Hari Paraak Column: ಅಡ್ಡಗೋಡೆ ಮೇಲೆ ಸುʼದೀಪʼ
ಪ್ರತಿ ಸಲ ಸುದೀಪ್ ಸಿನಿಮಾ ಬಿಡುಗಡೆ ಆದಾಗ ಪೈರಸಿ ಮಾಡೇ ಮಾಡ್ತೀವಿ ಅಂತ ಹಠ ತೊಟ್ಟು ಕಿರುಕುಳ ನೀಡುವವರ ವಿರುದ್ಧ ಕಿಚ್ಚನ ಕಿಚ್ಚು ಅರ್ಥ ಆಗುವಂಥದ್ದೇ. ಹಾಗಾಗಿ ಅವರ ವಿರುದ್ಧ ಕಿಚ್ಚ ಗುಡುಗಿದ್ದರು. ಆದರೆ ‘ಡೆವಿಲ್’ ಸಿನಿಮಾದ ಫಲಿತಾಂಶದಿಂದ ಮೊದಲೇ ಬೇಸರ ಗೊಂಡಿದ್ದ ವಿಜಯಲಕ್ಷ್ಮಿ ಅವರಿಗೆ ಇದು ಇನ್ನಷ್ಟು ಬೇಸರ ತರಿಸಿರಬಹುದು.
-
ತುಂಟರಗಾಳಿ
ಸಿನಿಗನ್ನಡ
ಕಿಚ್ಚ ಸುದೀಪ ತಮ್ಮ ಮನಸ್ಸಿನಲ್ಲಿ ಇದ್ದ ಆಕ್ರೋಶವನ್ನು ಹುಬ್ಬಳ್ಳಿಯ ‘ಮಾರ್ಕ್’ ಸಿನಿಮಾದ ಪ್ರಚಾರದ ವೇದಿಕೆ ಮೇಲೆ ‘ಮಾರ್ಕ್ ಮೈ ವರ್ಡ್ಸ್’ ಅಂತ ಮಾತುಗಳ ಮೂಲಕ ತೋರಿಸಿಕೊಂಡಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ತಮ್ಮ ಗಂಡನ ಅಭಿಮಾನಿ ಗಳಿಗೆ ಹೇಳಿದ್ದು ಅಂತಲೇ ಅನಿಸಿದೆ. ಹಾಗಾಗಿ ಅವರೂ ಇನ್‌ಡೈರೆಕ್ಟ್ ಆಗಿ ಸುದೀಪ್ ವಿರುದ್ಧ ಮಾತಾಡಿದ್ದಾರೆ.
ಪ್ರತಿ ಸಲ ಸುದೀಪ್ ಸಿನಿಮಾ ಬಿಡುಗಡೆ ಆದಾಗ ಪೈರಸಿ ಮಾಡೇ ಮಾಡ್ತೀವಿ ಅಂತ ಹಠ ತೊಟ್ಟು ಕಿರುಕುಳ ನೀಡುವವರ ವಿರುದ್ಧ ಕಿಚ್ಚನ ಕಿಚ್ಚು ಅರ್ಥ ಆಗುವಂಥದ್ದೇ. ಹಾಗಾಗಿ ಅವರ ವಿರುದ್ಧ ಕಿಚ್ಚ ಗುಡುಗಿದ್ದರು. ಆದರೆ ‘ಡೆವಿಲ್’ ಸಿನಿಮಾದ ಫಲಿತಾಂಶದಿಂದ ಮೊದಲೇ ಬೇಸರಗೊಂಡಿದ್ದ ವಿಜಯಲಕ್ಷ್ಮಿ ಅವರಿಗೆ ಇದು ಇನ್ನಷ್ಟು ಬೇಸರ ತರಿಸಿರ ಬಹುದು.
