ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janamejaya Umarji Column: ಯಾವುದಾಗಬೇಕು ನಮ್ಮಾಯ್ಕೆ: ಗಾಂಧೀಜಿಯ ಹೆಸರೋ, ಆಶಯವೋ ?

ಹೊಸ ಯೋಜನೆಯ ಹೆಸರಿನಲ್ಲಿ ಎರಡು ಮಹತ್ವದ ಶಬ್ದಗಳು ಸೇರಿಕೊಂಡಿವೆ. ಒಂದು ‘ವಿಕಸಿತ ಭಾರತ’, ಇನ್ನೊಂದು ‘ರಾಮ’. ವಿಕಸಿತ ಭಾರತ ಗಾಂಧಿಯ ಆಶಯವಲ್ಲವೇ? ಪ್ರಭು ಶ್ರೀರಾಮನು ಗಾಂಧಿ ಯವರ ಆರಾಧ್ಯ ದೈವವಲ್ಲವೇ? ಗಾಂಧಿಯವರ ಕನಸು ರಾಮರಾಜ್ಯವಾಗಿರಲಿಲ್ಲವೇ? ಹೆಸರನ್ನು ಮೀರಿ ಇಂಥ ವಿಷಯಗಳು ಚರ್ಚೆಯಾಗಬೇಕಾಗಿವೆ.

ಯಾವುದಾಗಬೇಕು ನಮ್ಮಾಯ್ಕೆ: ಗಾಂಧೀಜಿಯ ಹೆಸರೋ, ಆಶಯವೋ ?

-

Ashok Nayak
Ashok Nayak Dec 19, 2025 9:02 AM

ಯಕ್ಷ ಪ್ರಶ್ನೆ

ಜನಮೇಜಯ ಮುಖರ್ಜಿ

ಸಾರ್ವಜನಿಕ ಜೀವನದಲ್ಲಿ ಹೆಸರೊಂದು ಬಹುಮಟ್ಟಿಗೆ ತನ್ನ ಅರ್ಥಕ್ಕಿಂತಲೂ ಹೆಚ್ಚಿನ ಪ್ರಭಾವ ವನ್ನು ಪಡೆದುಕೊಳ್ಳುತ್ತದೆ. ಕೆಲವೊಮ್ಮೆ ಅದು ಪ್ರೇರಣೆಯಾಗುತ್ತದೆ, ಕೆಲವೊಮ್ಮೆ ರಾಜಕೀಯದ ಕವಚವಾಗುತ್ತದೆ, ಮತ್ತೊಮ್ಮೆ ನಿಜವಾಗಲೂ ಎತ್ತಬೇಕಾದ ಪ್ರಶ್ನೆಗಳನ್ನು ಮರೆಮಾಚುವ ಸಾಧನ ವಾಗುತ್ತದೆ. ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ. ನಮ್ಮ ಆಯ್ಕೆ ಯಾವುದಾಗಿರಬೇಕು? ಗಾಂಧೀಜಿಯ ಹೆಸರೋ ಅಥವಾ ಆಶಯಗಳ ಅನುಷ್ಠಾನವೋ? ಈ ಸಂದಿಗ್ಧತೆಯನ್ನು ‘ವಿಬಿ-ಜಿ- ರಾಮ-ಜಿ’ ತಂದಿದೆ.

ಇದು ಈ ಚಳಿಗಾಲದ ಅಧಿವೇಶನದಲ್ಲಿ, ಪ್ರಸ್ತುತ ಕೇಂದ್ರ ಸರಕಾರ ಮಂಡಿಸಿರುವ The Viksit Bharat Guarantee for Rozgar and Ajeevika Mission ಎಂಬ ವಿಧೇಯಕ. ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA ) ಸುಧಾರಿತ ಮಸೂದೆ. MGNREGA ಯೋಜನೆಯ ಮರು ನಾಮಕರಣ ಎಂದು ಚರ್ಚೆಯಾಗುತ್ತಿದೆ.

