ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ

ತಮ್ಮದೇನೂ ತಪ್ಪಿಲ್ಲ ಎಂದು ಈ ವ್ಯಕ್ತಿ ಅಲವತ್ತುಕೊಂಡರೂ ಬ್ಯಾಂಕ್ ಅಧಿಕಾರಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಷ್ಟರೊಳಗೆ ಅವರು ವಕೀಲರ ಸಹಾಯ ಪಡೆದಿದ್ದರು. ರಾಜಕುಮಾರ್ ಖರ್ಚು ಮಾಡಿರುವ ಹಣ ವಾಪಸು ಕೊಡಬೇಕಿಲ್ಲ, ಬದಲಾಗಿ ಅವರಿಗೆ ಒಂದು ಕಾರ್ ಲೋನ್ ಆಫರ್ ಕೊಡೋ ಣ ಎಂದು ಬ್ಯಾಂಕಿನವರು ಆಗಲೇ ನಿರ್ಧರಿಸಿದ್ದರು

ತಜ್ಞರ ಸಲಹೆ ತೀರಾ ಅಗತ್ಯ

ಸಂಪಾದಕರ ಸದ್ಯಶೋಧನೆ

ಮ್ಯಾನೇಜ್‌ಮೆಂಟ್ ಗುರು ರಘುರಾಮನ್ ಅವರು ಕೆಲವು ತಿಂಗಳ ಹಿಂದೆ ಬರೆದಿದ್ದನ್ನು ಇಲ್ಲಿ ಉಲ್ಲೇ ಖಿಸುತ್ತಿರುವೆ. ರಾಜಕುಮಾರ್ ಎಂಬವರು ತಮ್ಮ ಟ್ಯಾಕ್ಸಿಯನ್ನು ಚೆನ್ನೈ ನಗರದ ಹೊರ ವಲಯ ದಲ್ಲಿ ನಿಲ್ಲಿಸಿದ್ದರು. ಸಂಜೆ ಐದರ ಪೀಕ್ ಅವರ್ ಪ್ರಾರಂಭವಾಗುವ ಮುನ್ನ ಅಲ್ಲಿಂದ ಹೊರಡುವ ಯೋಚನೆ ಮಾಡಿದ್ದರು. ಜತೆಗೆ ಹಗುರಾಗಿ ಏನಾದರೂ ತಿನ್ನಬೇಕೆನಿಸಿತ್ತು. ಅವರ ಬ್ಯಾಂಕ್ ಖಾತೆ ಯಲ್ಲಿದ್ದುದು 105 ರುಪಾಯಿ ಮಾತ್ರ. ಅವರ ಮಿತ್ರರೊಬ್ಬರು ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿ ಒಂದು ಸಣ್ಣ ಪ್ರದೇಶವನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿ ಅವರಿಗೆ ಟ್ಯಾಕ್ಸಿ ಬಿಸಿನೆಸ್ ಚೆನ್ನಾಗಿ ನಡೆಯುತ್ತಿತ್ತು. ಆ ದಿನಗಳಲ್ಲಿ ದೂರದ ಟ್ಯಾಕ್ಸಿ ಪ್ರಯಾಣಗಳಲ್ಲಿ ಹೆಚ್ಚಿನ ಲಾಭವಿರುತ್ತಿರಲಿಲ್ಲ, ಏಕೆಂದರೆ ಅಂಥ ಪ್ರಯಾಣಗಳಲ್ಲಿ ಇಂಧನಕ್ಕೆ ಹೆಚ್ಚು ಖರ್ಚಾಗುತ್ತಿತ್ತು. ಹೀಗಾಗಿ ಹೆಚ್ಚಿನ ಟ್ಯಾಕ್ಸಿ ಡ್ರೈವರುಗಳು ಬಹುಬೇಗ ತಮ್ಮ ಮೂಲನೆಲೆಗೆ ವಾಪಸಾಗಲು ಅನುಕೂಲವಾಗುವಂಥ ಕಿರು ಪ್ರಯಾಣಗಳಿಗೆ ಆದ್ಯತೆ ಕೊಡುತ್ತಿದ್ದರು.

