ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mohan Vishwa Column: ಸೋಲಿನ ಸರದಾರನ ಸುಳ್ಳಿನ ಸರಮಾಲೆ

ರಾಜೀವ್ ಗಾಂಧಿಯವರ ನಿಧನದ ನಂತರ ಪ್ರಧಾನಿಯಾಗಬೇಕೆಂದುಕೊಂಡಿದ್ದ ಸೋನಿಯಾ ಗಾಂಧಿ ಯವರ ಕನಸು ನನಸಾಗದೆ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿ ಆಡಳಿತ ನಡೆಸಿದ್ದರು. ಸುಳ್ಳುಗಳ ಮೂಲಕ ಚುನಾವಣೆಗಳನ್ನು ಗೆದ್ದು ಆಡಳಿತ ನಡೆಸಿದ್ದ ನೆಹರು ಕುಟುಂಬಸ್ಥ ರಿಗೆ, ಮೋದಿಯವರು ಪ್ರಧಾನಿಯಾದ ನಂತರ ವಿರೋಧಪಕ್ಷವಾಗಿ ತಮಗಿರುವ ಜವಾಬ್ದಾರಿಗಳ ಸಾಮಾನ್ಯ ಜ್ಞಾನವೂ ಇಲ್ಲ.

Mohan Vishwa Column: ಸೋಲಿನ ಸರದಾರನ ಸುಳ್ಳಿನ ಸರಮಾಲೆ

-

ವೀಕೆಂಡ್‌ ವಿತ್‌ ಮೋಹನ್

ಸ್ವಾತಂತ್ರ್ಯಾ ನಂತರ ಸುಮಾರು ಆರು ದಶಕಗಳ ಕಾಲ ಸೋಲನ್ನು ಕಾಣದೆ ದೇಶದ ಚುಕ್ಕಾಣಿ ಹಿಡಿದ ನೆಹರು ಕುಟುಂಬಕ್ಕೆ ಕಳೆದ 12 ವರ್ಷಗಳಿಂದ 100 ಸೀಟನ್ನೂ ಗೆಲ್ಲಲಾಗುತ್ತಿಲ್ಲ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಕುಳಿತಲ್ಲಿ ಅಧಿಕಾರ ಸಿಕ್ಕಿತ್ತು.

1947ರ ನಂತರ ವಿರೋಧಿಗಳು ಇಲ್ಲದಂತೆ ದೇಶದಾದ್ಯಂತ ಚುನಾವಣೆಗಳ ಮೇಲೆ ಚುನಾವಣೆ ಗಳನ್ನು ಕಾಂಗ್ರೆಸ್ ಗೆದ್ದದ್ದು ಕೆಳಮಟ್ಟದ ಸಂಘಟನೆಯಿಂದ ಅಲ್ಲವೇ ಅಲ್ಲ. ಸ್ವಾತಂತ್ರ್ಯ ಹೋರಾಟ ವನ್ನು ಹೈಜಾಕ್ ಮಾಡಿ, ಕಾಂಗ್ರೆಸ್ ಪಕ್ಷ ಮತ್ತು ನೆಹರು ಕುಟುಂಬದವರಿಂದಲೇ ಸ್ವಾತಂತ್ರ್ಯ ಸಿಕ್ಕಿ ತೆಂಬ ಸುಳ್ಳನ್ನು ಜನರ ಮುಂದಿಟ್ಟು ಚುನಾವಣೆಗಳನ್ನು ಗೆದ್ದು ಪ್ರಧಾನಿ ಗದ್ದುಗೆಯಲ್ಲಿ ಕುಳಿತದ್ದು ನೆಹರು ಕುಟುಂಬಸ್ಥರು.

