ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Interview with Historian Ravi Hunj: ಬಸವಣ್ಣ ಸನಾತನ ಧರ್ಮ ವಿರೋಧಿ ಅಲ್ಲವೇ ಅಲ್ಲ! ʼಲಿಂಗಾಯತ ವೀರಶೈವʼ ಬೇರೆಯಲ್ಲ

ಖ್ಯಾತ ಇತಿಹಾಸ ಸಂಶೋಧಕ, ವಿಶ್ವವಾಣಿ ದಿನಪತ್ರಿಕೆಯ ಅಂಕಣಕಾರ ರವಿ ಹಂಜ್ ಅವರ ಬಹು ನಿರೀಕ್ಷಿತ, ವಿಶ್ವವಾಣಿ ಪುಸ್ತಕ ಪ್ರಕಾಶನದ ನೂತನ ಕೃತಿ ‘ಬಸವ ಮಂಟಪ’ ಬಿಡುಗಡೆಗೆ ಮುನ್ನವೇ ಭಾರಿ ಬೇಡಿಕೆಯೊಂದಿಗೆ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವವಾಣಿ ಟಿವಿ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಲೇಖಕ ರವಿ ಹಂಜ್ ಅವರು ಹಲವಾರು ಸೂಕ್ಷ್ಮ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಬಸವಣ್ಣ ಸನಾತನ ಧರ್ಮ ವಿರೋಧಿ ಅಲ್ಲವೇ ಅಲ್ಲ!

-

ಸಾಣೇಹಳ್ಳಿ ಸ್ವಾಮೀಜಿಗೆ ಕುಟುಕಿದ್ದ ಬಸವ ಮಂಟಪ ಕೃತಿಕಾರ ರವಿ ಹಂಜ್

ಸಂದರ್ಶನ: ಕೇಶವ ಪ್ರಸಾದ್‌ ಬಿ.

ಬೆಂಗಳೂರು: ಖ್ಯಾತ ಇತಿಹಾಸ ಸಂಶೋಧಕ, ವಿಶ್ವವಾಣಿ ದಿನಪತ್ರಿಕೆಯ ಅಂಕಣಕಾರ ರವಿ ಹಂಜ್ ಅವರ ಬಹು ನಿರೀಕ್ಷಿತ, ವಿಶ್ವವಾಣಿ ಪುಸ್ತಕ ಪ್ರಕಾಶನದ ನೂತನ ಕೃತಿ ‘ಬಸವ ಮಂಟಪ’ ಬಿಡುಗಡೆಗೆ ಮುನ್ನವೇ ಭಾರಿ ಬೇಡಿಕೆಯೊಂದಿಗೆ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವವಾಣಿ ಟಿವಿ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಲೇಖಕ ರವಿ ಹಂಜ್ ಅವರು ಹಲವಾರು ಸೂಕ್ಷ್ಮ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಸ್ಫೋಟಕ ಸಂದರ್ಶನದ ಸಾರ ಇಲ್ಲಿದೆ.

ಪ್ರಶ್ನೆ: ಬಸವ ಮಂಟಪ ಕೃತಿಯ ಹೂರಣವೇನು? ಅದರಲ್ಲಿ ಏನಿದೆ?

- ಕರ್ನಾಟಕದಲ್ಲಿ 2018ರಲ್ಲಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದ ತೀವ್ರವಾಯಿತು. ಅನಾದಿಯಿಂದಲೂ ಇದು ಒಂದೇ, ಬೇರೆ ಬೇರೆಯಲ್ಲ ಎಂದು ನಾವೆಲ್ಲ ನಂಬಿದ್ದೆವು. ಹೀಗಿರುವಾಗ ಭಿನ್ನವೆಂದು ಹೇಳಿದವರು ಯಾರು ಎಂದು ಅನ್ವೇಷಿಸಿದೆ. ಆಗ ಸಂಶೋಧಕ ಎಂ.ಎಂ.ಕಲಬುರ್ಗಿ ಯವರು ಹೇಳಿದ್ದು ಎಂಬುದು ಗೊತ್ತಾಯಿತು. ಕರ್ನಾಟಕ ಸಂಶೋಧನೆಯ ಪಿತಾಮಹ ಅವರು ಎಂದೇ ಹೇಳಿರುವುದು ಹೆಸರಾಗಿದ್ದ ನಿಜವಿರಬಹುದು ಎಂದು ನಾನೂ ಬಹುಕಾಲ ನಂಬಿದ್ದೆ. ಆದರೆ ಸ್ವಲ್ಪ ಕೆದಕಿ ನೋಡೋಣವೆಂದು ನೋಡಿದರೆ, ಇದು ಅಪ್ಪಟ ಸುಳ್ಳು ಸಂಶೋಧನೆ ಎಂಬ ಆಘಾತಕಾರಿ ವಿಷಯ ತಿಳಿಯಿತು.

