Hari Paraak Column: ವಿಶ್ವಗುರು ಬರೀ ದರ್ಶನ ಕೊಡೋದು, ಸಂದರ್ಶನ ಅಲ್ಲ
ಜನ ನಿಂತುಕೊಳ್ಳೋದಿರಲಿ, ಸ್ವತಃ ಉಪೇಂದ್ರ ಅವರೇ ಚುನಾವಣೆಯಲ್ಲಿ ನಿಂತುಕೊಳ್ಳಲು ರೆಡಿ ಇಲ್ಲ. ಆದರೆ ಸುಮ್ಮನೆ ಕೂತುಕೊಂಡ್ರೆ ಜನ ನನ್ನ ಮರೆತು ಬಿಡ್ತಾರೆ ಅನ್ನೋ ಕಾರಣಕ್ಕೆ ಅವರು ಆಗಾಗ ಮಾತಾಡ್ತಾರೆ. ಪಾಪ ಈಗಲೂ ಶೂಟಿಂಗ್ ಮಧ್ಯೆ ಒಂದಿಷ್ಟು ಬಿಡುವು ಸಿಕ್ಕಿತ್ತು ಅಂತ ಅನ್ಸುತ್ತೆ. ಅದಕ್ಕೆ ಖಾಲಿ ಕೂತಿದ್ದೀನಲ್ಲ ಅಂತ ಬಂದು ಒಂದಷ್ಟು ಖಾಲಿ ಪಲಾವ್ ಮಾತನಾಡಿ ಎದ್ದು ಹೋಗಿದ್ದಾರೆ ಬುದ್ಧಿವಂತ.
-
ತುಂಟರಗಾಳಿ
ಸಿನಿಗನ್ನಡ
ನಟ, ನಿರ್ದೇಶಕ ಉಪೇಂದ್ರ ಮೊನ್ನೆ ಮತ್ತೆ ತಮ್ಮದೇ ನಟನೆ ನಿರ್ದೇಶನದ ಪತ್ರಿಕೋಗೋಷ್ಠಿ ಒಂದನ್ನು ಕರೆದಿದ್ದರು. ಅಲ್ಲಿ, ಮತ್ತೆ ಅದೇ ಒನ್ ಮ್ಯಾನ್ ಶೋ, ನಾನು ನಾನು ಅನ್ನೋ ಹಾಹಾಕಾರ. ಯಾರಿಗೂ ಅರ್ಥವಾಗದೇ ಇರೋ ರೀತಿ ಮಾತಾಡೋದೇ ಬುದ್ದಿವಂತಿಕೆ ಅನ್ನೋ ಭಾವನೆ. ಕೊನೆಗೂ ಏನನ್ನೂ ಸ್ಪಷ್ಟವಾಗಿ ಹೇಳದೇ ಅಲ್ಲಿಂದ ಎದ್ದು ಹೋದರು ಉಪೇಂದ್ರ. ಅವರ ಪ್ರಜಾಕೀಯದಿಂದ ರಾಜಕೀಯದಲ್ಲಿ ಏನೋ ಬದಲಾವಣೆ ಆಗುತ್ತೆ ಅಂತ ಅಂದುಕೊಂಡವರು ಮಾತ್ರ ಅವರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.
ಆದರೆ ಉಪೇಂದ್ರ ತೋಳ ಬಂತು ತೋಳ ಎನ್ನುವಂತೆ ಆಗ ಬಂದೆ, ಈಗ ಬಂದೆ ಅಂತ ಕಾಗೆ ಹಾರಿಸ್ತಾನೇ ಇದ್ದಾರೆ. ಅವರು ಬಂದ ಕೂಡಲೇ ಏನೋ ಆಗಿ ಬಿಡುತ್ತೆ ಅನ್ನೋ ನಂಬಿಕೆ ಯಾರಿಗೂ ಇಲ್ಲ. ಅಲ್ಲದೆ ಅವರಿಗೆ ಓಟು ಹಾಕಲು ಜನ ತುದಿಗಾಲಿನಲ್ಲಿ ನಿಂತುಕೊಂಡೂ ಇಲ್ಲ.