ರಾಜೀವ್ ಗಾಂಧಿಯವರ ನಿಧನದ ನಂತರ ಪ್ರಧಾನಿಯಾಗಬೇಕೆಂದುಕೊಂಡಿದ್ದ ಸೋನಿಯಾ ಗಾಂಧಿಯವರ ಕನಸು ನನಸಾಗದೆ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿ ಆಡಳಿತ ನಡೆಸಿದ್ದರು. ಸುಳ್ಳುಗಳ ಮೂಲಕ ಚುನಾವಣೆಗಳನ್ನು ಗೆದ್ದು ಆಡಳಿತ ನಡೆಸಿದ್ದ ನೆಹರು ಕುಟುಂಬಸ್ಥರಿಗೆ, ಮೋದಿಯವರು ಪ್ರಧಾನಿಯಾದ ನಂತರ ವಿರೋಧಪಕ್ಷವಾಗಿ ತಮಗಿರುವ ಜವಾಬ್ದಾರಿಗಳ ಸಾಮಾನ್ಯ ಜ್ಞಾನವೂ ಇಲ್ಲ.

ವಿದೇಶಿ ಷಡ್ಯಂತ್ರಗಾರರು ಮತ್ತು ಎಡಚರರ ಆಜ್ಞೆಯ ಮೇರೆಗೆ, ಸುಳ್ಳುಗಳನ್ನು ಹೇಳಿ ನೇರಾನೇರ ಸಿಕ್ಕಿಹಾಕಿಕೊಂಡು ಪೇಚಿಗೆ ಸಿಲುಕುತ್ತಾರೆ. ನೆಹರು ಮತ್ತು ಇಂದಿರಾ ಗಾಂಧಿ ಕಾಲದಲ್ಲಿ ಮಾಡು ತ್ತಿದ್ದಂತೆ, ಸುಳ್ಳು ಹೇಳಿ ಜನರ ದಾರಿ ತಪ್ಪಿಸಿ ಚುನಾವಣೆ ಗೆಲ್ಲುವ ಕಾಲ ಇದಲ್ಲ.

ಇದನ್ನೂ ಓದಿ: Mohan Vishwa Column: ಮಹಾತ್ಮ ಗಾಂಧಿಯವರಿಗೆ ಮಾದರಿಯಾಗಿದ್ದ ಶ್ರೀರಾಮ

ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಸುಳ್ಳುಗಳು ಕೆಲವೇ ಸೆಕೆಂಡುಗಳಲ್ಲಿ ಬೆತ್ತಲಾಗುತ್ತವೆ. 95 ಚುನಾವಣೆಗಳನ್ನು ಸೋತಿರುವ ರಾಹುಲ್ ಗಾಂಧಿಯವರು, ಇಂಥ ಸತತ ಸೋಲಿನ ನಂತರವೂ ಪಾಠ ಕಲಿತಂತೆ ಕಾಣುತ್ತಿಲ್ಲ, ಮತ್ತೆ ಮತ್ತೆ ಹಸಿ ಸುಳ್ಳುಗಳನ್ನು ಹೇಳಿ ಜನರ ಮುಂದೆ ಬೆತ್ತಲಾಗು ತ್ತಿದ್ದಾರೆ.

ಹೇಳಿದ ಸುಳ್ಳನ್ನೇ ಪದೇ ಪದೆ ಹೇಳಿ ನಿಜವೆಂಬಂತೆ ನಂಬಿಸುವ ಕಾಲ ಹೋಗಿದೆ. ಬೆರಳಂಚಿನಲ್ಲಿ ಮಾಹಿತಿ ಸಿಗುವ ಕಾಲವಿದು. ರಾಜಕೀಯ ಪಕ್ಷದ ನಾಯಕರು ಹೇಳಿದ ವಿಷಯದ ಸತ್ಯಾ ಸತ್ಯತೆ ಯನ್ನು ಕ್ಷಣಾರ್ಧದಲ್ಲಿ ಬಯಲಿಗೆಳೆಯುವ ಕಾಲವಿದು. ರಫೆಲ್ ಯುದ್ಧವಿಮಾನದ ವಿಚಾರದಲ್ಲಿ ಸುಳ್ಳುಸುದ್ದಿ ಹಬ್ಬಿಸಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸುಳ್ಳುಸುದ್ದಿ ಹಬ್ಬಿಸಲು ಹೋಗಿ ಚುನಾವಣೆ ಸೋತರು, ನೋಟು ಅಮಾನ್ಯೀ ಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೋಗಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾಯಿತು, ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದ ಮೀಸಲಾತಿಯನ್ನು ವಿರೋಧ ಮಾಡಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾಯಿತು.

