ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwarbhat Column: ವಿಮಾನದಲ್ಲಿ ಆಹಾರ ವಿತರಣೆ

ವಿಮಾನದಲ್ಲಿ ಊಟ ವಿತರಿಸಲು ಸಾಧ್ಯವಾಗದಿರುವುದಕ್ಕೆ ಒಂದೇ ಕಾರಣವಿರುವುದಿಲ್ಲ. ಬದಲಿಗೆ, ಇದು ನೆಲದ ಮೇಲಿನ ಕಾರ್ಯಾಚರಣೆ, ಲಾಜಿಸ್ಟಿಕ್ಸ್ ಮತ್ತು ತುರ್ತು ಪರಿಸ್ಥಿತಿಗಳಿಗೆ ಸಂಬಂಧಿಸಿದ ಅನೇಕ ಸಂಕೀರ್ಣ ಕಾರಣಗಳಿಂದ ಉಂಟಾಗಬಹುದು. ಅಡುಗೆಮನೆಯಗುವ ಗೊಂದಲಗಳಿಂದ ವಿಮಾನಗಳಲ್ಲಿ ಊಟದ ವೈಫಲ್ಯ ತಲೆದೋರಬಹುದು. ‌

Vishweshwarbhat Column: ವಿಮಾನದಲ್ಲಿ ಆಹಾರ ವಿತರಣೆ

-

ಸಂಪಾದಕರ ಸದ್ಯಶೋಧನೆ

ವಿಮಾನ ಪ್ರಯಾಣದಲ್ಲಿ ಊಟ-ಉಪಾಹಾರ ವಿತರಣೆ ಅತ್ಯಂತ ಮುಖ್ಯವಾದ ಕಾರ್ಯ. ಕಾರಣ ಅದು ಕೂಡ ಪ್ರಯಾಣದ ಅನುಭವದ ಪ್ರಮುಖ ಭಾಗ. ವಿಶೇಷವಾಗಿ ದೀರ್ಘಾವಧಿಯ ಅಂತಾ ರಾಷ್ಟ್ರೀಯ ವಿಮಾನಗಳಲ್ಲಿ, ಊಟ ವಿತರಣೆಗೆ ಎಲ್ಲಿಲ್ಲದ ಮಹತ್ವವನ್ನು ನೀಡಲಾಗುತ್ತದೆ. ಒಮ್ಮೊಮ್ಮೆ ಅನಿರೀಕ್ಷಿತ ಸಮಸ್ಯೆಗಳಿಂದಾಗಿ ವಿಮಾನಯಾನ ಸಂಸ್ಥೆಗಳು ಊಟವನ್ನು ವಿತರಿಸಲು ವಿಫಲವಾದಾಗ, ಅದು ಪ್ರಯಾಣಿಕರಲ್ಲಿ ಅಸಮಾಧಾನ ಮತ್ತು ಗೊಂದಲಕ್ಕೆ ಕಾರಣವಾಗುತ್ತದೆ.

ಇಂಥ ಸಂದರ್ಭಗಳಲ್ಲಿ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಬಹಿರಂಗವಾಗಿ ಕ್ಷಮೆ ಯಾಚಿಸುವುದು, ನಷ್ಟ ಪರಿಹಾರ ನೀಡುವುದು ಮತ್ತು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದು ಸಾಮಾನ್ಯವಾಗಿದೆ. ಕೆಲವು ಸಲ ವಿಮಾನದಲ್ಲಿ ಊಟದಲ್ಲಿ ಅಸ್ತವ್ಯಸ್ತವಾಗುವುದು ಸಹಜ.

ವಿಮಾನದಲ್ಲಿ ಊಟ ವಿತರಿಸಲು ಸಾಧ್ಯವಾಗದಿರುವುದಕ್ಕೆ ಒಂದೇ ಕಾರಣವಿರುವುದಿಲ್ಲ. ಬದಲಿಗೆ, ಇದು ನೆಲದ ಮೇಲಿನ ಕಾರ್ಯಾಚರಣೆ, ಲಾಜಿಸ್ಟಿಕ್ಸ್ ಮತ್ತು ತುರ್ತು ಪರಿಸ್ಥಿತಿಗಳಿಗೆ ಸಂಬಂಧಿಸಿದ ಅನೇಕ ಸಂಕೀರ್ಣ ಕಾರಣಗಳಿಂದ ಉಂಟಾಗಬಹುದು. ಅಡುಗೆಮನೆಯಗುವ ಗೊಂದಲಗಳಿಂದ ವಿಮಾನಗಳಲ್ಲಿ ಊಟದ ವೈಫಲ್ಯ ತಲೆದೋರಬಹುದು. ‌

