NOTA: ದಾವಣಗೆರೆಯಲ್ಲಿ ಕಾಂಗ್ರೆಸ್ʼಗೆ ʼನೋಟಾʼ ಆತಂಕ
ಕಾಂಗ್ರೆಸ್ ಆತಂಕದಲ್ಲಿದ್ದರೆ ಬಹುತೇಕ ಅಲ್ಪಸಂಖ್ಯಾತ ಮತದಾರರು ಜಾರಿಗೆ ಮತ ಹಾಕಬೇಕೆ ನ್ನುವ ಗೊಂದಲದಲ್ಲಿದ್ದು, ಇವರಲ್ಲಿ ಹೆಚ್ಚಿನ ಮಂದಿ ಮೇಲಿನ ಯಾವ ಅಭ್ಯರ್ಥಿಯೂ ಬೇಡ ಎನ್ನುವವರು ‘ನೋಟಾ’ ಮತದಾನ ಮಾಡುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ ಎನ್ನುತ್ತಾರೆ ಆ ಸಮುದಾಯದ ಮುಖಂಡರು.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಅಲ್ಪಸಂಖ್ಯಾತರಲ್ಲಿ ಗೊಂದಲ, ಮುಸ್ಲಿಮರ ಮತ ನೋಟಾಕ್ಕೆ ಹಾಕಿಸುವ ಲೆಕ್ಕಾಚಾರದಲ್ಲಿ ಬಿಜೆಪಿ
ಸಚಿವ ಜಮೀರ್ ಅಹ್ಮದ್‌ರನ್ನು ಮಲ್ಲಿಕಾರ್ಜುನ್ ಹೀಯಾಳಿಸಿರುವುದು ಕಾಂಗ್ರೆಸ್‌ಗೆ ತಲೆನೋವು
ಉಪಚುನಾವಣೆಗಳ ಪ್ರಮುಖ ಕಣ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ನೋಟುಗಳ ಆಟಕ್ಕಿಂತ ‘ನೋಟಾ’ಗಳ ಮಹಾ ಆಟವೇ ನಡೆದು ಅಚ್ಚರಿ ಉಂಟಾಗುವ ಭೀತಿ ಇದೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್‌ನ ಕುಟುಂಬ ರಾಜಕಾರಣ. ಅಲ್ಪಸಂಖ್ಯಾತರಲ್ಲಿ ತಲೆದೋರಿದ ಗೊಂದಲದ ವಾತಾವರಣ. ಹಾಗೆಯೇ ಬಿಜೆಪಿಯಲ್ಲಿ ತಣ್ಣಗಿರುವ ಒಳ ಹೊಂದಾಣಿಕೆ ರಾಜಕಾರಣ.ಅಂದರೆ ದಾವಣಗೆರೆ ಉಪಚುನಾವಣಾ ಕಣ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ಕಾಂಗ್ರೆಸ್'ನಲ್ಲಿ ಭೀತಿ ಕಾಣಿಸಿಕೊಂಡಿದೆ.
ಅಲ್ಪಸಂಖ್ಯಾತ ಮತಗಳಿಂದ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ಕಾಂಗ್ರೆಸ್'ಗೆ ಆ ಸಮುದಾಯದ ಮತಗಳೇ ಕೈತಪ್ಪುವ ಆತಂಕ ಶುರುವಾಗಿದೆ. ಕಾರಣ ಕಾಂಗ್ರೆಸ್ ಮಾಡಿದ ಟಿಕೆಟ್ ರಾಜಕಾರಣದಿಂದ ಅಲ್ಪಸಂಖ್ಯಾತ ಮತಗಳು ಛಿದ್ರವಾಗುವ ಸಾಧ್ಯತೆ ಕಾಣುತ್ತಿದ್ದು, ಆ ಸಮುದಾಯದ ಮತದಾರರಿಗೆ ಈಗ ಕಾಂಗ್ರೆಸ್ ಗೆಲ್ಲಿಸಲು ಇಷ್ಟವಿಲ್ಲ.
