Hari Paraak Column: ಬೀದಿನಾಯಿಗಳು: ನಮ್ಮ ವಿರುದ್ಧ ʼಶೆಡ್-ಯಂತ್ರʼ ನಡೀತಿದೆ
ಒಂದು ವಾರದ ಹಿಂದೆ ಕೇಳಿದ್ದಕ್ಕೆ ಇದೇ ಅನುಶ್ರೀ, “ಅಯ್ಯೋ ಮದುವೆ ಎಲ್ಲ ಸದ್ಯಕ್ಕಿಲ್ಲ ಸರ್" ಎಂದಿದ್ದರಂತೆ. ಈಗ ಅವರಿಂದಲೇ ಇವರಿಗೆ ಆಮಂತ್ರಣ ಪತ್ರ ಸಿಕ್ಕಿದೆ. ಯಾಕಿಂಗೆ ಅಂತ ಎಲ್ಲರಿಗೂ ಆಶ್ಚರ್ಯ ಆಗೋದು ಸಹಜ. ಆದರೆ ಅದೇನೋ ಮೊದಲಿನಿಂದಲೂ ಸಿನಿಮಾ ಜನ ಹೀಗೆಯೇ, ಅದರಲ್ಲಿಯೂ ಹುಡುಗಿಯರು “ನಮಗೆ ಮದುವೆ ಆಗ್ತಿಲ್ಲ ಸ್ವಾಮಿ" ಅಂತ ಪುಂಗೋದ್ರಲ್ಲಿ ಮೊದಲು.


ತುಂಟರಗಾಳಿ
ಸಿನಿಗನ್ನಡ
ಸಿನಿಮಾ ಮಂದಿ ಯಾವ ವಿಷಯದಲ್ಲಿ ನಿಜ ಹೇಳ್ತಾರೋ ಗೊತ್ತಿಲ್ಲ. ಆದರೆ ತಮ್ಮ ಮದುವೆ ವಿಷಯದಲ್ಲಿ ಮಾತ್ರ ಕೊನೆಯವರೆಗೂ ಗೌಪ್ಯ ಕಾಪಾಡಿಕೊಳ್ಳೋದ್ರಲ್ಲಿ ಎತ್ತಿದ ಕೈ. ಈಗ ಸದ್ಯಕ್ಕೆ ಆಂಕರ್ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಅವರೇ ಈಗ ಎಲ್ಲರಿಗೂ ಮದುವೆ ಆಮಂತ್ರಣ ಪತ್ರ ಕೊಡ್ತಾ ಇzರೆ. ಆದರೆ ಆಮಂತ್ರಣ ಪತ್ರಿಕೆ ತಲುಪಿದ ಹಿರಿಯ ಪತ್ರಕರ್ತರೊಬ್ಬರು ಫೇಸ್‌ಬುಕ್ಕಿನಲ್ಲಿ ಬರೆದುಕೊಂಡಿದ್ದರು.
ಒಂದು ವಾರದ ಹಿಂದೆ ಕೇಳಿದ್ದಕ್ಕೆ ಇದೇ ಅನುಶ್ರೀ, “ಅಯ್ಯೋ ಮದುವೆ ಎಲ್ಲ ಸದ್ಯಕ್ಕಿಲ್ಲ ಸರ್" ಎಂದಿದ್ದರಂತೆ. ಈಗ ಅವರಿಂದಲೇ ಇವರಿಗೆ ಆಮಂತ್ರಣ ಪತ್ರ ಸಿಕ್ಕಿದೆ. ಯಾಕಿಂಗೆ ಅಂತ ಎಲ್ಲರಿಗೂ ಆಶ್ಚರ್ಯ ಆಗೋದು ಸಹಜ. ಆದರೆ ಅದೇನೋ ಮೊದಲಿನಿಂದಲೂ ಸಿನಿಮಾ ಜನ ಹೀಗೆಯೇ, ಅದರಲ್ಲಿಯೂ ಹುಡುಗಿಯರು “ನಮಗೆ ಮದುವೆ ಆಗ್ತಿಲ್ಲ ಸ್ವಾಮಿ" ಅಂತ ಪುಂಗೋದ್ರಲ್ಲಿ ಮೊದಲು.