ಹಾಗಾಗಿ ಅಷ್ಟಾಗಿ ಮಾತಾಡದ ಅವರು ಈಗ ಸುದೀಪ್ ವಿರುದ್ಧ ಮಾತಾಡಿದ್ದಾರೆ. ಆದರೆ ಸುದೀಪ್ ಅವರಂತೆಯೇ ಹೆಸರು ಪೂರ್ತಿ ಹೇಳದೇ ಮಾತಾಡಿದ್ದಾರೆ. ಅವರು ಆಡಿರೋ ಕೆಲವು ಮಾತುಗಳು ದರ್ಶನ್ ಅವರಂತೆಯೇ ದುರಹಂಕಾರದ ಮಾತುಗಳು ಅಂತಲೂ ಅಥವಾ ಅಸಡ್ಡೆಯ ಮತ್ತು ಅಜ್ಞಾನದ ಮಾತುಗಳು ಅಂತಲೂ ಅನಿಸಬಹುದು.
ಯಾಕಂದ್ರೆ ‘ನನ್ನ ಗಂಡ ಹೊರಗಿದ್ದಾಗ ಕೆಲವರು ಮಾತಾಡಲ್ಲ. ಅವರು ಒಳಗಿದ್ದಾಗ ಮಾತ್ರ ಮಾತಾಡ್ತಾರೆ. ಅದೂ ಬೆಂಗಳೂರಿನಲ್ಲಿ ಮಾತಾಡಲ್ಲ, ಇನ್ನೆ ಹೋಗಿ ಮಾತಾಡ್ತಾರೆ’ ಅಂತ ತಮ್ಮ ಗಂಡನ ಬಗ್ಗೆ ತಾವೇ ಅಪಪ್ರಚಾರ ಮಾಡಿದ್ದಾರೆ ಅನಿಸಿದರೆ ತಪ್ಪಿಲ್ಲ.
ಯಾಕಂದ್ರೆ ಅವರ ಪತಿ ದರ್ಶನ್ ಏನೋ ದೊಡ್ಡ ರೌಡಿ, ಅವರಿಗೆ ಎಲ್ಲರೂ ಹೆದರುತ್ತಾರೆ ಅನ್ನೋ ಟೋನ್ ಅವರ ಮಾತುಗಳಲ್ಲಿ ಇತ್ತು. ಹೀಗಾಗಿ ‘ಡೆವಿಲ್’ ಮತ್ತು ‘ಮಾರ್ಕ್’ ಚಿತ್ರಗಳ ನಡುವಿನ ವಾರ್ ತಾರಕಕ್ಕೇರಿತ್ತು. ಆದರೆ ಈ ಎರಡೂ ಚಿತ್ರಗಳಲ್ಲಿ ಯಾವುದೂ ದೊಡ್ಡಮಟ್ಟದ ಸೌಂಡ್ ಮಾಡುತ್ತಿಲ್ಲ.
‘ದರ್ಶನ್ ಜೈಲಿನಲ್ಲಿದ್ದರೆ ಸಿನಿಮಾ ಸೂಪರ್‌ಹಿಟ್’ ಅನ್ನೋ ನಂಬಿಕೆಯನ್ನು ‘ಡೆವಿಲ್’ ಚಿತ್ರ ಹುಸಿಗೊಳಿಸಿದೆ, ಹಾಗಾಗಿ ಕಲೆಕ್ಷನ್ʼನಲ್ಲಿ ಡಲ್ ಹೊಡೀತಿದೆ. ಇನ್ನು ‘ಡೆವಿಲ್’ ಚಿತ್ರಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ‘ಮಾರ್ಕ್’ ನಿಂತಿದೆ.
