ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mallappa C Khodnapur Column: ಸಮಷ್ಟಿ ಭಾವದ ಸಂದೇಶ ಸಾರಿದ ಕನಕದಾಸರು

ಜಾತಿ-ಮತ, ಕುಲಗಳ ಭೇದ-ಭಾವದ ಬಗ್ಗೆ, ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯ ರಿಗೆ ಅರ್ಥವಾಗುವ ಭಾಷೆಯಲ್ಲಿ ತಮ್ಮ ಕೃತಿಗಳಲ್ಲಿ ತಿಳಿಸಿ, ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಹಾಗೂ ಮನುಜ ಕುಲವು ಸನ್ಮಾರ್ಗದತ್ತ ಸಾಗುವಂತಾಗಲು, ಸಾಮಾಜಿಕ ಪರಿವರ್ತನೆಯನ್ನು ತರಲು ಹೋರಾಡಿದ ಶ್ರೇಷ್ಠ ಸಂತರೇ ಕನಕದಾಸರು.

ಸಮಷ್ಟಿ ಭಾವದ ಸಂದೇಶ ಸಾರಿದ ಕನಕದಾಸರು

-

Ashok Nayak
Ashok Nayak Nov 8, 2025 11:08 AM

ಕನಕನಮನ

ಮಲ್ಲಪ್ಪ ಸಿ.ಖೊದ್ನಾಪುರ

(ಇಂದು ಕನಕ ಜಯಂತಿ)

ಕನಕದಾಸರು ತಮ್ಮ ಗೀತೆಯೊಂದರಲ್ಲಿ, ‘ತನುವನ್ನು ನೇಗಿಲ ಮಾಡಿ, ಹೃದಯವನ್ನು ಹೊಲವ ಮಾಡಿ, ಜ್ಞಾನವನ್ನು ಮಿಣಿ ಹಗ್ಗಮಾಡಿ, ನಿಮ್ಮ ಮನವೆಂಬ ಧಾನ್ಯವನ್ನು ಬಿತ್ತಿ ನೋಡಿರಯ್ಯಾ, ನಿಮ್ಮ ಮನದೊಳಗಿನ ಚಂಚಲವೆಂಬ ಹಕ್ಕಿಯನ್ನು ಓಡಿಸಿರಯ್ಯಾ’ ಎಂದು ಹೇಳಿದ್ದಾರೆ.

ಜಾತಿ-ಮತ, ಕುಲಗಳ ಭೇದ-ಭಾವದ ಬಗ್ಗೆ, ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯ ರಿಗೆ ಅರ್ಥವಾಗುವ ಭಾಷೆಯಲ್ಲಿ ತಮ್ಮ ಕೃತಿಗಳಲ್ಲಿ ತಿಳಿಸಿ, ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಹಾಗೂ ಮನುಜ ಕುಲವು ಸನ್ಮಾರ್ಗದತ್ತ ಸಾಗುವಂತಾಗಲು, ಸಾಮಾಜಿಕ ಪರಿವರ್ತನೆಯನ್ನು ತರಲು ಹೋರಾಡಿದ ಶ್ರೇಷ್ಠ ಸಂತರೇ ಕನಕದಾಸರು.

ಕನಕದಾಸರು 1508ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಎಂಬ ಗ್ರಾಮ ದಲ್ಲಿ ಕುರುಬ ಜನಾಂಗದ ಸುಸಂಸ್ಕೃತ ಮನೆತನದಲ್ಲಿ ಜನಿಸಿದರು. ಅವರ ತಂದೆ ಬೀರಪ್ಪ ನಾಯಕ ಮತ್ತು ತಾಯಿ ಬಚ್ಚಮ್ಮ ಅವರು ದೈವಭಕ್ತರಾಗಿದ್ದರು. ಮನೆಗೆ ಕುಲದೀಪಕ ನಾಗುವ ಒಬ್ಬ ಮಗನನ್ನು ಕರುಣಿಸು ಎಂದು ದಂಪತಿ ಹೊತ್ತ ಹರಕೆಯಂತೆ ದೇವರ ಅನುಗ್ರಹದಿಂದ ಅವರಿಗೆ ಗಂಡುಮಗು ಜನಿಸಿತು. ಆ ಮಗುವಿಗೆ ತಿಮ್ಮಪ್ಪ ಎಂದು ನಾಮ ಕರಣ ಮಾಡಿದರು. ಆ ತಿಮ್ಮಪ್ಪನೇ ಮುಂದೆ ಶ್ರೇಷ್ಠ ಸಂತ ಕನಕದಾಸ ಎನಿಸಿಕೊಂಡಿದ್ದು.

