Amruthadhaare Serial: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!
Amruthadhaare Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಒಂದು ಕಡೆ ಜೈದೇವ್ ಕುತಂತ್ರದ ನಡುವೆ ಮಲ್ಲಿ ಮದುವೆ ತಯಾರಿಯೂ ಜೋರಾಗಿದೆ. ದೊಡ್ಡ ಮಗಳ ಮದುವೆಗೆ ಗೌತಮ್ – ಭೂಮಿಕಾ ಸಿದ್ಧವಾಗುತ್ತಿದ್ದಾರೆ. ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಒಂದು ಕಡೆ ಜೈದೇವ್ ಕುತಂತ್ರದ ನಡುವೆ ಮಲ್ಲಿ ಮದುವೆ ತಯಾರಿಯೂ ಜೋರಾಗಿದೆ. ದೊಡ್ಡ ಮಗಳ ಮದುವೆಗೆ ಗೌತಮ್ – ಭೂಮಿಕಾ (Gowtham Bhoomika) ಸಿದ್ಧವಾಗುತ್ತಿದ್ದಾರೆ. ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿದೆ.
ಮಲ್ಲಿ ಹಾಗೂ ಸುನಿ ಮದುವೆ ತಯಾರಿ ಜೋರು
ಮಲ್ಲಿ ಹಾಗೂ ಸುನಿ ಮದುವೆ ತಯಾರಿ ಜೋರಾಗಿದೆ. ಮಲ್ಲಿ ಅದೆಷ್ಟೇ ಅಡೆ ತಡೆಗಳು ಬಂದರೂ ಎಕ್ಸಾಮ್ ಬರೆದು ಬಂದಿದ್ದಾಳೆ. ಈಗ ಮದುವೆ ಕಾರ್ಡ್ ಪ್ರಿಂಟ್ ಆಗಿ ಪೂಜೆ ಕೂಡ ಆಗುತ್ತಿದೆ. ಸುನಿಗೆ ತಂದೆ ತಾಯಿ ಇಲ್ಲದ ಕಾರಣ ಆನಂದ್ ಈಗ ಬೀಗರ ಸ್ಥಾನದಲ್ಲಿ ನಿಂತು ಮಲ್ಲಿ ಮದುವೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು
ಸುನಿ ಬಂದೊಡನೆ ಕಾರ್ಡ್ ಪೂಜೆ ಮಾಡಿದ್ದಾರೆ ಭೂಮಿಕಾ. ಆದರೆ ಸುನಿ ಮಾತ್ರ ಇನ್ನೂ ಡಲ್ ಆಗೇ ಇದ್ದಾನೆ. ಮನಸ್ಸಿನಲ್ಲಿ ಮಲ್ಲಿ ಬಗ್ಗೆ ಪ್ರೀತಿ ಇದ್ದರೂ ಜೈದೇವ್ ಕೈಗೊಂಬೆ ಆಗಿದ್ದಾನೆ ಸುನಿ. ಇನ್ನು ಗೌತಮ್ ಕೂಡ ಆಫೀಸ್‌ನಲ್ಲಿರೋ ಉದ್ಯೋಗಿಗಳಿಗೆ ಮದುವೆ ಆಮಂತ್ರಣ ಕೊಟ್ಟಿದ್ದಾನೆ.
ಈಗಾಗಲೇ ಗೌತಮ್ ಮತ್ತು ಭೂಮಿಕಾ ಪ್ರೀ ವೆಡ್ಡಿಂಗ್ ಫೋಟೊಶೂಟ್ ಕೂಡ ಮಾಡಿಸಿದ್ದಾರೆ. ಆನಂದ್-ಅಪರ್ಣಾ ಈ ಕಾರ್ಯಕ್ರಮ ನಡೆಸಿದ್ದರು. ಜೈದೇವ್ ಕೂಡ ಅದೇ ಸ್ಥಳಕ್ಕೆ ಬಂದಿದ್ದ. ಸುನಿ ಕಂಡೊಡನೆ ಮಾತನಾಡಲು ಹೋಗಿದ್ದು ಇಬ್ಬರ ಭೇಟಿಯನ್ನು ಕಂಡು ಆನಂದ್ ಕೆರಳಿದ್ದ. ಗೌತಮ್ ಗೆ ಫೋನ್ ಮಾಡಿ ಜೈದೇವ್ ಬಂದಿರುವ ವಿಚಾರ ಕೂಡ ತಿಳಿಸಿದ್ದಾನೆ. ಇಷ್ಟೆಲ್ಲ ಆದ ಬಳಿಕ ಗೌತಮ್ ಮಾತ್ರ ಜೈದೇವ್ ಮೇಲೆ ಕಣ್ಣಿಡದೇ ಇರಲ್ಲ. ಸುನಿ ಬಗ್ಗೆಯೂ ಗೌತಮ್ ಈಗಾಗಲೇ ತಿಳಿದಿಕೊಂಡಿದ್ದಾನಾ ಅನ್ನೋದು ವೀಕ್ಷರಲ್ಲಿ ಕೂಡ ಕುತೂಹಲ ಹೆಚ್ಚಾಗಿದೆ.
ಲಕ್ಷ್ಮೀಕಾಂತ್‌ಗೆ ಶುರು ಆಯ್ತು ಡೌಟ್
ಸುನಿ ನೋಡಿದ ಬಳಿಕ ಜೈದೇವ್ ಮನೆಗೆ ಎಂದಿನಂತೆ ಎಣ್ಣೆ ಕುಡಿಯುತ್ತಾ ಕುಂತಿದ್ದು, ಜೈದೇವ್‌ನ ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಜೈದೇವ್ ನೇರ ಉತ್ತರ ಕೊಡದೇ ತುಂಬಾನೇ ದೊಡ್ಡ ಪ್ಲಾನ್ ಮಾಡಿದ್ದೇನೆ ಆದರೆ ನಾನು ಆ ಪ್ಲಾನ್ ನಾನು ಏನಂತ ಹೇಳಲ್ಲ ಎನ್ನುತ್ತಾನೆ. ಈ ಬಾರಿ ನನ್ನ ಪ್ಲಾನ್ ನ ಯಾರು ಊಹೆ ಮಾಡೋಕೆ ಸಾಧ್ಯ ಇಲ್ಲಎಂದೆಲ್ಲ ಹೇಳಿದ್ದಾನೆ.
ಸದ್ಯಕ್ಕೆ ಜೈದೇವ್ ಕಳಿಸಿರುವ ಹುಡುಗ ಸುನಿ ಎಂದು ಗೌತಮ್ ಮತ್ತು ಭೂಮಿಕಾಗೆ ಗೊತ್ತಾದರೆ ಮುಂದೇನಾಗಬಹುದು ಎನ್ನುವ ಕುತೂಹಲ ವೀಕ್ಷಕರಲ್ಲಿದೆ.
ಇದನ್ನೂ ಓದಿ: Dhurandhar 2 collection: ಸಿಗ್ತಿಲ್ಲ ಟಿಕೆಟ್, ʻಧುರಂಧರ್ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.