ಜನ ನಿಂತುಕೊಳ್ಳೋದಿರಲಿ, ಸ್ವತಃ ಉಪೇಂದ್ರ ಅವರೇ ಚುನಾವಣೆಯಲ್ಲಿ ನಿಂತುಕೊಳ್ಳಲು ರೆಡಿ ಇಲ್ಲ. ಆದರೆ ಸುಮ್ಮನೆ ಕೂತುಕೊಂಡ್ರೆ ಜನ ನನ್ನ ಮರೆತು ಬಿಡ್ತಾರೆ ಅನ್ನೋ ಕಾರಣಕ್ಕೆ ಅವರು ಆಗಾಗ ಮಾತಾಡ್ತಾರೆ. ಪಾಪ ಈಗಲೂ ಶೂಟಿಂಗ್ ಮಧ್ಯೆ ಒಂದಿಷ್ಟು ಬಿಡುವು ಸಿಕ್ಕಿತ್ತು ಅಂತ ಅನ್ಸುತ್ತೆ. ಅದಕ್ಕೆ ಖಾಲಿ ಕೂತಿದ್ದೀನಲ್ಲ ಅಂತ ಬಂದು ಒಂದಷ್ಟು ಖಾಲಿ ಪಲಾವ್ ಮಾತನಾಡಿ ಎದ್ದು ಹೋಗಿದ್ದಾರೆ ಬುದ್ಧಿವಂತ. ಆದರೆ ಅವರಿಗಾಗಿ ಕಾದು ಕುಳಿತಿ ರುವ ಅವರ ಅಭಿಮಾನಿಗಳಿಗೆ ಮಾತ್ರ ಕಾದ ಹೆಂಚಿನ ಮೇಲೆ ಕೂತಿರುವ ಖಾಲಿ ದೋಸೆಗಾಗಿ ಕಾದು ಕುಳಿತಿರುವ ಕೆಲಸ ಮಾತ್ರ ತಪ್ಪಿಲ್ಲ.
ಇದನ್ನೂ ಓದಿ: Hari Paraak Column: ಇರಾನ್-ಇಸ್ರೇಲ್ʼನ ನಾವು ಏನಂತ ಬಯ್ತಿದ್ದೀವಿ?: ʼಗ್ಯಾಸ್ʼ ಹೋಲ್ಸ್
ಲೂಸ್ ಟಾಕ್ -ನರೇಂದ್ರ ಮೋದಿ
ಏನ್ ಸರ್ ದೇಶದ ಜನ ಗ್ಯಾಸು, ಬೆಲೆ ಏರಿಕೆ ಅಂತ ಸುಸ್ತಾಗಿದ್ದಾರೆ, ನೀವ್ ನೋಡಿದ್ರೆ ಟೀ ಸೊಪ್ಪು ಕೀಳ್ತಾ ಇದ್ದೀರಲ್ಲ?
- ಶ್! ನಾನು ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾಗ ಯಾರೂ ಡಿಸ್ಟರ್ಬ್ ಮಾಡಂಗಿಲ್ಲ ನನ್ನ.
ಆದ್ರೂ, ಕೂಲಿ ಕೆಲ್ಸ ಮಾಡ್ತಾ ಇದ್ದೀರಲ್ಲ ಸರ್?
- ಏನ್ ಮಾಡೋದು ಕೂಲಿಗಳ ವಟೂ ಮುಖ್ಯ ಅಲ್ವಾ?
ಎಲೆಕ್ಷನ್ ಬಿಟ್ಟು ನೀವು ಬೇರೆ ಏನೂ ಮಾತಾಡಲ್ಲ ಅನ್ಸುತ್ತೆ. ಆದ್ರೂ ನೀವು ಯುದ್ಧ ನಿಲ್ಲಿಸೋ ಕೆಲಸ ಮಾಡಲಿಲ್ವಲ್ಲ ಸರ್?
- ಮಾಡಿದೆ ಕಣ್ರೀ, ಸಿಬಿಐ, ಐಡಿ, ಇಡಿ ರೈಡ್ ಮಾಡಿಸ್ತೀನಿ ಅಂತ ಹೆದರಿಸಿದೆ. ಅವ್ರು ಹೆದರಿ ಕೊಳ್ಳಲಿಲ್ಲ.
