ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Street Festival: ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ: ರಸ್ತೆಗೆ ವಿಶೇಷ ವಿನ್ಯಾಸ, ಜಗಮಗಿಸುವ ಲೇಸರ್ ಶೋ, ಡ್ರೋನ್ ಶೋಗೆ ಜನ ಫಿದಾ, ಕಲಬುರಗಿಯಲ್ಲಿ ರಂಗೇರಿದ ಕಲ್ಯಾಣ ಕರ್ನಾಟಕ ಉತ್ಸವ

ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿದ ಆವರಣದಲ್ಲಿ ಯುವಕ-ಯುವತಿಯರು, ಮಕ್ಕಳು, ಮಹಿಳೆ ಯರು ಸೇರಿ ಸಾವಿರಾರು ಜನರು ಸೇರಿ ಸಂಭ್ರಮಿಸಿದರು. ಜಗಮಗಿಸುವ ದೀಪಾಲಂಕಾರ, ಅಲಂಕೃತ ಪ್ರವೇಶದ್ವಾರ ಹಾಗೂ ವಿಭಿನ್ನ ವಿನ್ಯಾಸಗಳ ನಡುವೆ ಯುವಕ-ಯುವತಿಯರು ಸ್ಟ್ರೀಟ್ ಫೆಸ್ಟಿವಲ್‌ನ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡರು. ಮೊಬೈಲ್‌ಗಳಲ್ಲಿ ಕ್ಷಣಗಳನ್ನು ಸೆರೆ ಹಿಡಿಯುತ್ತಾ, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ಯುವ ಸಮೂಹ ಉತ್ಸವದ ವಾತಾವರಣಕ್ಕೆ ಮತ್ತಷ್ಟು ರಂಗು ತಂದಿತು.

ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ

-

Profile
Ashok Nayak Sep 17, 2026 11:59 AM

ದೇವೇಂದ್ರ ಜಾಡಿ ಕಲಬುರಗಿ

ಬೆಳಕಿನ ಚಿತ್ತಾರ ಬೀದಿಗಳಲ್ಲಿ ಜನಜಂಗುಳಿ ಸಂಗೀತದ ಕಂಪನ ಕಲೆಯ ವೈಭವ ಹೀಗೆ ಕಲಬುರಗಿ ನಗರ ಬುಧವಾರ ರಾತ್ರಿ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮದಲ್ಲಿ ಕಂಗೊಳಿಸಿತು. 79ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪಬ್ಲಿಕ್ ಗಾರ್ಡನ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಅವರು ಬೀದಿ ಉತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ, ಇಡೀ ಪ್ರದೇಶವೇ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.

ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿದ ಆವರಣದಲ್ಲಿ ಯುವಕ-ಯುವತಿಯರು, ಮಕ್ಕಳು, ಮಹಿಳೆ ಯರು ಸೇರಿ ಸಾವಿರಾರು ಜನರು ಸೇರಿ ಸಂಭ್ರಮಿಸಿದರು. ಜಗಮಗಿಸುವ ದೀಪಾಲಂಕಾರ, ಅಲಂಕೃತ ಪ್ರವೇಶದ್ವಾರ ಹಾಗೂ ವಿಭಿನ್ನ ವಿನ್ಯಾಸಗಳ ನಡುವೆ ಯುವಕ-ಯುವತಿಯರು ಸ್ಟ್ರೀಟ್ -ಸ್ಟಿವಲ್‌ನ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡರು.

ಮೊಬೈಲ್‌ಗಳಲ್ಲಿ ಕ್ಷಣಗಳನ್ನು ಸೆರೆಹಿಡಿಯುತ್ತಾ, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ಯುವ ಸಮೂಹ ಉತ್ಸವದ ವಾತಾವರಣಕ್ಕೆ ಮತ್ತಷ್ಟು ರಂಗು ತಂದಿತು. ಕುಟುಂಬ ಸಮೇತ ಬಂದಿದ್ದವರ ಸಂಖ್ಯೆಯೂ ಗಮನಾರ್ಹವಾಗಿತ್ತು. ಉತ್ಸವದ ಆವರಣದಲ್ಲಿ ಕಲಬುರಗಿಯ ಸಾಂಸ್ಕೃ ತಿಕ ಹಾಗೂ ಆಡಳಿತಾತ್ಮಕ ವೈವಿಧ್ಯವೂ ಅನಾವರಣ ಗೊಂಡಿತು. ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಸೇರಿ ವಿವಿಧ ಇಲಾಖೆಗಳು ತಮ್ಮದೇ ಪರಿಕಲ್ಪನೆಯಲ್ಲಿ ಮಳಿಗೆಗಳನ್ನು ರೂಪಿಸಿದ್ದವು.

ಇದನ್ನೂ ಓದಿ: IT Park at Kalaburagi: ಸ್ಪೋರ್ಟ್ಸ್ ಸಿಟಿ, ಕೆಆರ್‌ಐಎ, ಕೋಟಿ ವೃಕ್ಷ ಅಭಿಯಾನ ಸೇರಿ ಹಲವು ಯೋಜನೆ: ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

ಒಂದೆಡೆ ಸರಕಾರಿ ಯೋಜನೆಗಳ ಮಾಹಿತಿ ಲಭ್ಯವಾದರೆ, ಮತ್ತೊಂದೆಡೆ ಸಾರ್ವಜನಿಕರಿಗೆ ಹೊಸ ಅನುಭವ ನೀಡುವ ಚಟುವಟಿಕೆಗಳು ನಡೆದವು. ಪ್ರವಾಸೋದ್ಯಮ ಇಲಾಖೆಯ ಮಳಿಗೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳ ಚಿತ್ರಣ ಗಮನ ಸೆಳೆಯಿತು. ಈ ಭಾಗದ ಪ್ರವಾಸಿ ಸಂಪತ್ತನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವ ಪ್ರಯತ್ನವಾಗಿತ್ತು. ಅರಣ್ಯ ಇಲಾಖೆಯ ವಿಭಾಗದಲ್ಲಿ ವನ್ಯಜೀವಿಗಳ ಪ್ರಪಂಚವನ್ನೇ ಕಟ್ಟಿಕೊಡಲಾಗಿದ್ದು, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಕುತೂಹಲದಿಂದ ವೀಕ್ಷಿಸಿದರು. ಸ್ಥಳೀಯ ಸೊಗಡಿನ ಖಾದ್ಯಗಳಿಂದ ಹಿಡಿದು ವಿವಿಧ ಬಗೆಯ ಸ್ಟ್ರೀಟ್ ಫುಡ್‌ವರೆಗೆ ಆಹಾರ ಮಳಿಗೆಗಳು ಉತ್ಸವದ ರುಚಿ ಹೆಚ್ಚಿಸಿದವು.

ವಿವಿಧ ಆಟಗಳ ವಿಭಾಗದಲ್ಲಿ ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು ಮತ್ತು ಕಲಾಕೃತಿಗಳ ಪ್ರದರ್ಶನವೂ ಗಮನ ಸೆಳೆಯಿತು. ಸಂಗೀತ ಸಂಜೆ ಬೈರವ್ ತಂಡದ ಸಿತಾರ್ ವಾದನದಿಂದ ವಿಶೇಷ ಮೆರುಗು ಪಡೆಯಿತು. ತಂತಿಯ ನಾದದೊಂದಿಗೆ ಮೂಡಿಬಂದ ಸಂಗೀತ ವಾತಾವರಣವನ್ನು ಆಹ್ಲಾದಕರಗೊಳಿಸಿತು. ಬಳಿಕ ಯುವಕರನ್ನು ಗಮನದಲ್ಲಿಟ್ಟುಕೊಂಡು ಆಯೋಜಿ ಸಿದ್ದ ಸಂಗೀತ ಕಾರ್ಯಕ್ರಮಗಳು ಉತ್ಸವಕ್ಕೆ ಮತ್ತಷ್ಟು ಚೈತನ್ಯ ತುಂಬಿದವು.

festival at kala2

ಕಲ್ಯಾಣ ಕರ್ನಾಟಕದ ಪರಂಪರೆ, ಆಧುನಿಕ ಮನರಂಜನೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಯನ್ನು ಬೆಸೆಯುವ ಪ್ರಯತ್ನವಾಗಿ ಬೀದಿ ಉತ್ಸವ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಸಕ್ತಿ ಹಾಗೂ ಮುತುವರ್ಜಿಯಿಂದ ರೂಪುಗೊಂಡ ಉತ್ಸವ ಕಲಬುರಗಿಯ ಸಾರ್ವಜನಿಕ ಕಾರ್ಯಕ್ರಮಗಳ ಸ್ವರೂಪಕ್ಕೂ ಹೊಸ ಆಯಾಮ ನೀಡಿದಂತಾ ಯಿತು.

ಕುಟುಂಬಗಳಿಗೂ ಹಬ್ಬದ ಅನುಭವ: ಸ್ಟ್ರೀಟ್ ಫೆಸ್ಟಿವಲ್ ನಗರವಾಸಿಗಳಿಗೆ ಕುಟುಂಬ ಸಮೇತ ಸಮಯ ಕಳೆಯುವ ಅವಕಾಶವನ್ನೂ ಕಲ್ಪಿಸಿತು. ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ವಿವಿಧ ಚಟುವಟಿಕೆಗಳನ್ನು ವೀಕ್ಷಿಸುತ್ತಾ, ಮಕ್ಕಳಿಗೆ ಇಷ್ಟವಾದ ಆಟ ಹಾಗೂ ಮನರಂಜನಾ ವಿಭಾಗ ಗಳಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟರು. ಮಹಿಳೆಯರ ಗುಂಪುಗಳೂ ಉತ್ಸವದಲ್ಲಿ ಕಾಣಿಸಿಕೊಂಡವು. ಹೀಗಾಗಿ ಯುವಜನರ ಜತೆಗೆ ಎಲ್ಲ ವಯೋಮಾನದವರಿಗೂ ಮುಕ್ತವಾಗಿ ಸಂಭ್ರ ಮಿಸಬಹುದಾದ ಸಾರ್ವಜನಿಕ ಉತ್ಸವದ ವಾತಾವರಣ ನಿರ್ಮಾಣವಾಯಿತು.

