Vishweshwar Bhat Column: ಶ್ರದ್ಧಾಂಜಲಿಗೆ ಜೀವಂತಿಕೆ
‘ದಿ ಎಕಾನಾಮಿ’ ಪತ್ರಿಕೆಯ ಶ್ರದ್ಧಾಂಜಲಿ ವಿಭಾಗವು (Obituary) ಕೇವಲ ಸಾವಿನ ದಾಖಲೆಯಾಗಿ ಉಳಿಯದೇ, ಮಾನವನ ಬದುಕಿನ ವೈವಿಧ್ಯ ಮತ್ತು ನಿಗೂಢವನ್ನು ಅರ್ಥಮಾಡಿಕೊಳ್ಳುವ ಒಂದು ತಾತ್ವಿಕ ಕಿಟಕಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಅಂಕಣವನ್ನು ಬರೆಯುವ ಲೇಖಕರು ಮೃತರ ಜೀವನವನ್ನು ಕೇವಲ ಬಾಹ್ಯ ಸಾಧನೆಗಳ ಅಳತೆಗೋಲಿನಿಂದ ಅಳೆಯುವುದಿಲ್ಲ. ಬದಲಿಗೆ, ಒಬ್ಬ ವ್ಯಕ್ತಿಯನ್ನು ಆತನ ವೃತ್ತಿ ಅಥವಾ ಸಾಮಾಜಿಕ ಸ್ಥಾನಮಾನಕ್ಕಿಂತ ಮಿಗಿಲಾಗಿ ರೂಪಿಸಿದ ಆಂತರಿಕ ಪ್ರೇರಣೆಗಳು ಯಾವುವು ಎಂಬುದನ್ನು ಶೋಧಿಸುತ್ತಾರೆ.
-
ಸಂಪಾದಕರ ಸದ್ಯಶೋಧನೆ
‘ದಿ ಎಕಾನಾಮಿ’ ಪತ್ರಿಕೆಯ ಶ್ರದ್ಧಾಂಜಲಿ ವಿಭಾಗವು (Obituary) ಕೇವಲ ಸಾವಿನ ದಾಖಲೆಯಾಗಿ ಉಳಿಯದೇ, ಮಾನವನ ಬದುಕಿನ ವೈವಿಧ್ಯ ಮತ್ತು ನಿಗೂಢವನ್ನು ಅರ್ಥಮಾಡಿಕೊಳ್ಳುವ ಒಂದು ತಾತ್ವಿಕ ಕಿಟಕಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಅಂಕಣವನ್ನು ಬರೆಯುವ ಲೇಖಕರು ಮೃತರ ಜೀವನವನ್ನು ಕೇವಲ ಬಾಹ್ಯ ಸಾಧನೆಗಳ ಅಳತೆಗೋಲಿನಿಂದ ಅಳೆಯುವುದಿಲ್ಲ. ಬದಲಿಗೆ, ಒಬ್ಬ ವ್ಯಕ್ತಿಯನ್ನು ಆತನ ವೃತ್ತಿ ಅಥವಾ ಸಾಮಾಜಿಕ ಸ್ಥಾನಮಾನಕ್ಕಿಂತ ಮಿಗಿಲಾಗಿ ರೂಪಿಸಿದ ಆಂತರಿಕ ಪ್ರೇರಣೆಗಳು ಯಾವುವು ಎಂಬುದನ್ನು ಶೋಧಿಸುತ್ತಾರೆ. ಇದರಿಂದಾಗಿ ಪ್ರತಿ ವಾರ ಪ್ರಕಟವಾಗುವ ಈ ಒಂದು ಪುಟವು ಮಾನವ ಸ್ವಭಾವದ ಅಧ್ಯಯನದಂತೆ ಭಾಸವಾಗುತ್ತದೆ. ಈ ಸಂಸ್ಮರಣೆಗಳ ಹಿಂದಿರುವ ಸಂಶೋಧನಾ ಪ್ರಕ್ರಿಯೆಯು ಅತ್ಯಂತ ಆಳವಾಗಿಯೂ ಕುತೂಹಲಕಾರಿಯಾಗಿಯೂ ಇರುತ್ತದೆ.
ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ನಿಧನದ ಸುದ್ದಿಗಾಗಿ ಮೊದಲೇ ಸಿದ್ಧಪಡಿಸಿಟ್ಟ ಲೇಖನಗಳನ್ನು ಬಳಸಲಾಗುತ್ತದೆ. ಆದರೆ ‘ದಿ ಎಕಾನಾಮಿ’ನ ಅನಾಮಧೇಯ ಲೇಖಕರು ಮೃತರ ಕುಟುಂಬಸ್ಥರು, ಆಪ್ತ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅವರೊಂದಿಗೆ ಒಡನಾಡಿದ ಸಾಮಾನ್ಯ ಜನರನ್ನು ಸಂಪರ್ಕಿಸಿ, ಸಾರ್ವಜನಿಕರಿಗೆ ತಿಳಿಯದ ಸಣ್ಣಪುಟ್ಟ ಸಂಗತಿಗಳನ್ನು ಸಂಗ್ರಹಿಸುತ್ತಾರೆ.
ಇದನ್ನೂ ಓದಿ: Vishweshwar Bhat Column: ಮಾಜಿ ಮುಖ್ಯಮಂತ್ರಿಗಳ ಜನತಾ ಪರಿವಾರದ ನೆನಪು
ಆ ವ್ಯಕ್ತಿಗೆ ಇಷ್ಟವಾಗುತ್ತಿದ್ದ ಚಹಾದ ರುಚಿಯಿಂದ ಹಿಡಿದು, ಅವರು ಸಂಕಷ್ಟದ ಸಮಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳವರೆಗೆ ಪ್ರತಿಯೊಂದು ಸೂಕ್ಷ್ಮ ವಿವರವನ್ನೂ ಹೆಕ್ಕಿ ತೆಗೆಯ ಲಾಗುತ್ತದೆ. ಪತ್ರಿಕೆಯ ಮೂಲ ಸಿದ್ಧಾಂತವಾದ ‘ಬೈಲೈನ್ ರಹಿತ’ (ಅನಾಮಧೇಯ) ಬರವಣಿಗೆಯು ಈ ಸಂಸ್ಮರಣಾ ವಿಭಾಗಕ್ಕೆ ವಿಶೇಷ ಶಕ್ತಿಯನ್ನು ನೀಡಿದೆ.
ಲೇಖಕನ ಹೆಸರು ಇಲ್ಲದಿರುವ ಕಾರಣ, ಓದುಗನ ಗಮನವು ಬರಹಗಾರನ ಪಾಂಡಿತ್ಯದ ಕಡೆಗೆ ಹರಿಯದೆ ನೇರವಾಗಿ ಮೃತ ವ್ಯಕ್ತಿಯ ಬದುಕಿನ ಮೇಲೆ ಕೇಂದ್ರೀಕೃತವಾಗುತ್ತದೆ. ಸಂಪಾದಕೀಯ ತಂಡವು ಬಳಸುವ ‘ನಾವು’ ಅಥವಾ ತಟಸ್ಥ ನಿರೂಪಣಾ ಶೈಲಿಯು, ಇಡೀ ಜಗತ್ತೇ ಆ ವ್ಯಕ್ತಿಗೆ ಗೌರವಯುತ ವಿದಾಯ ಹೇಳುತ್ತಿರುವ ಭಾವನೆಯನ್ನು ಮೂಡಿಸುತ್ತದೆ.
ವೈಯಕ್ತಿಕ ಭಾವೋದ್ವೇಗಗಳಿಗೆ ಅವಕಾಶ ನೀಡದೇ, ಸತ್ಯವನ್ನು ಕಲಾತ್ಮಕವಾಗಿ ಮಂಡಿಸುವ ಈ ಶಿಸ್ತು ಓದುಗರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಈ ಅಂಕಣದಲ್ಲಿ ಕಾಣಸಿಗುವ ವ್ಯಕ್ತಿಗಳ ವೈವಿಧ್ಯವು ಬೆರಗುಗೊಳಿಸುವಂಥದ್ದು.
ಒಂದು ವಾರ ಜಾಗತಿಕ ಯುದ್ಧವೊಂದರ ತಂತ್ರಗಾರಿಕೆ ರೂಪಿಸಿದ ಸೇನಾಧಿಕಾರಿಯ ಕಥೆಯಿದ್ದರೆ, ಮರು ವಾರ ಅಮೆಜಾನ್ ಕಾಡಿನ ಅಪರೂಪದ ಚಿಟ್ಟೆಗಳನ್ನು ಸಂರಕ್ಷಿಸಿದ ಪರಿಸರವಾದಿಯ ಬದುಕು ಅನಾವರಣಗೊಳ್ಳುತ್ತದೆ. ಮತ್ತೊಂದು ವಾರ ಅಂತಾರಾಷ್ಟ್ರೀಯ ಗೂಢಚಾರನ ರಹಸ್ಯ ಕಾರ್ಯಾ ಚರಣೆಗಳ ವಿವರಗಳಿದ್ದರೆ, ಇನ್ನೊಂದು ವಾರ ಜಪಾನ್ನ ಹಳ್ಳಿಯೊಂದರಲ್ಲಿ ಶತಮಾನಗಳ ಹಳೆಯ ಕರಕುಶಲ ಕಲೆಯನ್ನು ಉಳಿಸಿದ ವೃದ್ಧೆಯ ಜೀವನಗಾಥೆ ಇರುತ್ತದೆ.
