Vishweshwar Bhat Column: ವಿಮಾನದ ಬಾಗಿಲುಗಳ ಮಹತ್ವ
ವಿಮಾನದ ಬಾಗಿಲುಗಳು ಬಲಿಷ್ಠವಾಗಿರುತ್ತವೆ. ಈ ಬಾಗಿಲುಗಳು pressure-resistant ಆಗಿರುತ್ತವೆ. ಏಕೆಂದರೆ 35 ಸಾವಿರ ಅಡಿ ಎತ್ತರದಲ್ಲಿ ಒಳಗೆ ಮತ್ತು ಹೊರಗಿನ ಒತ್ತಡದಲ್ಲಿ ಭಾರಿ ವ್ಯತ್ಯಾಸ ವಿರುತ್ತದೆ. ಬಹುತೇಕ ಬಾಗಿಲುಗಳು plug type mechanism ಹೊಂದಿರುತ್ತವೆ, ಅಂದರೆ ಬಾಗಿಲನ್ನು ಒತ್ತಡದಿಂದ ಹೊರಗಿನಿಂದ ತೆರೆಯಲು ಸಾಧ್ಯವಿಲ್ಲ. ಅಂದರೆ ಬಾಹ್ಯ ಒತ್ತಡದಿಂದಾಗಿ ಬಾಗಿಲು ಸುರಕ್ಷಿತವಾಗಿರುತ್ತದೆ


ಸಂಪಾದಕರ ಸದ್ಯಶೋಧನೆ
ವಿಮಾನವೆಂದರೆ ನೂರಾರು ಪ್ರಯಾಣಿಕರ ಸುರಕ್ಷತೆ ಮತ್ತು ಜೀವಭದ್ರತೆ ಹೊತ್ತಿರುವ, ಆಧುನಿಕ ತಂತ್ರಜ್ಞಾನದ ಹಾರುವ ಯಂತ್ರ. ಅದರ ಪ್ರತಿ ಭಾಗಕ್ಕೂ ನಿರ್ದಿಷ್ಟ ಉದ್ದೇಶವಿದೆ. ಅದರಲ್ಲೂ ಬಾಗಿಲುಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ವಿಮಾನದಲ್ಲಿ ಬಾಗಿಲುಗಳು ಕೇವಲ ಒಳ ಹೋಗುವ ದಾರಿ ಮಾತ್ರವಲ್ಲ, ಅವು ಅವಘಡದ ಸಂದರ್ಭದಲ್ಲಿ ಜೀವ ಉಳಿಸುವ ಮಾರ್ಗವೂ ಹೌದು.
ವಿಮಾನದಲ್ಲಿ ಬಾಗಿಲುಗಳು ಹಲವಾರು ಉದ್ದೇಶಗಳನ್ನು ನಿಭಾಯಿಸುತ್ತವೆ. ಪ್ರಯಾಣಿಕರು ಅಥವಾ ಸಿಬ್ಬಂದಿ ಒಳಹೊಗುವ ಹಾಗೆ ವ್ಯವಸ್ಥೆ ಮಾಡುವುದು, ವಿಮಾನದಲ್ಲಿ ಪೋಷಕ ಸಾಮಗ್ರಿ ಗಳನ್ನು ಲೋಡ್/ಅನ್‌ಲೋಡ್ ಮಾಡುವುದಕ್ಕೆ ಅನುವು ಮಾಡಿಕೊಡುವುದು, ತುರ್ತು ನಿರ್ಗಮನ ದ್ವಾರಗಳಾಗಿ ಕಾರ್ಯನಿರ್ವಹಿಸುವುದು, ವಿಮಾನದ ಒಳಗೆ ವಾಯು ಒತ್ತಡವನ್ನು ಸ್ಥಿರವಾಗಿ ಇರಿಸುವುದು ಬಾಗಿಲುಗಳ ಉದ್ದೇಶ.