‘ಗಾಂಧಿಯವರ ಹೆಸರು ತೆಗೆದು ಹಾಕಲಾಗಿದೆ’ ಎಂದು ವಿಪಕ್ಷಗಳು ವಿರೋಧಿಸುತ್ತಿವೆ. ‘ಗಾಂಧಿ’ ಹೆಸರನ್ನು ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ಪರಿವಾರದ ಪ್ರಮುಖ ರೊಬ್ಬರು ‘ನಾವು ಮಹಾತ್ಮ ಗಾಂಧಿ ಕುಟುಂಬದವರಲ್ಲ’ ಎಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿದ್ದಾರೆ, ಈ ಮರು ನಾಮಕರಣವನ್ನು ವಿರೋಧಿಸಿದ್ದಾರೆ.

ಇದನ್ನು ಭಾವನಾತ್ಮಕ ವಿಷಯವಾಗಿಸುವ ಪ್ರಯತ್ನ ನಡೆದಿದೆ. ಹಲವು ಕಾಂಗ್ರೆಸ್ ನಾಯಕರು ‘ಇದು ಮಹಾತ್ಮ ಗಾಂಧಿಯವರ ಹೆಸರು ಅಳಿಸಿ ಹಾಕುವ ಪ್ರಯತ್ನ’ ಎಂದು ಪ್ರತಿಭಟಿಸುತ್ತಿದ್ದಾರೆ. ವಿಷಯದ ಬದಲಿಗೆ ಹೆಸರಿಗ್ಯಾಕೆ ವಿರೋಧ ಎಂಬ ಪ್ರಶ್ನೆ ಎದ್ದರೆ, ಗಾಂಧಿಯ ಹೆಸರಿನ ರಾಜಕಾರಣ ದ ಇತಿಹಾಸಕ್ಕೆ ಜಾರಬೇಕು.

ಇದನ್ನೂ ಓದಿ: Janamejaya Umarji Column: ಕೆಂಪು ಕಾರಿಡಾರಿನ ಅಂತ್ಯ ಎಂದಿದ್ದೇಕೆ ಪ್ರಧಾನಿ ಮೋದಿ ?

ಭಾರತದ ರಾಜಕಾರಣ ಕೆಲವು ಸಂಕಥನಗಳ ಆಧಾರದಲ್ಲಿ ನಡೆಯುತ್ತಾ ಬಂದಿದೆ. ಉದಾಹರಣೆಗೆ ಸ್ವರಾಜ್ಯದ ಹೋರಾಟವೆಂದರೆ ಅದು ಬ್ರಿಟಿಷರೊಂದಿಗಿನ ಹೋರಾಟ ಮಾತ್ರ, ಆದರೆ ಮೊಘಲರ ವಿರುದ್ಧ ನಡೆದ ಹೋರಾಟಕ್ಕೆ ಅಲ್ಲಿ ಜಾಗವಿಲ್ಲ, ಅದು ಪಠ್ಯ ಪುಸ್ತಕಗಳಲ್ಲಿ ಬರುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಅಹಿಂಸಾ ಚಳವಳಿಯಿಂದ ಮಾತ್ರ.

ಅಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಹೆಸರಿಲ್ಲ. ಸ್ವಾತಂತ್ರ್ಯವನ್ನು ಕೊಡಿಸಿದ್ದು ಕಾಂಗ್ರೆ ಸ್ಸು. ಆಗಿನ ಕಾಂಗ್ರೆಸ್ಸು ಮತ್ತು ಈಗಿನ AICC ಎರಡೂ ಒಂದೇ. ರಾಷ್ಟ್ರಪಿತ ಗಾಂಧೀಜಿಯ ಆಗಿನ ಮತ್ತು ಈಗಿನ ಕಾಂಗ್ರೆಸ್ಸಿನ ಸ್ವತ್ತು ಮಾತ್ರ. ಇಂಥದೇ ಸಂಕಥನಗಳ ಆಧಾರದಿಂದ ಈಗ ನರೇಗಾ ಯೋಜನೆಯ ಮರುನಾಮಕರಣವನ್ನು ವಿರೋಧಿಸಲಾಗುತ್ತಿದೆ.

