Roopa Gururaj Column: ರಾಮಚರಿತ ಮಾನಸ: ಜ್ಞಾನದ ಸೂರ್ಯಾಸ್ತ ಮತ್ತು ರಾಮನ ಸಂದೇಶ
ರಾಮನು ತನ್ನ ತಮ್ಮ ಲಕ್ಷ್ಮಣನನ್ನು ಕರೆದು ಹೀಗೆ ಹೇಳಿದನು: “ಲಕ್ಷ್ಮಣ, ಅಲ್ಲಿ ನೋಡು, ರಾವಣನು ಪ್ರಾಣಬಿಡುತ್ತಿದ್ದಾನೆ. ಅವನು ರಾಕ್ಷಸನಾಗಿರಬಹುದು, ಆದರೆ ಅವನಂಥ ಮೇಧಾವಿ, ಶಿವಭಕ್ತ ಮತ್ತು ರಾಜನೀತಿಜ್ಞ ಈ ಭೂಮಿಯ ಮೇಲೆ ಮತ್ತೊಬ್ಬನಿಲ್ಲ. ಅವನು ಇತಿಹಾಸದ ಪುಟ ಸೇರುವ ಮುನ್ನ, ಅವನಲ್ಲಿರುವ ಜ್ಞಾನದ ಒಂದು ಕಿಡಿಯನ್ನಾದರೂ ನೀನು ಪಡೆದುಕೊಳ್ಳ ಬೇಕು.
-
ಒಂದೊಳ್ಳೆ ಮಾತು
ಯುದ್ಧಭೂಮಿಯಲ್ಲಿ ರಾವಣನು ರಕ್ತಸಿಕ್ತನಾಗಿ ಬಿದ್ದಿದ್ದಾನೆ. ಅವನ ಹತ್ತು ತಲೆಗಳ ಅಹಂಕಾರ ಮಣ್ಣು ಪಾಲಾಗಿದೆ. ಆದರೆ, ಆ ದೇಹದೊಳಗೆ ದಶೋಪನಿಷತ್ತುಗಳ ಸಾರವಿತ್ತು, ನಾಲ್ಕು ವೇದಗಳ ಪಾಂಡಿತ್ಯವಿತ್ತು. ದೂರದಿಂದಲೇ ಈ ದೃಶ್ಯವನ್ನು ನೋಡಿದ ಶ್ರೀರಾಮನು ಮರುಕಪಟ್ಟನು. ಶತ್ರುವಿನ ಸಾವು ಆತನಿಗೆ ವಿಜಯದ ಹಮ್ಮು ತರಲಿಲ್ಲ, ಬದಲಾಗಿ ಅತೀವ ವಿಷಾದವನ್ನು ತಂದಿತು.
ರಾಮನು ತನ್ನ ತಮ್ಮ ಲಕ್ಷ್ಮಣನನ್ನು ಕರೆದು ಹೀಗೆ ಹೇಳಿದನು: “ಲಕ್ಷ್ಮಣ, ಅಲ್ಲಿ ನೋಡು, ರಾವಣನು ಪ್ರಾಣಬಿಡುತ್ತಿದ್ದಾನೆ. ಅವನು ರಾಕ್ಷಸನಾಗಿರಬಹುದು, ಆದರೆ ಅವನಂಥ ಮೇಧಾವಿ, ಶಿವಭಕ್ತ ಮತ್ತು ರಾಜನೀತಿಜ್ಞ ಈ ಭೂಮಿಯ ಮೇಲೆ ಮತ್ತೊಬ್ಬನಿಲ್ಲ. ಅವನು ಇತಿಹಾಸದ ಪುಟ ಸೇರುವ ಮುನ್ನ, ಅವನಲ್ಲಿರುವ ಜ್ಞಾನದ ಒಂದು ಕಿಡಿಯನ್ನಾದರೂ ನೀನು ಪಡೆದುಕೊಳ್ಳಬೇಕು.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಲಂಕಾ ಸಮರ, ವಿಭೀಷಣನ ಶಂಕೆ