ಇದನ್ನೂ ಓದಿ: Ravi Hunj Column: ವೀರಶೈವ ಪದ ತೆಗೆದು ಲಿಂಗಾಯತ ಹಾಕಿದರೆ ಸಾಲದು !

ಹೀಗಾಗಿ ಆಳಕ್ಕಿಳಿದು ಸಂಶೋಧನೆ ಮಾಡಿದೆ. ಆಗ ಇದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ ಮಂಡಎಂಬುದು ಸಾಕ್ಷಿ ಸಮೇತ ಖಚಿತವಾಯಿತು. ಈ ಬಗ್ಗೆ ಕೆಲ ಲೇಖನಗಳನ್ನು ಬರೆದು ‘ಬಸವರಾಜಕಾರಣ’ ಎಂಬ ಪುಸ್ತಕ ರಚಿಸಿದೆ. ಬಳಿಕ ಸುಮ್ಮನಾಗಿದ್ದೆ. ಕ್ರಮೇಣ ಪ್ರತ್ಯೇಕ ಧರ್ಮ ಕುರಿತ ವಿವಾದವೂ ತಾತ್ಕಾಲಿಕವಾಗಿ ತಣ್ಣಗಾಯಿತು. ಅಮೆರಿಕದ ಪ್ರಜೆಯಾಗಿರುವ ನನಗೂ ಮೀಸಲಾತಿಯಿಂದ ಏನೂ ಆಗಬೇಕಾದ್ದು ಇರಲಿಲ್ಲ. ಸರಕಾರವೂ ಬದಲಾಯಿತು. ಹೀಗಿದ್ದರೂ, ವಿವಾದ ಹೊಗೆಯಾಡುತ್ತಿತ್ತು. ಓಲೈಕೆಯ ರಾಜಕಾರಣ ಇದ್ದಾಗ ಭಿನ್ನಮತ ಸಹಜ. ಸಮಾಜಕ್ಕೆ ಅದು ಆಗುತ್ತಿತ್ತು. ಜನ ಜಾಗೃತಿಯೂ ನಡೆಯುತ್ತಿತ್ತು. ಈ ನಡುವೆ ಸಾಣೇಹಳ್ಳಿಯ ಮಹಾನ್ ಪಂಡಿತರು ಗಣಪತಿ ಪೂಜೆ ಮಾಡಬಾರದು, ಮೂರ್ತಿ ಪೂಜೆ ಮಾಡಬಾರದು, ಕುಂಕುಮ ಇಟ್ಟುಕೊಳ್ಳಬಾರದು, ಶಾಸ್ತ್ರಗಳ ಆಚರಣೆಗಳನ್ನು ಮಾಡ ಬಾರದು ಎಂದು ಏನೇನೋ ಹೇಳುತ್ತಿದ್ದರು. ಆದರೆ ಅವರದ್ದೇ ಸಾಣೆಹಳ್ಳಿಯಲ್ಲಿ ಅವರದ್ದೇ ಗುರುವಿನ ಮೂರ್ತಿ ಮಾಡಿ, ತೇರಿನಲ್ಲಿಟ್ಟು ಪ್ರತಿ ವರ್ಷ ರಥೋತ್ಸವ ಮಾಡುತ್ತಾರೆ. ಭದ್ರಾ ಜಲಾಶಯದಿಂದ ಸಣ್ಣ ಹಳ್ಳಕ್ಕೆ ನೀರು ಬಿಟ್ಟರೂ ಬಾಗಿನ ಅರ್ಪಿಸುತ್ತಾರೆ. ದುಂದು ವೆಚ್ಚದ ಮದುವೆ ಸಮಾರಂಭಗಳಿಗೆ ಹೋಗಿ ದಕ್ಷಿಣೆ ಕೊಟ್ಟರೆ ಅಕ್ಕಿ ಕಾಳು ಹಾಕಿ ಆಶೀರ್ವದಿಸುತ್ತಾರೆ. ಆದರೆ ಭಕ್ತರಿಗೆ ಅಕ್ಕಿ ಕಾಳು ಹಾಕಬೇಡಿ ಎನ್ನುತ್ತಾರೆ. ಈ ರೀತಿಯ ದ್ವಂದ್ವಗಳನ್ನು ಸಂದರ್ಶನ ಕಂಡಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದೆ. ಬಳಿಕ ವಿಶ್ವವಾಣಿಯಲ್ಲಿ ಲೇಖನವೊಂದನ್ನು ಬರೆದೆ. ಸಂಪಾದಕ ವಿಶ್ವೇಶ್ವರ ಭಟ್ ಅವರ ಪ್ರೋತ್ಸಾಹದಿಂದಾಗಿ ಇದು ನಿರಂತರ ಲೇಖನಗಳಿಗೆ ಕಾರಣವಾಯಿತು. ಬಸವ ಮಂಟಪ ಕೃತಿ ರಚನೆಗೆ ಪ್ರೇರಣೆಯಾಯಿತು. ಈ ಪುಸ್ತಕ ನಾನು ಬರೆದೆ ಎನ್ನುವುದಕ್ಕಿಂತ ವಿಚಾರವೇ ಬರೆಸಲ್ಪಟ್ಟಿತು ಎನ್ನಬಹುದು.