“ಯಾಕೆ ಬೇಕು, ಯಾರಿಗೆ ಗೊತ್ತು, ಮದುವೆ ಆಗೋ ಹುಡುಗನ ಕಿವಿಯಲ್ಲಿ ಯಾರು ಪುಂಗಿ ಊದಿ ನಮ್ಮ ಲಗ್ನಕ್ಕೆ ವಿಘ್ನ ತರ್ತಾರೋ..?" ಅನ್ನೋ ಭಯದ ಮದುವೆ ವಿಷಯವನ್ನು ಕೊನೆಯವರೆಗೂ ಮುಚ್ಚಿಡ್ತಾರೆ. ಚಿರಂಜೀವಿ ಸರ್ಜಾ ಅವರನ್ನು ಮದುವೆ ಆದ ಮೇಘನಾ ರಾಜ್ ಕೂಡಾ ‘ಇಬ್ಬರೂ ಮದುವೆ ಆಗ್ತಾರೆ’ ಅಂತ ಸುದ್ದಿ ಬರೆದಾಗ, “ಕೆಲಸ ಇಲ್ಲದ ಪತ್ರಕರ್ತರು ಏನೇನೋ ಬರೀತಾರೆ" ಅಂತ ಇನ್ನಿಲ್ಲದಂತೆ ಮುಲುಗಿದ್ದರು.
ಇದನ್ನೂ ಓದಿ: Hari Paraak Column: ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ
ಆದರೆ ಕೊನೆಗೆ ಅದೇ ಪತ್ರಕರ್ತರ ಮಾತಿನಂತೆ ಇಬ್ಬರ ಮದುವೆಯೂ ಆಯ್ತು. ಮದುವೆಯ ನಂತರ ಇವರ ಮುಖಕ್ಕೆ ಮೈಕು ಹಿಡಿದು “ಯಾಕೆ ಅವತ್ತು ಸುಳ್ಳು ಹೇಳಿದ್ರಿ? ಸತ್ಯ ಬರೆದವರ ಬಗ್ಗೆ ಕೊಂಕು ಮಾತಾಡಿದ್ರಿ?" ಅಂತ ಯಾರೂ ಕೇಳಲ್ಲವಲ್ಲ, ಅದೇ ಇವರಿಗೆ ಧೈರ್ಯ!
ಲೂಸ್ ಟಾಕ್ -ಬೀದಿನಾಯಿ
ಏನ್ ಸರ್, ಸಾರಿ, ಸರ್ರೋ, ಮೇಡಮ್ಮೋ ಗೊತ್ತಾಗ್ತಿಲ್ಲ, ಹೋಗ್ಲಿ, ಏನ್ ನಿಮ್ಮನ್ನೆ ಶೆಡ್ಡಿಗೆ ಹಾಕ್ತಾರಂತಲ್ಲ?
- ಏನ್ ಮಾಡೋದು ಸರ್, ಒಟ್ನಲ್ಲಿ ನಮ್ದು ನಾಯಿಪಾಡು ಆಗಿದೆ.
ಓಹೋ, ಸರಿ, ಆದ್ರೂ ರೋಡಲ್ಲಿ ಬಿಂದಾಸಾಗಿ ಇದ್ರಿ, ಈಗ ಶೆಡ್ಡಿಗೆ ಹೋಗೋಕೆ ತಯಾರಿದ್ದೀರಾ?
- ಪಟ್ಟಣಗೆರೆ ಶೆಡ್ ಬಿಟ್ಟು ಇನ್ನೆಲ್ಲಿಗೆ ಕಳಿಸಿದ್ರೂ ಓಕೆ
ಆದ್ರೆ ಈ ಪ್ರೊಸೆಸ್ ವಿಳಂಬ ಆಗ್ತಾ ಇದೆಯಲ್ಲ. ಪಾಪ ನಿಮ್ಮ ಭವಿಷ್ಯ ಹೆಂಗೆ?
