Hari Paraak Column: ವೈಭವ್ ಸೂರ್ಯವಂಶಿ ನೀತಿ ಹೊಡೆದು ಆಳಬೇಕು
ರಾಜೇಂದ್ರ ಸಿಂಗ್ ಬಾಬು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದಶಕಗಳ ಹಿಂದೆ ಈ ಮಾತಿಗೆ ಚಿತ್ರಪ್ರೇಮಿಗಳಿಗೆ ರೋಮಾಂಚನಗೊಳಿಸುವ ತಾಕತ್ತು ಇತ್ತು. ಆದರೆ, ಈಗ ಅದೇ ಮಾತು ಹೇಳಿದರೆ, ನಿರ್ದೇಶನ ಮಾಡ್ತಾರೆ. ಆದ್ರೆ ನಿಜವಾಗ್ಲೂ ಮಾಡ್ತಾರಾ, ಮಾಡಿದ್ರೆ ಕಂಪ್ಲೀಟ್ ಮಾಡ್ತಾರಾ, ಮಾಡಿದ್ರೆ ರಿಲೀಸ್ ಮಾಡ್ತಾರಾ ಅನ್ನೋ ಪ್ರಶ್ನೆ ಸಿನಿಪ್ರೇಮಿಗಳಿಗೆ ಬಂದರೆ ತಪ್ಪಿಲ್ಲ.
-
ತುಂಟರಗಾಳಿ
ಸಿನಿಗನ್ನಡ
ರಾಜೇಂದ್ರ ಸಿಂಗ್ ಬಾಬು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದಶಕಗಳ ಹಿಂದೆ ಈ ಮಾತಿಗೆ ಚಿತ್ರಪ್ರೇಮಿಗಳಿಗೆ ರೋಮಾಂಚನಗೊಳಿಸುವ ತಾಕತ್ತು ಇತ್ತು. ಆದರೆ, ಈಗ ಅದೇ ಮಾತು ಹೇಳಿದರೆ, ನಿರ್ದೇಶನ ಮಾಡ್ತಾರೆ. ಆದ್ರೆ ನಿಜವಾಗ್ಲೂ ಮಾಡ್ತಾರಾ, ಮಾಡಿದ್ರೆ ಕಂಪ್ಲೀಟ್ ಮಾಡ್ತಾರಾ, ಮಾಡಿದ್ರೆ ರಿಲೀಸ್ ಮಾಡ್ತಾರಾ ಅನ್ನೋ ಪ್ರಶ್ನೆ ಸಿನಿಪ್ರೇಮಿಗಳಿಗೆ ಬಂದರೆ ತಪ್ಪಿಲ್ಲ.
ಯಾಕಂದ್ರೆ, ಸಿಂಗ್ ಬಾಬು ಅಭಿಮಾನಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಖುಷಿಪಡುವ ಅವಕಾಶವನ್ನೇ ಕೊಟ್ಟಿಲ್ಲ. ಕುರಿ, ಕೋತಿ, ಕತ್ತೆಗಳ ನಂತರ ಸಿಂಗ್ ಬಾಬು ಅವರಿಗೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪ ಲಾಗಿಲ್ಲ. ತಮ್ಮ ಪುತ್ರ ಆದಿತ್ಯ ಅವರೊಂದಿಗೆ ಒಂದಷ್ಟು ಪ್ರಯತ್ನ ಮಾಡಿದರೂ ಅದಾವುದೂ ಹಿಡಿಯಲಿಲ್ಲ. ಜತೆಗೆ ಉಪೇಂದ್ರ ಮತ್ತು ರಮ್ಯಾ ಅವರಿದ್ದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಅನ್ನೋ ಸಿನಿಮಾ ರಕ್ತ ಕಾಶ್ಮೀರ ಅನ್ನೋ ಹೆಸರಲ್ಲಿ ಬಿಡುಗಡೆ ಆಗಿ ಡಬ್ಬಾ ಸೇರಿಕೊಂಡಿದೆ.