ಕಳೆದ ಹತ್ತು ವರ್ಷದಲ್ಲಿ ಸುಳ್ಳುಗಳನ್ನು ಹೇಳಿ ಸೋತ ನಂತರವೂ ಬುದ್ಧಿ ಕಲಿಯದೆ ಮತ್ತೊಮ್ಮೆ ಸುಳ್ಳುಗಳ ಸರಮಾಲೆಯನ್ನು ಜನರ ಮುಂದೆ ಕೊಂಡೊಯ್ಯುವ ಕೆಲಸ ನಡೆಯುತ್ತಿದೆ ರಾಹುಲರ ಕಡೆಯಿಂದ.

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದಾಗ, ಅದಕ್ಕೆ ರಾಜಕೀಯ ಬೆರೆಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಅನ್ನು ಮುಂದಿಟ್ಟುಕೊಂಡು, ‘ಅಮೆರಿಕದ ಮಧ್ಯಸ್ಥಿಕೆಯಿಂದ ಯುದ್ಧ ನಿಲ್ಲಿಸಲಾಯಿತು’ ಎಂಬ ನಿರೂಪಣೆಯನ್ನು ಪ್ರಾರಂಭಿಸಿದ್ದು ರಾಹುಲ್ ಗಾಂಧಿ ಪಟಾಲಂ.

ಸ್ವತಃ ಮೂರೂ ಸೇನೆಗಳ ದಂಡನಾಯಕರು ಪತ್ರಿಕಾಗೋಷ್ಠಿ ನಡೆಸಿ ಭಾರತದ ವಾಯು ದಾಳಿಗೆ ಹೆದರಿ ಪಾಕಿಸ್ತಾನ ಯುದ್ಧ ನಿಲ್ಲಿಸಲು ಅಂಗಲಾಚಿತೆಂದು ಹೇಳಿದ ನಂತರವೂ, ಅಮೆರಿಕ ಅಧ್ಯಕ್ಷರ ಮಾತಿನ ಮೇಲೆಯೇ ರಾಹುಲ್ ಗಾಂಧಿಯವರಿಗೆ ನಂಬಿಕೆ.

ಪ್ರಧಾನಮಂತ್ರಿ ಮೋದಿಯವರು ಅಮೆರಿಕ ಅಧ್ಯಕ್ಷನಿಗೆ ಶರಣಾದರೆಂಬ ಸುಳ್ಳನ್ನು ಹೇಳಿ ಭಾರತಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದು ರಾಹುಲ್ ಗಾಂಧಿ. ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಕಾರ್ಯಾಚರಣೆಯ ವಿವರವನ್ನು ಜಗತ್ತಿಗೆ ಹೇಳಲು ವಿರೋಧಪಕ್ಷಗಳ ನಾಯಕರನ್ನೂ ಒಳಗೊಂಡ ನಿಯೋಗವನ್ನು ಪ್ರಧಾನಿ ರಚಿಸಿ ಕಳುಹಿಸಿದ್ದರು.

ಪ್ರಧಾನಿ ಮೋದಿಯವರು ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ರಾಜಕೀಯ ಮಾಡಿರಲಿಲ್ಲ. ‘ಭಾರತದ ಆರ್ಥಿಕತೆ ಸತ್ತಿದೆ’ ಎಂದಿದ್ದರು ಅಮೆರಿಕ ಅಧ್ಯಕ್ಷ ಟ್ರಂಪ್. ಆತ ಹೇಳಿದ ಮಾತನ್ನು ಅನುಮೋದಿಸಿದ್ದು ರಾಹುಲ್ ಗಾಂಧಿ. ಕಾಂಗ್ರೆಸ್ಸಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಹತ್ತನೆಯ ಸ್ಥಾನದಲ್ಲಿತ್ತು, ಮುಳುಗುತ್ತಿರುವ ಆರ್ಥಿಕತೆ ಹೊಂದಿದ ದೇಶಗಳ ಸಾಲಿನಲ್ಲಿತ್ತು.