ಇದನ್ನೂ ಓದಿ: Vishweshwar Bhat Column: ವಿಮಾನದ ಆಂಟೆನಾಗಳು

ವಿಮಾನಯಾನ ಸಂಸ್ಥೆಗಳು ಊಟವನ್ನು ವಿಮಾನ ನಿಲ್ದಾಣದ ಸಮೀಪವಿರುವ ಬೃಹತ್ ಅಡುಗೆ ಗೃಹಗಳಿಂದ ( Flight Kitchens) ಪಡೆಯುತ್ತವೆ. ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನಲ್ಲಿ 2018ರಲ್ಲಿ ಸಂಭವಿಸಿದ ‘ಇನ್ ಫ್ಲೈಟ್-ಮೀಲ್ ಅವ್ಯವಸ್ಥೆ’ ಇದಕ್ಕೆ ಒಂದು ಪ್ರಮುಖ ಉದಾಹರಣೆ. ಅವರ ಪ್ರಮುಖ ಕ್ಯಾಟರರ್‌ನ ಸೌಲಭ್ಯದಲ್ಲಿ ಬೆಂಕಿ ಅನಾಹುತ ಸಂಭವಿಸಿದ ನಂತರ, ಏರ್‌ಲೈನ್ ತುರ್ತಾಗಿ ಬೇರೆ ಸ್ಥಳೀಯ ಮಾರಾಟಗಾರರೊಂದಿಗೆ ೩ ತಿಂಗಳ ಒಪ್ಪಂದಕ್ಕೆ ಸಹಿ ಹಾಕಿತು.

ಆದರೆ, ಈ ಹೊಸ ಮಾರಾಟಗಾರರಿಗೆ ಏಷಿಯಾನಾದಂಥ ದೊಡ್ಡ ವಿಮಾನಯಾನ ಸಂಸ್ಥೆಯ ಅಗತ್ಯತೆಗಳನ್ನು ಪೂರೈಸುವ ಸಾಮರ್ಥ್ಯವಿರಲಿಲ್ಲ. ಪರಿಣಾಮವಾಗಿ, ನೂರಾರು ವಿಮಾನಗಳು ವಿಳಂಬವಾದವು ಮತ್ತು 36 ವಿಮಾನಗಳು ಊಟವಿಲ್ಲದೇ ಹಾರಾಟ ಮಾಡಬೇಕಾಗಿ ಬಂದವು. ಈ ಘಟನೆಗಾಗಿ ಏರ್‌ಲೈನ್‌ನ ಅಧ್ಯಕ್ಷರು ಬಹಿರಂಗವಾಗಿ ಕ್ಷಮೆಯಾಚಿಸಬೇಕಾಯಿತು.

ಕೆಲವೊಮ್ಮೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಊಟವನ್ನು ರದ್ದುಗೊಳಿಸಿದ ಪ್ರಸಂಗಗಳೂ ಇವೆ. ಉದಾಹರಣೆಗೆ, ಡೆಲ್ಟಾ ಏರ್‌ಲೈನ್ಸ್ ತನ್ನ ಕ್ಯಾಟರಿಂಗ್ ಪಾಲು ದಾರರ ಅಡುಗೆಮನೆಯಲ್ಲಿ ಯುಎಸ್ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ( FDA ) ತಪಾಸಣೆಯ ಸಮಯದಲ್ಲಿ ಆಹಾರ ಸುರಕ್ಷತಾ ಸಮಸ್ಯೆಯನ್ನು ಕಂಡುಕೊಂಡ ನಂತರ 200ಕ್ಕೂ ಹೆಚ್ಚು ವಿಮಾನಗಳಲ್ಲಿ ಊಟ ಸೇವೆಯನ್ನು ರದ್ದುಗೊಳಿಸಿತ್ತು.

ಪ್ರಯಾಣಿಕರಿಗೆ ಯಾವುದೇ ಅನಾರೋಗ್ಯ ಉಂಟಾಗದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ವಿಮಾನಯಾನ ಸಂಸ್ಥೆಯು ಗಂಭೀರ ಆರ್ಥಿಕ ಸಂಕಷ್ಟ ದಲ್ಲಿರುವಾಗಲೂ ಊಟದ ಸೇವೆಯನ್ನು ರದ್ದುಗೊಳಿಸಬಹುದು. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, ಭಾರತದ ಸ್ಪೈಸ್‌ಜೆಟ್ ಏರ್‌ಲೈನ್ ತಾತ್ಕಾಲಿಕವಾಗಿ ತನ್ನ ವಿಮಾನಗಳಲ್ಲಿ ಊಟ ಮತ್ತು ಪಾನೀಯ ಗಳ ವಿತರಣೆಯನ್ನು ನಿಲ್ಲಿಸಿತ್ತು.