- ನಂಗೂ ಗೊತ್ತಿಲ್ಲ. ‘ಗಲೀ ಕಾ ಕುತ್ತಾ, ನಾ ರೋಡ್ ಕಾ, ನಾ ಶೆಡ್ ಕಾ’ ಅನ್ನೋ ಥರ ಆಗಿದೆ.
ಆದ್ರೂ ನಿಮ್ಮ ಹಾವಳಿ ಜಾಸ್ತಿ ಆಗಿದೆ ಅಂತ ಜನ ನಿಮ್ಮ ಮೇಲೆ ಕಂಪ್ಲೇಂಟ್ ಮಾಡಿ ಶೆಡ್ಡಿಗೆ ಹಾಕ್ತಾ ಇದ್ದಾರೆ. ಯಾಕಿಂಗ್ ಮಾಡ್ತೀರಾ ನೀವು?
- ಅಯ್ಯೋ, ನಾವೇನೂ ಮಾಡಿಲ್ಲ. ಇದು ‘ಅರಿ-ಶೆಡ್ ವರ್ಗ’ಗಳನ್ನು ಮೀರಲಾಗದ ಜನರ ಮನಸ್ಥಿತಿ ಅಷ್ಟೇ.
ಸರಿ, ಈಗ ನಿಮ್ಮನ್ನೆಲ್ಲ ಶೆಡ್ಡಿಗೆ ಹಾಕ್ತಾರೆ ಅಂದ್ರೆ ಸುಮ್ನೆ ಒಪ್ಕೊಂಡು ಹೋಗ್ತೀರಾ?
- ಮತ್ತಿನ್ನೇನು? ನಮ್ಮ ವಿರುದ್ಧ ‘ಶೆಡ್-ಯಂತ್ರ’ ಮಾಡ್ತಾ ಇದ್ದಾರೆ ಅಂತ ಸುಪ್ರೀಂ ಕೋರ್ಟಿಗೆ
ಹೋಗೋಕಾಗತ್ತಾ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕಬ್ಬಿಣದ ಅದಿರು ಸಿಗುವ ಬಳ್ಳಾರಿಯಲ್ಲಿ ಅಕ್ಷಯ ತೃತೀಯದ ದಿನ ನೆಲ ಅಗೆದರೆ ಅಲ್ಲಿ ಸಿಗುವ ಕಬ್ಬಿಣದ ಅದಿರು ಬಂಗಾರದ ಅದಿರಾಗುತ್ತದೆ ಎಂಬುದು ಸೋಮು ಮತ್ತು ಖೇಮು ಅವರ ನಂಬಿಕೆ. ಹಂಗಾಗಿ ಹಿಂದಿನ ದಿನ ರಾತ್ರಿನೇ ಹೋಗಿ ಮೈನಿಂಗ್ ಏರಿಯಾದಲ್ಲಿ ಬೀಡುಬಿಟ್ಟು ರಾತ್ರಿ 12 ಗಂಟೆ ಯಿಂದ ನೆಲ ಅಗೆದು ಒಂದಿಷ್ಟು ಅದಿರನ್ನು ಶೇಖರಿಸಿ ಬೆಳಗ್ಗೆ ಅದನ್ನು ಬೆಂಗಳೂರಿಗೆ ಸಾಗಿಸಲು ಕಾದು ಕುಳಿತಿದ್ದರು ಸೋಮು, ಖೇಮು. ಬೆಳಗ್ಗೆ ಅ ಲೋಕಲ್ ಹೆಲಿಕಾಪ್ಟರ್ ಒಂದನ್ನು ಕರೆಸಿ, ಅದಿರನ್ನು ಅದಕ್ಕೆ ಲೋಡ್ ಮಾಡಲು ಆರಂಭಿಸಿದರು.