ಮೋದಿಯವರ ಆಡಳಿತದಲ್ಲಿ ಇಂದು ಫ್ರಾನ್ಸ್, ಇಂಗ್ಲೆಂಡ್,ಜಪಾನ್ ದೇಶಗಳನ್ನು ಹಿಂದಿಕ್ಕಿ ನಾಲ್ಕನೆಯ ಸ್ಥಾನದಲ್ಲಿದೆ ಭಾರತ. ಅಮೆರಿಕವು ಹೆಚ್ಚಿನ ಸುಂಕ ವಿಧಿಸಿದ ನಂತರವೂ ಭಾರತದ ಆರ್ಥಿಕ ಪ್ರಗತಿ ಶೇಕಡ 7.4ರ ದರದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ‘ಭಾರತದ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ ಮುಂದುವರಿಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿದೆ’ ಎಂದು ಹೇಳಿದೆ.

ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳು ಭಾರತದ ಬೆಳವಣಿಗೆಯನ್ನು ಹೊಗಳುತ್ತಿದ್ದರೆ, ರಾಹುಲ್ ಗಾಂಧಿ ಮಾತ್ರ ಸುಳ್ಳು ಹೇಳುವ ಚಾಳಿಯನ್ನು ಬಿಟ್ಟಿಲ್ಲ. ವಿದೇಶಿ ಷಡ್ಯಂತ್ರಗಾರರ ನೆರವಿನಿಂದ ರಾಹುಲ್ ಗಾಂಧಿ ಪ್ರಾರಂಭಿಸಿದ ಮತ್ತೊಂದು ಹಸಿ ಸುಳ್ಳಿನ ಕಥೆ ‘ಮತಗಳ್ಳತನ’. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಮುಂದಿಟ್ಟುಕೊಂಡು, ‘ಮೋದಿಯವರು ಮತಗಳನ್ನು ಕದ್ದು ಚುನಾವಣೆ ಗೆಲ್ಲುತ್ತಿದ್ದಾರೆ’ ಎಂಬ ಸುಳ್ಳಿನ ಕಥೆಯನ್ನು ಅವರು ಪ್ರಾರಂಭಿಸಿದ್ದರು.

ಕರ್ನಾಟಕದ ಮಹದೇವಪುರದ ಚುನಾವಣೆ ಫಲಿತಾಂಶವನ್ನು ಮುಂದಿಟ್ಟುಕೊಂಡು ಆಟಂ ಬಾಂಬ್ ಸಿಡಿಸುತ್ತೇನೆಂದು ಹೇಳಿ, ಠುಸ್ ಪಟಾಕಿ ಹಚ್ಚಿದ್ದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ದ್ವಂದ್ವ ನಿಲುವನ್ನು ಮತಗಳ್ಳತನದ ಸುಳ್ಳುಕಥೆಯು ಸ್ಪಷ್ಟವಾಗಿ ತೋರಿಸುತ್ತದೆ.

ಒಂದೆಡೆ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ತೋರಿಸಿ ಕಥೆ ಹೇಳುವುದು, ಮತ್ತೊಂದೆಡೆ ಚುನಾವಣಾ ಆಯೋಗ S.I.R (ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ) ಮಾಡ ಹೊರಟರೆ ವಿರೋಧ ಮಾಡುವುದು. ಈ ದ್ವಂದ್ವ ನಿಲುವುಗಳನ್ನು ಜನರು ಗಮನಿಸುತ್ತಿರುತ್ತಾರೆಂಬ ಕನಿಷ್ಠ ಜ್ಞಾನವೂ ವರಿಗೆ ಇಲ್ಲವಲ್ಲ ಎಂಬುದು ಆಶ್ಚರ್ಯದ ಸಂಗತಿ.

ಮತಗಳ್ಳತನದ ಸುಳ್ಳುಕಥೆಯ ಮೂಲಕ ಜನರ ತಲೆ ಕೆಡಿಸಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ನಿರೂಪಣೆಯನ್ನು ಜಗತ್ತಿನ ಮುಂದೆ ತೋರಿಸಿ, ಮೋದಿಯವರನ್ನು ಕೆಳಗಿಳಿಸುವ ದೊಡ್ಡ ಷಡ್ಯಂತ್ರ ಠುಸ್ ಪಟಾಕಿಯಾಯಿತು.