‘ತಾಂತ್ರಿಕ ಕಾರಣ’ಗಳನ್ನು ಉಖಿಸಿದರೂ, ಸಿಬ್ಬಂದಿಗೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಲು ಮತ್ತು ಮುಂಗಡವಾಗಿ ಬುಕ್ ಮಾಡಿದ ಊಟಕ್ಕೆ ಮರುಪಾವತಿ ಬಯಸುವವರಿಗೆ ಫೀಡ್‌ಬ್ಯಾಕ್ ಫಾರ್ಮ್‌ ಗಳನ್ನು ನೀಡಲು ಸೂಚಿಸಲಾಗಿತ್ತು. ಇದು ಏರ್‌ಲೈನ್‌ನ ಆಳವಾಗುತ್ತಿದ್ದ ಆರ್ಥಿಕ ಬಿಕ್ಕಟ್ಟಿನ ಸಂಕೇತವಾಗಿತ್ತು.

ವಿಮಾನವು ನಿಗದಿತ ಸಮಯದಲ್ಲಿ ಹೊರಡಲು ಸಿದ್ಧವಾಗಿದ್ದರೂ, ವಿಮಾನಕ್ಕೆ ಊಟದ ಟ್ರಾಲಿ ಗಳನ್ನು ಲೋಡ್ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬವಾದರೆ, ಹಾರಾಟದ ವಿಳಂಬವನ್ನು ತಪ್ಪಿಸಲು ಕೆಲವೊಮ್ಮೆ ಊಟವಿಲ್ಲದೆಯೇ ಟೇಕಾಫ್ ಮಾಡಬೇಕಾಗುತ್ತದೆ. ‌

ವಿಮಾನ ನಿಲ್ದಾಣದಲ್ಲಿ ವಿಪರೀತ ದಟ್ಟಣೆ ಇದ್ದಾಗ, ಕ್ಯಾಟರಿಂಗ್ ವಾಹನಗಳು ವಿಮಾನವನ್ನು ತಲುಪಲು ಕಷ್ಟವಾಗಬಹುದು. ವಿಮಾನಯಾನ ಸಂಸ್ಥೆಯ ಸೇವೆಯಲ್ಲಿನ ಯಾವುದೇ ವೈಫಲ್ಯವು ಗ್ರಾಹಕರ ನಂಬಿಕೆಯನ್ನು ಹಾಳುಮಾಡುತ್ತದೆ. ಊಟವನ್ನು ವಿತರಿಸಲು ಆಗದೇ ಇದ್ದಾಗ, ಏರ್‌ ಲೈನ್ ಗಳು ಸಾಮಾನ್ಯವಾಗಿ ಕ್ಷಮೆಯಾಚಿಸುತ್ತವೆ, ಇಲ್ಲವೇ ಪರಿಹಾರ ನೀಡುತ್ತವೆ.

ಊಟಕ್ಕಾಗಿ ಮುಂಗಡ ಹಣ ಪಾವತಿಸಿದ್ದಲ್ಲಿ, ಆ ಮೊತ್ತವನ್ನು ಸಂಪೂರ್ಣವಾಗಿ ಮರು ಪಾವತಿಸುತ್ತದೆ. ಕೆಲವು ಸಲ ಸ್ನ್ಯಾಕ್ಸ್ ಅಥವಾ ಲಘು ಪಾನೀಯಗಳನ್ನು ವಿತರಿಸಲು ಪ್ರಯತ್ನಿಸ ಲಾಗುತ್ತದೆ. ಸಾಮಾನ್ಯವಾಗಿ, ಏರ್‌ಲೈನ್‌ಗಳು ತೊಂದರೆಗೊಳಗಾದ ಪ್ರಯಾಣಿಕರಿಗೆ ಭವಿಷ್ಯದ ಪ್ರಯಾಣಕ್ಕಾಗಿ ರಿಯಾಯಿತಿ ವೋಚರ್‌ಗಳನ್ನು ಅಥವಾ ಅವರ ಲಾಯಲ್ಟಿ ಪ್ರೋಗ್ರಾಂಗೆ ಹೆಚ್ಚುವರಿ ಅಂಕಗಳನ್ನು ನೀಡುತ್ತವೆ.