇ ಆಗಿತ್ತು. ಅವರೊಡನೆ ಅನೇಕ ಆತ್ಮೀಯ ಕ್ಷಣಗಳು ಸಹಜ ವಾಗಿಯೇ ದೊರೆಯುತ್ತಿದ್ದವು.

2008ರ ರಾಜ್ಯೋತ್ಸವದ ಸಂದರ್ಭವದು. ಅರ್ಹರ ಆಯ್ಕೆ ಆಗುತ್ತಿರುವಾಗಲೇ ಕೇವಲ ಚಿನ್ನದ ಪದಕ ಮಾತ್ರ ಇದ್ದ ಪ್ರಶಸ್ತಿ ಜತೆ ತಕ್ಷಣ ತಲಾ ಒಂದು ಲಕ್ಷ ರುಪಾಯಿಯ ಗೌರವ ಧನವನ್ನೂ ಮಂಜೂರು ಮಾಡಿದರು ಯಡಿಯೂರಪ್ಪನವರು. 2010ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಯಡಿಯೂರಪ್ಪನವರು, ಗೋವಿಂದ ಕಾರಜೋಳ ಅವರಿಗೆ ಹಂಚಿಕೆ ಮಾಡಿದರು.

ಕಾರಜೋಳ ಅವರು ಈ ಇಲಾಖೆಗೆ ಹೇಳಿ ಮಾಡಿಸಿದಂತಹ ಸುಸಂಸ್ಕೃತ ವ್ಯಕ್ತಿ. ಇವರ ಅವಧಿಯಲ್ಲಿಯೂ ಕೂಡ ಮೇಲೆ ವಿವರಿಸಿದ ಎಲ್ಲ ಕೆಲಸ ಕಾರ್ಯಗಳು ಅತ್ಯಂತ ಯಶಸ್ವಿ ಯಾಗಿ ಅನುಷ್ಠಾನಗೊಂಡವು. ರಾಜ್ಯಾದ್ಯಂತ ನಾಲ್ಕುನೂರಕ್ಕೂ ಹೆಚ್ಚು ಕನ್ನಡ ಸಂಸ್ಕೃತಿ ಭವನಗಳನ್ನು ಹೊಸದಾಗಿ ನಿರ್ಮಿಸಲು ಅನುದಾನವನ್ನು ನೀಡಲಾಯಿತು. ಇದೂ ಕೂಡ ಆ ಇಲಾಖೆಯಲ್ಲಿ ದಾಖಲಾರ್ಹವಾದ ಕಾರ್ಯಕ್ರಮವಾಯಿತು.

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿ ಯಲ್ಲಿ ಅತ್ಯಂತ ಸಂಭ್ರಮದಿಂದ ಮೂರು ದಿನಗಳ ಕಾಲ ಫೆಬ್ರವರಿ 2011ರಲ್ಲಿ ಆಚರಿಸ ಲಾಯಿತು. (ಮೂರು ದಿನ ಸೇರಿ) ಅಂದಾಜು ಹದಿನೈದು ಲಕ್ಷ ಜನರು ಇದರಲ್ಲಿ ಭಾಗಿಯಾಗಿ ಸಂಭ್ರಮಿ ಸಿದ್ದೂ ರಾಜ್ಯದ ಇತಿಹಾಸದಲ್ಲಿಯೇ ಪ್ರಪ್ರಥಮ ವೆಂದೆನಿಸಿತು. ಇದು ಯಡಿಯೂರಪ್ಪನವರ ಅಪಾರ ಕನ್ನಡ ಪ್ರೀತಿಯ ಮತ್ತೊಂದು ಝಲಕ್.

ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದ್ದಾಗಿನ ಇನ್ನೊಂದು ಸಿಹಿ ನೆನಪನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸುತ್ತದೆ. ಕಡಕವೊಂದನ್ನು ಮುಖ್ಯಮಂತ್ರಿಗಳಿಗೆ ತೋರಿಸಿ, ಅವರ ರೇಸ್ ಕೋರ್ಸ್ ರಸ್ತೆಯಲ್ಲಿನ ಗೃಹ ಕಚೇರಿಯಿಂದ ನಾನು ಹೊರಟು ನಿಂತಾಗ ಸಾಯಂಕಾಲ 4 ಗಂಟೆ ದಾಟಿತ್ತು.

ಒಳಗಡೆಯಿಂದ ಮುಖ್ಯ ಮಂತ್ರಿಗಳ ಆಪ್ತ ಸಹಾಯಕ ನನ್ನಲ್ಲಿಗೆ ಬಂದು ಮತ್ತೆ 5.30ಕ್ಕೆ ಬರಬೇಕಂತೆ ಸರ್ ಅಂದಾಗ ನಾನು ಓಹ್ ಈಗಾಗಲೇ ನಾಲ್ಕು ಘಂಟೆ ದಾಟಿದೆ. ಇಲ್ಲೂ (ವಿಧಾನಸೌಧ, ಬಹುಮ ಹಡಿ ಕಟ್ಟಡ ಇತ್ಯಾದಿ) ತಿರುಗಾಡಿಕೊಂಡು ಬರುತ್ತೇವೆ ಎಂದು ತ್ತರಿಸಿದೆ. ತಕ್ಷಣ ಆತ ಇಲ್ಲ ಸರ್ ನಾಳೆ ಬೆಳಗಿನ 5.30ಕ್ಕೆ ಅಂತೆ ಎಂದಾಗ ನನಗೆ ಅತೀ ಆಶ್ಚರ್ಯವೇ ಆಯಿತು.