ಈ ವೈವಿಧ್ಯವು ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಅಸಾಧಾರಣ ಮನುಷ್ಯರು ಬದುಕಿzರೆ ಎಂಬ ಸತ್ಯವನ್ನು ಓದುಗರಿಗೆ ಮನದಟ್ಟು ಮಾಡಿಕೊಡುತ್ತದೆ. ಕೊನೆಯ ಪುಟದಲ್ಲಿರುವ ಈ ಅಂಕಣದ ವಿನ್ಯಾಸ ಮತ್ತು ಶೀರ್ಷಿಕೆಗಳ ಆಯ್ಕೆಯೂ ಅಷ್ಟೇ ವಿಶಿಷ್ಟವಾಗಿರುತ್ತದೆ. ಲೇಖನದ ಶೀರ್ಷಿಕೆಯಾಗಿ ಕೇವಲ ವ್ಯಕ್ತಿಯ ಹೆಸರನ್ನು ನೀಡದೇ, ಅವರ ಬದುಕಿನ ಸಾರವನ್ನು ಒಂದೇ ಸಾಲಿನಲ್ಲಿ ಹಿಡಿದಿಡುವ ಮಾರ್ಮಿಕ ಉಪಶೀರ್ಷಿಕೆಯನ್ನು ನೀಡಲಾಗುತ್ತದೆ.
ಉದಾಹರಣೆಗೆ, ವ್ಯಕ್ತಿಯೊಬ್ಬರು ತಮ್ಮ ಜೀವನದಲ್ಲಿ ಮಾಡಿದ ಅತ್ಯಂತ ವಿಭಿನ್ನ ಕೆಲಸವನ್ನು ಸೂಚಿಸುವ ಒಂದು ಸಣ್ಣ ವಾಕ್ಯವು ಓದುಗರಲ್ಲಿ ತಕ್ಷಣವೇ ಕುತೂಹಲ ಕೆರಳಿಸುತ್ತದೆ. ಪುಟದ ಮೇಲ್ಭಾಗದಲ್ಲಿ ಮೃತರ ಒಂದು ಅಪರೂಪದ, ಸಹಜ ಭಾವಚಿತ್ರವನ್ನು ಪ್ರಕಟಿಸಲಾಗುತ್ತದೆ, ಅದು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಿರುತ್ತದೆ. ಸಾವಿನ ನಂತರವೂ ಬದುಕಿನ ಹಾಸ್ಯಪ್ರeಯನ್ನು ಜೀವಂತವಾಗಿರಿಸುವ ಕಲೆ ಈ ಪತ್ರಿಕೆಗೆ ಸಿದ್ಧಿಸಿದೆ.
ಜೀವನದ ಗಂಭೀರ ಘಟನೆಗಳನ್ನು ವಿವರಿಸುವಾಗಲೂ, ಮೃತರಲ್ಲಿದ್ದ ಹಾಸ್ಯ ಪ್ರಜ್ಞೆ, ಅವರ ತಮಾಷೆಯ ಸ್ವಭಾವ ಅಥವಾ ಅವರು ಎದುರಿಸಿದ ವಿಚಿತ್ರ ಸನ್ನಿವೇಶಗಳನ್ನು ಲಘುವಾಗಿ, ಸೌಮ್ಯ ವಾಗಿ ದಾಖಲಿಸ ಲಾಗುತ್ತದೆ. ಇದು ಸಾವಿನ ಸುತ್ತ ಇರುವ ಭಯ ಮತ್ತು ವಿಷಾದವನ್ನು ಕಡಿಮೆ ಮಾಡಿ, ಬದುಕನ್ನು ಪೂರ್ಣವಾಗಿ ಆಸ್ವಾದಿಸಿದ ವ್ಯಕ್ತಿಯೊಬ್ಬನ ನೆನಪನ್ನು ಸಿಹಿಯಾಗಿ ಉಳಿಸುತ್ತದೆ. ಅತ್ಯಂತ ಕಠಿಣ ಬದುಕು ಸಾಗಿಸಿದವರ ಕಥೆಯಲ್ಲೂ ಒಂದು ಆಶಾವಾದಿ ಕಿರಣವನ್ನು ಹುಡುಕುವ ಗುಣ ಈ ಬರಹಗಳಲ್ಲಿದೆ.