ಇಲ್ಲಿ ಗಾಂಧೀಜಿ ಹೆಸರನ್ನು ಬದಲಾಯಿಸಲಾಗಿದೆ ಎಂದರೆ ಗಾಂಧಿಯ ಗ್ರಾಮ ಸ್ವರಾಜ್ಯದ ಕಲ್ಪನೆ ಯನ್ನೇ ಕೈಬಿಡಲಾಗಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇಲ್ಲಿ ಗಾಂಧೀಜಿಯ ಗೌರವದ ಪ್ರಶ್ನೆ ಇಲ್ಲ. ಅದು ಪ್ರಶ್ನಾತೀತ. ಚಿಂತನೆ ಮಾಡಬೇಕಾದ ವಿಚಾರವೆಂದರೆ ಅವರ ಹೆಸರನ್ನು ಯೋಜನೆಗೆ ಜೋಡಿಸುವುದೇ ಅವರಿಗೆ ನೀಡುವ ಗೌರವವೇ ಅಥವಾ ಅವರ ಆಶಯಗಳನ್ನು ಸಾಕಾರಗೊಳಿಸು ವುದು ಅವರಿಗೆ ನೀಡುವ ನಿಜವಾದ ಗೌರವವೇ? ಎಂಬುದು.

ಹೊಸ ಯೋಜನೆಯ ಹೆಸರಿನಲ್ಲಿ ಎರಡು ಮಹತ್ವದ ಶಬ್ದಗಳು ಸೇರಿಕೊಂಡಿವೆ. ಒಂದು ‘ವಿಕಸಿತ ಭಾರತ’, ಇನ್ನೊಂದು ‘ರಾಮ’. ವಿಕಸಿತ ಭಾರತ ಗಾಂಧಿಯ ಆಶಯವಲ್ಲವೇ? ಪ್ರಭು ಶ್ರೀರಾಮನು ಗಾಂಧಿಯವರ ಆರಾಧ್ಯ ದೈವವಲ್ಲವೇ? ಗಾಂಧಿಯವರ ಕನಸು ರಾಮರಾಜ್ಯವಾಗಿರಲಿಲ್ಲವೇ? ಹೆಸರನ್ನು ಮೀರಿ ಇಂಥ ವಿಷಯಗಳು ಚರ್ಚೆಯಾಗಬೇಕಾಗಿವೆ.

ಭಾವನಾತ್ಮಕ ಪ್ರತಿಕ್ರಿಯೆ ಗಂಭೀರ ಚರ್ಚೆಯ ದಿಕ್ಕನ್ನು ತಪ್ಪಿಸುತ್ತದೆ. ಗಾಂಧೀಜಿ ಎಂದಿಗೂ ತಮ್ಮ ವೈಯಕ್ತಿಕ ಪೂಜೆಗೆ ಒಪ್ಪಿಕೊಂಡವರಲ್ಲ. ಅವರು ಸತ್ಯ, ನೈತಿಕತೆ, ಆತ್ಮಗೌರವ, ವಿಕೇಂದ್ರೀಕರಣ ಮತ್ತು ಸ್ವಾವಲಂಬನೆಯನ್ನು ಮುಖ್ಯವೆಂದು ಕಂಡವರು. ಈ ಯೋಜನೆಯ ಅನುಷ್ಠಾನವಾದ ಇತಿಹಾಸ ನೋಡಿದರೆ, ಬದಲಾವಣೆ ಅನಿವಾರ್ಯವಾಗಿತ್ತು. ಜತೆಗೆ ಕಾಲಕ್ಕೆ ತಕ್ಕಂತೆ ಹೊಸ ಗುರಿಗೆ ಅನುಗುಣವಾಗಿ ಹೆಸರೂ ಬದಲಾಗಿದೆ ಅಷ್ಟೇ.