ಹೋಗು, ಆ ಜ್ಞಾನವೃದ್ಧನ ಪಾದದ ಬಳಿ ವಿನಮ್ರನಾಗಿ ನಿಂತು ಉಪದೇಶ ಕೇಳು". ತುಳಸೀದಾಸರು ರಾಮನ ಈ ಮನಸ್ಥಿತಿಯನ್ನು ಹೀಗೆ ವರ್ಣಿಸುತ್ತಾರೆ:
ಜೌಂ ಪ್ರಭು ದೀನ್ಹ ದಯಾ ಕರ ಮತಿಹೀ |
ಸೋ ಜಾನಹಿಂ ಜೇಹಿ ದೇಹಿ ಪ್ರತೀತಿಹೀ ||
ಗುಣ ಗ್ರಾಹಕ ರಾಮ ಕೃಪಾಲಾ |
ರಿಪುಹು ಸಿಖಾವನ ದೀನ್ಹ ಬಿಶಾಲಾ ||
ಭಾವಾರ್ಥ: ದಯಾಮಯಿಯಾದ ರಾಮನು ಎಷ್ಟು ಗುಣಗ್ರಾಹಿಯೆಂದರೆ, ಶತ್ರುವಿನ ಬಳಿಯೂ ದ್ದಾನವಿದ್ದರೆ ಅದನ್ನು ಗೌರವಿಸುವಂತೆ ತನ್ನ ಅನುಜನಿಗೆ ಸೂಚಿಸಿದನು. ಅಣ್ಣನ ಆಜ್ಞೆಯಂತೆ ಲಕ್ಷ್ಮಣನು ಹೋಗಿ ರಾವಣನ ತಲೆಯ ಹತ್ತಿರ ನಿಂತನು. ರಾವಣನು ಕಣ್ಣು ತೆರೆಯಲಿಲ್ಲ. ಲಕ್ಷ್ಮಣನು ಮರಳಿ ಬಂದು ‘ಅಣ್ಣ, ಅವನು ಏನನ್ನೂ ಹೇಳುತ್ತಿಲ್ಲ’ ಎಂದಾಗ, ರಾಮನು ಮಂದಹಾಸ ಬೀರಿ ಹೇಳಿದನು, ‘ತಮ್ಮಾ, ಜ್ಞಾನವನ್ನು ಪಡೆಯು ವವನು ಪಾದದ ಬಳಿ ವಿನಯದಿಂದ ನಿಲ್ಲಬೇಕೇ ಹೊರತು ತಲೆಯ ಬಳಿಯಲ್ಲ’.
ಲಕ್ಷ್ಮಣನು ಮರಳಿ ಹೋಗಿ ಪಾದದ ಬಳಿ ಕೈಮುಗಿದು ನಿಂತಾಗ, ರಾವಣನು ಕಣ್ಣು ಬಿಟ್ಟು ಅಂತಿಮ ಪಾಠಗಳನ್ನು ನೀಡಿದನು:
1. ಶುಭಸ್ಯ ಶೀಘ್ರಮ್: ಲಕ್ಷ್ಮಣ, ಒಳ್ಳೆಯ ಕೆಲಸ ಮಾಡಬೇಕೆಂಬ ಆಲೋಚನೆ ಬಂದ ಕೂಡಲೇ ಅದನ್ನು ಮಾಡಿಬಿಡು. ಕೆಟ್ಟ ಕೆಲಸವನ್ನು ಮುಂದೂಡುತ್ತಾ ಹೋಗು. ನಾನು ಸ್ವರ್ಗಕ್ಕೆ ಮೆಟ್ಟಿಲು ಕಟ್ಟಬೇಕೆಂದಿದ್ದೆ, ಆದರೆ ಕಾಲಹರಣ ಮಾಡಿದೆ. ಸೀತೆಯನು ಅಪಹರಿಸುವ ಕೆಟ್ಟ ನಿರ್ಧಾರವನ್ನು ತಕ್ಷಣ ಮಾಡಿಬಿಟ್ಟೆ. ಇದೇ ನನ್ನ ಪತನಕ್ಕೆ ಕಾರಣ.