ಪ್ರಶ್ನೆ: ಹರಪ್ಪ- ಮೊಹೆಂಜೆ ದಾರೊ ಕಾಲದಿಂದ ವೀರಶೈವ- ಲಿಂಗಾಯತ ತತ್ತ್ವ ?

ನಾನು ಏನೇ ಬರೆದರೂ, ಪ್ರತಿಯೊಂದು ವಾಕ್ಯಕ್ಕೂ ವೈಜ್ಞಾನಿಕ ಮಾನ್ಯತೆ ಪಡೆದಿರುವ ಪುರಾವೆ ಗಳು, ಸಾಕ್ಷ್ಯಾಧಾರಗಳು ಅದಕ್ಕಿವೆ. ಹರಪ್ಪ ಮೊಹೆಂಜದಾರೊ ಉತ್ಖನನದ ಸಂದರ್ಭ, ವೀರಶೈವ-ಲಿಂಗಾ ಯತರು ಕೊರಳಲ್ಲಿ ಧರಿಸುವ ಚಿಕ್ಕ ಚಿಕ್ಕ ಲಿಂಗಗಳು ಸಿಕ್ಕಿವೆ. ಆದ್ದರಿಂದ ಈ ತತ್ತ್ವಕ್ಕೆ, ಪದ್ಧತಿಗೆ ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸ ಇರುವುದು ಸ್ಪಷ್ಟ?

ಪ್ರಶ್ನೆ: ಈ ಪುಸ್ತಕವನ್ನು ಯಾರು ಮುಖ್ಯವಾಗಿ ಓದಬೇಕು?

- ಬಸವ ಮಂಟಪ ಕೃತಿಯನ್ನು ಪ್ರತಿಯೊಬ್ಬ ಕನ್ನಡಿ ಗರೂ ಮನೆಯಲ್ಲಿ ಇಟ್ಟುಕೊಳ್ಳಬೇಕು. ಓದಬೇಕು. ಶೋಧ್ ಗಂಗಾ ಎಂಬ ವೆಬ್‌ಸೈಟ್‌ನಲ್ಲಿ ಭಾರತದ ಪಿಎಚ್‌ಡಿ ಸಂಶೋಧನಾ ಪ್ರಬಂಧಗಳನ್ನು ಓದ ಬಹುದು. ಆ ಸಾವಿರಾರು ಪ್ರಬಂಧಗಳಲ್ಲಿ ಜಾಗತಿಕವಾಗಿ ಗಮನ ಸೆಳೆಯುವ ಮಹತ್ತ್ವದ ಸಂಶೋಧನೆ ಬೆರಳೆಣಿಕೆ ಯಷ್ಟೇ ಇರುವುದು. ಉಳಿದವುಗಳು ಕಾಟಾಚಾರಕ್ಕೆ ಇವೆ. ಅದನ್ನು ಹುಡುಕಾಡಿ ಸಿಗದಿದ್ದಾಗ ನಾನೇ ಬರೆಯಬೇಕಾಯಿತು.

ಹೀಗಾಗಿ ವಿದ್ಯಾರ್ಥಿಗಳು ನಿಜವಾದ ಸಂಶೋಧನೆಯ ಗ್ರಂಥ ರಚನೆಯ ಸ್ವರೂಪದ ಬಗ್ಗೆ ತಿಳಿಯಲೂ ಓದಬಹುದು. ಇದರಲ್ಲಿ ವೀರಶೈವ ಲಿಂಗಾಯತ ಪ್ರಮುಖ ವಸ್ತು. ಈ ಗ್ರಂಥದ ಲೇಖನಗಳ ಶೈಲಿಯಲ್ಲಿ ವಿಡಂಬನೆ, ವಿಷಯ ಗಾಂಭೀರ್ಯ, ಹಾಸ್ಯ, ಕುತೂಹಲಕರ ನಿರೂಪಣೆ ಇದೆ. ಪುಸ್ತಕ ಓದಿದರೆ ಜ್ಞಾನ ಪಡೆಯುವಂತಿರಬೇಕು. ಅದು ಇಲ್ಲಿ ಸಿಗುತ್ತದೆ.