ಹೆಲಿಕಾಪ್ಟರ್ ಪೈಲಟ್ “ಸರ್, ಇಷ್ಟೊಂದ್ ಭಾರ ಹಾಕಿದರೆ ನಮ್ ಹೆಲಿಕಾಪ್ಟರ್ ತಡ್ಕೊಳ್ಳೋದಿಲ್ಲ" ಅಂದ. ಅದಕ್ಕೆ ಖೇಮು “ನೀನು ನಾವ್ ಹೇಳಿದ ಮಾಡು ಸಾಕು, ಲಾ ಇಯರ್ ನಾವು ಇಂಥದ್ದೇ ಹೆಲಿಕಾಪ್ಟರ್‌ನಲ್ಲಿ ಇಷ್ಟೇ ಅದಿರು ಸಾಗಿಸಿದ್ವಿ ಗೊತ್ತಾ, ಆ ಪೈಲಟ್ಟೂ ಹಿಂಗೇ ಹೇಳಿದ, ನಿಮ್ಗೆ ಏನೂ ಗೊತ್ತಾಗಲ್ಲ" ಎಂದು ದಬಾಯಿಸಿದ.
ಸರಿ ಅಂತ ಪೈಲಟ್ ಸುಮ್ಮನಾದ. ಎಲ್ಲ ಹೇರಿಕೊಂಡು ಹೆಲಿಕಾಪ್ಟರ್ ಹೊರಟಿತು. ಆದರೆ ಒಂದೆ ರಡು ನಿಮಿಷಗಳ ಹೆಲಿಕಾಪ್ಟರ್ ಕ್ರಾಷ್ ಆಗಿ ಜನನಿಬಿಡ ಜಾಗವೊಂದರಲ್ಲಿ ನೆಲಕ್ಕೆ ಅಪ್ಪಳಿಸಿತು. ಅದೃಷ್ಟವಶಾತ್ ಮೂರೂ ಜನ ಬದುಕಿಕೊಂಡರು. ಬಿದ್ದ ಜಾಗದಿಂದ ಸೋಮು ಮೈ ಕೊಡವಿ ಕೊಂಡು ಮೆಲ್ಲನೆ ಏಳುತ್ತಾ ಕೊಂಚ ಗಾಬರಿಯಿಂದ ಕೇಳಿದ “ನಾವೆಲ್ಲಿದೀವಿ?".
ಅದಕ್ಕೆ ಖೇಮು ಹೇಳಿದ “ಗಾಬರಿ ಆಗ್ಬೇಡ, ಈ ಜಾಗ ನಂಗೆ ಎಲ್ಲೋ ನೋಡಿದಂಗೆ ಅನ್ನಿಸ್ತಿದೆ. ಹೋದ್ ವರ್ಷ ಆ ಪೈಲಟ್ ಬ್ಯಾಡ ಬ್ಯಾಡ ಅಂತ ಎ ಹೇಳಿದ್ರೂ ಕೇಳದೇ ಇಷ್ಟೇ ಲೋಡ್ ಹಾಕ್ಕೊಂಡ್ ಹೋಗುವಾಗ ಕ್ರಾಷ್ ಆಗಿ ಬಿದ್ದಿದ್ವಲ್ಲ, ಮೋಸ್ಟ್ಲೀ ಅದೇ ಜಾಗದ ಹತ್ರನೇ ಎಲ್ಲೋ ಇದೀವಿ ಅನ್ಸುತ್ತೆ".
ಲೈನ್ ಮ್ಯಾನ್
ನಿಜವಾದ ರಸಿಕ ಅಂದ್ರೆ ಯಾರು?
