ಬಾಗಲಕೋಟೆಯಲ್ಲಿ ಕಾರಿನ ಮೇಲೆ ಲಾರಿ ಬಿದ್ದು ಸ್ಥಳದಲ್ಲೇ ಇಬ್ಬರ ಸಾವು
Bagalokot News: ಬಾಗಲಕೋಟೆಯ ಸೀಮಿಕೇರಿ ಬೈ ಪಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.