ಚರ್ಚೆಯನ್ನು ಮುಂದುವರಿಸುವ ಮೊದಲು ಇತಿಹಾಸವನ್ನೊಮ್ಮೆ ನೋಡಿಕೊಂಡು ಬರಬೇಕು. ವಾಜಪೇಯಿಯವರ ಅವಧಿಯ ‘ಕೂಲಿಗಾಗಿ ಕಾಳು’ ಯೋಜನೆಯನ್ನು ಸುಧಾರಿಸಿ 2005ರಲ್ಲಿ ಡಾ. ಮನಮೋಹನ ಸಿಂಗರ ಯುಪಿಎ ಸರಕಾರ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಯನ್ನು ಜಾರಿಗೆ ತಂದಿತು.

ಗ್ರಾಮೀಣ ಭಾಗದಲ್ಲಿ ಬಡತನ ನಿವಾರಣೆ, ಉದ್ಯೋಗ ಭದ್ರತೆ ಮತ್ತು ವಲಸೆ ಕಡಿತವೇ ಅದರ ಉದ್ದೇಶವಾಗಿತ್ತು. ನಂತರ ಮಹಾತ್ಮ ಗಾಂಧಿಯವರ ಹೆಸರನ್ನು ಆ ಯೋಜನೆಗೆ ಸೇರಿಸಲಾಯಿತು. ಆದರೆ ಹೆಸರನ್ನು ಸೇರಿಸಿದ ಮಾತ್ರಕ್ಕೆ ಗಾಂಧಿಪ್ರಣೀತ ಮೌಲ್ಯಗಳು ಸ್ವಯಂಚಾಲಿತವಾಗಿ ಜಾರಿ ಯಾಗಿವೆ ಎಂದಲ್ಲ. ಆರಂಭಿಕ ವರ್ಷಗಳಿಂದಲೇ ಈ ಯೋಜನೆಯು ವೇತನ ಪಾವತಿಯಲ್ಲಿ ವಿಳಂಬ, ನಕಲಿ ಫಲಾನುಭವಿಗಳು, ಸರಿಯಾಗಿ ನಡೆಯದ ಆಸ್ತಿ ಸೃಜನೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯ ಈ ರೀತಿಯ ಹಲವಾರು ಸಮಸ್ಯೆಗಳನ್ನು ಎದುರಿಸಿತು. ಕೆಲವೆಡೆ ಅದೇ ಗುಂಡಿಯನ್ನು ಮತ್ತೆ ಮತ್ತೆ ತೋಡುವಂಥ ದೂರುಗಳು ಬಂದವು.

ಇದು ಗಾಂಧಿಯವರ ಗ್ರಾಮ ಸ್ವರಾಜ್ಯದ ಅನುಷ್ಠಾನವೇ? ಎಂದು ಜನರು ಮಾತನಾಡಿಕೊಳ್ಳು ವಂತಾಯಿತು. ಇತ್ತೀಚಿನ ವರ್ಷಗಳಲ್ಲಿ, ಗ್ರಾಮೀಣ ಉದ್ಯೋಗ ಯೋಜನೆಗಳ ಜಾರಿಗೆ ಮಹತ್ವದ ಸುಧಾರಣೆಗಳು ನಡೆದಿರುವುದನ್ನೂ ಒಪ್ಪಿಕೊಳ್ಳಬೇಕು. ನೇರ ಲಾಭ ವರ್ಗಾವಣೆ ( DBT) ವ್ಯವಸ್ಥೆಯು ಮಧ್ಯವರ್ತಿಗಳನ್ನು ಕಡಿಮೆ ಮಾಡಿದೆ. ಆಧಾರ್ ಗುರುತಿನ ಚೀಟಿ ಆಧಾರಿತ ಪರಿಶೀಲನೆಯು ನಕಲಿ ಫಲಾನುಭವಿಗಳನ್ನು ನಿಯಂತ್ರಿಸಿದೆ.