ಅವರಿಗೆಲ್ಲ ತಿಂಗಳ ಕಮಾಯಿಯ ಕುರಿತಾಗಿ ಚಿಂತೆ ಇದ್ದೇ ಇರುತ್ತಿತ್ತು. ಅವರಿಗೆ ಕಿರು ನಿದ್ರೆಯೊಂದು ಬಂತು. ಅಷ್ಟರಲ್ಲಿ ಅವರ ಬ್ಯಾಂಕ್ ಖಾತೆ ಇರುವ ತಮಿಳು ನಾಡು ಮಕಂಟೈಲ್ ಬ್ಯಾಂಕಿನಿಂದ ಒಂದು ಮೆಸೇಜ್ ಕೂಡ ಬಂದಿತ್ತು. ಅವರಿಗೆ ತಮ್ಮ ಖಾತೆಯಲ್ಲಿ ಹೆಚ್ಚು ದುಡ್ಡಿಲ್ಲ ಎಂಬುದು ಮೊದಲೇ ಗೊತ್ತಿತ್ತು. ಆದರೆ ಬಂದ ಮೆಸೇಜ್ ಪ್ರಕಾರ ಅವರ ಖಾತೆಗೆ 900000001 ರು. ಜಮಾ ಆಗಿತ್ತು. ಅವರು ಕಣ್ಣರಳಿಸಿ ನೋಡಿದರು.

ಇದನ್ನೂ ಓದಿ: Tamannaah Bhatia: ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿ ತಮನ್ನಾಗೆ 6.2 ಕೋಟಿ ಸಂಭಾವನೆ; ಎಂ.ಬಿ.ಪಾಟೀಲ್‌ ಹೇಳಿದ್ದೇನು?

ಹೌದು, ಬಂದಿರುವುದು 9 ಸಾವಿರ ಕೋಟಿ ರುಪಾಯಿ ಹಣ. ಒಮ್ಮೆಗೆ ಅವರ ತಲೆ ಗಿರ್ರೆಂದು ಸುತ್ತ ತೊಡಗಿತು. ಇದು ಹೇಗೆ ಎಂಬುದು ಅವರಿಗೆ ಗೊತ್ತೇ ಆಗಲಿಲ್ಲ. ಒಂದು ಕೋಟಿಗೆ 7 ಸೊನ್ನೆ ಎಂದು ಯಾರೋ ಹೇಳಿದ್ದು ಅವರಿಗೆ ನೆನಪಾಯಿತು. ಮೂಲತಃ ಅವರ ಖಾತೆಯಲ್ಲಿದ್ದುದು 105 ರುಪಾಯಿ ಮಾತ್ರ. ಹತ್ತು ನಿಮಿಷಗಳಲ್ಲಿ ಅವರು ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದರು. ವಿಚಾರದ ಸತ್ಯತೆ ಅರಿಯಲು ಅವರು ಒಬ್ಬ ಮಿತ್ರರಿಗೆ 21 ಸಾವಿರ ರುಪಾಯಿ ಟ್ರಾನ್ಸ್ ಫರ್ ಮಾಡಿದರು, ಅದು ಮಿತ್ರನಿಗೆ ತಲುಪಿತ್ತು ಕೂಡ.

ಅದಾಗಲೇ ಅವರ ಖಾತೆಗೆ ಹಣ ಬಂದು 28 ನಿಮಿಷಗಳಾಗಿದ್ದವು. ಅವರ ಖುಷಿಗೆ ಪಾರವೇ ಇರಲಿಲ್ಲ. ಇಷ್ಟೊಂದು ದುಡ್ಡಿಟ್ಟುಕೊಂಡು ಏನು ಮಾಡಬಹುದು ಎಂಬ ಬಗ್ಗೆ ಅವರ ಮನಸ್ಸಿನಲ್ಲಿ ಅದಾಗಲೇ ಹಲವು ಯೋಜನೆಗಳು ಸುಳಿದಿದ್ದವು. ಹೀಗೆ ಹಣ ವರ್ಗಾವಣೆ ಆದ 30 ನಿಮಿಷಗಳ ಒಳಗಾಗಿ ಅವರಿಗೆ ಬ್ಯಾಂಕ್ ಅಧಿಕಾರಿಗಳಿಂದ ಕರೆ ಬರಲು ಶುರುವಾಯಿತು.