ವಿಮಾನಗಳಲ್ಲಿ ಹಲವು ಬಗೆಯ ಬಾಗಿಲುಗಳಿವೆ, ಅವುಗಳಲ್ಲಿ ಪ್ರಮುಖವಾದವು ವಿಮಾನದ ಮುಂಭಾಗ ಹಾಗೂ ಮಧ್ಯಭಾಗದಲ್ಲಿರುವ ಮುಖ್ಯ ಪ್ಯಾಸೆಂಜರ್ ಡೋರ್ (Passenger Entry Doors ), ಆಹಾರ, ಪಾನೀಯ, ಇತರ ವಸ್ತುಗಳನ್ನು ವಿಮಾನದಲ್ಲಿ ಲೋಡ್ ಮಾಡುವ ಸರ್ವೀಸ್ ಡೋರ್, ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಹೊರ ಹೋಗಲು ಬಳಸುವ ದ್ವಾರವಾದ ಎಮರ್ಜೆನ್ಸಿ ಎಕ್ಸಿಟ್ ( Emergency Exit Doors), ಕಾರ್ಗೋ ಡೋರ್ ( Cargo Doors), ಲಗೇಜ್ ಮತ್ತು ಕಾರ್ಗೋ ಗಳನ್ನೂ ಸಾಗಿಸುವ ವಿಮಾನದ ಕೆಳಭಾಗದಲ್ಲಿ ಇರುವ ಡೋರ್‌ಗಳು, ಪೈಲಟ್‌ಗಳು ಮಾತ್ರ ಪ್ರವೇಶಿಸಬಹುದಾದ ಕಾಕ್‌ಪಿಟ್ ಎಕ್ಸೆಸ್ ಡೋರ್ (ಭದ್ರತಾ ದೃಷ್ಟಿಯಿಂದ ಈ ಬಾಗಿಲುಗಳಲ್ಲಿ ಉನ್ನತ ಮಟ್ಟದ ಲಾಕ್ ಮತ್ತು ಬುಲೆಟ್‌ಪ್ರೂಫ್ ವ್ಯವಸ್ಥೆ ಇರುತ್ತವೆ).
ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಧ್ವನಿವರ್ಧಕ ವ್ಯವಸ್ಥೆ
ವಿಮಾನದ ಬಾಗಿಲುಗಳು ಬಲಿಷ್ಠವಾಗಿರುತ್ತವೆ. ಈ ಬಾಗಿಲುಗಳು pressure-resistant ಆಗಿರುತ್ತವೆ. ಏಕೆಂದರೆ 35 ಸಾವಿರ ಅಡಿ ಎತ್ತರದಲ್ಲಿ ಒಳಗೆ ಮತ್ತು ಹೊರಗಿನ ಒತ್ತಡದಲ್ಲಿ ಭಾರಿ ವ್ಯತ್ಯಾಸ ವಿರುತ್ತದೆ. ಬಹುತೇಕ ಬಾಗಿಲುಗಳು plug type mechanism ಹೊಂದಿರುತ್ತವೆ, ಅಂದರೆ ಬಾಗಿಲನ್ನು ಒತ್ತಡದಿಂದ ಹೊರಗಿನಿಂದ ತೆರೆಯಲು ಸಾಧ್ಯವಿಲ್ಲ. ಅಂದರೆ ಬಾಹ್ಯ ಒತ್ತಡದಿಂದಾಗಿ ಬಾಗಿಲು ಸುರಕ್ಷಿತವಾಗಿರುತ್ತದೆ. ಬಾಗಿಲುಗಳನ್ನು ಸಾಮಾನ್ಯವಾಗಿ composite material ಅಥವಾ high strength aluminum alloy ಬಳಸಿ ತಯಾರಿಸಲಾಗುತ್ತವೆ.
ಕೆಲವೊಂದು ಬಾಗಿಲುಗಳು ಮಾನ್ಯುವಲ್ ಲಾಕ್ ಹೊಂದಿರುತ್ತವೆ- ಕ್ಯಾಪ್ಟನ್ ಅಥವಾ ಸಿಬ್ಬಂದಿ ಬಾಗಿಲು ಮುಚ್ಚುವ ಮೊದಲು ಮ್ಯಾನುವಲ್ ಲಾಕ್ ತಳ್ಳಬೇಕಾಗುತ್ತದೆ. ಸಾಮಾನ್ಯವಾಗಿ, ಬಾಗಿಲು ಮುಚ್ಚಿದ ಮೇಲೆ, ಎಂಜಿನ್ ಸ್ಟಾರ್ಟ್ ಆದಾಗ ತಾನಾಗಿಯೇ ಬಾಗಿಲು ಲಾಕ್ ಆಗುತ್ತದೆ. ಬಾಗಿಲು ಮುಚ್ಚಿಲ್ಲದಿದ್ದರೆ ಅಥವಾ ಸರಿಯಾಗಿ ಲಾಕ್ ಆಗಿಲ್ಲದಿದ್ದರೆ, ಫ್ಲೈಟ್ ಡೆಕ್‌ನಲ್ಲಿ ಎಚ್ಚರಿಕೆಯ ಬೆಳಕು ಅಥವಾ ಸೂಚನೆ ನೀಡುತ್ತದೆ.