ಬಿಜೆಪಿಗೆ ಮತ ಹಾಕಲು ಆಸಕ್ತಿ ಇಲ್ಲ ಎನ್ನುವಂತಾಗಿದೆ. ಇದನ್ನು ಮನಗಂಡಿರುವ ಬಿಜೆಪಿಯ ಕೆಲವು ನಾಯಕರು, ಅಲ್ಪಸಂಖ್ಯಾತರು ಬಿಜೆಪಿಗೆ ಮತ ಹಾಕದಿದ್ದರೂ ಪರವಾಗಿಲ್ಲ ನೋಟಾಗೆ ಮತ ಹಾಕಿವಂತೆ ಉತ್ತೇಜನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Davanagere south bypolls: ಸಿಎಂ ಸಂಧಾನ ಸಕ್ಸಸ್; ದಾವಣಗೆರೆ ಕಣದಿಂದ ಹಿಂದೆ ಸರಿದ ಸ್ವತಂತ್ರ ಅಭ್ಯರ್ಥಿ ಸಾದಿಕ್ ಪೈಲ್ವಾನ್
ಅಂದರೆ ಸುಮಾರು 75000ಕ್ಕೂ ಹೆಚ್ಚು ಮತದಾರವಿರುವ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೇ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ ಎನ್ನುವ ಆಕ್ರೋಶ ಅಲ್ಪ ಸಂಖ್ಯಾತರಲ್ಲಿದೆ. ಇದರ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ತಂದೆ ಸಚಿವ ಮಲ್ಲಿಕಾರ್ಜುನ್ ಅವರು ಸಚಿವ ಜಮೀರ್ ಅಹಮ್ಮದ್ ಅವರ ಬಗ್ಗೆ ಹೀಯಾಳಿಸಿ ಮಾತನಾಡುವುದು ಅಲ್ಪಸಂಖ್ಯಾತರನ್ನು ತೀವ್ರವಾಗಿ ಕೆರಳಿಸಿದೆ. ಅದರಲ್ಲೂ ಅಲ್ಪ ಸಂಖ್ಯಾತ ಸಮುದಾಯದ ಯುವ ಮತದಾರರು ಹೊಸ ಮತದಾರರಲ್ಲಿ ಇದು ಜ್ವಾಲೆ ಯಂತೆ ವ್ಯಾಪಿಸುತ್ತಿದೆ ಎನ್ನಲಾಗುತ್ತಿದೆ.
ಸದ್ಯದ ಮತದಾರರ ಪಟ್ಟಿಯ ಪ್ರಕಾರ ಮುಸ್ಲಿಂ ಸಮುದಾಯದಲ್ಲಿ 18 ರಿಂದ 35 ವರ್ಷದ ವಯಸ್ಕರು 30 ಸಾವಿರಕ್ಕೂ ಅಧಿಕವಾಗಿದ್ದು, ಇವರು ಕಾಂಗ್ರೆಸ್ ವಿರುದ್ಧ ಎನ್ನುವುದಕ್ಕಿಂತ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ತೀವ್ರ ಆಕ್ರೋಶ ಗೊಂಡಿದ್ದಾರೆ.
ಇದನ್ನು ಮನಗಂಡಿರುವ ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲ ಸೇರಿದಂತೆ ಎಲ್ಲಾ ನಾಯಕರು ಅಲ್ಪಸಂಖ್ಯಾತ ಸಮುದಾಯವನ್ನು ಸಮಾಧಾನಪಡಿಸಲು ಯತ್ನಿಸಿ ದ್ದಾರೆ. ಆದರೂ ಅದು ನಿರೀಕ್ಷಿಸಿದಷ್ಟು ಫಲ ಕೊಡುತ್ತದೆ ಎನ್ನುವುದು ಕಷ್ಟ ಸಾಧ್ಯ.