ಜಿಯೋ-ಟ್ಯಾಗಿಂಗ್ ಮತ್ತು ಡಿಜಿಟಲ್ ಮೇಲ್ವಿಚಾರಣೆ ಪದ್ಧತಿಯು ಪಾರದರ್ಶಕತೆಯನ್ನು ಹೆಚ್ಚಿಸಿದೆ. ಜಲಸಂರಕ್ಷಣೆ, ಗ್ರಾಮೀಣ ರಸ್ತೆ ಮತ್ತು ಶಾಶ್ವತ ಆಸ್ತಿಗಳ ಸೃಜನೆಗೆ ಹೆಚ್ಚಿನ ಒತ್ತು ನೀಡ ಲಾಗಿದೆ. ಯೋಜನೆಯ ಹೆಸರಿಗಿಂತ ಫಲಿತಾಂಶ ಆಧಾರಿತ ಸುಧಾರಣೆಗಳು ಜನರಿಗೆ ಮುಖ್ಯವಾಗಿವೆ.

ಗಾಂಧಿ ಪ್ರಣೀತ ತತ್ವವು ಕೇವಲ ಉದ್ಯೋಗ ನೀಡುವಿಕೆಗೆ ಸೀಮಿತವಲ್ಲ. ಅದು ಅರ್ಥಪೂರ್ಣ ಶ್ರಮ, ಉತ್ಪಾದಕತೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒತ್ತಿಹೇಳುತ್ತದೆ. ಗ್ರಾಮ ಸ್ವರಾಜ್ಯದ ಮೂಲಕ ಸ್ಥಳೀಯ ಜನರು ತಮ್ಮ ಅಭಿವೃದ್ಧಿಯ ನಿರ್ಣಯಗಳನ್ನು ತಾವೇ ಕೈಗೊಳ್ಳಬೇಕು ಎಂಬುದು ಗಾಂಧೀಜಿಯ ಆಶಯ. ಆದರೆ ಕೌಶಲಾಭಿವೃದ್ಧಿ, ಕಾರ್ಯದ ಗುಣಮಟ್ಟ ಮತ್ತು ಸಮುದಾಯದ ಹೊಣೆಗಾರಿಕೆಗೆ ಸೂಕ್ತ ಒತ್ತು ನೀಡದಿದ್ದರೆ, ಉದ್ಯೋಗ ಖಾತ್ರಿ ಯೋಜನೆಯು ಜನರನ್ನು ರಾಷ್ಟ್ರ ನಿರ್ಮಾತೃಗಳಾಗಿ ರೂಪಿಸುವ ಬದಲು ಕೇವಲ ಜನರನ್ನು ಸರಕಾರದ ಅವಲಂಬಿ ಗಳಾಗಿ ಉಳಿಸುತ್ತದೆ.

ಇದು ಕಮ್ಯುನಿಸ್ಟ್ ಚಿಂತನೆಯ ಅನುಷ್ಠಾನವಾಗುತ್ತದೆ. ಹೆಸರಿನ ಹೊರತಾಗಿ ಹೊಸ ವಿಧೇಯಕ ದಲ್ಲಿ ಹಲವು ಅಂಶಗಳಿವೆ. ನರೇಗಾ ಯೋಜನೆಯಡಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಹೊಸ ಯೋಜನೆಯಡಿ ಇದನ್ನು 125 ದಿನಗಳಿಗೆ ಏರಿಸ ಲಾಗಿದೆ.