ಅಷ್ಟು ಬೇಗ? ಎಂಬ ನನ್ನ ಪ್ರಶ್ನೆಗೆ ಓ ನೀವು ಬನ್ನಿ ಎಂದು ಹೇಳಿ ಅವರು ಒಳ ನಡೆದಿದ್ದರು. ನಮ್ಮ ಮನೆಯಿಂದ ಇಲ್ಲಿಗೆ ಬರಲು ಒಂದು ಗಂಟೆ ಸಮಯ ಬೇಕು. ಆದ್ದರಿಂದ ನಾನು ಬೆಳಿಗ್ಗೆ 4ಕ್ಕೇ ಹೊರಟು ಐದು ಗಂಟೆಗೆ ತಲುಪಿದಾಗ ನನಗೆ ದಿಗ್ಧಮೆ ಮಾನ್ಯ ಮುಖ್ಯಮಂತ್ರಿ ಗಳು ಅದಾಗಲೇ ತಯಾರಾಗಿ ದಿನಪತ್ರಿಕೆ ಓದುತ್ತಿದ್ದಾರೆ ಎಂಬುದನ್ನು ತಿಳಿದಾಗ!

ಐದೂ ಕಾಲಿಗೇ ನನಗೆ ಬುಲಾವ್ ಬಂತು. ಕಡತದ ಕೆಲಸ ಮುಗಿಸಿ ಕಾಫಿ ಕುಡಿದು ಹೊರ ಬಿದ್ದಾಗ ಬೆಳಗಿನ 5.35 ಆ ವಯಸ್ಸಿನಲ್ಲೂ ಕಿಂಚಿತ್ತೂ ಬಾಡದ ಉತ್ಸಾಹ, ಚೇತೋಹಾರಿ ಮನಸ್ಸು, ಕೆಲಸದ ನಿಷ್ಠೆ ಯಡಿಯೂರಪ್ಪನವರ ಇಡೀ ಜೀವನ ವೈಶಿಷ್ಟ್ಯ ವೆನಿಸಿವೆ. ಅವರ ಕಾರ್ಯವೈಖರಿಯ ಬಗ್ಗೆ ಒಂದಿಬ್ಬರು ಗಣ್ಯರು ನನಗೆ ಹೇಳಿದ ಕೆಲ ಸಂಗತಿಗಳನ್ನು ಇಲ್ಲಿ ಮೆಲಕು ಹಾಕುವದು ಸೂಕ್ತವೆನಿಸುತ್ತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಜೊತೆ ಇತ್ತೀಚೆಗೆ ನಾಲ್ಕು ದಿನ ಪ್ರವಾಸ ಮಾಡುವ ಯೋಗ ನನ್ನದಾಗಿತ್ತು. ಹಾಗೆಯೇ ನಾನು ಈ ಲೇಖನ ಬರೆಯುವು ದಾಗಿಯೂ ಅವರ ಒಂದೆರಡು ಅನುಭವಗಳನ್ನು ಹಂಚಿಕೊಳ್ಳ ಬೇಕಾಗಿಯೂ ಕೇಳಿಕೊಂಡೆ. ಅದ್ಯಾವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಂಬಂಧ ಯಡಿಯೂರಪ್ಪನವರನ್ನು ಕಾಣಲು ಹೋದದ್ದು ಮೊದಲ ಭೇಟಿಯಲ್ಲಿಯೇ ಬಿ.ಎಸ್. ಯಡಿಯೂರಪ್ಪನವರು ಈ ಕಾರ್ಯಕ್ಕೆ ಒಪ್ಪಿಗೆ ನೀಡಿ ತಕ್ಷಣ 2 ಕೋಟಿ ರು. ಮಂಜೂರು ಮಾಡಿದ್ದು ಎಲ್ಲ ನೆನಪಿಸಿಕೊಂಡು ಅವರ ಕ್ರಿಯಾಶೀಲತೆ ಅದ್ಭುತವಾದದ್ದು ಹೃದಯ ವೈಶಾಲ್ಯ ಬೆರಗೊಳಿಸುವಂತಹದ್ದು ಎಂದರು.

ಪೂರ್ಣಚಂದ್ರ ತೇಜಸ್ವಿ ಮತ್ತು ತಾವು ಜೊತೆಯಲ್ಲಿ ಹೋಗಿ ಭೆಟ್ಟಿಯಾಗಿ ತಿರುಗಿ ಬರುವಾಗ ಬಿ.ಎಸ್.ಯಡಿಯೂರಪ್ಪನವರು ಬಾಗಿಲವರೆಗೂ ಬಂದು ಬೀಳ್ಕೊಟ್ಟಿದ್ದು ತಮ್ಮ ನೆನಪಲ್ಲಿ ಸದಾ ಇರುವಂತಹದು ಎಂದು ಮೆಲುಕು ಹಾಕಿದರು. ಆ ಮನುಷ್ಯನ ಕ್ರಿಯಶೀಲತೆಯೇ ಕ್ರಿಯಾಶೀಲತೆ. ಆದಕ್ಕಾರೂ ಸರಿಸಾಟಿಯಿಲ್ಲ ಎನ್ನುತ್ತಾರವರು.