ಕರ್ಮ, ಹೋಗ್ಲಿ, ನೀವ್ಯಾಕೆ ಪತ್ರಕರ್ತರಿಗೆ ಸಂದರ್ಶನ ಕೊಡಲ್ಲ?
- ನನ್ನ ಪರ ಇರೋ ಪತ್ರಕರ್ತರಿಗೆ ಕೊಡ್ತೀನಪ್ಪ. ಅಲ್ಲದೆ, ನಾನು ವಿಶ್ವಗುರು ಕಣ್ರೀ, ಬರೀ ದರ್ಶನ ಅಷ್ಟೇ ಕೊಡೋದು, ಸಂದರ್ಶನ ಅಲ್ಲ.
ಸರಿ, ಬೇರೆ ಥರ ಕೇಳ್ತೀನಿ. ನೀವ್ಯಾಕೆ ನಿಮ್ಮ ವಿರೋಧಿ ಪತ್ರಕರ್ತರಿಗೆ ಸಂದರ್ಶನ ಕೊಡಲ್ಲ?
- ಅಯ್ಯೋ, ನಾನ್ ಕೊಡದೇ ಇದ್ರೂ ನಿಮ್ಮಂಥೋರು ಕಾಲ್ಪನಿಕ ಸಂದರ್ಶನ ಅನ್ನೋ ಹೆಸರಲ್ಲಿ ಆಗಾಗ ಸಂದರ್ಶನ ತಗೊಂಡ್ಬಿಡ್ತಾರೆ ಬಿಡಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಅಂಡ್ ಫ್ಯಾಮಿಲಿ ಅಂದ್ರೆ ಖೇಮು ಶ್ರೀ, ಮರಿ ಖೇಮು, ಅವರ ಜೊತೆಗೆ ಖೇಮುವಿನ ಅಜ್ಜ ಅಜ್ಜಿ ದುಬಾಯ್ಗೆ ಹೋಗಿ ಸೆಟಲ್ ಆದ್ರು. ಅವರ ಉಳಿದ ಸಂಬಂಧಿಕರೆ ಇಂಡಿಯಾದ ಇದ್ರು. ದುಬಾಯ್ನ್ ಹವಾಮಾನ ಒಗ್ಗದೆ ಅಜ್ಜಿಗೆ ಅನಾರೋಗ್ಯ ಕಾಡತೊಡಗಿತು. ಎಷ್ಟೇ ಪ್ರಯತ್ನ ಪಟ್ಟರೂ ಅಜ್ಜಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಅಜ್ಜಿ ತೀರಿ ಹೋದ ಸುದ್ದಿ ಯನ್ನು ಇಂಡಿಯಾದಲ್ಲಿದ್ದ ಸಂಬಂಧಿಕರಿಗೆ ಮುಟ್ಟಿಸಿದ ಖೇಮು ‘ಅಜ್ಜಿಯ ಆಸೆಯಂತೆ ಅವಳನ್ನು ನಮ್ಮ ಹುಟ್ಟೂರ ಮಣ್ಣು ಮಾಡಬೇಕು, ಹಾಗಾಗಿ ಆಕೆಯ ಬಾಡಿಯನ್ನು ಇಲ್ಲಿಂದ ಕಳಿಸುತ್ತೇನೆ’ ಎಂದು ಹೇಳಿದ.
ಸರಿ ದುಬಾಯ್ ನಿಂದ ಅಜ್ಜಿಯ ದೇಹ ಕಫಿನ್ ಬಾಕ್ಸ್ನಲ್ಲಿ ಇಂಡಿಯಾಗೆ ಬಂತು. ಸಂಬಂಧಿ ಕರು ಅದನ್ನು ಮನೆಗೆ ತಂದರು. ಬಾಕ್ಸ್ ಓಪನ್ ಮಾಡಿದರೆ ಅದರಂದು ಲೆಟರ್ ಇತ್ತು. ಅದರಲ್ಲಿ ಖೇಮು ಹೀಗೆ ಬರೆದಿದ್ದ. ‘ನೋಡಿ, ಅಜ್ಜಿಯ ಕೊರಳಲ್ಲಿ ಎರಡು ಮೂರು ಬಂಗಾರದ ಸರಗಳಿವೆ. ಅವನ್ನು ಎಲ್ಲ ಹೆಣ್ಣುಮಕ್ಕಳೂ ಸಮನಾಗಿ ಹಂಚಿಕೊಳ್ಳಿ. ಜೊತೆಗೆ ಕೈಯಲ್ಲಿ ಬಳೆಗಳೂ ಇವೆ, ಅವನ್ನೂ ಅಷ್ಟೆ.