ನರೇಗಾದಲ್ಲಿ 15 ದಿನಕ್ಕೊಮ್ಮೆ ವೇತನ ಪಾವತಿಯಾಗುತ್ತಿದ್ದರೆ, ಹೊಸ ಯೋಜನೆಯಲ್ಲಿ ವಾರ ಕ್ಕೊಮ್ಮೆ ವೇತನ ನೀಡುವ ಗುರಿ ಇದೆ. ನರೇಗಾ ಒಂದು ‘ಬೇಡಿಕೆ ಆಧಾರಿತ’ ಯೋಜನೆಯಾಗಿದ್ದು, ಕೆಲಸ ಕೇಳಿದಾಗ ಉದ್ಯೋಗ ನೀಡುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ ವಿಬಿ-ರಾಮ್ ಜಿ ಯೋಜನೆ ‘ಪೂರೈಕೆ ಆಧಾರಿತ’ವಾಗಿದ್ದು, ಬಜೆಟ್ ಹಂಚಿಕೆಗೆ ಅನುಗುಣವಾಗಿ ಕೆಲಸ ನೀಡಲಾಗು ತ್ತದೆ.

ನರೇಗಾದಲ್ಲಿ ಶೇ.100ರಷ್ಟು ವೇತನವನ್ನು ಕೇಂದ್ರವೇ ಭರಿಸುತ್ತಿತ್ತು, ಆದರೆ ಹೊಸ ಯೋಜನೆಯಲ್ಲಿ ರಾಜ್ಯಗಳು ಶೇ.10ರಿಂದ 40ರಷ್ಟು ಪಾಲನ್ನು ಭರಿಸಬೇಕಾಗುತ್ತದೆ. ನರೇಗಾದಲ್ಲಿ ವರ್ಷವಿಡೀ ಕೆಲಸ ಇರುತ್ತಿತ್ತು, ಇದು ಕೃಷಿ ಅವಧಿಯಲ್ಲಿ ಕಾರ್ಮಿಕರ ಕೊರತೆಗೆ ಕಾರಣವಾಗುತ್ತದೆ ಎಂಬ ದೂರಿತ್ತು. ಹೊಸ ಮಸೂದೆಯಲ್ಲಿ ಬಿತ್ತನೆ ಮತ್ತು ಕೊಯ್ಲು ಸಮಯದಲ್ಲಿ 60 ದಿನಗಳ ಕಾಲ ಉದ್ಯೋಗಕ್ಕೆ ವಿರಾಮ ನೀಡಲು ಅವಕಾಶವಿದೆ.

ಅಲ್ಲದೆ, ಹೊಸ ಯೋಜನೆಯು ಪಿಎಂ ಗತಿ-ಶಕ್ತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೊಂದಿಗೆ ಸಂಯೋಜನೆಗೊಂಡಿದ್ದು, ಕೇವಲ ಹಳ್ಳ ತೆಗೆಯುವುದಕ್ಕೆ ಸೀಮಿತವಾಗದೆ ಶಾಶ್ವತ ಆಸ್ತಿ ಸೃಜನೆಗೆ ಒತ್ತು ನೀಡುತ್ತದೆ. ಜಾಬ್ ಕಾರ್ಡ್‌ಗಳ ಅವಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ.

ಅಕ್ರಮ ತಡೆಯಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಜಿಪಿಎಸ್ ಅನ್ನು ಕಡ್ಡಾಯ ಗೊಳಿಸಲಾಗಿದೆ. ನಿಯಮ ಉಲ್ಲಂಘನೆಗೆ ಪಾವತಿ ಸಬೇಕಾಗುವ ದಂಡವನ್ನು 1000 ರುಪಾಯಿ ಯಿಂದ 10000 ರುಪಾಯಿಗೆ ಹೆಚ್ಚಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನರೇಗಾ ಒಂದು ಸಾಮಾಜಿಕ ಭದ್ರತಾ ಹಕ್ಕಾಗಿದ್ದರೆ, ವಿಬಿ-ರಾಮ್ ಜಿ ಯೋಜನೆಯು ಅಭಿವೃದ್ಧಿ ಆಧಾರಿತ ಕಾರ್ಯ ಕ್ರಮ ಆಗಿದೆ.