ಕಾಂಗ್ರೆಸ್ ಆತಂಕದಲ್ಲಿದ್ದರೆ ಬಹುತೇಕ ಅಲ್ಪಸಂಖ್ಯಾತ ಮತದಾರರು ಜಾರಿಗೆ ಮತ ಹಾಕಬೇಕೆನ್ನುವ ಗೊಂದಲದಲ್ಲಿದ್ದು, ಇವರಲ್ಲಿ ಹೆಚ್ಚಿನ ಮಂದಿ ಮೇಲಿನ ಯಾವ ಅಭ್ಯರ್ಥಿಯೂ ಬೇಡ ಎನ್ನುವವರು ‘ನೋಟಾ’ ಮತದಾನ ಮಾಡುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ ಎನ್ನುತ್ತಾರೆ ಆ ಸಮುದಾಯದ ಮುಖಂಡರು.
ಹಾಗೆ ನೋಡಿದರೆ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಸಾದಿಕ್ ಪೈಲ್ವಾನ್ ಅವರಿಗೆ ಟಿಕೆಟ್ ಕೈತಪ್ಪಿಸಿದ್ದು, ನಂತರದ ನಾಟಕೀಯ ಬೆಳವಣಿಗೆಯಲ್ಲಿ ಆ ಸಮುದಾಯದ ರಾಜ್ಯ ನಾಯಕ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಮಲ್ಲಿಕಾರ್ಜುನ್ ಮೂದಲಿಸಿದ್ದು, ಅಲ್ಪಸಂಖ್ಯಾತರ ಮತಗಳು ಭಿನ್ನ ರೀತಿಯಲ್ಲಿ ಛಿದ್ರವಾಗುವ ಹಾಗೆ ಕಾಣುತ್ತಿದೆ.
ಇದನ್ನು ಕಾಂಗ್ರೆಸ್ ಇನ್ನು ಐದಾರು ದಿನಗಳಲ್ಲಿ ಸರಿಪಡಿಸಿಕೊಂಡರೆ ಲಾಭವಾಗುವ ಸಾಧ್ಯತೆ ಇದೆ. ಅದರಲ್ಲೂ ಜಮೀರ್ ಅಹ್ಮದ್ ಖಾನ್ ಮತ್ತು ಮಲ್ಲಿಕಾರ್ಜುನ್ ನಡುವಿನ ಸಮರ ಮತ್ತು ಮುನಿಸು ಮುಂದುವರೆದರೆ ಕಾಂಗ್ರೆಸ್ ಆತಂಕ ಇನ್ನೂ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಇದರ ಮಧ್ಯೆ ಕಾಂಗ್ರೆಸ್ ಆತಂಕ ಮತ್ತು ಅಲ್ಪಸಂಖ್ಯಾತರ ಯಾರಿಗೆ ಮತದಾನ ಮಾಡ ಬೇಕೆಂಬ ಗೊಂದಲವನ್ನು ಸದ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆಯಾದರೂ ಪಕ್ಷ ದೊಳಗಿನ ಒಳ ರಾಜಕಾರಣ ಮತ್ತು ಒಳ ಹೊಂದಾಣಿಕೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಅಂದರೆ ಬಿಜೆಪಿಯ ಬಹುತೇಕ ರಾಜ್ಯ ಮತ್ತು ಸ್ಥಳೀಯ ನಾಯಕರು ಶಾಮ ನೂರು ಶಿವಶಂಕರಪ್ಪ ಕುಟುಂಬದ ಪರ ಒಲವು ಹೊಂದಿದ್ದರು ಎನ್ನಲಾಗಿತ್ತು. ಆದರೆ ಈ ಚುನಾ ವಣೆಯಲ್ಲಿ ಆ ಒಲವು ಬದಲಾಗಿದೆ ಎನ್ನುವುದನ್ನು ಪಲಿತಾಂಶದ ನಂತರ ನೋಡಬೇಕಿದೆ.
