ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !
ಪಕ್ಷ ನಾಯಕರ ಬೆಂಬಲ, ಜಾತಿ ಬೆಂಬಲ ಇಲ್ಲವೇ ಕ್ಷೇತ್ರದ ಮತದಾರರ ಬೆಂಬಲ ಈ ಮೂರರ ಪೈಕಿ ಒಂದೂ ಇಲ್ಲದೇ ಹೋದರೆ ಎಷ್ಟೇ ಪ್ರಭಾವಿ ನಾಯಕರಾದರೂ ರಾಜಕೀಯದಲ್ಲಿ ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ. ಪಕ್ಷ ನಿಷ್ಠೆ, ಮೌಲ್ಯ, ತತ್ವ-ಸಿದ್ದಾಂತ, ವೈಯಕ್ತಿಕ ವರ್ಚಸ್ಸು ಇವು ಗಳಿಂದ ಸದ್ಯದ ಚುನಾವಣೆ ರಾಜಕೀಯವನ್ನು ಗೆಲ್ಲಲು ಸಾಧ್ಯವಿಲ್ಲ. ರಾಜಕೀಯ ಮೌಲ್ಯಗಳಿಗೆ ಹೆಸ ರಾದ ಎ.ಟಿ.ರಾಮಸ್ವಾಮಿ. ವೈಎಸ್‌ವಿ ದತ್ತ ಮುಂತಾದವರು ಜೆಡಿಎಸ್ ಮಾತ್ರವಲ್ಲ ಈಗ ಯಾವ ಪಕ್ಷದಲ್ಲೂ ಪ್ರಸ್ತುತರಾಗಲು ಸಾಧ್ಯವಿಲ್ಲ.