Love You Muddu OTT: ರಿಯಲ್ ಲವ್ ಸ್ಟೋರಿ! ʻಲವ್ ಯು ಮುದ್ದುʼ ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್
Siddu Moolimani: ವೀಕೆಂಡ್ ಬಂತು ಅಂದರೆ ಒಟಿಟಿ ಪ್ರಿಯರಿಗೆ ಹಬ್ಬ. ಯಾವೆಲ್ಲ ಸಿನಿಮಾಗಳು ಬಂದಿವೆ ಎಂದು ಸಿನಿ ಪ್ರಿಯರು ಸರ್ಚ್ ಮಾಡುತ್ತಲೇ ಇರ್ತಾರೆ. ಇದೀಗ ಕನ್ನಡದ ‘ಲವ್ ಯೂ ಮುದ್ದು’ ಸಿನಿಮಾ ಒಟಿಟಿ ಅಂಗಳಕ್ಕೆ ಬಂದಿದೆ. ಸಿದ್ದು ಮೂಲಿಮನಿ ಹಾಗೂ ರೇಷ್ಮಾ ಅಭಿನಯದ ಲವ್ ಯು ಮುದ್ದು ಒಟಿಟಿಗೆ ಎಂಟ್ರಿ ಕೊಟ್ಟಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ನಿರ್ದೇಶನದ ಅಪರೂಪದ ಪ್ರೇಮಕಥೆ ‘ಲವ್ ಯೂ ಮುದ್ದು’.
ಒಟಿಟಿ ಸಿನಿಮಾ -
ವೀಕೆಂಡ್ ಬಂತು ಅಂದರೆ ಒಟಿಟಿ (OTT) ಪ್ರಿಯರಿಗೆ ಹಬ್ಬ. ಯಾವೆಲ್ಲ ಸಿನಿಮಾಗಳು ಬಂದಿವೆ ಎಂದು ಸಿನಿ ಪ್ರಿಯರು ಸರ್ಚ್ ಮಾಡುತ್ತಲೇ ಇರ್ತಾರೆ. ಇದೀಗ ಕನ್ನಡದ ‘ಲವ್ ಯೂ ಮುದ್ದು’ (Love You Muddu) ಸಿನಿಮಾ ಒಟಿಟಿ ಅಂಗಳಕ್ಕೆ ಬಂದಿದೆ. ಸಿದ್ದು ಮೂಲಿಮನಿ (Siddu Moolimani) ಹಾಗೂ ರೇಷ್ಮಾ ಅಭಿನಯದ ಲವ್ ಯು ಮುದ್ದು ಒಟಿಟಿಗೆ ಎಂಟ್ರಿ ಕೊಟ್ಟಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ನಿರ್ದೇಶನದ (Direction) ಅಪರೂಪದ ಪ್ರೇಮಕಥೆ (Love Story) ‘ಲವ್ ಯೂ ಮುದ್ದು’.
ನೈಜ ಪ್ರೇಮಕಥೆ
ಕಳೆದ ತಿಂಗಳು ನವೆಂಬರ್-7 ರಂದು ಈ ಚಿತ್ರ ರಿಲೀಸ್ ಆಗಿತ್ತು. ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮಕಥೆ ಆಧಾರಿತ ಈ ಸಿನಿಮಾ, ಭಾವನಾತ್ಮಕ ನಿರೂಪಣೆ ಮತ್ತು ಸರಳ ಕಥನ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿತ್ತು.ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್?
ಇದನ್ನೂ ಓದಿ: Keerthy Suresh: ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಮೂವಿ ಒಟಿಟಿ ರಿಲೀಸ್ ಡೇಟ್ ಅನೌನ್ಸ್! ಸ್ಟ್ರೀಮಿಂಗ್ ಎಲ್ಲಿ?
ಸ್ಟ್ರೀಮಿಂಗ್ ಎಲ್ಲಿ?
ಈಗ ಅಮೇಜಾನ್ ಪ್ರೈಮ್ ವೀಡಿಯೋನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ.ಚಿತ್ರದಲ್ಲಿ ನಾಯಕನಾಗಿ ಸಿದ್ದು ಅಭಿನಯಿಸಿದ್ದು, ನವನಟಿ ರೇಷ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯ ಸಹಜ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು.
ಜೊತೆಗೆ ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ತಬಲಾ ನಾಣಿ, ಶ್ರೀವತ್ಸ, ಅಪೂರ್ವ ಹಾಗೂ ಉಷಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅನಿರುದ್ಧ ಶಾಸ್ತ್ರಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಆದರೆಲವ್ ಯು ಮುದ್ದು ಚಿತ್ರದಲ್ಲಿ ಸೊಲ್ಲಾಪುರದ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಶಿಂದೆ ಅವರ ಕಥೆಯನ್ನೆ ಇಲ್ಲಿ ಹೇಳಲಾಗಿದೆ.
ಕಾರ್ಕಳ, ಕುಮಟಾ ಹಾಗೂ ಬೆಂಗಳೂರು ಸುತ್ತಮುತ್ತಲಿನ ನೈಸರ್ಗಿಕ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ‘ಲವ್ ಯೂ ಮುದ್ದು’, ದೃಶ್ಯ ವೈಭವ ಹಾಗೂ ಸಂಗೀತದ ಮೂಲಕ ಪ್ರೇಮಿಗಳನ್ನು ಸೆಳೆದಿತ್ತು.
ಕಿಶನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕಿಶನ್ ಟಿ.ಎನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಸಹಕಾರ ನೀಡಿದ್ದಾರೆ. ಆಕಾಶ್ ಪ್ರೀತಿಸಿ ಮದುವೆಯಾದ ಜೋಡಿ.
ಇದನ್ನೂ ಓದಿ: OTT Friday releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಕನ್ನಡ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಿವು!
ನವದಂಪತಿ ದೇವರ ದರ್ಶನ ಪಡೆಯಲು ಹೋದಾಗ ಊಹಿಸಲಾಗದ ಘಟನೆ ನಡೆಯಿತು. ಅದು ಏನು? ಅವರಿಬ್ಬರ ಬಾಳಲ್ಲಿ ನಡೆದ ಘೋರ ದುರಂತವೇನು ಅನ್ನೋದನ್ನು ಲವ್ ಯು ಮುದ್ದು ಸಿನಿಮಾದಲ್ಲಿಯೇ ನೋಡಬೇಕು.