ನೇಪಾಳದಲ್ಲಿ ಯುವಕರು (GEN- Z) ಬೀದಿಯಲ್ಲಿ ನಿಂತು ಅಲ್ಲಿನ ಸರಕಾರದ ವಿರುದ್ಧ ಹೋರಾಟ ನಡೆಸಿ, ಅಲ್ಲಿನ ಪ್ರಧಾನಿಯು ಕುಟುಂಬ ಸಮೇತ ದೇಶ ಬಿಡುವಂತೆ ಮಾಡಿದ್ದರು. ನೇಪಾಳದಲ್ಲಿ ನಡೆದ GEN-Z ಹೋರಾಟವನ್ನು ಮುಂದಿಟ್ಟುಕೊಂಡು ಮತ್ತೊಂದು ಸುಳ್ಳಿನ ಕಥೆ ಹೇಳ ಹೊರಟಿದ್ದು ರಾಹುಲ್ ಗಾಂಧಿ.

ನೇಪಾಳದ ಮಾದರಿಯಲ್ಲಿ ಭಾರತದ ಯುವಕರು ಬೀದಿಗೆ ಬರಬೇಕು, ಮೋದಿ ವಿರುದ್ಧ ಹೋರಾಟ ಮಾಡಬೇಕು ಎಂದು ಪದೇ ಪದೆ ಹೇಳಿದ್ದು ರಾಹುಲ್ ಗಾಂಧಿ. GEN- Z ಎಂಬ ಪದವನ್ನು ತಮ್ಮ ಭಾಷಣಗಳಲ್ಲಿ ಪದೇ ಪದೆ ಹೇಳಿ ಯುವಕರನ್ನು ದಾರಿ ತಪ್ಪಿಸುವ ಷಡ್ಯಂತ್ರಕ್ಕೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕೈ ಹಾಕಿದ್ದುಂಟು.

ನೇಪಾಳದ GEN-Z ಅಲ್ಲಿನ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿ ದಿದ್ದರು. ಆ ಅರ್ಥದಲ್ಲಿ ವಿಶ್ಲೇಷಿಸಿದರೆ ಭಾರತದ GEN- Z ಗಳಿಗೆ ಮೊದಲು ಕಣ್ಣಿಗೆ ಬೀಳಬೇಕಿರು ವುದು ಕುಟುಂಬವನ್ನೇ ರಾಜಕಾರಣ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ.

ಅವರದ್ದೇ ಪಕ್ಷದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ‘ನೆಹರು ಕುಟುಂಬದ ಹೆಸರು ಹೇಳಿಕೊಂಡು ಕಾಂಗ್ರೆಸ್ಸಿಗರು ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದರು. ಭಾರತದ GEN-Z ಗಳಿಗೆ ಉತ್ತಮ ಉದ್ಯೋಗಾವಕಾಶಗಳಿವೆ.

ಮಾಹಿತಿ ತಂತ್ರಜ್ಞಾನದ ಮೂಲಕ ಅನೇಕ ವಿಷಯಗಳ ಮಾಹಿತಿಗಳು ಬೆರಳಿನ ತುದಿಯಲ್ಲಿ ದೊರೆಯುತ್ತಿವೆ. ರಾಹುಲ್ ಗಾಂಧಿಯವರ GEN- Z ಕಥೆಗೆ ಭಾರತದ ಯುವಕರು ಸೊಪ್ಪು ಹಾಕಲಿಲ್ಲ, ಅವರ ಮತ್ತೊಂದು ಸುಳ್ಳು ಠುಸ್ ಪಟಾಕಿಯಾಗಿದೆ.