ಇನ್ನು ಚಿಂಟು ರೀಬಾಕ್ ಶೂ ಬೇಕಂತ ಹೇಳಿದ್ದ ಅದನ್ನು ಅಜ್ಜಿಯ ಕಾಲಿಗೆ ಹಾಕಿ ಕಳಿಸಿ ದ್ದೇನೆ. ಅಜ್ಜಿಯ ಕೈಯಲ್ಲಿ ರ್ಯಾಡೋ ವಾಚ್ ಇದೆ ಅದನ್ನು ಪಿಂಟುಗೆ ಕೊಡಿ. ಅಜ್ಜಿ ಉಟ್ಟುಕೊಂಡಿರುವ ಸೀರೆ ತುಂಬಾ ಕಾಸ್ಟ್ಲೀ. ಅದನ್ನು ರೇವತಿಗೆ ಕೊಡಿ. ಕೈ ಬೆರಳಲ್ಲಿರೋ ವಜ್ರದ ಉಂಗುರವನ್ನು ನಮ್ಮ ಸುಮತಿಗೆ ಕೊಡಿ. ಇನ್ನೊಂದು ಮುಖ್ಯ ವಿಷಯ. ಯಾರಿಗಾ ದರೂ ಇನ್ನೇನಾದರೂ ಹೇಳಿಬಿಡಿ.... ಬೇಕಿದ್ದರೆ ಈಗಲೇ ಇತ್ತೀಚೆಗೆ ಯಾಕೋ ಅಜ್ಜನಿಗೂ ಹುಷಾರಿಲ್ಲ!
ಲೈನ್ ಮ್ಯಾನ್
ಐಪಿಎಲ್ ‘ಕಪ್’ ಗೆದ್ದರೆ ಕೊಡುವ ಪ್ರೈಜ್ ಮನಿ
- ’ಕಪ್ಪು’ ಹಣ
ಅಮ್ಮಂದಿರ ಸಮ್ಮೇಳನ ನಡೆದರೆ ಅದಕ್ಕೆ ಬರುವ ತಾಯಂದಿರ ಗುಂಪನ್ನು ಏನಂತಾರೆ?
- ‘ಮಾ’ಬ್
ನಾಯಿಗಳಿಗೆ ಇಷ್ಟವಾಗುವ, ವ್ಯಕ್ತಿ
- ‘ಬೋನಿ’ ಕಪೂರ್
ಬೆಲೆ ಬಾಳುವ ಮುತ್ತುಗಳನ್ನು ಬಚ್ಚಿಡುವ ಜಾಗ
- ಲಿಪ್ ಲಾಕರ್
ಬರೀ ಇನ್ಕಮಿಂಗ್ ಕಾಲ್ ಗೋಸ್ಕರ ಇಡ್ಕೊಂಡಿರೋ ಮೊಬೈಲ್ ಪೋನ್
- ‘ಹಿಯರ್’ ಫೋನ್
ರೈಲ್ವೆ ಇಲಾಖೆಯಲ್ಲಿ ನೀಡುವ ತರಬೇತಿ
- ಟ್ರೈನಿಂಗ್
ಓಟ್ ಹಾಕಲಿ ಅಂತ ಹಾಕಿಸುವ ಬಿರಿಯಾನಿ ಊಟಕ ಏನಂತಾರೆ?
- ‘ಓಟ್’ ಮೀಲ್ಸ್
ಪೋಲೋಗೆ ವಿರುzರ್ಥಕ ಪದ ಏನು?
- ಪೋಗಾದಿರೆಲೋ
ಹೈದರಾಬಾದ್ ಮತ್ತು ಕರ್ನಾಟಕ ನಡುವಿನ ಮ್ಯಾಚ್ ಟೈ ಆದ್ರೆ ಪ್ರಶಸ್ತಿ ಯಾರಿಗೆ?
- ‘ಹೈದರಾಬಾದ್ ಕರ್ನಾಟಕ’ಕ್ಕೆ