Hari Paraak Column: ವಿರಾಟ್ ಕೊಹ್ಲಿ- ಡಕ್ ಡಕ್ ಕರ್ ನೇ ಲಗಾ
‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ಚಿತ್ರಮಂದಿರಗಳಲ್ಲಿ ಯಾವ ಚಿತ್ರವೂ ಸದ್ದು ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಸರಿಯಾದ ಯಾವ ಸಿನಿಮಾಗಳೂ ಬಿಡುಗಡೆ ಆಗುತ್ತಿಲ್ಲ ಎಂದರೂ ತಪ್ಪಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳ ನಿರ್ಮಾಪಕರು ಸುಮ್ಮನೇ ಕಾಂಪಿಟೇಷನ್ ಯಾಕೆ ಅಂತ ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೆ ಹಾಕಿದರೆ, ಸಣ್ಣ ಪುಟ್ಟ ಚಿತ್ರಗಳ ನಿರ್ಮಾಪಕರು, ‘ಅವರ ಮುಂದೆ ನಾವು ಕಾಂಪಿಟೇಷನ್ ಮಾಡೋಕಾಗುತ್ತಾ?’ ಅಂತ ಸುಮ್ಮನಾಗಿದ್ದಾರೆ.