ಡ್ರೋನ್ ಶೋನಲ್ಲಿ ಅರಳಿದ ಮಹಾನ್ ಚೇತನಗಳು: ಕಲ್ಯಾಣ ಕರ್ನಾಟಕ ಉತ್ಸವದ ಅಂಗ ವಾಗಿ ನಡೆದ ಡ್ರೋನ್ ಶೋನಲ್ಲಿ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ವೈಭವ ಅನಾವರಣ ಗೊಂಡಿತು. ಆಕಾಶದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ, 371(ಜೆ) ಕಲಂ, ಮಹಾತ್ಮ ಗಾಂಽಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳು ಮೂಡಿಬಂದವು. ಹಂಪಿಯ ಕಲ್ಲಿನ ರಥ, ಬಿದರಿ ಕಲೆ, ಕೊಪ್ಪಳದ ಕಿನ್ನಾಳ ಆಟಿಕೆಗಳು, ಶ್ರೀ ಶರಣಬಸವೇಶ್ವರ ದೇವಸ್ಥಾನ ಹಾಗೂ ಖ್ವಾಜಾ ಬಂದೇನವಾಜ್ ದರ್ಗಾದ ಚಿತ್ತಾರಗಳು ಪ್ರದರ್ಶ ನಗೊಂಡು ನೋಡುಗರ ಮನಸೂರೆ ಗೊಂಡವು.

ಯುವಕರ ಹವಾ

ಬೀದಿ ಉತ್ಸವದ ಆವರಣದಲ್ಲಿ ಯುವಜನರ ಉತ್ಸಾಹವೇ ಎದ್ದು ಕಾಣುತ್ತಿತ್ತು. ಸ್ನೇಹಿತರ ಗುಂಪು ಗಳಲ್ಲಿ ಬಂದಿದ್ದ ಯುವಕರು, ಯುವತಿಯರು ವಿವಿಧ ವಿಭಾಗಗಳ ಮುಂದೆ ಸೆಲ್ಫಿ, ಫೋಟೊ ಹಾಗೂ ವಿಡಿಯೊ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಉತ್ಸವದ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮದ ಸಂಭ್ರಮವನ್ನು ಮತ್ತಷ್ಟು ವಿಸ್ತರಿಸಿದರು. ಹಲವು ಯುವ ಸಮೂಹಗಳು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬೆರೆತು ರಾತ್ರಿ ಕಳೆಯುವ ದೃಶ್ಯ ಕಂಡುಬಂತು.

image

ರಾಜ್ಯದ ಇತರೆ ಭಾಗಗಳಿಗೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಮೋಚನೆ ದೊರೆಯಿತು. ಈ ಪವಿತ್ರ ದಿನದಲ್ಲಿ ಭಾಗಿಯಾಗಲು ಬಂದಿದ್ದೇನೆ. ಬೆಂಗಳೂರುಗಿಂತ ಕಲಬುರಗಿ ಕಡಿಮೆ ಇಲ್ಲ. ಅಪ್ಪನ ಕೆರೆಯ ಅಭಿವೃದ್ಧಿ, 4 ಕಿ.ಮೀ. ವಾಕಿಂಗ್ ಟ್ರ್ಯಾಕ್ ಸೇರಿದಂತೆ ಹಲವು ಯೋಜನೆಗಳ ಮೂಲಕ ಜನರ ನಗುವಿಗಾಗಿ ಸರಕಾರ ಶ್ರಮಿಸುತ್ತಿದೆ.

- ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
image

ಕಲ್ಯಾಣ ಕರ್ನಾಟಕ ಉತ್ಸವ ಈ ಬಾರಿ ನಮಗೆ ಅವಿಸ್ಮರಣೀಯ ಅನುಭವ ನೀಡಿದೆ. ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಅಪ್ಪನ ಕೆರೆ ಇದೀಗ ನವೀಕರಣ ಗೊಂಡು ಸುಂದರವಾಗಿ ರೂಪುಗೊಂಡಿರುವುದು ಸಂತಸ ತಂದಿದೆ. ಸಾರ್ವಜನಿಕರು ಕೂಡ ಇದರ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ವಹಿಸಬೇಕು. ಬೆಳಗಿನ ವಾಯುವಿಹಾರಕ್ಕೂ ಇದು ಉತ್ತಮ ತಾಣವಾಗಲಿದೆ.

-ಗೀತಾ ಪುರಾಣಿಕ್, ಕಲಬುರಗಿ ನಿವಾಸಿ