ಜತೆಗೆ ಇತ್ತೀಚಿನ ದಿನಗಳಲ್ಲಿ ಅಂದಿನ ಕಾಲದ ಸಿಂಗ್ ಬಾಬು ಅವರ ನಿರ್ದೇಶನದ ಝಲಕ್ ಸಿನಿಪ್ರಿಯರಿಗೆ ಕಾಣಿಸುತ್ತಿಲ್ಲ. ಹಾಗಂತ ಬಾಬು ಡಲ್ ಆಗಿzರೆ ಎಂದರ್ಥ ಅಲ್ಲ. ಆದರೆ, ಅವರ ಕಾನ್ಸೆಗಳು ಇಂದಿನ ಪೀಳಿಗೆಯ ಚಿತ್ರಗಳಿಗೆ ಮ್ಯಾಚ್ ಆಗುತ್ತಿಲ್ಲ. ಸುನಿಲ್ ಕುಮಾರ್ ದೇಸಾಯಿ ಸೇರಿದಂತೆ ಅನೇಕ ಹಿರಿಯ ನಿರ್ದೇಶಕರು ಎದುರಿಸುತ್ತಿರೋ ಸವಾಲು ಇದು.
ಇಂಥ ಸಂದರ್ಭದಲ್ಲಿ ಆಗಾಗ ಸಿಂಗ್ ಬಾಬು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಬರ್ತಾ ಇರುತ್ತೆ. ಈಗಲೂ ಬಂದಿದೆ. ಚಿತ್ರದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಚಿತ್ರ ಅನೌನ್ಸ್ ಆಗಿರೋದನ್ನ ನೋಡಿ ಕೆಲವರು ಸಿಂಗ್ ಬಾಬು ಹೊಸ ಚಿತ್ರ ಬರ್ತಾ ಇದೆ ಅಂತ ಥ್ರಿಲ್ ಆಗಿದ್ದರೆ, ಇನ್ನು ಕೆಲವರು, ಹೌದಾ, ಮಾಡಿ ರಿಲೀಸ್ ಮಾಡ್ಲಿ, ಆಮೇಲೆ ಮಾತಾಡೋಣ ಅನ್ನೋ ವೈರಾಗ್ಯವನ್ನೂ ತೋರಿಸುತ್ತಿರೋದು ಸುಳ್ಳಲ್ಲ.
ಇದನ್ನೂ ಓದಿ: Hari Paraak Column: ವಿಶ್ವಗುರು ಬರೀ ದರ್ಶನ ಕೊಡೋದು, ಸಂದರ್ಶನ ಅಲ್ಲ
ಲೂಸ್ ಟಾಕ್ -ವೈಭವ್ ಸೂರ್ಯವಂಶಿ
ಏನಪ್ಪಾ, ಎಸ್‌ಎಸ್‌ಎಲ್‌ಸಿ ಎಕ್ಸಾಮ್ ಡ್ರಾಪ್ ಮಾಡಿ ಬಂದು ಐಪಿಎಲ್ ಆಡ್ತಾ ಇದ್ದೀಯಂತೆ?
- ನಂಗೀಗ ಐಪಿಎಲ್ ಟೀಮಿಂದ ನನ್ನ ಡ್ರಾಪ್ ಮಾಡಬಾರದು ಅನ್ನೋದೊಂದೇ ಗುರಿ
ಏನಪ್ಪಾ ಓದೋ ವಯಸ್ಸಲ್ಲಿ ಹಿಂಗೆಲ್ಲಾ ಮಾತಾಡ್ತೀಯ?
- ಅಯ್ಯೋ ಓದಿ ಯಾರ್ ಉದ್ಧಾರ ಆಗಿದ್ದಾರೆ ಬಿಡ್ರೀ..
ನಿನ್ನ ಬಾಯಲ್ಲಾದ್ರೆ ಈ ಮಾತು ಕೇಳೋಕೆ ಚೆನ್ನಾಗಿರುತ್ತೆ. ಸರಿ ಅದೇನು ಎಲ್ಲ ಬಾಲು ಹೊಡೆಯೋಕೆ ಹೋಗ್ತೀಯಲ್ಲ ನೀನು?
- ‘ಹೊಡೆದು’ ಆಳಬೇಕು ಅನ್ನೋ ನೀತಿ ನನ್ನದು
ದೊಡ್ಡ ದೊಡ್ಡ ಬೋಲರ‍್ಸ್‌ಗೆಲ್ಲ ಸರಿಯಾಗಿ ಬಾರಿಸ್ತೀಯ. ಅವರ ಬೋಲಿಂಗ್ ನಿನ್ನ ಮುಂದೆ ಏನೂ ಅಲ್ಲ ಅಲ್ವಾ?
- ರೀ, ನಾನು ಹಂಗೆಲ್ಲಾ ಮಾತಾಡಲ್ಲ. ಯಾಕಂದ್ರೆ ನಾನು ಲೂಸ್ ಶಾಟ್ಸ್ ಹೊಡೆಯೊಲ್ಲ, ಈ ಸಂದರ್ಶನದ ಹೆಸರಿನ ಥರ ಲೂಸ್ ಟಾಕ್ ಮಾಡಲ್ಲ
ಅದ್ಸರಿ, ನಿನ್ನ ಫಿಟ್ನೆಸ್ ರಹಸ್ಯ ಏನು ?
- ಗುಂಡ್ ಗುಂಡಗಿದ್ದೀನಿ ಅಂತ ಆಡಿಕೊಳ್ತಾ ಇದ್ದೀರಾ? ಏನ್ ಮಾಡೋದ್ರಿ? ನಾನು ಊಟದ ವಿಷಯದಲ್ಲೂ ಒಳ್ಳೆ ಬ್ಯಾಟ್ಸಮನ್ನು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಮರಿಖೇಮು ಕಾಲೇಜು ಸೇರ್ಕೊಂಡ. ಅಪ್ಪ ಇಡೀ ವರ್ಷಕ್ಕೆಂದು ಕಳಿಸಿದ ದುಡ್ಡು ಮೂರೇ ತಿಂಗಳಿಗೆ ಖಾಲಿ ಆಯ್ತು, ದುಡ್ಡಿಗೇನು ಮಾಡೋದು? ಅಪ್ಪ ಖೇಮುಗೆ ಕಾಲ್ ಮಾಡಿದ ಮರಿಖೇಮು ‘ಅಪ್ಪಾ ನೀನು ನಂಬಲ್ಲ, ನಮ್ಮ ಕಾಲೇಜಲ್ಲಿ ನಾಯಿಗಳಿಗೆ ಮಾತೋಡೋದನ್ನ ಕಲಿಸುತ್ತಾರಂತೆ ’ಅಂದ. ಆಶ್ಚರ್ಯಗೊಂಡ ಖೇಮು ‘ಹೌದಾ ಹಂಗಾದ್ರೆ ನಮ್ಮ ಮೋತಿನೂ ಅಲ್ಲಿಗೆ ಸೇರಿಸಬೇಕಲ್ಲ ಹೆಂಗೆ?’ ಅಂದ. ಅದಕ್ಕೆ ಮರಿಖೇಮು ‘ವೆರಿಸಿಂಪಲ್ ಒಂದು ಲಕ್ಷ ಕಳಿಸಿ, ನಾನು ಅಡ್ಮಿಷನ್ ಮಾಡಿಸ್ತೀನಿ’ ಅಂದ. ಸರಿ ನಾಯಿ ಬಂತು. ಒಂದು ಲಕ್ಷನೂ ಬಂತು.
ಮತ್ತೆ ಮೂರು ತಿಂಗಳಿಗೆ ದುಡ್ಡು ಖಾಲಿ ಆಯ್ತು. ಮತ್ತೆ ಮರಿಖೇಮು ಮನೆಗೆ ಕಾಲ್ ಮಾಡಿದ ‘ಅಪ್ಪಾ ಈಗ ಹೊಸ ಸ್ಟೀಮ್ ಬಂದಿದೆ. ನಾಯಿಗೆ ಓದೋದನ್ನೂ ಕಲಿಸ್ತಾರಂತೆ’ ಖೇಮುಗೆ ಮತ್ತೆ ಆಶ್ಚರ್ಯ, ‘ನಮ್ಮ ಮೋತಿಗೂ ಓದೋದು ಕಲಿಸಬೇಕಲ್ಲ’ ಅಂದ. ‘ಸರಿ ಅದಕ್ಕೇನಂತೆ 2 ಲಕ್ಷ ಕಳಿಸು, ನಾನು ಅರೇಂಜ್ ಮಾಡ್ತೀನಿ’ ಅಂದ ಮರಿಖೇಮು.
ಸರಿ ಮರಿಖೇಮುಗೆ 2 ಲಕ್ಷ ತಲುಪಿತು. ಕೋರ್ಸ್ ಮುಗೀತಾ ಬಂತು. ಮನೆಗೆ ಹೋಗೋ ಸಮಯ ಮರಿಖೇಮುಗೆ ಗೊತ್ತಿತ್ತು. ಮೋತಿಗೆ ಮಾತಾಡೋಕೂ ಬರಲ್ಲ, ಓದೋಕೂ ಬರಲ್ಲ ಅಂತ ಗೊತ್ತಾದ್ರೆ, ನಮ್ಮಪ್ಪ ನನ್ನ ಸುಮ್ಮ ಬಿಡಲ್ಲ ಅಂತ. ಹಾಗಾಗಿ ಆ ನಾಯಿನ ಗುಂಡಿಟ್ಟು ಸಾಯಿಸಿಬಿಟ್ಟು ಮನೆಗೆ ಬಂದ. ಖೇಮು ಫುಲ್ ಎಕ್ಸೈಟೆಡ್ ಆಗಿ ಮೋತಿ ಮಾತಾಡೋದನ್ನ, ಓದೋದನ್ನ ನೋಡೋಕೆ ಕಾಯ್ತಾ ಇದ್ದ.
ಮರಿಖೇಮು ಬಂದವನೇ ಸಪ್ಪೆ ಮುಖ ಹಾಕಿಕೊಂಡು ಹೇಳಲು ಶುರು ಮಾಡಿದ ‘ಅಪ್ಪ ನಿಂಗೊಂದು ಬ್ಯಾಡ್ ನ್ಯೂಸ್.’ ಮೊನ್ನೆ ನಾನು ಕಾಲೇಜಿನಿಂದ ನನ್ನ ರೂಮ್ಗೆ ಬಂದಾಗ ನಮ್ಮ ಮೋತಿ ಎಕನಾ ಮಿಕ್ ಟೈಮ್ಸ ಓದ್ತಾ ಇತ್ತು. ನನ್ನನ್ನು ನೋಡಿದ ತಕ್ಷಣ ‘ನಿನ್ನತ್ರ ಏನೋ ಕೇಳೋದು ಮರೆತಿದ್ದೆ.
ನಿಮ್ಮಪ್ಪ ಆ ಪಕ್ಕದ ಮನೆ ಪದ್ಮಾ ಆಂಟಿ ಜತೆ ಇನ್ನೂ ಸಂಬಂಧ ಇಟ್ಕೊಂಡಿದಾನಾ?’ ಅಂತ ಕೇಳ್ತು. ಖೇಮು ಗಾಬರಿಯಾಗಿ ‘ಅಯ್ಯೋ, ಅದು ನಿಮ್ಮಮ್ಮನ ಜತೆ ಮಾತಾಡೋಕೆ ಮುಂಚೆ ಅದನ್ನು ಗುಂಡಿಟ್ಟು ಸಾಯಿಸಬೇಕಿತ್ತು’ ಅಂದ. ಅದಕ್ಕೆ ಮರಿ ಖೇಮು ಹೇಳಿದ ‘ನಾನಾಗಲೇ ಆ ಕೆಲಸ ಮಾಡಿ ದೀನಿ ಅಪ್ಪಾ. ಎಷ್ಟೇ ಆದರೂ ನಿನ್ನ ಮಗ ಅಲ್ಲವೇ?!’
ಲೈನ್ ಮ್ಯಾನ್
ಸಿಲಿಂಡರ್ ಸತ್ಯ
- ‘ಮಗಾ ಹೊಸ ಸ್ಕೂಟರ್ ತಗೊಂಡೆ’
‘ಹೌದಾ, ಹೆಂಗಿದೆ? ಮುಂದೆ ಎಲ್ಲಾ ಜಾಗ ಇದೆ? ಸಿಲಿಂಡರ್ ಇಡಬಹುದಾ?’
‘ಇಡಬಹುದು, ಸಿಲಿಂಡರ್ ಸಿಕ್ರೆ...’
ಸರಳ ಸತ್ಯ
- ಕೆಲವರಿಗೆ ಸಿಗೋ ಬೆಲೆ ಏನೇ ತಿಪ್ಪರಲಾಗ ಹೊಡೆದ್ರೂ ಬೇರೆಯವರಿಗೆ ಸಿಗಲ್ಲ.. ಯಾಕಂದ್ರೆ ಗಾಡಿ 1 ಲೀಟರ್ ಪೆಟ್ರೋಲ್‌ಗೆ ಎಷ್ಟೇ kilometer ಓಡಿದ್ರೂ ಅದನ್ನ mile-age ಅಂತಾನೇ ಅನ್ನೋದು.
ಕುಶಲೋಪರಿ
- ಅವ್ನು ‘ಹಾಯ್’ ಅಂತ ಮಾತಾಡಿಸ್ತಾನೆ, ನಾನು, ‘ಲೋ’ ಅಂತ ಮಾತಾಡಿಸ್ತಿನಿ. ಯಾಕಂದ್ರೆ, ಅವ್ನು ‘ಹೈ’ ಲೆವೆಲ್, ನಾನು ‘ಲೋ’ ಲೆವೆಲ್
ಪ್ರಶಸ್ತಿ ಸಮಯ
- ನೀವು ಪ್ರಶಸ್ತಿ ಸಮಾರಂಭಕ್ಕೆ ಬರ್ತೀರ ಇಲ್ವಾ ಅನ್ನೋದ್ರ ಮೇಲೆ ನಿಮಗೆ ಪ್ರಶಸ್ತಿ ಸಿಗುತ್ತಾ ಇಲ್ವಾ ಅನ್ನೋದು ಡಿಪೆಂಡ್ ಆಗುತ್ತೆ.
ಮಳೆ ಬಂದಾಗ ನೆನಪಾಗುವ ಹಾಡಿನ ಧಾಟಿ
- ವರುಣ ರಾಗ
ಮೂರೊತ್ತೂ ನಾನ್ ವೆಜ್ ತಿನ್ನುವವನದು
- ‘ಪೀಸ್’ ಪುಲ್ ಲೈಫ್
ಯಾವುದಕ್ಕೂ ಇರಲಿ ಅಂತ ಇಟ್ಟುಕೊಳ್ಳುವ ಒಂದು ಜತೆ ಎಕ್ಸ್ಟ್ರಾ ಚಪ್ಪಲಿ
- ಸ್ಟೆಪ್‌ಣಿ
“ಪ್ರೊಫೆಷನಲ್ " ಬೈಗುಳಗಳು
- ಅಡುಗೆ ಭಟ್ಟ: ‘ನನ್ನತ್ರ ನಿನ್ ಬೇಳೆ ಬೇಯೋಲ್ಲ’
- ಮೇಷ್ಟ್ರು: ‘ಇವತ್ ನಿಂಗೆ ಸರಿಯಾಗಿ ಪಾಠ ಕಲಿಸ್ತೀನಿ’
- ಡಾಕ್ಟರ್: ‘ನಿಂಗೇನ್ ಬಂದಿರೋದು, ದೊಡ್ ರೋಗ’
- ಸಾಹಿತಿ: ‘ಬರ್ಕೊಡ್ತೀನಿ’, ನೀನ್ ಉದ್ಧಾರ ಆಗಲ್ಲ
- ಪೋಸ್ಟ್ʼಮನ್: ‘ನನ್ ತಂಟೆಗ್ ಬಂದ್ರೆ ಅಡ್ರೆಸ್ಗಿಲ್ದಂಗ್ ಹೋಗ್ಬಿಡ್ತೀಯಾ’
- ಪೊಲೀಸ್: ‘ಅವ್ರ್ ಬಿಡಿ ಹೆಂಗ್ ಬೇಕಾದ್ರೂ ಬಯ್ಯಬಹುದು. ಅವ್ರನ್ನ ಹೇಳೋರಿಲ್ಲ, ಕೇಳೋರಿಲ್ಲ.’