ಅವರು ಕೂಡಲೇ ಹಣ ವಾಪಸು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಕೇವಲ 30 ನಿಮಿಷ ಗಳ ಅವಧಿಗೆ 9 ಸಾವಿರ ಕೋಟಿ ರುಪಾಯಿ ಮಾಲೀಕರಾಗಿದ್ದರು. ಅದರಲ್ಲವರು 21 ಸಾವಿರ ರುಪಾಯಿ ಖರ್ಚು ಮಾಡಿದ್ದರು ಕೂಡ. ಮರುದಿನ ಬೆಳಗ್ಗೆ ಬ್ಯಾಂಕಿನವರು ಪೊಲೀಸರಿಗೆ ದೂರಿತ್ತು, ಈ ವ್ಯಕ್ತಿ ಬಳಸಿಕೊಂಡಿರುವ 21 ಸಾವಿರ ರುಪಾಯಿ ವಾಪಸು ಕಟ್ಟುವಂತೆ ಕೇಳಿಕೊಂಡಿದ್ದರು.

ತಮ್ಮದೇನೂ ತಪ್ಪಿಲ್ಲ ಎಂದು ಈ ವ್ಯಕ್ತಿ ಅಲವತ್ತುಕೊಂಡರೂ ಬ್ಯಾಂಕ್ ಅಧಿಕಾರಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಷ್ಟರೊಳಗೆ ಅವರು ವಕೀಲರ ಸಹಾಯ ಪಡೆದಿದ್ದರು. ರಾಜಕುಮಾರ್ ಖರ್ಚು ಮಾಡಿರುವ ಹಣ ವಾಪಸು ಕೊಡಬೇಕಿಲ್ಲ, ಬದಲಾಗಿ ಅವರಿಗೆ ಒಂದು ಕಾರ್ ಲೋನ್ ಆಫರ್ ಕೊಡೋಣ ಎಂದು ಬ್ಯಾಂಕಿನವರು ಆಗಲೇ ನಿರ್ಧರಿಸಿದ್ದರು. ಬ್ಯಾಂಕ್ ಖಾತೆಗಳಲ್ಲಿ ಆಗುವ ಗಡಿ ಬಿಡಿಗಳಲ್ಲಿ ಇದೂ ಒಂದು. ಇಂಥ ಘಟನೆ ನಡೆದಾಗ ಆಗುವ ತಲ್ಲಣ ಊಹಿಸುವುದಕ್ಕೂ ಅಸಾಧ್ಯ.

ಯಾರೂ ರಾಜಕುಮಾರ್ ಅವರ ನಡವಳಿಕೆಯ ಬಗ್ಗೆ ಸಂದೇಹಿಸುವುದು ಸಾಧ್ಯವಿರಲಿಲ್ಲ. ನೀವು ಎಂದಾದರೂ ಇಂಥ ವಿಚಿತ್ರ ಸನ್ನಿವೇಶ ಎದುರಿಸಿದಲ್ಲಿ, ನಿಮ್ಮ ದೃಷ್ಟಿಕೋನ ಸರಿಯಿದೆ ಎಂದಾ ದಲ್ಲಿ, ಇನ್ನೊಬ್ಬರ ದೃಷ್ಟಿಕೋನದಲ್ಲಿ ಅದು ತಪ್ಪಿರಲೂಬಹುದು. ಆಗ ಯಾರಾದರೂ ವಿಶೇಷಜ್ಞರ ನೆರವು ಪಡೆಯುವುದು ವಾಸಿ. ಇಂಥ ಸಮಸ್ಯೆಯಿಂದ ಆದಷ್ಟು ಬೇಗ ಹೊರ ಬರುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಕು.