Demand for Firewood: ಸಿಗದ ಸಿಲಿಂಡರ್; ಸೌದೆಗೆ ಹೆಚ್ಚಿದ ಬೇಡಿಕೆ
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಸಂಖ್ಯೆಯಲ್ಲಿ ಭಾರಿ ಅಭಾವ ಸೃಷ್ಟಿ ಯಾಗಿರುವು ದರಿಂದ ಅನಿವಾರ್ಯವಾಗಿ ಪರ್ಯಾಯ ಮಾರ್ಗದತ್ತ ಹೋಟೆಲ್ ಮಾಲೀಕರು ಆಲೋಚಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಟ್ಟಿಗೆಯ ಬಳಕೆಯೇ ಸುಲಭ ಆಯ್ಕೆ ಯಾಗಿರುವುದರಿಂದ ಅನೇಕ ಹೋಟೆಲ್ ಮಾಲೀಕರು ಸೌದೆ ಒಲೆಯ ಮೂಲಕ ಆಹಾರ ತಯಾರಿಸುತ್ತಿದ್ದಾರೆ.
-
ಅಪರ್ಣಾ ಎ.ಎಸ್ ಬೆಂಗಳೂರು
ಸಿಲಿಂಡರ್ ಬದಲು ಸೌದೆ ಶೇಖರಿಸುತ್ತಿರುವ ಹೋಟೆಲ್‌ಗಳು, ಚಿತಾಗಾರಗಳಲ್ಲಿ ಸೌದೆ ಅಭಾವ
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಶುರುವಾಗಿರುವ ಸಿಲಿಂಡರ್ ಅಭಾವ ಒಂದೆಡೆ ಯಾದರೆ, ಸಿಲಿಂಡರ್ ಸಿಗುತ್ತಿಲ್ಲವೆಂದು ಹೋಟೆಲ್, ಕಲ್ಯಾಣ ಮಂಟಪಗಳು ಸೌದೆ ಮೊರೆ ಹೋಗಿರುವುದರಿಂದ ಏಕಾಏಕಿ ಸೌದೆಗಳಿಗೆ ಭಾರಿ ಬೇಡಿಕೆ ಬಂದಿರುವುದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಸಂಖ್ಯೆಯಲ್ಲಿ ಭಾರಿ ಅಭಾವ ಸೃಷ್ಟಿ ಯಾಗಿರುವು ದರಿಂದ ಅನಿವಾರ್ಯವಾಗಿ ಪರ್ಯಾಯ ಮಾರ್ಗದತ್ತ ಹೋಟೆಲ್ ಮಾಲೀಕರು ಆಲೋಚಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಟ್ಟಿಗೆಯ ಬಳಕೆಯೇ ಸುಲಭ ಆಯ್ಕೆ ಯಾಗಿರುವುದರಿಂದ ಅನೇಕ ಹೋಟೆಲ್ ಮಾಲೀಕರು ಸೌದೆ ಒಲೆಯ ಮೂಲಕ ಆಹಾರ ತಯಾರಿಸುತ್ತಿದ್ದಾರೆ.
ಆದರೆ ಈ ರೀತಿ ಸೌದೆಯನ್ನು ಹೋಟೆಲ್‌ಗಳು ಬಳ ಸಲು ಶುರು ಮಾಡಿದ್ದರಿಂದ ಬೆಂಗಳೂರಿನ ಚಿತಾಗಾರದಲ್ಲಿ ಸೌದೆ ಸಮಸ್ಯೆ ಶುರುವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಳೆದ ಕೆಲ ದಿನಗಳಿಂದ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಾಗಿರುವ ವ್ಯತ್ಯಯದಿಂದಾಗಿ ನಗರದ ಹೋಟೆಲ್, ದೇವಾಲಯ, ಕಾಲೇಜು ಮೆಸ್, ಚಿತಾಗಾರಗಳಲ್ಲಿ ಕಟ್ಟಿಗೆಗಳ ಬಳಕೆ ಹೆಚ್ಚಾಗುತ್ತಿದ್ದು, ಅಗತ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಾಗುತ್ತಿರುವ ವ್ಯತ್ಯದಿಂದಾಗಿ ಅನಿವಾರ್ಯವಾಗಿ ಜನರು ಮತ್ತೆ ಸಾಂಪ್ರದಾಯಿಕ ಕಟ್ಟಿಗೆ ವ್ಯವಸ್ಥೆಯನ್ನೇ ಆಶ್ರಯಿಸು ವಂತಾಗಿದೆ.
ಇದನ್ನೂ ಓದಿ: Gas Shortage: ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು
ಗ್ಯಾಸ್ ಬದಲು ಸೌದೆ ಬಳಕೆ ಹೆಚ್ಚಾಗಿರುವುದರಿಂದ ಸೌದೆ ಸ್ಟಾಕ್ ಖಾಲಿಯಾಗಿದೆ. ಇದ ರೊಂದಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸೌದೆಗಳನ್ನು ಮುಂಜಾಗ್ರತಾ ಕ್ರಮವಾಗಿ ಹೆಚ್ಚೆಚ್ಚು ಸಂಗ್ರಹ ಮಾಡಿಕೊಳ್ಳಲಾಗುತ್ತಿದ್ದು, ಗ್ಯಾಸ್‌ಗೆ ಪರ್ಯಾಯವಾಗಿ ಕಟ್ಟಿಗೆ ಬಳಕೆ ಹೆಚ್ಚಾಗುತ್ತಿದೆ.
ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದಾಗಿ ಮನೆಗಳಲ್ಲಿ, ಹೋಟೆಲ್‌ಗಳಿಂದ ಕಟ್ಟಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಅನೇಕ ಕಟ್ಟಿಗೆಗಳ ಅಂಗಡಿಗಳನ್ನು ಸಂಪರ್ಕಿಸಿ ಸೌದೆಗಳನ್ನು ಖರೀದಿಸಿ ಶೇಖರಿಸಿಟ್ಟುಕೊಳ್ಳುತ್ತಿರುವುದರಿಂದ ಕಟ್ಟಿಗೆಗಳ ಕೊರತೆಯುಂಟಾಗುವ ಸಾಧ್ಯತೆ ಯಿದೆ ಎಂದು ಹೇಳಲಾಗುತ್ತಿದೆ.
ನಗರದ ಹಲವು ಹೋಟೆಲ್‌ಗಳು ಕಟ್ಟಿಗೆಗಳನ್ನೇ ಬಳಕೆ ಮಾಡಿಕೊಂಡು ಮಿತಿಯಲ್ಲಿ ಊಟೋಪಹಾರಗಳನ್ನು ತಯಾರಿಸಲು ಮುಂದಾಗಿದ್ದು, ಮುಂದೊಂದು ದಿನ ಸಿಲಿಂಡರ್ ಗಳು ದೊರೆಯದಿದ್ದರೆ ಸೌದೆಗಳ ಅಭಾವವುಂಟಾಗಬಹುದು ಎನ್ನುವ ಕಾರಣದಿಂದಾಗಿ ಅಂಗಡಿಗಳಿಂದ ಮುಂಜಾಗ್ರತಾ ಕ್ರಮವಾಗಿ ಅಪಾರ ಮೊತ್ತದ ಸೌದೆಗಳನ್ನು ಖರೀದಿಸಿ ಸಂಗ್ರಹಿಸುತ್ತಿದ್ದಾರೆ.
ಜತೆಗೆ ಸಾರ್ವಜನಿಕರೂ ಹಳೆಯ ಒಲೆ ಅಡಿಗೆ ಮಾಡಿಕೊಳ್ಳಲು ಮುಂದಾಗಿದ್ದು, ವಿದ್ಯುತ್ ಕಡಿತ, ಎಲ್ʼಪಿಜಿ ಕೊರತೆಯ ಹೊರತಾಗಿ ಕಟ್ಟಿಗೆಗಳನ್ನೇ ಬಳಸಿ ಕೊಳ್ಳಲು ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತಾಗಾರಗಳಲ್ಲಿ ಸೌದೆಗೆ ಬೇಡಿಕೆ: ನಗರದ ಹೆಬ್ಬಾಳ, ಚಾಮರಾಜಪೇಟೆ ಚಿತಾಗಾರ ಗಳಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಹಿಂದೂ ರುದ್ರ ಭೂಮಿಗಳಲ್ಲಿ ಸೌದೆಗಳನ್ನು ಸಂಗ್ರಹಿಸ ಲಾಗುತ್ತಿದ್ದು, ಗ್ಯಾಸ್ ಬಳಸಿಕೊಳ್ಳಲಾಗುತ್ತಿರುವ ಶವಸಂಸ್ಕಾರದ ಬದಲಿಗೆ ಸೌದೆಯನ್ನು ಬಳಸಿಕೊಂಡು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹಲವು ಚಿತಾಗಾರಗಳಲ್ಲಿ ಕಟ್ಟಿಗೆಗಳನ್ನು ಶೇಖರಿಸಿಡಲಾಗುತ್ತಿದ್ದು, ಇದಕ್ಕಾಗಿ ಹಲವರನ್ನು ಸಂಪ ರ್ಕಿಸಿ ಕಟ್ಟಿಗೆಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ವಿದ್ಯುತ್ ಚಿತಾಗಾರಗಳಿದ್ದರೂ ಕೆಲವರು ಸೌದೆಯನ್ನೇ ಬಳಸಿ ಅಂತ್ಯ ಸಂಸ್ಕಾರಕ್ಕೆ ಬಳಸಲಾಗುತ್ತಿದೆ. ಎಲ್ಲಾ ಸಮಯದಲ್ಲಿ ವಿದ್ಯುತ್ ಇಲ್ಲದ ಹಿನ್ನೆಲೆ ಈ ಕ್ರಮಕ್ಕೆ ಮುಂದಾ ಗಿದ್ದು, ವಿದ್ಯುತ್ ಚಿತಾಗಾರಗಳಿಗೆ ಆಗಮಿಸುವ ದೇಹಗಳನ್ನು ಸೌದೆ ಬಳಸಿಕೊಂಡು ಅಂತ್ಯ ಸಂಸ್ಕಾರ ಮಾಡಲಾಗುತ್ತಿರುವುದರಿಂದ ಕಟ್ಟಿಗೆಯ ಅಭಾವ ಉಂಟಾಗಬಾರದು ಎನ್ನುವ ಕಾರಣದಿಂದಾಗಿ ಹೆಚ್ಚುವರಿಯಾಗಿ ಸೌದೆಗಳನ್ನು ಸಂಗ್ರಹಿಸಲಾಗುತ್ತಿದೆ.
ಕೋಲಾರ, ಹೊಸಕೋಟೆ ಮಾಲೂರಿನಿಂದ ಸೌದೆಗಳನ್ನು ಲೋಡ್ ಮಾಡಲಾಗುತ್ತಿದ್ದು, ಅಲ್ಲಿಂದ ಚಿತಾಗಾರಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಿಗೆಗಳನ್ನು ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಅನೇಕ ಕಡೆಗಳಲ್ಲಿ ಬಹುತೇಕ ಹೋಟೆಲ್‌ಗಳು ಸೌದೆ ಖರೀದಿಸಿದ್ದು, ಮತ್ತಷ್ಟು ಕಡೆಗಳಲ್ಲಿ ಸಂಗ್ರಹಿಸಲು ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಅಭಾವ ವುಂಟಾಗಬಹುದು ದೊರೆಯದೇ ಹೋದರೆ ಎನ್ನುವ ಭಯದಿಂದ ಶೇಖರಣೆಗೆ ಅಡ್ವಾನ್ಸ್ ಆಗಿ ಆರ್ಡರ್ ಮಾಡಲಾಗುತ್ತಿದೆ.