ವಿಮಾನಗಳಲ್ಲಿ ಪ್ರತಿಯೊಂದು ಬಾಗಿಲಿನಲ್ಲಿ ಸ್ಲೈಡ್ ರಾಫ್ಟ್ ಸಿಸ್ಟಮ್ ಇರುತ್ತದೆ. ಬಾಗಿಲು ತೆರೆದಾಗ ತುರ್ತು ಜಂಪಿಂಗ್ ಸ್ಲೈಡ್ ತೆರಳುತ್ತದೆ. ಈ ಸ್ಲೈಡ್‌ಗಳು ಕೆಲವೊಮ್ಮೆ ಲೈಫ್ ರಾಫ್ಟ್ ಆಗಿ ಕೂಡ ಕಾರ್ಯನಿರ್ವಹಿಸುತ್ತವೆ. ಇವು ಆರು ಸೆಕೆಂಡುಗಳಲ್ಲಿ ಗಾಳಿ ತುಂಬಿಕೊಂಡು, ಪ್ರಯಾಣಿಕರು ಸುರಕ್ಷಿತವಾಗಿ ಹೊರ ಹೋಗಲು ಸಹಾಯ ಮಾಡುತ್ತವೆ. ವಿಮಾನ ವಾಹನ ತುರ್ತುಗತಿಯಲ್ಲಿ, ಬಾಗಿಲುಗಳು ಸ್ವಯಂಚಾಲಿತವಾಗಿ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ- ಬಾಹ್ಯ ಒತ್ತಡ ಕಡಿಮೆ ಯಾಗುವವರೆಗೆ ಪೈಲಟ್ ಅನುಮತಿ ನೀಡಬೇಕು.
ಫ್ಲೈಟ್ ಅಟೆಂಡೆಂಟ್‌ಗಳು ಬಾಗಿಲನ್ನು armed ಅಥವಾ disarmed ಸ್ಥಿತಿಯಲ್ಲಿ ಇಡುತ್ತಾರೆ. Armed ಅಂದರೆ ತುರ್ತು ಸ್ಲೈಡ್ ಸಕ್ರಿಯ ಸ್ಥಿತಿಯಲ್ಲಿ ಇರುತ್ತದೆ. ಬಾಗಿಲು ಪ್ರತಿ ಹಂತದಲ್ಲೂ 'Locked', 'Unlocked', 'Armed' ಅಥವಾ 'Disarmed’ ಎಂಬ ದಿಶಾಸೂಚಕವನ್ನು ಹೊಂದಿರುತ್ತವೆ.
ಬಾಗಿಲು ಸರಿಯಾಗಿ ಮುಚ್ಚಿಲ್ಲ, ಲಾಕ್ ಆಗಿಲ್ಲ ಎಂದರೆ ಪೈಲಟ್‌ಗೆ ತಕ್ಷಣ ಎಚ್ಚರಿಕೆ ಬರುತ್ತದೆ. ಬಾಗಿಲುಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಕೆಲ ನಿಯಮಗಳನ್ನು ಪಾಲಿಸಬೇಕು. ವಿಮಾನ ಭೂಮಿಯಲ್ಲಿ ಇದ್ದಾಗ ಮಾತ್ರ ಬಾಗಿಲುಗಳನ್ನು ತೆರೆಯಬೇಕು. ಎಂಜಿನ್ ಸ್ಟಾರ್ಟ್ ಆದ ಮೇಲೆ ಅಥವಾ ಪಾಯಿಂಟ್ ನ್ಯಾವಿಗೇಶನ್ ನಡೆಯುತ್ತಿರುವಾಗ ಬಾಗಿಲು ತೆರೆಯುವುದು ಅಪಾಯಕಾರಿ ಯಾಗಿದೆ. ತುರ್ತು ಸಂದರ್ಭಗಳಲ್ಲಿ ಬಾಗಿಲು ತೆರೆಯುವಾಗ ಫ್ಲೈಟ್ ಅಟೆಂಡೆಂಟ್ ಅಥವಾ ಕ್ಯಾಪ್ಟನ್‌ನ ಅನುಮತಿ ಮುಖ್ಯ.