- ಸನ್ನಿ ಲಿಯೋನ್ ಹಾಡುಗಳನ್ನು ಬರೀ ಕೇಳಿಯೂ ಖುಷಿ ಪಡೋನು
ಎಲೆಕ್ಷನ್ ಹಿಂದಿನ ದಿನ ಹಾಕಿಸುವ ಬಿರಿಯಾನಿ ಊಟ
- ‘ಓಟ್’ ಮೀಲ್ಸ್
ಚಳಿ ಕಚಗುಳಿ
- ಸೋಮು: ಈ ಚಳಿಗೆ ನನ್ ಮೊಬೈಲ್ ಕೂಡಾ ನಡುಗ್ತಿದೆ
- ಖೇಮು: ಓವರ್‌ಆಕ್ಟಿಂಗ್ ಮಾಡ್ಬೇಡ, ಮುಚ್ಕೊಂಡ್ ವೈಬ್ರೇಷನ್ ಮೋಡ್ ಆಫ್ ಮಾಡು
ಕಲಿಯುಗದ ಜ್ಞಾನೋದಯ
- ಅರ್ಧ ರಾತ್ರಿಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋದವನು: ಬುದ್ಧ
- ಚಾ ಸಿಕ್ಕರೂ ಹೋಗದವನು: ಬುದ್ದು
ಮತ್ತೆ ಭಾರಿ ಮಳೆ, ಮುಂದುವರಿಯಲಿದೆ ಅನಾಹುತ: ಕೋಡಿ ಮಠದ ಸ್ವಾಮಿ
- ಕೋಡಿ ಮಠ ಅಲ್ವಾ, ಅದಕ್ಕೇ, ಎಲ್ಲಿ ಮಳೆ ಬಂದು ಕೆರೆ ಕೋಡಿ ಬೀಳುತ್ತೆ ಅಂತ ಮೊದ್ಲೇ ಹೇಳ್ತಾರೆ.
ಎಟಿಎಂಗೆ ಅಷ್ಟೇ ಅಲ್ಲ, ಚೆಕ್ ಬುಕ್, ಪಾಸ್‌ಬುಕ್, ಮೊಬೈಲ್ ನಂಬರ್ ಬದಲಿಸೋಕೂ ಹಣ ಕೊಡಬೇಕು
- ಬ್ಯಾಂಕ್ ದರೋಡೆ ಕೇಳಿದ್ವಿ. ಇದು ಬ್ಯಾಂಕ್‌ನಿಂದಲೇ ದರೋಡೆ
ಫೇಸ್‌ಬುಕ್ ಪ್ರಾಬ್ಲಂ
- ‘ಸ್ವಲ್ಪ ಕಷ್ಟ ಇದೆ ದುಡ್ಡು ಬೇಕಿತ್ತು ಕೊಡ್ತೀರಾ?’ ಅಂತ ಮೆಸೇಜ್ ಮಾಡಿದೆ. ‘ರೀ, ನಿಮ್ಮ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿದ್ದಾರೆ’ ಅಂತ ರಿಪ್ಲೈ ಮಾಡಿದ್ರು.
ಚರ್ಚ್‌ಗಳಲ್ಲಿ ಕೆಲವರು ಮೈಮೇಲೆ ಕೈ ಇಟ್ಟು ಕಿಡ್ನಿ ಸ್ಟೋನ್ ಕರಗಿಸ್ತಾರಂತೆ.
- ಇದನ್ನು ನೋಡಿನೇ ಲಂಕೇಶ್ ಅವ್ರು ‘ಕಲ್ಲು ಕರಗುವ ಸಮಯ’ ಪುಸ್ತಕ ಬರೆದಿದ್ದು ಅನ್ಸುತ್ತೆ.
ಪೊಲೀಸರು ಅರೆ ಮಾಡಿದ ತಕ್ಷಣ ಬರೋ ಎದೆನೋವು
- ಕಾರ್ಡಿಯಾಕ್ ಅರೆಸ್ಟ್
ಶಾಲಾ-ಕಾಲೇಜು ದಿನಗಳನ್ನು ಏನೆನ್ನಬಹುದು?
- ‘ಕಲಿ’ಯುಗ