ರಾಜ್ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಮೋದಿ!
Rajkumar: ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಡಾ. ರಾಜ್ಕುಮಾರ್ ಅವರ 'ಶ್ರೀ ಚಾಮುಂಡೇಶ್ವರಿ' ಹಾಡನ್ನು ಹಂಚಿಕೊಂಡಿರುವುದು ಕನ್ನಡಿಗರಿಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಖುಷಿ ತಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.