ಶ್ರೀಕೃಷ್ಣನ ಪರಮಭಕ್ತ

ಶ್ರೀ ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಕನಕದಾಸರು ಮಧ್ವ ತತ್ವಶಾಸವನ್ನು ಕಲಿತು ಉಡುಪಿಯ ಶ್ರೀಕೃಷ್ಣನ ಪರಮಭಕ್ತರಾದರು. ಕಾಗಿನೆಲೆ ಆದಿಕೇಶವನ ಅಂಕಿತ ನಾಮದೊಂದಿಗೆ ತಮ್ಮ ಕೀರ್ತನೆ, ದಾಸವಾಣಿ ಮತ್ತು ತತ್ವಪದಗಳನ್ನು ರಚಿಸಿ ಜಗತ್ತಿ ನಾದ್ಯಂತ ಹೆಸರುವಾಸಿಯಾಗಿ ‘ದಾಸರಲ್ಲಿ ಕವಿ, ಕವಿಗಳಲ್ಲಿ ದಾಸ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Leena Kamath Joshi Column: ಹಿಂದೂಗಳನ್ನು ನಿದ್ದೆಯಿಂದ ಬಡಿದೆಬ್ಬಿಸಿದಾಕೆಯ ದಾರುಣ ಜೀವನದ ಕಥೆ

ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟಹೆಜ್ಜೆ ಇಟ್ಟ ಕನಕದಾಸರು, ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮುಂತಾದ ಪ್ರಾಕಾರಗಳಲ್ಲಿ ಕೈಯಾಡಿಸಿದರು. ‘ಮೋಹನದಾಸ ತರಂಗಿಣಿ’, ‘ನಳಚರಿತ್ರೆ’, ‘ಹರಿಭಕ್ತಸಾರ’ ಎಂಬ ಮಹೋನ್ನತ ಕಾವ್ಯ ಗಳನ್ನು ನೀಡಿ, ನಿತ್ಯಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದಂಥ ಮೌಲ್ಯಗಳನ್ನು ಉಪದೇಶಿ ಸಿದರು.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ?’ ಎಂಬ ಗೀತೆಯ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದರು. ಯಾವುದೇ ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ‘ವಿಶ್ವಮಾನವ ಪರಿಕಲ್ಪನೆ’ಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿವೆ. ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವೋಪದೇಶಗಳು, ಜೀವನದ ಮೌಲಿಕ ಸಂದೇಶಗಳು ಅತ್ಯಗತ್ಯವಾಗಿವೆ.

‘ಬಟ್ಟೆ ನೀರೊಳಗೆ ಅದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮ ಕ್ರೋಧಾದಿಗಳನ್ನು ಬಿಟ್ಟು ನಡೆದರೆ ಅದುವೇ ಮಡಿ’ ಎಂದು ಹೇಳುವ ಮೂಲಕ ಕನಕದಾಸರು, ಮನುಷ್ಯನು ಅರಿಷಡ್ವರ್ಗಗಳನ್ನು ತ್ಯಜಿಸಿ ಬದುಕಿದರೆ ಮಾತ್ರವೇ ಅದು ನಿಜವಾದ ಜೀವನ ಎಂದಿದ್ದಾರೆ. ಕನಕದಾಸರ ಜೀವನ ನಮಗೆ ಮಾದರಿಯಾಗಲಿ. ಅವರ ತತ್ವಗಳು, ಚಿಂತನೆ, ವಿಚಾರಧಾರೆ, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಕಾಳಜಿಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಲಿ.

ಇಂಥ ಮಹಾಪುರುಷರ ಜಯಂತಿಯ ಆಚರಣೆಯು ಕೇವಲ ಸಾಂಕೇತಿಕವಾಗಿ ನಡೆಯದೆ, ಒಂದು ದಿನಕ್ಕೆ ಮಾತ್ರವೇ ಸೀಮಿತವಾಗದೆ ಅಥವಾ ಅದನ್ನು ಕಾಟಾಚಾರಕ್ಕೆ ಆಚರಿಸದೆ, ನಿಜಾರ್ಥದಲ್ಲಿ ಅವರ ಸಂದೇಶಗಳನ್ನು ಮತ್ತು ಮೌಲಿಕ ಉಪದೇಶಗಳನ್ನು ನಾವು ಅಳವಡಿಸಿಕೊಳ್ಳುವಂತಾಗಬೇಕು. ಆಗಲೇ ನಮ್ಮ ಬದುಕು ಸಾರ್ಥಕ...