600 ಪುಟಗಳ ಬಸವ ಮಂಟಪದ ಸ್ವರೂಪ ಹೇಗಿದೆ?

ಅಂಕಣ ಬರಹಗಳನ್ನು ಪರ್ವಗಳಾಗಿ ವಿಂಗಡಿಸಲಾಗಿದೆ. ಬಸವ ಪೂರ್ವ ವೀರಶೈವ ಧರ್ಮ, ಬಸವಕಾಲೀನ ವೀರಶೈವ ಧರ್ಮ, ಬಸವೋತ್ತರ ವೀರಶೈವ ಧರ್ಮ, ಪ್ರಶ್ಕಷಿಪ್ತ ಲಿಂಗಾಯತ ಧರ್ಮ, ಭಂಜಕ ಪ್ರಣೀತ ಅಧರ್ಮ ಎಂಬ ಐದು ಪರ್ವಗಳು ಇವೆ.

ಈ ಅಧ್ಯಾಯಗಳಲ್ಲಿ ಬಸಣ್ಣನವರಿಗಿಂತ ಮೊದಲು ಮತ್ತು ನಂತರ ವೀರಶೈವ ಧರ್ಮ ಹೇಗೆ ಬೆಳೆದು ಬಂತು? ಸಮಕಾಲೀನ ಪರಿಸ್ಥಿತಿ ಏನು ಎಂಬುದನ್ನು ಸಾಕ್ಷಿ ಸಮೇತ ವಿವರಿಸಲಾಗಿದೆ. ಬಸವಣ್ಣ ನವರ ಚಳವಳಿ ಏಕೆ ಆಯಿತು? ನಿಜಕ್ಕೂ ಆಯಿತೇ? ಎಂದು ವಿಶ್ಲೇಷಿಸಲಾಗಿದೆ. ನೋಡಿ, ಭಾರತಕ್ಕೆ ಹತ್ತನೇ ಶತಮಾನದಲ್ಲಿ ಇಸ್ಲಾಮಿಕ್ ದಾಳಿಯ ಬಳಿಕ ಬೌದ್ಧರು, ಜೈನ ಮುನಿ, ಹಿಂದೂ ಪೂಜಾರಿ ಗಳನ್ನು ಕೊಲ್ಲುತ್ತಾರೆ. ಹಿಂದೂ ಧರ್ಮದ ನಿರ್ವಾತ ಸ್ಥಿತಿಯಿಂದ ಹೊರಬರಲು, ಪೂಜಾರಿಗಳ ಮಕ್ಕಳನ್ನೇ ಪೂಜಾರಿಗಳಾಗಿ ಮುಂದುವರಿ ಸಲು ನಿರ್ಧರಿಸಲಾಯಿತು. ಧರ್ಮ ರಕ್ಷಣೆಗೋಸ್ಕರ ಅದು ಆಗಿನ ಕಾಲದ ಅನಿವಾರ್ಯತೆಯಾಗಿತ್ತು. ಹುಟ್ಟಿ ನಿಂದಲೇ ಜಾತಿ ಎಂಬ ಪರಿಕಲ್ಪನೆ ಆಗ ಪ್ರಚಲಿತವಾಗಿ ಮುಂದುವರಿ ಯಿತು. ಇದನ್ನು ದಕ್ಷಿಣದಲ್ಲಿ ಬಸವಣ್ಣ ನವರು ಪ್ರಶ್ನಿಸಿದರೇ ಹೊರತು, ಅವರು ಸನಾತನ ಧರ್ಮದ ವಿರೋಧಿಯಲ್ಲ, ಅವರು ಸುಧಾರಕರು. ಆದರೆ ಧರ್ಮ ವಿರೋಧಿಯಾಗಿರಲಿಲ್ಲ.

ಬಿಡುಗಡೆಗೆ ಮುನ್ನ 3000 ಕೃತಿ ಪ್ರೀ-ಆರ್ಡರ್

ಬಸವ ಮಂಟಪ ಕೃತಿ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿಗಳು ಮಾರಾಟವಾಗಿವೆ. ವಿಶ್ವವಾಣಿ ಮಾಧ್ಯಮದ ವ್ಯಾಪಕ ಜನಪ್ರಿಯತೆಯೂ ಕೃತಿ ಈ ರೀತಿಯಲ್ಲಿ ಓದುಗರ ಕೈ ಸೇರಲು ಕಾರಣವಾಗಿದೆ ಎಂದು ರವಿ ಹಂಜ್ ಅವರು ವಿವರಿಸಿದ್ದಾರೆ.