ಇನ್ನು, ‘ಮಾರ್ಕ್’ ಜತೆ ಬಿಡುಗಡೆ ಆದ ‘45’ ಚಿತ್ರ ಕೂಡಾ, ಶಿವಣ್ಣನ ಪೋರ್ಷನ್ ಬಿಟ್ಟರೆ ಉಳಿದ ವಿಭಾಗಗಳಲ್ಲಿ ಜನರನ್ನು ಸೆಳೆಯುವಲ್ಲಿ ಅಷ್ಟಾಗಿ ಸಫಲವಾಗಿಲ್ಲ. ಒಟ್ಟಿನಲ್ಲಿ ಈ ಬಾರಿ ಸ್ಯಾಂಡಲ್‌ವುಡ್‌ಗೆ ‘ಡಿಸ್‌ಅಪಾಯಿಂಟಿಂಗ್ ಡಿಸೆಂಬರ್’ ಆಗಿದೆ ಅಂದರೆ ತಪ್ಪೇನಿಲ್ಲ.
ಲೂಸ್ ಟಾಕ್- ಕಿಚ್ಚ ಸುದೀಪ
ಏನ್ ಸರ್, ಹುಬ್ಬಳ್ಳಿ ವೇದಿಕೆ ಮೇಲೆ ಯಾರನ್ನೋ ಟಾರ್ಗೆಟ್ ಮಾಡಿದ್ರಿ. ಯಾರಿಗೆ ಅಂತ ಗೊತ್ತಾಗ್ಲಿಲ್ಲವಲ್ಲ?
- ಸುದೀಪ ಅಂತ ಹೆಸರಿಟ್ಟುಕೊಂಡ ಮೇಲೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಲೇಬೇಕಲ್ಲ.
ಓ ಹಂಗೆ, ಸರಿ. ವಿಜಯಲಕ್ಷ್ಮಿ ಅವರು ಕೂಡಾ ನಿಮ್ಮ ಬಗ್ಗೆ ಇನ್ ಡೈರೆಕ್ಟ್ ಆಗಿ ಮಾತಾಡಿದ್ದಾರಲ್ಲ?
- ಅವರ ಸಿನಿಮಾ ‘ಡೆವಿಲ್’ಗೆ ವಿಜಯಲಕ್ಷ್ಮಿ ಒಲಿಯಲಿಲ್ಲ ಅಂತ ಬೇಸರದಲ್ಲಿ ಏನೋ ಮಾತಾಡಿದ್ದಾರೆ ಬಿಡಿ.
ಆದ್ರೂ, ಅವರ ಗಂಡ ಒಳಗಿದ್ದಾಗ ಮಾತಾಡಿದ್ದೀರ, ಹೊರಗೆ ಇದ್ದಾಗ ಮಾತಾಡಲ್ಲ ಅಂತೆ ಆವಾಜ್ ಹಾಕಿದ್ದಾರಲ್ಲ?
- ಅವರ ಗಂಡ ಎರಡು ಪೆಗ್ ಒಳಗೆ ಹೋದ ಮೇಲೆ ಮಾತಾಡ್ತಾರೆ. ನಾನು ಅವರ ಗಂಡ ಒಳಗೆ ಹೋದಾಗ ಮಾತಾಡಿದ್ದೀನಿ ಅಷ್ಟೇ ವ್ಯತ್ಯಾಸ.
ಸರ್, ನಿಜ ಹೇಳಿ ನೀವು ಅವತ್ತು ಮಾತಾಡಿದ್ದು ಪೈರಸಿ ಮಾಡೋರ ಬಗ್ಗೆನಾ?
- ‘ಪೈರಸಿ’ ಮಾಡೋರ ಬಗ್ಗೆ ಮತ್ತು ಕಾ‘ಪಿರಸಿ’ ಮಾಡೋರ ಬಗ್ಗೆ
ಅಂದ ಹಾಗೆ, ನಿಮ್ಮ ‘ಮಾರ್ಕ್’ ಸಿನಿಮಾಗೆ ಪ್ರತಿಕ್ರಿಯೆ ಹೇಗಿದೆ?