ಕೇಂದ್ರ ಬಜೆಟ್ ಅಧಿವೇಶನ ನಡೆಯುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಬಜೆಟ್ ಬಗ್ಗೆ ಹೆಚ್ಚಾಗಿ ಚರ್ಚಿಸಬೇಕು. ಜಾಗತಿಕ ಮಟ್ಟದಲ್ಲಿ ಅನೇಕ ಬದಲಾವಣೆಗಳಾಗುತ್ತಿರುವ ಸಂದರ್ಭದಲ್ಲಿ 2026ರ ಬಜೆಟ್ ಪ್ರಮುಖವಾಗಿತ್ತು. ಆದರೆ ರಾಹುಲ್ ಗಾಂಧಿಯವರು ಮಾಡಿದ್ದೇನು? ಪ್ರಕಟಣೆ ಯಾಗದ ಪುಸ್ತಕವೊಂದನ್ನು ಸಂಸತ್ತಿಗೆ ತಂದು, ಆ ಪುಸ್ತಕದೊಳಗಿದ್ದ ‘ಚೀನಾ ಭಾರತದ ಗಡಿಯೊಳಗೆ ತನ್ನ ವಾಹನಗಳನ್ನು ತಂದಿತ್ತು, ಅದರ ವಿರುದ್ಧ ಕಾರ್ಯಾಚರಣೆ ನಡೆಸಲು ಸಮ್ಮತಿ ಸಿಗಲಿಲ್ಲ’ ಎಂಬ ಕಥೆಯನ್ನು ಸಂಸತ್ತಿನಲ್ಲಿ ಚರ್ಚೆಗೆ ತಂದರು. ಭಾರತೀಯ ಸೇನಾ ದಂಡನಾಯಕ ರು ಒಂದು ಇಂಚು ಭೂಭಾಗವನ್ನೂ ಚೀನಾಕ್ಕೆ ಬಿಟ್ಟುಕೊಟ್ಟಿಲ್ಲವೆಂಬುದನ್ನು ಹೇಳಿದ ನಂತರವೂ, ಪದೇ ಪದೆ ಚೀನಾ ಗಡಿಯೊಳಗೆ ಪ್ರವೇಶಿಸಿದೆ ಎಂಬ ಸುಳ್ಳನ್ನು ಹೇಳುತ್ತಾ ಬಂದದ್ದು ರಾಹುಲ್ ಗಾಂಧಿ.

ಭಾರತೀಯ ಸೇನಾ ಮುಖ್ಯಸ್ಥರ ಮಾತಿನ ಮೇಲೆ ರಾಹುಲ್ ಗಾಂಧಿಯವರಿಗೆ ನಂಬಿಕೆಯಿಲ್ಲ, ಬದಲಿಗೆ ಎಲ್ಲಾ ಪ್ರಕಟವಾಗಿರುವ ಲೇಖನದಲ್ಲಿ ನಂಬಿಕೆಯಿದೆ. ಸೇನೆಯ ನಿವೃತ್ತ ಅಧಿಕಾರಿಗಳು ಪುಸ್ತಕವನ್ನು ಪ್ರಕಟಿಸಬೇಕಾದರೆ, ಸೇನೆಯ ಮುಖ್ಯಸ್ಥರ ಅನುಮತಿ ಪಡೆಯಬೇಕು. ಸೇನೆಗೆ ಸಂಬಂಧಿಸಿದಂತೆ ಅನೇಕ ಸೂಕ್ಷ್ಮ ಸಂಗತಿಗಳಿರುತ್ತವೆ, ವಿರೋಧಿ ದೇಶಗಳಿಗೆ ಮುಂದೊಂದು ದಿನ ಈ ಸೂಕ್ಷ್ಮ ಸಂಗತಿಗಳೇ ಅಸ್ತ್ರವಾಗಬಹುದು.

ಇಂದು ಚೀನಾ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ತಮ್ಮ ಮುತ್ತಜ್ಜನ ಕಾಲದಲ್ಲಿ 24000 ಚದರ ಕಿಲೋಮೀಟರ್ ಭೂಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದರ ಬಗ್ಗೆ ತುಟಿ ಬಿಚ್ಚುವುದಿಲ್ಲ. ಭಾರತ ಮತ್ತು ಚೀನಾ ಭಾಯಿ ಭಾಯಿ ಎಂದು ಹೇಳಿ ಸೇನೆಯನ್ನು ನಿಶ್ಶಸ್ತ್ರೀಕರಣಗೊಳಿಸಿದ್ದು ನೆಹರು. ಭಾರತದ ಬೆನ್ನಿಗೆ ಚೂರಿ ಹಾಕಿದ ಚೀನಾ, ಭಾರತದ ದೊಡ್ಡ ಭೂಭಾಗವನ್ನು ನೆಹರು ಕಾಲದಲ್ಲಿ ಆಕ್ರಮಿಸಿಕೊಂಡಿತ್ತು.