ಹೊಸ ಯೋಜನೆ ಅಂತಿಮವೂ ಅಲ್ಲ, ಅಲ್ಲಿ ಲೋಪಗಳೇ ಇಲ್ಲ ಅಂತಿಲ್ಲ. ಆದರೆ ಪರಿಣಾಮಕಾರಿ ಅನುಷ್ಠಾನ, ವಲಸೆ ಕಡಿತ, ಗ್ರಾಮೀಣ ಆದಾಯ ಸ್ಥಿರತೆ, ಜಲಮೂಲಗಳ ಸಂರಕ್ಷಣೆ ಮತ್ತು ಆಸ್ತಿ ಸೃಜನೆ ಮುಂತಾದ ಮಾನದಂಡಗಳಂಥ ವಿಷಯಗಳು ಚರ್ಚೆಯ ಕೇಂದ್ರಬಿಂದು ಆಗಬೇಕಾಗಿದೆ. ಬಹುಶಃ 10-40 ಪ್ರತಿಶತ ರಾಜ್ಯದ ಪಾಲುದಾರಿಕೆ ಕಷ್ಟ ಆಗಬಹುದಾ? ಇದು ಚರ್ಚೆಯಾಗ ಬೇಕಾಗಿದೆ.

ಗ್ರಾಮೀಣ ಭಾರತಕ್ಕೆ ಅಗತ್ಯವಿರುವುದು ಹೆಸರಿನ ರಾಜಕಾರಣವಲ್ಲ, ಬದಲಾಗಿ ತಂದ ಬದಲಾವಣೆ ಗಳಿಂದ ಕಾರ್ಯಕ್ಷಮತೆ ಹೆಚ್ಚುತ್ತದೆಯೇ? ಪಾರದರ್ಶಕತೆ ಮೆರೆಯುತ್ತದೆಯೇ? ಸೋರಿಕೆ ನಿಲ್ಲುತ್ತ ದೆಯೇ? ಎಂಬೆ ವಿಷಯಗಳು ಮುನ್ನೆಲೆಗೆ ಬರಬೇಕಾಗಿದೆ. ಮಹಾತ್ಮ ಗಾಂಧಿಯವರಿಗೆ ಕೊಡುವ ನಿಜವಾದ ಗೌರವವೆಂದರೆ ಕೇವಲ ಅವರ ಹೆಸರನ್ನು ಪ್ರತಿಯೊಂದು ಯೋಜನೆಯಲ್ಲಿ ಉಳಿಸಿ ಕೊಳ್ಳುವುದಲ್ಲ, ಬದಲಿಗೆ ಅನುಷ್ಠಾನವು ಅವರ ನೈತಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸು ವಂತೆ ನೋಡಿಕೊಳ್ಳುವುದೇ ಆಗಿದೆ.

ಯೋಜನೆಗಳು ಯಶಸ್ವಿಯಾಗಲು ಗಾಂಧಿ ಸತ್ವ ಬೇಕು, ತತ್ವ ಬೇಕು. ಸತ್ಯ, ಸಮಗ್ರತೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಅರ್ಥಪೂರ್ಣ ಯೋಜನೆಗಳು ಬರಬೇಕು. ಗಾಂಧಿಯವರು ಹೇಳುವ ಉತ್ತರದಾಯಿತ್ವವನ್ನು ಹೊಸ ಮಸೂದೆ ಸಾಕಾರಗೊಳಿಸುವುದೇ?ಕಾದು ನೋಡಬೇಕು....

(ಲೇಖಕರು ಪ್ರಚಲಿತ ವಿದ್ಯಮಾನ ವಿಶ್ಲೇಷಕರು)