- ರಿಮಾರ್ಕಬಲ್ ಅಲ್ಲದಿದ್ರೂ ಜಸ್ಟ್ ಅಪ್ ಟು ದಿ ಮಾರ್ಕ್ ಅಂತಿದ್ದಾರೆ ಪ್ರೇಕ್ಷಕರು. ಹಂಗಾಗಿ ಪಾಸಿಂಗ್ ಮಾರ್ಕ್ ಸಿಕ್ಕಿದೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಈ ಸುರಪಾನ ಬಂದಿದ್ದೇ ಸುರರಿಂದ, ಅಂದ್ರೆ ದೇವತೆಗಳಿಂದ ಅಲ್ವಾ. ಅವರೇ ನಮಗೆ ಇದನ್ನೆ ಕಲಿಸಿದ್ದು. ಅದಕ್ಕೇ ಹೆಂಡನ ಪರಮಾತ್ಮ ಅಂತಾರೋ ಏನೋ ಗೊತ್ತಿಲ್ಲ. ಸರಿ, ಹಿಂಗೇ ಒಂದ್ಸಲ ದೇವಲೋಕದಿಂದ ನಾರದ ಭೂಮಿಗ್ ಬಂದಿದ್ದ. ಅವ್ನು ಅಲ್ಲಿ ಇಲ್ಲಿ ಬತ್ತಿ ಇಡೋ ಕೆಲ್ಸ ಮಾಡಿ ಸುಸ್ತಾಗಿ ಒಂದ್ ಬಾರಿಗೆ ಹೋಗಿ ಎಣ್ಣೆ ಕುಡಿಯೋಕ್ ಕೂತ್ಕೊಂಡ. ಅಲ್ಲಿ ಖೇಮು ವೆಯ್ಟರ್ ಕೆಲ್ಸ ಮಾಡ್ತಾ ಇದ್ದ. ನಾರದ ಬಂದ ಕೂಡಲೇ ಖೇಮು ಹೋಗಿ, “ಸರ್, ಏನ್ ಕೊಡ್ಲಿ?" ಅಂದ. ಅದಕ್ಕೆ ನಾರದ ‘ಒಂದ್ ಕ್ವಾರ್ಟರ್ ರಮ್ ಕೊಡಪ್ಪಾ" ಅಂದ. ಸರಿ ಖೇಮು ಹೋಗಿ ತಂದುಕೊಟ್ಟ.
ನಾರದ ಒಂದ್ ಫುಲ್ ಕ್ವಾರ್ಟರ್ ಕುಡಿದ. ಅವನಿಗೆ ಅದು ಏನೂ ಏರಲಿಲ್ಲ. ಸರಿ ಅಂತ ಖೇಮುನ ಕರೆದು ಇನ್ನೊಂದ್ ಕ್ವಾರ್ಟರ್ ತರಿಸಿದ, ಕುಡಿದ. ಅದೂ ಏರಲಿಲ್ಲ. ಇನ್ನೊಂದಾ ಯ್ತು. ಫುಲ್‌ಬಾಟ್ಲ್ ಆಯ್ತು. ನಾರದ ಸುಮ್ನೆ ಆರ್ಡರ್ ಮಾಡ್ತಾನೇ ಇದ್ದ, ಖೇಮು ತಂದ್ ಕೊಡ್ತಾ ಇದ್ದ, ಇವ್ನು ಕುಡಿತಾ ಇದ್ದ. ಸರಿ, ಎರಡ್ ಪುಲ್‌ಬಾಟ್ಲ್ ಆಯ್ತು. ವೆಯ್ಟರ್ ಖೇಮು ನೋಡ್ತಾನೇ ಇದ್ದ. ಇವ್ನು ಮತ್ತೆ ಇನ್ನೊಂದ್ ಕ್ವಾರ್ಟರ್ ಆರ್ಡರ್ ಮಾಡೋಕೆ ಖೇಮುನ ಕರೆದ. ಖೇಮುಗೆ ಇವನು ಕುಡಿತಾ ಇರೋ ಪರಿ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.