2. ಶತ್ರುವನ್ನು ಕಡೆಗಣಿಸಬೇಡ: ನಾನು ಮನುಷ್ಯರನ್ನು ಮತ್ತು ವಾನರರನ್ನು ತುಚ್ಛವಾಗಿ ಕಂಡೆ. ಇದೇ ನನ್ನ ಅತಿ ದೊಡ್ಡ ತಪ್ಪು. ಯಾರನ್ನೂ ಎಂದೂ ಸಣ್ಣವ ರೆಂದು ಭಾವಿಸಬೇಡ.
3. ಸಾರಥಿ ಮತ್ತು ಸೋದರ: ನನ್ನನ್ನು ಸೋಲಿಸಿದ್ದು ರಾಮನ ಬಾಣಗಳಿಗಿಂತ ಹೆಚ್ಚಾಗಿ, ನನ್ನ ಸ್ವಂತ ಸೋದರ ವಿಭೀಷಣ ನೀಡಿದ ರಹಸ್ಯಗಳು. ಮನೆಯವರನ್ನು ಮತ್ತು ಸಾರಥಿಯನ್ನು ಎಂದೂ ವಿರೋಧಿಸಿಕೊಳ್ಳಬಾರದು
ರಾವಣನು ಪ್ರಾಣ ಬಿಡುವಾಗ ರಾಮನಾಮವನ್ನು ಸ್ಮರಿಸಿದನು. ರಾಮನು ಆತ ಬಳಿ ಬಂದು ಆತನ ಹಣೆಯನ್ನು ಸವರಿ, ಒಬ್ಬ ಗುರುವನ್ನು ಕಳೆದುಕೊಂಡ ಗೌರವವನ್ನು ಸಲ್ಲಿಸಿದನು. ಇದು ರಾಮನ ‘ಮರ್ಯಾದಾ ಪುರುಷೋತ್ತಮ’ತ್ವ.
ನಮ್ಮ ಬದುಕಿನಲ್ಲೂ ನಾವು ಅನೇಕರನ್ನು ದ್ವೇಷಿಸುತ್ತೇವೆ. ಆದರೆ ಅವರಲ್ಲಿರುವ ಕಲೆ, ಜ್ಞಾನ ಅಥವಾ ಶ್ರಮವನ್ನು ಗೌರವಿಸುವುದನ್ನು ಕಲಿಯಬೇಕು. ವೈಯಕ್ತಿಕ ಭಿನ್ನಾಭಿ ಪ್ರಾಯಗಳು ಜ್ಞಾನದ ಹಾದಿಗೆ ಅಡ್ಡಿಯಾಗಬಾರದು. ರಾವಣನ ಅಂತ್ಯವು ನಮಗೆ ಅಹಂಕಾರವು ಎಂಥ ಮಾಡಬಲ್ಲದು, ಹೇಳುವುದು ಇಷ್ಟೇ: ಜ್ಞಾನಿಯನ್ನೂ ನಾಶ ಆದರೆ
ವಿನಯವು ಸಾಮಾನ್ಯನನ್ನೂ ದೇವನನ್ನಾಗಿಸಬಲ್ಲದು.
ಸೀತಾ ರಾಮ ಚರಣ ರತಿ ಮೋರೆ |
ಅನುದಿನ ಬಢವು ಅನುಗ್ರಹ ತೋರೆ ||
ನಮ್ಮೊಳಗಿನ ರಾವಣತ್ವ ಅಳಿಯಲಿ, ರಾಮತ್ವದ ಗುಣಗ್ರಾಹಿ ದೃಷ್ಟಿ ಬೆಳಗಲಿ. ಸತ್ಯದ ಹಾದಿಯಲ್ಲಿ ನಡೆಯುವಾಗ ಸಿಗುವ ಪ್ರತಿಯೊಂದು ಅನುಭವವೂ ನಮ್ಮನ್ನು ರಾಮ ತತ್ವದ ಕಡೆಗೆ ನಡೆಸಲಿ....