ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Toxic Movie: ಯಶ್‌ ಕಾರಣಕ್ಕೆ ʼಟಾಕ್ಸಿಕ್‌ʼ ಚಿತ್ರ ಬಿಡುಗಡೆ ವಿಳಂಬ? ನಿರ್ದೇಶಕಿ ಜತೆ ರಾಕಿಂಗ್‌ ಸ್ಟಾರ್‌ ಮುನಿಸಿಕೊಂಡ್ರಾ?

Actor Yash: ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಪ್ಯಾನ್‌ ವರ್ಲ್ಡ್‌ ಸ್ಟಾರ್‌ ಆಗಿ ಬದಲಾದ ಯಶ್‌ ಸದ್ಯ ʼಟಾಕ್ಸಿಕ್‌ʼ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಚಿತ್ರದ ಶೂಟಿಂಗ್‌ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ. ಇದೀಗ ಚಿತ್ರದ ಬಗ್ಗೆ ಊಹಾಪೋಹ ಹರಡಿದ್ದು, ಸಿನಿಮಾತಂಡ ಸ್ಪಷ್ಟನೆ ನೀಡಿದೆ.

ʼಟಾಕ್ಸಿಕ್‌ʼ ಅಂದುಕೊಂಡ ಡೇಟ್‌ಗೆ ರಿಲೀಸ್‌ ಆಗಲ್ವಾ? ಚಿತ್ರತಂಡ ಹೇಳಿದ್ದೇನು?

ʼಟಾಕ್ಸಿಕ್‌ʼ ಚಿತ್ರದ ಪೋಸ್ಟರ್‌. -

Ramesh B Ramesh B Oct 29, 2025 5:18 PM

ಬೆಂಗಳೂರು, ಅ. 29: ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್‌ನ ಛಾಪು ಮೂಡಿಸಿದ ಹೆಮ್ಮೆಯ ಚಿತ್ರ 'ಕೆಜಿಎಫ್‌' (KGF). 4 ವರ್ಷಗಳ ಅಂತರದಲ್ಲಿ ತೆರೆ ಕಂಡ ಪಾರ್ಟ್‌ 1 ಮತ್ತು ಪಾರ್ಟ್‌ 2 ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುವ ಮೂಲಕ ಯಶ್‌ (Yash) ಎನ್ನುವ ಸೂಪರ್‌ ಸ್ಟಾರ್‌ ಉದಯಕ್ಕೆ ಕಾರಣವಾಯ್ತು. ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ ಈ ಸರಣಿ ಚಿತ್ರಗಳು 1,500 ಕೋಟಿ ರೂ.ಗಿಂತ ಹೆಚ್ಚು ದೋಚಿಕೊಂಡಿವೆ. ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಯಶ್‌ 2022ರಲ್ಲಿ ರಿಲೀಸ್‌ ಆದ ʼಕೆಜಿಎಫ್‌ 2ʼ ಬಳಿಕ ನಟಿಸುತ್ತಿರುವ ಚಿತ್ರ ʼಟಾಕ್ಸಿಕ್‌ʼ (Toxic Movie). ಘೋಷಣೆಯಾದಾಗಿನಿಂದಲೇ ಭಾರಿ ಕುತೂಹಲ ಮೂಡಿಸುತ್ತಿರುವ ಈ ಸಿನಿಮಾದ ಶೂಟಿಂಗ್‌ ಈಗಾಗಲೇ ಭರ್ಜರಿಯಾಗಿ ಸಾಗುತ್ತಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ (Geetu Mohandas) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರ ಕನ್ನಡ ಜತೆಗೆ ಇಂಗ್ಲಿಷ್‌ನಲ್ಲಿ ಮೂಡಿ ಬರುತ್ತಿದ್ದು, ಬಳಿಕ ವಿವಿಧ ಭಾಷೆಗಳಲ್ಲಿ ಡಬ್‌ ಆಗಲಿದೆ. ಈ ಮಧ್ಯೆ ಚಿತ್ರದ ಬಗ್ಗೆ ಕೆಲವೊಂದು ವದಂತಿ ಹರಿದಾಡುತ್ತಿದೆ. ಯಶ್‌ ಮತ್ತು ನಿರ್ದೇಶಕಿ ಮಧ್ಯೆ ಬಿರುಕು ಮೂಡಿದೆ, ಕೆಲವೊಂದು ಭಾಗಗಳಲ್ಲಿ ರೀಶೂಟ್‌ ಮಾಡಲಾಗುತ್ತಿದೆ ಮುಂತಾದ ಸುದ್ದಿ ಹಬ್ಬಿದ್ದು, ಈ ಬಗ್ಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.