‘ಹುಲ್ಲು ಬೆಳೆಯಲೂ ಯೋಗ್ಯವಲ್ಲದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ’ ಎಂಬ ಬೇಜವಾಬ್ದಾರಿಯುತ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಅಂದು ನೀಡಿದ್ದರು. ಅಮೆರಿಕದ ಒತ್ತಡಕ್ಕೆ ಮಣಿದು ಭಾರತವು ವ್ಯಾಪಾರ ಒಪ್ಪಂದಕ್ಕೆ ಕೈಹಾಕಿದೆ, ಕೃಷಿಯನ್ನು ಒಪ್ಪಂದದಲ್ಲಿ ಸೇರಿಸಲಾಗಿದೆ, ಟ್ರಂಪ್‌ಗೆ ಹೆದರಿ ಮೋದಿ ಸಹಿ ಹಾಕುತ್ತಿದ್ದರೆಂಬ ಹೊಸ ಸುಳ್ಳು ಕಥೆಯನ್ನು ರಾಹುಲ್ ಗಾಂಧಿ ಹೇಳುತ್ತಿದ್ದಾರೆ.

ವಿಪರ್ಯಾಸವೆಂದರೆ ಒಪ್ಪಂದಕ್ಕೆ ಅಧಿಕೃತವಾಗಿ ಇನ್ನೂ ಸಹಿ ಹಾಕಿಲ್ಲ. ಅಮೆರಿಕ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ ಮತ್ತು ಅದಕ್ಕೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ; ಡೊನಾಲ್ಡ್ ಟ್ರಂಪ್ ಟ್ವೀಟ್‌ ಮಾಡಿದ ವಿಷಯಗಳನ್ನು ಮೋದಿಯವರು ಸಂಪೂರ್ಣವಾಗಿ ಅಂಗೀಕರಿಸಿಲ್ಲ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ‘ಕೃಷಿ ಉತ್ಪನ್ನಗಳನ್ನು ಒಪ್ಪಂದದಿಂದ ದೂರ ಇಡಲಾಗಿದೆ’ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ, ಕಾಂಗ್ರೆಸ್ಸಿಗರು ತಮ್ಮ ಸುಳ್ಳುಕಥೆಯನ್ನು ಬಿಟ್ಟಿಲ್ಲ. ಈ ಹಿಂದೆ ಸ್ವತಃ ಡೊನಾಲ್ಡ್ ಟ್ರಂಪ್, ‘ಮೋದಿಯವರೊಂದಿಗೆ‌ ವ್ಯಾಪಾರದಲ್ಲಿ ಚೌಕಾಸಿ ಮಾಡುವುದು ಬಹಳ ಕಷ್ಟ’ ಎಂದು ಹೇಳಿದ್ದರು.

ಶೇ.50ರಷ್ಟು ಇದ್ದ ಸುಂಕವನ್ನು ಶೇ.18ಕ್ಕೆ ಇಳಿಸುವ ಮೂಲಕ ಅಮೆರಿಕದೊಂದಿಗೆ ವ್ಯಾಪಾರ ನಡೆಸುತ್ತಿರುವ ದೇಶಗಳ ಮೇಲೆ ಹೇರಿರುವ ಕನಿಷ್ಠ ಸುಂಕದ ದೇಶವಾಗಿದೆ ಭಾರತ. ಸತತ ಚುನಾವಣಾ ಸೋಲುಗಳಿಂದ ಹತಾಶೆಗೊಂಡಿರುವ ರಾಹುಲ್ ಗಾಂಧಿ, ಸತತ ಸುಳ್ಳಿನ ಸರದಾರನಾಗಿ ಜನರ ಮುಂದೆ ಪದೇ ಪದೆ ಬೆತ್ತಲಾಗುತ್ತಿರುತ್ತಾರೆ.