ಇನ್ನು ಇದರ ಜತೆಗೆ ಚಿತಾಗಾರಗಳಲ್ಲಿ 10-12 ಸ್ಲಾಟ್‌ಗಳಲ್ಲಿ ಅಂತ್ಯ ಸಂಸ್ಕಾರವನ್ನು ಕೈಗೊಳ್ಳಲಾಗುತ್ತಿದ್ದು, ವಿದ್ಯುತ್ ಕೈಕೊಟ್ಟರೆ ಕಟ್ಟಿಗೆಯನ್ನೇ ಬಳಸಿಕೊಳ್ಳಲು ಜನರು ಮುಂದಾಗಿದ್ದಾರೆ. ಸದ್ಯ ಇರುವ ಸ್ಟಾಕ್ ಖಾಲಿಯಾದರೆ ಮುಂದಿನ ದಿನಗಳಲ್ಲಿ ಅತ್ಯಂತ ಅಗತ್ಯ ಬಿದ್ದರೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಕಟ್ಟಿಗೆಗಳನ್ನು ಸಂಗ್ರಹಿಸಿಡಲಾಗುತ್ತಿದೆ.
ಕಟ್ಟಿಗೆ ಕಡಿಯಲು ನಿರ್ಬಂಧ
ಇನ್ನು ಬೇಡಿಕೆಗೆ ಅನುಗುಣವಾಗಿ ಸೌದೆಯನ್ನು ಒದಗಿಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಮರಗಳನ್ನು ಕಡಿಯುವುದು ಗಮನಕ್ಕೆ ಬಂದರೆ ಪ್ರಕರಣ ದಾಖಲಿಸುವುದಾಗಿ ಹೇಳುತ್ತಿರುವುದರಿಂದ, ಕಟ್ಟಿಗೆಯನ್ನು ಕಡಿಯಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಇದರೊಂದಿಗೆ ಕಟ್ಟಿಗೆ ಕಡಿಯುವ ಪ್ರಮಾಣ ಹೆಚ್ಚಾಗುವುದನ್ನು ಅರಿತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಹದ್ದಿನ ಕಣ್ಣು ಇಟ್ಟಿರುವುದರಿಂದ, ಮರಕ್ಕೆ ಕೊಡಲಿ ಹಾಕಲು ಸಾಧ್ಯವಾಗುತ್ತಿಲ್ಲ. ಇದು ಸಹ ಸೌದೆಯ ಕೊರತೆಗೆ ಕಾರಣ ಎನ್ನಲಾಗುತ್ತಿದೆ.
![]()
ಸೌದೆಗೆ ಭಾರಿ ಬೇಡಿಕೆಯುಂಟಾಗಿದೆ. ಈಗಿರುವ ಕಟ್ಟಿಗಳ ಸಂಗ್ರಹ ಖಾಲಿಯಾದರೆ ಎನ್ನುವ ಆತಂಕದಿಂದ ಖರೀದಿಗೆ ಮುಂದಾಗಿದ್ದೇವೆ. ಈ ಹಿಂದೆ ಗ್ಯಾಸ್ ಮೂಲಕ, ವಿದ್ಯುತ್ ಮೂಲಕ ಅಂತ್ಯ ಸಂಸ್ಕಾರದ ಕಾರ್ಯ ನಡೆಯುತ್ತಿತ್ತು. ವಿದ್ಯುತ್ ಕೈಕೊಟ್ಟಾಗ ಗ್ಯಾಸ್ ಹಾಗೂ ಕಟ್ಟಿಗೆ ಯಲ್ಲಿ ಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಈಗ ಸಿಲಿಂಡರ್ ಕೊರತೆಯಿಂದಾಗಿ ಸಂಪೂರ್ಣವಾಗಿ ಕಟ್ಟಿಗೆಯನ್ನೇ ಸಾರ್ವಜನಿಕರು ಅವಲಂಬಿಸಿದ್ದಾರೆ. ಹೀಗಾಗಿ ಸೌದೆಗಳ ಅಭಾವವುಂಟಾಗಬಾರದು ಎನ್ನುವ ಕಾರಣಕ್ಕೆ ಕೋಲಾರ, ಹೊಸಕೋಟೆ, ಮಾಲೂರಿನಿಂದ ಅಡ್ವಾನ್ಸ್ ಕೊಟ್ಟು ಕಟ್ಟಿಗೆಗಳನ್ನು ಲೋಡ್ ಮಾಡಿಸಿಕೊಳ್ಳುತ್ತಿದ್ದೇವೆ.
- ಮೂರ್ತಿ, ಹೆಬ್ಬಾಳ ಚಿತಾಗಾರ ಸಿಬ್ಬಂದಿ