ಜೊತೆಗೆ ಸುಮಾರು 30 ವರ್ಷಗಳಿಂದ ಒಂದು ಕುಟುಂಬದ ಪಾಲಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಬದಲಿಸಬೇಕೆನ್ನುವ ಚಿಂತನೆ ಲಿಂಗಾಯತ ಸಮುದಾಯದ ಕೆಲವು ಮತದಾರ ರಲ್ಲೂ ಇದೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಅಂದರೆ ಈ ಬಾರಿ ಲಿಂಗಾಯಿತ ಮತಗಳು ಕೂಡ ಒಡೆದು ಹೋಗುವ ಲಕ್ಷಣ ಕಾಣುತ್ತಿದ್ದು, ಇದನ್ನು ಬಳಸಿಕೊಂಡು ಬಿಜೆಪಿ ಲಿಂಗಾ ಯತೇತರ ಬೇರೆ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣ ವನ್ನು ಬದಲಿಸಬೇಕೆನ್ನುವ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ.
ಕಾಂಗ್ರೆಸ್‌ಗೆ 83ರ ಆತಂಕ !
ಕಳೆದ ಚುನಾವಣೆಯಲ್ಲಿ ಸುಮಾರು 27 ಸಾವಿರ ಅಂತರದಿಂದ ಸೋತಿದ್ದ ಬಿಜೆಪಿ ಈ ಬಾರಿ ಹೇಗಾದರೂ ಮಾಡಿ ಗೆಲ್ಲಬೇಕು ವಿಶ್ವಾಸದಿಂದ ಹೋರಾಟ ನಡೆಸುತ್ತಿದೆ. ಪ್ರಮುಖ ಮುಖಂಡರ ರಾಜಕೀಯ ಹೊಂದಾಣಿಕೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ. ಏನೋ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದ, ಇಲ್ಲಿ ಯಾರೂ ಅನಿವಾರ್ಯವಲ್ಲ ಎನ್ನುವ ಹೇಳಿಕೆ ಕಾಂಗ್ರೆಸ್‌ನ ಕೆಲವು ಮುಖಂಡರಲ್ಲಿ ಭಿನ್ನಭಿನ್ನ ರೀತಿಯ ಅಭಿಪ್ರಾಯ ಮೂಡುವಂತಾಗಿದ್ದು ಇದನ್ನು ಅಲ್ಪಸಂಖ್ಯಾತ ಸಮುದಾಯ ಹೇಗೆ ಸ್ವೀಕರಿಸಲಿದೆ ಎನ್ನುವುದು ಕೂಡ ಅಚ್ಚರಿ ಮೂಡಿಸಿದೆ. ಇಷ್ಟೆಲ್ಲದರ ಮಧ್ಯೆ ಕಾಂಗ್ರೆಸ್‌ನಲ್ಲಿ 1983ರ ಫಲಿತಾಂಶ ಮರುಕಳಿಸುವುದು ಎನ್ನುವ ಆತಂಕವಿದೆ. ಅಂದರೆ ಅಂದು ಮಹಮದ್ ಇಕ್ಬಾಲ್ ಸಾಬ್ ಎನ್ನುವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿ ಕೇಶವಮೂರ್ತಿ ಗೆಲುವು ಸಾಧಿಸಿದ್ದು ಈಗ ಕಾಂಗ್ರೆಸ್ ನಾಯಕರಿಗೆ ನೆನಪಿಗೆ ಬರುತ್ತಿದೆ. ಹೀಗಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಚಾರಕ್ಕೆ ಬಂದರೂ ಪರಿಸ್ಥಿತಿ ಹೇಗೆ ಚೇತರಿಸಿ ಕೊಳ್ಳುತ್ತದೆ ಎನ್ನುವುದನ್ನು ಹೇಳಲಾಗುತ್ತಿಲ್ಲ.