ಬರೋಬ್ಬರಿ 600 ಕೋಟಿ ರೂ. ಬಜೆಟ್‌ನಲ್ಲಿ ʼಟಾಕ್ಸಿಕ್‌ʼ ನಿರ್ಮಾಣವಾಗುತ್ತಿದೆ ಎನ್ನಲಾಗಿದ್ದು, ಇಂಗ್ಲಿಷ್‌ನಲ್ಲೂ ಮೂಡಿ ಬರುತ್ತಿರುವ ಕಾರಣ ಹಾಲಿವುಡ್‌ ಶೈಲಿಯ ಮೇಕಿಂಗ್‌ ಒಳಗೊಂಡಿದೆ. ಇದೇ ಕಾರಣಕ್ಕೆ ಚಿತ್ರೀಕರಣ ಸ್ಪಲ್ಪ ನಿಧಾನವಾಗುತ್ತಿದ್ದು, ಇದೇ ವಿಚಾರ ಮುಂದಿಟ್ಟುಕೊಂಡು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ʼಟಾಕ್ಸಿಕ್‌ʼ ಚಿತ್ರದ ಟೀಸರ್‌:



ಈ ಸುದ್ದಿಯನ್ನೂ ಓದಿ: Toxic Movie: ಯಶ್‌ ಬರ್ತ್‌ಡೇಗೆ 'ಟಾಕ್ಸಿಕ್‌' ಸರ್ಪ್ರೈಸ್ ಗಿಫ್ಟ್- ಟೀಸರ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮ್ಯಾನರಿಸಂಗೆ ಫ್ಯಾನ್ಸ್‌ ಫುಲ್‌ ಫಿದಾ!

ʼʼಯೋಜನೆಯಂತೆಯೇ ಶೂಟಿಂಗ್‌ ಸರಾಗವಾಗಿ ನಡೆಯುತ್ತಿದೆ. ಚಿತ್ರದಲ್ಲಿ ಯಶ್‌ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಸದ್ಯ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಡಬ್ಬಿಂಗ್‌ ಕೂಡ ಆರಂಭವಾಗಿದೆʼʼ ಸಿನಿಮಾ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಯಶ್‌ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್‌ ಕೆಲಸದ ಬಗ್ಗೆ ಅಸಮಾಧಾನಗೊಂಡಿದ್ದು, ರೀ ಶೂಟ್‌ ಮಾಡಿಸುತ್ತಿದ್ದಾರೆ. ಈ ಕಾರಣಕ್ಕೆ ಶೂಟಿಂಗ್‌ ನಿಧಾನವಾಗಿ ಸಾಗುತ್ತಿದೆ. ಜತೆಗೆ ಬಜೆಟ್‌ ಕೂಡ ಜಾಸ್ತಿಯಾಗುತ್ತಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಈ ಎಲ್ಲ ಅನುಮಾನಗಳಿಗೆ ಉತ್ತರ ಸಿಕ್ಕಿದ್ದು, ಈ ಮೊದಲೇ ಪ್ರಕಟಿಸಿದಂತೆ 2026ರ ಮಾರ್ಚ್‌ 19ರಂದೇ ರಿಲೀಸ್‌ ಆಗುವುದಾಗಿ ಸ್ಪಷ್ಪಪಡಿಸಲಾಗಿದೆ.

ಗೋವಾದಲ್ಲಿ ನಡೆಯುವ ಡ್ರಗ್ಸ್‌ ಮಾಫಿಯಾದ ಸುತ್ತ ಚಿತ್ರದ ಕಥೆ ಸಾಗಲಿದ್ದು, ಭರ್ಜರಿ ಆ್ಯಕ್ಷನ್‌ ದೃಶ್ಯಗಳಿವೆ. ಬೆಂಗಳೂರು, ಮುಂಬೈ, ಗೋವಾ, ವಿದೇಶಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಜನವರಿಯಲ್ಲಿ ಹೊರಬಿದ್ದ ಹೊರಬಿದ್ದ ಟೀಸರ್‌ ದಾಖಲೆಯ ವೀಕ್ಷಣೆ ಕಂಡಿದ್ದು, ಅವರ ರೆಟ್ರೋ ಸ್ಟೈಲ್‌ಗೆ ಫ್ಯಾನ್‌ ಫಿದಾ ಆಗಿದ್ದರು. ಜತೆಗೆ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿತ್ತು.

ಬಹು ತಾರಾಗಣ

ವಿಶೇಷ ಎಂದರೆ ಈ ಚಿತ್ರದಲ್ಲಿ ವಿವಿಧ ಚಿತ್ರರಂಗದ ಖ್ಯಾತನಾಮರು ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯ ಪಾತ್ರಗಳಲ್ಲಿ ನಯನತಾರಾ, ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ಅಕ್ಷಯ್‌ ಓಬೇರಾಯ್‌, ಸುದೇವ್‌ ನಾಯರ್‌ ಸೇರಿದಂತೆ ಹಾಲಿವುಡ್‌ ಕಲಾವಿದರೂ ನಟಿಸುತ್ತಿದ್ದಾರೆ.