ಇತಿಹಾಸವನ್ನು ಗಬ್ಬೆಬ್ಬಿಸುವ ದೇಸೀ ‘ಅಪಸ್ವರಾಗಳು’
ದೆಹಲಿಯಲ್ಲಿ ಒಂದಿಷ್ಟು ಇತಿಹಾಸಕಾರರು ಮತ್ತವರ ಶಿಷ್ಯವೃಂದವಿದೆ. ಅವರ ಕೆಲಸವೇ ಅದು. ಆಗೀಗ ಭಾರತದ ಇತಿಹಾಸದ ಯಾವುದಾದರೊಂದು ಚಿಕ್ಕ ಘಟನೆಯನ್ನು ಕೈಗೆತ್ತಿಕೊಳ್ಳುವುದು. ಅದನ್ನು ಇಂದಿನ ಆಧುನಿಕ ನೈತಿಕ ನ್ಯಾಯಾಲಯದಲ್ಲಿ ತಂದು ವಿಚಾರಣೆಗೆ ನಿಲ್ಲಿಸುವುದು. ಆ ಮೂಲಕ ನಮ್ಮ ಇತಿಹಾಸ ವನ್ನು ತಪ್ಪಾಗಿ ಮತ್ತು ಕೆಟ್ಟದಾಗಿ ನಿರೂಪಿಸುವುದು. ಇದು ಬಾಯಿ ಚಟವೋ, ಉದ್ದೇಶ ಪೂರ್ವಕವೋ, ಇವರಿಗೆ ಇದುವೇ ಬದುಕೋ ಅಥವಾ ವಿಕೃತ ಆನಂದವೋ- ತಿಳಿಯದು.