ಇನ್ನೊಂದ್ ಕ್ವಾರ್ಟರ್ ತಂದುಕೊಟ್ಟು, “ಸರ್, ನಂಗೆ ಒಂದ್ ಡೌಟು. ನೀವು ಇಷ್ಟೊಂದ್ ಕುಡಿದ್ರೂ ನಿಮಗೆ ಒಂಚೂರೂ ಏರಿಲ್ಲವಲ್ಲ ಹೆಂಗೆ?" ಅಂದ. ಅದಕ್ಕೆ ನಾರದ, “ಇ ಕಣಮ್ಮಾ, ಹೆಂಡ ಕುಡಿದ್ರೆ ಚಿತ್ತಾಗೋದು, ಕಿಕ್ ಹೊಡೆಯೋದು, ಏರೋದು, ಇದೆಲ್ಲ ಏನಿದ್ರೂ ಬರೀ ನಿಮ್ಮಂಥ ಮನುಷ್ಯರಿಗೆ, ನಾನು ನಾರದ, ದೇವಲೋಕದಿಂದ ಬಂದಿದೀನಿ" ಅಂದ. ಆವಾಗ ವೆಯ್ಟರ್ ಖೇಮು ಅಂದ, “ಹಾ, ಬಡ್ಡಿ ಮಗಂಗೆ ಇವಾಗ್ ಏರ್ತು ನೋಡು".
ಲೈನ್ ಮ್ಯಾನ್
ಆಟೋಗ್ರಾಫ್ ಹಾಕಿಸಿಕೊಳ್ಳುವ ಹುಚ್ಚು ಅತಿರೇಕಕ್ಕೆ ಹೋದರೆ ಬರುವ ಕಾಯಿಲೆ
- ‘ಸೈನ್’ ಫ್ಲೂ
ಒಂದು ಒಳ್ಳೆಯ ಉದ್ದೇಶಕ್ಕೆ ಸಹಿ ಸಂಗ್ರಹಿಸುವ ಅಭಿಯಾನ ಯಶಸ್ವಿಯಾದರೆ
- ಇಂಡಿಯಾ ಈಸ್ ‘ಸೈನಿಂಗ್’
ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್
- ‘ಸೈನಾ’ ನೆಹ್ವಾಲ್
ಆರ್ಟ್ ಬಿಡಿಸುವವನು ಆರ್ಟಿ, ಕೊನೆಗೆ ಅದರ ಕೆಳಗೆ ಸಹಿ ಮಾಡುವಾಗ
- ‘ಸೈನ್’ ಟಿಸ್ಟ್
ಆರ್ಟಿ ಕೊಡುವ ಆಟೋಗ್ರಾಫ್
- ಡಿ‘ಸೈನ್’
ನಾನು ಕೆಲಸ ಬಿಡ್ತಾ ಇದ್ದೀನಿ ಎಂದು ಬರೆದುಕೊಡುವಾಗ ಮಾಡುವ ಸಹಿ
- ರಿ‘ಸೈನ್’
ರಜಾ ಕೇಳಿ ಬರೆದ ಪತ್ರಕ್ಕೆ ಹಾಕುವ ಸಹಿ
- ರುಜು
ಆರ್ಟ್ ಆಫ್ ಸೈನಿಂಗ್ ಅನ್ನು ಏನಂತಾರೆ?
- ಸೈನ್ಸ್
ಗಜಿಬಿಜಿ ಮಾಡದೆ ಎಲ್ಲರಿಗೂ ಅರ್ಥ ಆಗುವಂತೆ ಶಿಸ್ತಾಗಿ ಸೈನ್ ಮಾಡುವವನು
- ಸೈನಿಕ
ನಿಮ್ಮ ಕೆಲಸವನ್ನು ಇನ್ನೊಬ್ಬರಿಗೆ ವಹಿಸುವುದು
- ಅ‘ಸೈನ್